Breaking News

ಮಹಾಮಾರಿ ಕೊರೊನಾ ವೈರಸ್‍ ಹೊಡೆದೋಡಿಸಲು ಕರ್ನಾಟಕ ಹೊಸ ಅಸ್ತ್ರ ರೆಡಿ ಮಾಡುತ್ತಿದೆ.

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ ಹೊಡೆದೋಡಿಸಲು ಕರ್ನಾಟಕ ಹೊಸ ಅಸ್ತ್ರ ರೆಡಿ ಮಾಡುತ್ತಿದೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಹೊಸ ಸೂತ್ರ ಸಿದ್ಧತೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲೂ ಇಸ್ರೇಲ್ ಮಾದರಿ ಸೂತ್ರ ಅನುಸರಿಸಲು ಸಿದ್ಧತೆ ಮಾಡಲಾಗುತ್ತಿದೆ. ತಜ್ಞ ವೈದ್ಯರ ಸಲಹೆ ಮೇರೆಗೆ ಇಸ್ರೇಲ್ ಮಾದರಿಯಲ್ಲಿ ರಾಜ್ಯದಲ್ಲೂ ಆರೋಗ್ಯ ನೋಂದಾವಣೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರವಾಗಿ ಆರೋಗ್ಯ ನೋಂದಾವಣೆ ಬಗ್ಗೆ ಅಧಿಕೃತ ಆದೇಶಕ್ಕೆ ಸರ್ಕಾರ ತಯಾರಿ ಮಾಡುತ್ತಿದೆ ಎಂದು …

Read More »

ಪ್ರೀತಿಸಿ ಓಡಿಹೋದ ಜೋಡಿಯೊಂದು ಕ್ವಾರಂಟೈನ್ ಕೇಂದ್ರದಲ್ಲಿ ಮದುವೆ

ಭುವನೇಶ್ವರ್: ಮಹಾಮಾರಿ ಕೊರೊನಾ ವೈರಸ್ ಪ್ರಪಂಚದಾದ್ಯಂತ ಭಾರೀ ಕೋಲಾಹಲ ಸೃಷ್ಟಿ ಮಾಡಿದೆ. ಹಾಗೆಯೇ ಪ್ರೀತಿಸಿ ಓಡಿಹೋದ ಜೋಡಿಯೊಂದು ಕ್ವಾರಂಟೈನ್ ಕೇಂದ್ರದಲ್ಲಿ ಮದುವೆಯಾದ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಜೋಡಿ ಕಳೆದ ಜನವರಿಯಲ್ಲಿ ತಮ್ಮ ತಮ್ಮ ಮನೆಯಿಂದ ಹೊರಬಂದಿದ್ದಾರೆ. ಪುರಿ ಜಿಲ್ಲೆಯ ಸಗದ ಗ್ರಾಮದ ಸೌರಭ್ ದಾಸ್(19) ಭಾನುವಾರ ತನ್ನ ಪ್ರಿಯತಮೆ ಪಿಂಕ್ಯಾರಾಣಿ ದಾಸ್ ಳನ್ನು 14 ದಿನಗಳ ಕ್ವಾರಂಟೈನ್ ಮುಗಿಸಿ ಕೇಂದ್ರದಲ್ಲೇ ಮದುವೆಯಾಗಿದ್ದಾನೆ. ಸೌರಭ್ ತನ್ನ ಪ್ರಿಯತಮೆಯೊಂದಿಗೆ ಜನವರಿ ತಿಂಗಳಲ್ಲಿ …

Read More »

ಹಾಸನದಲ್ಲಿ 14 ದಿನಗಳ ಚಿಕಿತ್ಸೆ ಬಳಿಕವೂ ಗುಣಮುಖರಾಗ್ತಿಲ್ವಂತೆ ಸೋಂಕಿತರು!

ಹಾಸನ: ಜಿಲ್ಲೆಗೆ ಕಾಲಿಟ್ಟ ಕೊರೊನಾ ಕೆಲವೇ ದಿನಗಳಲ್ಲಿ ಶತಕ ದಾಟಿದೆ. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯದಲ್ಲೂ ಹೆಚ್ಚಿನ ಚೇತರಿಕೆ ಕಾಣಿಸದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಇದೆಲ್ಲದರ ಮಧ್ಯೆ ಜನಪ್ರತಿನಿಧಿಗಳು ಕೊರೊನಾ ವಿಷಯದಲ್ಲೂ ರಾಜಕೀಯ ಮಾಡ್ತಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ. ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖವಾಗಲು ಹೆಚ್ಚು ಸಮಯ ಹಿಡಿಯುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಸೋಂಕಿತರಿಗೆ ಚಿಕಿತ್ಸೆ ನೀಡಿದ 14 ದಿನಗಳೊಳಗೆ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖವಾಗುವ ಹಂತ ತಲುಪುತ್ತಿದ್ರು. ಆದರೆ …

Read More »

ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ

ಬೆಳಗಾವಿ- ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ ವಿಪರೀತವಾಗಿದ್ದು,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ ಶುರುವಾಗಿದೆ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮಿಡತೆ ದಾಳೆ ಎದುರಾಗುವ ಆತಂಕವಿದ್ದು ಗಡಿ ಜಿಲ್ಲೆಗಳಾದ,ಗುಲ್ಬರ್ಗ, ರಾಯಚೂರ,ವಿಜಯಪೂರ,ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಶಿ,ರಾಶಿ ಮಿಡತೆಗಳು ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಹಾರಾಷ್ಟ್ರದ ವಿಧರ್ಭ ಭಾಗದಲ್ಲಿ ಮಿಡತೆ ದಾಳಿಯಿಂದ ರೈತರು ಕಂಗಾಲಾಗಿದ್ದು, ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಮಿಡತೆ …

Read More »

ಇಂದಿನಿಂದ ರಾಜ್ಯದಲ್ಲಿ ಇನ್ನಷ್ಟು ಮಳೆಯಬ್ಬರದ ಮುನ್ನೆಚ್ಚರಿಕೆ……..

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದ್ದು, 6 ಜಿಲ್ಲೆಗಳನ್ನು ಬಿಟ್ಟು ಉಳಿದ 24 ಜಿಲ್ಲೆಗಳಲ್ಲಿ ಮಳೆ ಆಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನಿಡಿದೆ. ಜೂನ್ 1ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಕಳೆದ 3 ದಿನಗಳಿಂದ ಮಳೆಯ ಆರ್ಭಟ …

Read More »

ಮಂಡ್ಯ ಪಿಎಸ್ ಎಸ್‌ಕೆ, ಮೈಷುಗರ್ ಕಾರ್ಖಾನೆಗಳ ಪ್ರಾರಂಭ, ಎಪಿಎಂಸಿ ಕಾಯ್ದೆ ತಿದ್ದುಪಡಿ

  ಮಂಡ್ಯ :ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ನಷ್ಟವಾಗಿರುವುದನ್ನು ತುಂಬಿಕೊಡಲು ರೈತರ ಸಂಪೂರ್ಣ ಸಾಲಮನ್ನ ಮತ್ತು ಬಡ್ಡಿರಹಿತ ಹೊಸಸಾಲ ನೀಡಬೇಕು ಎಂದು ಒತ್ತಾಯಿಸಿ ರೈತಸಂಘ ಪ್ರತಿಭಟನೆ. ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ. ಮಂಡ್ಯ ಮತ್ತು ಪಾಂಡವಪುರ ಕಾರ್ಖನೆಗಳನ್ನು ತಕ್ಷಣ ಪ್ರಾರಂಭಿಸಬೇಕು ಮತ್ತು ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ನೆಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಿ ಕೆ ಆರ್ ಎಸ್ ಉಳಿಸಬೇಕೆಂದು ಒತ್ತಾಯಿಸಿ ರೈತಸಂಘದಿಂದ ಪ್ರತಿಭಟನೆ. ಬಳಿಕ ತಹಸೀಲ್ದಾರ್ ಪ್ರಮೋದ್ …

Read More »

ಪಕ್ಷಾಂತರ ನಿಷೇಧ ಕಾಯಿದೆ : ನಾಳೆ ಸಂಸದೀಯ ಗಣ್ಯರ ಸಭೆ

ಬೆಂಗಳೂರು, ಮೇ 27- ಪಕ್ಷಾಂತರ ನಿಷೇಧ ಕಾಯಿದೆಗೆ ಸಂಬಂಸಿದಂತೆ ಭಾರತ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ಪೀಠಾಸೀನ ಅಕಾರಿಗಳಿಗೆ ಲಭ್ಯವಿರುವ ಅಕಾರಗಳು ಹಾಗೂ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಮರು ಪರಿಶೀಲನೆ ಕುರಿತಂತೆ ಅಭಿಪ್ರಾಯ ಪಡೆಯಲು ನಾಳೆ ಬೆಳಿಗ್ಗೆ 10.30 ಕ್ಕೆ ವಿಧಾನಸೌಧದ ಮೊದಲನೆಯ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಸಂಸದೀಯ ಗಣ್ಯರ ಸಭೆ ನಡೆಯಲಿದೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಸಭಾಧ್ಯಕ್ಷ …

Read More »

ರಾಜ್ಯದಲ್ಲಿ ಪ್ರತಿ ಮನೆಗೂ ತೆರಳಿ ಆರೋಗ್ಯ ಸಮೀಕ್ಷೆ ಮಾಡಲು ಮುಂದಾದ ರಾಜ್ಯಸರ್ಕಾರ

ಬೆಂಗಳೂರು, ಮೇ 27- ರಾಜ್ಯದಲ್ಲಿ ಪ್ರತಿ ಮನೆಗೂ ತೆರಳಿ ಆರೋಗ್ಯ ಸ್ಥಿತಿಗತಿಯನ್ನು ಸಮೀಕ್ಷೆ ನಡೆಸುವ ಮೂಲಕ ಹೆಲ್ತ್ ರಿಜಿಸ್ಟರ್ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಲ್ತ್ ರಿಜಿಸ್ಟರ್ ಬಗ್ಗೆ ಹದಿನೆಂಟು ವಿಭಾಗದಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ ತಜ್ಞರ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಈ ಸಮೀಕ್ಷೆಯಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಾಕಷ್ಟು ಅನುಕೂಲಗಳಾಗಲಿವೆ ಎಂದರು ಈ …

Read More »

ಬಿರುಗಾಳಿ ಮಳೆಗೆ ಮನೆ ಕಳೆದುಕೊಂಡು ಕಣ್ಣೀರಿಡುತ್ತಿದೆ ಕುಟುಂಬ………

ಗದಗ: ಮಳೆ ರಾಯನ ಆರ್ಭಟಕ್ಕೆ ಮನೆಯ ಶೀಟ್‍ಗಳು ಹಾರಿ ಹೋಗಿ, ಮನೆ ಸಂಪೂರ್ಣ ನಾಶವಾಗಿವೆ. ಪುಟ್ಟ ಮನೆಗಳಲ್ಲೇ ವಾಸಿಸುತ್ತಿದ್ದ ಬಡ ಕುಟುಂಬಗಳು ಸೂರು ಇಲ್ಲದೆ ಕಣ್ಣೀರಿಡುತ್ತಿವೆ. ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಮಾಲರ ಕಾಲೋನಿಯ ಕಳಕವ್ವ ತಳವಾರ ಅವರ ಮನೆಯ ಶೀಟ್‍ಗಳು ಹಾರಿಹೋಗಿವೆ. ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಯ ಅವಾಂತರಕ್ಕೆ ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ. ಬಿರುಗಾಳಿ ಮಳೆ ಸುರಿಯುವ ಸಂದರ್ಭದಲ್ಲಿ ಮನೆಯಲ್ಲಿ ಗರ್ಭಿಣಿ ಹಾಗೂ ಚಿಕ್ಕಮಕ್ಕಳು ಸಹ …

Read More »

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಎನ್ನುವಂತಹ ಪರಿಸ್ಥಿತಿ ಕಾಂಗ್ರೆಸ್ ಮುಖಂಡರದ್ದಾಗಿದೆ ಎಂದು ಟೀಕಿಸಿದರು. ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಸಲಾಗುವುದು. ಮೇ ಅಂತ್ಯಕ್ಕೆ ರಾಜ್ಯದ ಗ್ರಾಮ ಪಂಚಾಯ್ತಿ ಸದಸ್ಯರ ಅಧಿಕಾರ ಅವಧಿ ಮುಗಿದರೇ, ಕೆಲವು …

Read More »