Breaking News

ಕೊರೋನಾ ಸಂಕಷ್ಟ:ಮುಂದುವರೆದ “ಹಸಿದವರತ್ತ ನಮ್ಮ ಚಿತ್ತ” ಅಭಿಯಾನ: ಅಶೋಕ ಚಂದರಗಿ

ಕೊರೋನಾ ಸಂಕಷ್ಟ:ಮುಂದುವರೆದ “ಹಸಿದವರತ್ತ ನಮ್ಮ ಚಿತ್ತ” ಅಭಿಯಾನ! ಎಚ್.ಐ.ವಿ.ಯುವತಿಯರ ” ಆಶ್ರಯ” ಕ್ಕೂ ಆಹಾರ ಧಾನ್ಯ ವಿತರಣೆ ಕೊರೋನಾ ಸಂಕಷ್ಟದ ಸಮಯದಲ್ಲಿ ದಾನಿಗಳ ಬೆಂಬಲದಿಂದ ಕಳೆದ ಮಾರ್ಚ 20 ರಿಂದ ಬೆಳಗಾವಿ ಮಹಾನಗರದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆರಂಭಿಸಿರುವ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನವು ಮುಂದುವರೆದಿದ್ದು ಗುರುವಾರ ಎಪ್ರೀಲ್ 9 ರಂದು ಮಹಾಂತೇಶ ನಗರದಲ್ಲಿರುವ ಎಚ್.ಐ.ವಿ.ಪೀಡಿತ ಯುವತಿಯರ ” ಆಶ್ರಯ” ಕ್ಕೂ ಆಹಾರ ಧಾನ್ಯವನ್ನು …

Read More »

ರಾಯಚೂರು: ಕೊರೊನಾ ಭೀತಿಗೆ ತಾಯಿಯನ್ನ ಕಳೆದುಕೊಂಡು ತಬ್ಬಲಿಗಳಾದ ಮಕ್ಕಳು

ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜಿಲ್ಲೆಯ ಸಿಂಧನೂರಿಗೆ ಪ್ರಯಾಣಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ ಕೂಲಿಕಾರ್ಮಿಕ ಮಹಿಳೆ ಗಂಗಮ್ಮಳ ಇಬ್ಬರು ಮಕ್ಕಳು ಈಗ ದಿಕ್ಕುಕಾಣದ ತಬ್ಬಲಿಗಳಾಗಿದ್ದಾರೆ. ಮಕ್ಕಳಾದ ಮಂಜುನಾಥ್ ಹಾಗೂ ಪ್ರೀತಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಬೆಂಗಳೂರಿನಿಂದ ಬರುವಾಗ ಬಳ್ಳಾರಿಯಲ್ಲಿ ಅನಾರೋಗ್ಯದಿಂದ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಗಂಗಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಳು. ಬೆಂಗಳೂರಿನ ಕೆಂಗೇರಿಯ ಗ್ಲೋಬಲ್ ವಿಲೇಜ್ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗಂಗಮ್ಮಳಿಗೆ ಅಪಾರ್ಟ್ ಮೆಂಟ್ ಮಾಲೀಕರು ಯಾವುದೇ ಸಹಾಯ ಮಾಡಿಲ್ಲ. …

Read More »

ಯುವಕನಿಗೆ ಬಂದಿದ್ದು ಜಾಂಡೀಸ್‌ ರೋಗ, ಕೊಂದಿದ್ದು ಮಾತ್ರ ಕೊರೋನಾ..!

ಹುಬ್ಬಳ್ಳಿ,ಏ10- ಆ ಯುವಕನಿಗೆ ಯಾವುದೇ ಹೇಳಿಕೊ ಳ್ಳುವಂತಹ ಮಾರಣಾಂತಿಕ ಕಾಯಿಲೆ ಇರಲಿಲ್ಲ.‌ಆದರೆ ಅವನಿಗೆ ಕರೋನಾ ವೈರಸ್ ಸೋಂಕು ತಗುಲಿರಬಹುದೆಂದು ಶಂಕೆ ವ್ಯಕ್ತಪಡಿಸಿ ಯುವಕನನ್ನು ಬಲಿ ಪಡೆಯಲಾಯಿತು ಎನ್ನಲಾಗಿದೆ. ಹೌದು ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಏ. 3ರಂದು ಮೃತಪಟ್ಟ ಧಾರವಾಡದ 31 ವರ್ಷದ ಎಂಜಿನಿಯರ್‌ ರಾಜು ನಾಯ್ಕ್‌ ಸಾವು ಇದಕ್ಕೆ ಜ್ವಲಂತ ಸಾಕ್ಷಿ. ನ್ಯುಮೋನಿಯಾ, ಜಾಂಡೀಸ್‌ನಿಂದ ಬಳಲುತ್ತಿದ್ದ ರಾಜುಗೆ ಕೋವಿಡ್‌-19 ಇರಬಹುದೆಂದು ಶಂಕಿಸಿ ಬೇರಾವುದೇ ಚಿಕಿತ್ಸೆ ನೀಡಲೇ ಇಲ್ಲ ಕೋವಿಡ್‌-19 ವರದಿ …

Read More »

ಆದಾಯ ತೆರಿಗೆ ಪಾವತಿದಾರರೇ ಹುಷಾರ್..!

ನವದೆಹಲಿ : ತೆರಿಗೆದಾರರು ತಮ್ಮ ಆದಾಯ ತೆರಿಗೆಯ ಇ-ಫೈಲಿಂಗ್ ಖಾತೆಯ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಅನಧಿಕೃತ ವ್ಯಕ್ತಿಯಿಂದ ಖಾತೆಯ ದುರುಪಯೋಗ ಗಮನಕ್ಕೆ ಬಂದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆ, ಸೂಚಿಸಿದೆ. ನಿಮ್ಮ ಇ-ಫೈಲಿಂಗ್ ಖಾತೆಯು ಅನಧಿಕೃತ ಹೊಂದಾಣಿಕೆ ಅಥವಾ ಪ್ರವೇಶ ಆಗಬಹುದು. ಇದು ನಿಮ್ಮನ್ನು ಅಪರಾಧಕ್ಕೆ ಎಡೆ ಮಾಡಿಕೊಡಲಿದೆ. ಇಂತಹ ಶಂಕೆಗಳು ನಿಮ್ಮ ಗಮನಕ್ಕೆ ಬಂದರೇ ದಯವಿಟ್ಟು ಘಟನೆಯ ಕುರಿತು ಹತ್ತಿರದ ಪೊಲೀಸ್ ಅಥವಾ ಸೈಬರ್ …

Read More »

ಪ್ರಶಾಂತ್ ದತ್ತರಗಿ ಇವನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ವ್ಯಕ್ತಿ

  ಗೋಕಾಕ ಮನಸಾಕ್ಷಿ ಫೌಂಡೇಶನ್ ಸದಸ್ಯರಿಂದ ಕಾಣೆಯಾದ ವ್ಯಕ್ತಿ ಸಂರಕ್ಷಣೆ ಕಾಣೆಯಾದ ವ್ಯಕ್ತಿಯ ಹೆಸರು ಪ್ರಶಾಂತ್ ದತ್ತರಗಿ ಇವನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ವ್ಯಕ್ತಿ ಈತನು ಒಂದು ತಿಂಗಳಿನಿಂದ ಗೋಕಾಕದಲ್ಲಿ ಅಲೆದಾಡುತ್ತಾ ಅವರಿವರಲ್ಲಿ ಕೂಳಿಗಾಗಿ ಭಿಕ್ಷೆ ಬೇಡುತ್ತ ತಿನ್ನುತ್ತ ತಿರುಗಾಡುತ್ತಿದ್ದ ಇವನು ಮನೆಯಲ್ಲಿ ಯಾವುದೇ ಒಂದು ಕಾರಣಕ್ಕಾಗಿ ಮನೆಯಲ್ಲಿ ಜಗಳವಾಡಿ ಊರು ಬಿಟ್ಟು ಬಂದಿರುತ್ತಾನೆ ಇವನು ಗೋಕಾಕದಲ್ಲಿ ಅಲೆದಾಡುವುದನ್ನು ಕಂಡು ನಮ್ಮ ಮನಸಾಕ್ಷಿ ಫೌಂಡೇಶನ್ ಸದಸ್ಯರಾದ ಮಲ್ಲಿಕಾರ್ಜುನ್ ಕರ್ಜಗಿ …

Read More »

ಬಳ್ಳಾರಿ:ಒಂದೂವರೆ ಎಕ್ರೆಯಲ್ಲಿ ಬೆಳೆದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಟಾವು

ಬಳ್ಳಾರಿ: ಲಾಕ್‍ಡೌನ್ ಆಗಿದ್ದನ್ನೇ ಬಂಡವಾಳ ಮಡಿಕೊಂಡು ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯರ್ರಂಗಳಿಯ ಹೊರವಲಯದ ಒಂದೂವರೆ ಎಕ್ರೆಯಲ್ಲಿ ಬೆಳೆದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಟಾವು ಮಾಡಿಕೊಂಡು ಕದ್ದೊಯ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಯರ್ರಂಗಳಿ ಗ್ರಾಮದ ರೈತ ಸುನೀಲ್ ಕುಮಾರ್ ಅವರಿಗೆ ಈ ಹೊಲ ಸೇರಿದ್ದು, ಶನಿವಾರ ಹೊಲಕ್ಕೆ ಹೋಗಿ ಈರುಳ್ಳಿ ಬೆಳೆಯನ್ನು ವೀಕ್ಷಣೆ ಮಾಡಿದ್ದರು. ಭಾನುವಾರ ರಾತ್ರಿಯೊಳಗೆ ಈ ಬೆಳೆಯನ್ನು ಯಾರೋ ದುಷ್ಕರ್ಮಿಗಳು ಬಂದು ಕಟಾವು ಮಾಡಿಕೊಂಡು ಹೋಗಿದ್ದಾರೆ. ಈ …

Read More »

ಹಿರೇಬಾಗೇವಾಡಿ ಈರುಳ್ಳಿ ವ್ಯಾಪಾರಿ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ”.

ಹಿರೇಬಾಗೇವಾಡಿ ಈರುಳ್ಳಿ ವ್ಯಾಪಾರಿ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆ ಸೇರಿದಂತೆ ವಿವಿಧೆಡೆ ವ್ಯಾಪಾರದಲ್ಲಿ ಭಾಗಿ ಈರುಳ್ಳಿ ವ್ಯಾಪಾರಿದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಬೆಳಗಾವಿ: ಈರುಳ್ಳಿ ವ್ಯಾಪಾರಿ ಸೇರಿದಂತೆ ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಆತನ ಬಳಿ ಈರುಳ್ಳಿ ಖರೀದಿಸಿದ ಗ್ರಾಹಕರಿಗೆ ಕೊರೊನಾ ಆತಂಕ ಇದೀಗ ಎದುರಾಗಿದೆ. ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ ಹಾಗೂ ಜಿಲ್ಲೆಯಾದ್ಯಂತ …

Read More »

ಮಗನನ್ನು ಕರೆತರಲು 1,400 ಕಿಮೀ ದೂರ ಒಬ್ಬರೇ ಸ್ಕೂಟಿಯಲ್ಲಿ ಹೋದ ತಾಯಿ

ಹೈದರಾಬಾದ್: ಲಾಕ್‍ಡೌನ್ ಮಧ್ಯೆ ಮನೆಗೆ ಬರಲಾಗದೇ ಪರದಾಡುತ್ತಿದ್ದ ಮಗನಿಗಾಗಿ ತೆಲಂಗಾಣದಲ್ಲಿ ತಾಯಿ ಒಬ್ಬರೇ ಸ್ಕೂಟಿಯಲ್ಲಿ ಬರೋಬ್ಬರಿ 1,400 ಕಿಮೀ ಪ್ರಯಾಣಿಸಿ ಆತನನ್ನು ಕರೆತಂದಿದ್ದಾರೆ. ಈ ಮೂಲಕ ತಾಯಿ ಮಕ್ಕಳಿಗಾಗಿ ಯಾವುದೇ ಸಂಕಷ್ಟವನ್ನು ಎದುರಿಸಲು ಅಂಜಲ್ಲ ಎನ್ನೋದಕ್ಕೆ ಉದಾಹರಣೆ ಆಗಿದ್ದಾರೆ. ತೆಲಂಗಾಣದ ನಿಜಾಮಾಬಾದ್‍ನಲ್ಲಿರುವ ಬೋಧಾನ್ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿ ಆಗಿ ಕಾರ್ಯನಿರ್ವಹಿಸುತ್ತಿರುವ ರಜಿಯಾ ಬೇಗಮ್ ಮಗನಿಗಾಗಿ ಸಾವಿರಾರು ಕಿ.ಮೀ ಪ್ರಯಾಣಿಸಿದ್ದಾರೆ. ಮಗ ಮೊಹ್ಮದ್ ನಿಜಾಮುದ್ದೀನ್(19) ಹೈದರಾಬಾದಿನ ನಾರಾಯಣ ವೈದ್ಯಕೀಯ ಅಕಾಡೆಮಿ ಅಲ್ಲಿ ವ್ಯಾಸಂಗ …

Read More »

ಬೆಂಗ್ಳೂರಿನ 2 ವಾರ್ಡ್‍ಗಳು ಸೀಲ್‍ಡೌನ್ – ಬಿಬಿಎಂಪಿಯಿಂದಲೇ ಆಹಾರ ವಿತರಣೆ

ಬೆಂಗಳೂರು: ಇಂದು ಮಧ್ಯರಾತ್ರಿಯಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸೀಲ್ ಮಾಡಲಾಗುತ್ತದೆ ಎನ್ನುವ ಸುದ್ದಿಗಳ ಮಧ್ಯೆ ನಗರದ ಮಧ್ಯೆ ಬಾಪೂಜಿನಗರ ಮತ್ತು ಪಾದರಾಯನಪುರ ವಾರ್ಡ್ ಅನ್ನು ಸಂಪೂರ್ಣ ಸೀಲ್ ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು, ಬಾಪೂಜಿ ನಗರ ವಾರ್ಡ್ 134 & ಪಾದರಾಯನಪುರ ವಾರ್ಡ್ 135ರಲ್ಲಿ ಕೋವಿಡ್ -19  ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಪರಿಸ್ಥಿತಿಯನ್ನು ನಿಯಂತ್ರಣ …

Read More »

ದೂರದಿಂದಲೇ ಒಂದಾದ ಪ್ರೇಮಿಗಳು – ಬೆಂಗ್ಳೂರಿನ ಗಿರಿನಗರ ಠಾಣೆಯಲ್ಲೊಂದು ಅಪರೂಪದ ದೃಶ್ಯ

ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಅನೇಕ ಮದುವೆ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಆದರೂ ಕೆಲವು ಜೋಡಿಗಳು ಲಾಕ್‍ಡೌನ್ ನಿಯಮವನ್ನು ಪಾಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಕೊರೊನಾ ಲಾಕ್‍ಡೌನ್ ನಡುವೆಯೇ ಪ್ರೇಮಿಗಳಿಬ್ಬರು ಮದುವೆಯಾಗಿದ್ದಾರೆ. ಮುರುಗನ್ ಮತ್ತು ಮೇಘಶ್ರೀ ಮದುವೆಯಾದ ಪ್ರೇಮಿಗಳು. ಇವರಿಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮರುಗನ್ ಮತ್ತು ಮೇಘಶ್ರೀ ಮನೆಯಿಂದ ಓಡಿ …

Read More »