Breaking News

ಬೆಳಗಾವಿ:ಬೆಳಗುಂದಿಯ 70 ವರ್ಷದ ವೃದ್ಧೆ ಗುಣಮುಖನಾಗಿದ್ದಾನೆ. ವೃದ್ಧನ ಮರು ಪರೀಕ್ಷೆ ವರದಿ ನೆಗೆಟಿವ್

ಬೆಳಗಾವಿ: ಜಿಲ್ಲೆಯಲ್ಲಿ ಪ್ರಾರಂಭದಲ್ಲಿ ಮೂವರು ಕೊರೊನಾ ಸೋಂಕಿತರಲ್ಲಿ 70 ವರ್ಷದ ವೃದ್ಧ ಸಂಪೂರ್ಣ ಗುಣಮುಖನಾಗಿದ್ದಾನೆ. ಶೀಘ್ರದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಇಂದು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿ ತಿಳಿಸಿದರು. ಬೆಳಗಾವಿಯಲ್ಲಿ ಮೊದಲು ಮೂರು ಕೊರೊನಾ ಸೋಂಕಿತರಲ್ಲಿ ಬೆಳಗುಂದಿಯ 70 ವರ್ಷದ ವೃದ್ಧೆ ಗುಣಮುಖನಾಗಿದ್ದಾನೆ. ವೃದ್ಧನ ಮರು ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಶೀಘ್ರವೇ ಡಿಶ್ಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಿದರು. ಸೋಂಕಿತರ …

Read More »

ತೋಟಗಾರಿಕಾ ಇಲಾಖೆಯ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ಹಾಪ್‌ಕಾಮ್ಸ್ ದರದಲ್ಲಿ ಹಣ್ಣು-ತರಕಾರಿ ಮಾರಾಟ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ: ಪಟ್ಟಣದ ತೋಟಗಾರಿಕಾ ಇಲಾಖೆಯ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ಹಾಪ್‌ಕಾಮ್ಸ್ ದರದಲ್ಲಿ ಹಣ್ಣು-ತರಕಾರಿ ಮಾರಾಟ ಮಾಡುವ ಸಣ್ಣ ಸಣ್ಣ ವ್ಯಾಪಾರಿಗಳಿಗೆ ನೀಡಲಾದ ಹಾಪ್‌ಕಾಮ್ಸ್ ಪಾಸ್‌ಗಳನ್ನು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ವಿತರಣೆ ಮಾಡಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಸಾರ್ವಜನಿಕರಿಗೆ ಹಾಪ್ ಕಾಮ್ಸ್ ದರದಲ್ಲಿ ಅಂದರೆ ಯೋಗ್ಯ ಕೈಗೆಟಕುವ ದರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಳ್ಳುವ ಗಾಡಿಯಲ್ಲಿ ಮಾರಾಟ ಮಾಡಲು ಮುಂದೆ …

Read More »

ಬೆಳ್ಳಂ ಬೆಳಿಗ್ಗೆ ಅಪಘಾತದಲ್ಲಿ ಪಿಎಸ್ ಐ ಸಾವನ್ನಪ್ಪಿದ ಬೆನ್ನಲ್ಲೆ ಕರ್ತವ್ಯನಿರತ ಮತ್ತೊಬ್ಬ ಪೇದೆಯೊಬ್ಬರು ನಿಧನ

ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಅಪಘಾತದಲ್ಲಿ ಪಿಎಸ್ ಐ ಸಾವನ್ನಪ್ಪಿದ ಬೆನ್ನಲ್ಲೆ ಕರ್ತವ್ಯನಿರತ ಮತ್ತೊಬ್ಬ ಪೇದೆಯೊಬ್ಬರು ನಿಧನರಾಗಿದ್ದಾರೆ. ಬೆಳಗಾವಿ ನಗರದ ಕ್ಯಾಂಪ್ ಠಾಣೆಯ ಮುಖ್ಯ ಪೇದೆ ಕೆ ಕಲ್ಲಪ್ಪ (40) ಅವರು ಅನಾರೋಗ್ಯದಿಂದ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಬೆಳಗಾವಿಯಲ್ಲಿ‌ ಪಿಎಸ್ಐ ಒಬ್ಬರು ನಿಧನರಾಗಿದ್ದರು, ಈಗ ಅದೇ ಇಲಾಖೆಯ ಕಲ್ಲಪ್ಪ ಅವರು ನಿಧನರಾಗಿದ್ದಾರೆ.

Read More »

ನೆಲಮಂಗಲ: ಪ್ರಪಂಚದಾದ್ಯಂತ ಕೊರೊನಾ ಮಾಹಾಮಾರಿ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ಭಾರವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಸಮಯದಲ್ಲಿ ನಿದ್ದೆ, ಊಟ, ಸಂಬಂಧಗಳನ್ನು ಬಿಟ್ಟು ಕೆಲಸ ಮಾಡುವವರನ್ನು ನೋಡಿದ್ದೇವೆ. ಕೊರೊನಾ ವಾರಿಯರ್ಸ್ ವೈದ್ಯರು, ಪೊಲೀಸರು, ಆಶಾಕಾರ್ಯಕರ್ತೆಯರು ಹಾಗೂ ಮಾಧ್ಯಮದವರು ಸಹ ಸಾರ್ವಜನಿಕರಿಗೆ ಮಾಹಿತಿ ಜೊತೆಗೆ ಕೊರೊನಾ ಹೋಗಲಾಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಅನೇಕರ ಮಧ್ಯೆ ಎತ್ತರಕ್ಕೆ ನಿಲ್ಲುತ್ತಾರೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಂಜನ್ ಕುಮಾರ್. ಹೌದು. ಕೊರೊನಾ ಎನ್ನುವ ಮಹಾಮಾರಿ ಕಾಣಿಸಿಕೊಂಡಾಗ ಅಂಜನ್ ಕುಮಾರ್ ದಂಪತಿಗೆ ಗಂಡು ಮಗು ಜನನವಾಗಿ ಕೆಲ ದಿನಗಳಷ್ಟೆ ಆಗಿತ್ತು. ಆ ಸಮಯದಲ್ಲೂ ಕೂಡ ಮಗುವಿನ ಜೊತೆಗೆ ಕಳೆದಿದ್ದು ಕೆಲವೇ ಕೆಲವು ದಿನಗಳು ಮಾತ್ರ. ಅಷ್ಟರಲ್ಲೇ ಮಹಾಮಾರಿ ಕೊರೊನಾದಿಂದ ದೇಶವೇ ಲಾಕ್ ಡೌನ್ ಆಗೋಯ್ತು. ಜೊತೆಗೆ ಅಂಜನ್ ಕುಮಾರ್ ಸಹ ಕೊರೊನಾ ಮಾಹಾಮಾರಿ ಜೊತೆ ಹೋರಾಡಲು ಸಿದ್ಧರಾದರು. ಪ್ರತಿದಿನ ನೆಲಮಂಗಲ ಗ್ರಾಮಾಂತರ ಪ್ರದೇಶದಿಂದ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ತಪಾಸಣೆ ಮಾಡುವ ಜವಬ್ದಾರಿಯನ್ನು ಹೊತ್ತ ಅವರು, ಹಗಲಿರುಳು ಎನ್ನದೆ ಕೊರೊನಾ ಯುದ್ಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರತಿದಿನ ಕೊರೊನಾ ಟೆಸ್ಟ್ ಮಾಡುತ್ತಿದ್ದರಿಂದ ತನ್ನ ಮಗು ಹೆಂಡತಿ ಹಾಗೂ ತಂದೆ ತಾಯಿಯನ್ನು ನೋಡಲು ಆಗದ ಪರಿಸ್ಥಿತಿ ಅಂಜನ್ ಕುಮಾರ್ ಅವರದ್ದು. ಹೀಗಾಗಿ ಮನೆಗೂ ಹೋಗದೆ, ಮೊಬೈಲ್ ನಲ್ಲಿಯೇ ತನ್ನ ಮಗು, ಪತ್ನಿ ಹಾಗೂ ತಂದೆ-ತಾಯಿಯ ಜೊತೆ ಸಂಪರ್ಕಿಸಿ ಅವರಿಗೂ ಧೈರ್ಯ ತುಂಬುವಂತ ಕೆಲಸ ಮಾಡುತ್ತಿದ್ದಾರೆ.

ನೆಲಮಂಗಲ: ಪ್ರಪಂಚದಾದ್ಯಂತ ಕೊರೊನಾ ಮಾಹಾಮಾರಿ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ಭಾರವನ್ನೇ  ಲಾಕ್ ಡೌನ್ ಮಾಡಲಾಗಿದೆ. ಈ ಸಮಯದಲ್ಲಿ ನಿದ್ದೆ, ಊಟ, ಸಂಬಂಧಗಳನ್ನು ಬಿಟ್ಟು ಕೆಲಸ ಮಾಡುವವರನ್ನು ನೋಡಿದ್ದೇವೆ. ಕೊರೊನಾ ವಾರಿಯರ್ಸ್ ವೈದ್ಯರು, ಪೊಲೀಸರು, ಆಶಾಕಾರ್ಯಕರ್ತೆಯರು ಹಾಗೂ ಮಾಧ್ಯಮದವರು ಸಹ ಸಾರ್ವಜನಿಕರಿಗೆ ಮಾಹಿತಿ ಜೊತೆಗೆ ಕೊರೊನಾ ಹೋಗಲಾಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಅನೇಕರ ಮಧ್ಯೆ ಎತ್ತರಕ್ಕೆ ನಿಲ್ಲುತ್ತಾರೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ …

Read More »

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ.

ಉಪವಾಸ ವ್ರತವನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಬಾಂಧವರು ಆಚರಿಸುವ ರಂಜಾನ್ ಹಬ್ಬವನ್ನು ಅವರವರ ಮನೆಯಲ್ಲಿಯೇ ಆಚರಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮಂಡ್ಯ ಕೃಷ್ಣರಾಜಪೇಟೆ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ಮುಸ್ಲಿಂ ಬಂಧುಗಳು ವಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು, ಆರೋಗ್ಯತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸರಳವಾಗಿ ರಂಜಾನ್ ಹಬ್ಬವನ್ನು ಆಚರಿಸಬೇಕು. ವದಂತಿಗಳಿಗೆ ಕಿವಿಗೊಡದೇ ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು. …

Read More »

ಲಾಕ್‍ಡೌನ್ ಎಫೆಕ್ಟ್- ನುಗ್ಗೆಕಾಯಿ ಬೆಳೆದ ರೈತರು ಕಂಗಾಲು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನುಗ್ಗೆಕಾಯಿ ಬೆಳೆದ ರೈತರು ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ಈ ವರ್ಷ ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಅಲ್ಲದೆ ನುಗ್ಗೆಕಾಯಿ ಬೆಲೆ ಕೂಡ ಇಳಿಕೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಒಬ್ಬೊಬ್ಬ ರೈತರು ಎರಡು ಮೂರು ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ನುಗ್ಗೆಕಾಯಿ ಬೆಳೆದಿದ್ದಾರೆ. ಈ ಬಾರಿ ನುಗ್ಗೆಕಾಯಿ ಬೆಳೆಕೂಡ ಉತ್ತಮವಾಗೇ ಬಂದಿದೆ. ಆದರೆ ಕೊಳ್ಳುವವರೇ ಇಲ್ಲವಾಗಿದೆ. ಹೀಗಾಗಿ ರೈತನ …

Read More »

ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಅಲೆಮಾರಿ ಜನಾಂಗದವರಿಗೆ ಮತ್ತು ಬಡ ಕುಟುಂಬದವರಿಗೆ ದಿನಸಿ ಸಾಮಾನುಗಳು ವಿತರಣೆ

ಘಟಪ್ರಭಾ:ಸ್ಥಳೀಯ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಅಲೆಮಾರಿ ಜನಾಂಗದವರಿಗೆ ಮತ್ತು ಬಡ. ಕುಟುಂಬದವರಿಗೆ ದಿನಸಿ ಸಾಮಾನುಗಳು ವಿತರಣೆ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ರಿಜಿಸ್ಟರ್ ಕರ್ನಾಟಕ ರಾಜ್ಯ ನಮ್ಮ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಮತಿ ಗಾಯತ್ರಿ ಚಂದ್ರಶೇಖರ ವಿಶ್ವ ಕರ್ಮ ಅವರ ಮಾರ್ಗದರ್ಶನದಂತೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಸುರೇಶ …

Read More »

ದ್ವಿಚಕ್ರ ವಾಹನ ಸವಾರರಿಗೆ ಸಿಎಂ ಯಡಿಯೂರಪ್ಪ ಗುಡ್‍ನ್ಯೂಸ್

ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಿಎಂ ಯಡಿಯೂರಪ್ಪ ಗುಡ್‍ನ್ಯೂಸ್ ನೀಡಿದ್ದು, ಏಪ್ರಿಲ್ 20ರ ನಂತರ ಯಾವುದೇ ಪಾಸ್ ಇಲ್ಲದೆ ಬೈಕ್‍ಗಳು ಓಡಾಡಬಹುದು ಎಂದು ಘೋಷಣೆ ಮಾಡಿದರು .ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಏಪ್ರಿಲ್ 20ರ ನಂತರ ದ್ವಿಚಕ್ರ ವಾಹಾನ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅದಕ್ಕೆ ಯಾವುದೇ ಪಾಸ್ ಅನುಮತಿ ಬೇಕಾಗಿಲ್ಲ. ಹೊರ ಜಿಲ್ಲೆಗಳಿಗೆ ಹೋಗುವಂತಿಲ್ಲ, ಅದೇ ಜಿಲ್ಲೆಯ ಒಳಗೆ ಓಡಾಡಬೇಕು. ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಇತರ ವಲಯಗಳಲ್ಲಿ ದ್ವಿಚಕ್ರ …

Read More »

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

; ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಕೊಂಚ ನಿಟ್ಟುಸಿರು ಬಿಡುವ ವಿಚಾರ. ಜಿಲ್ಲೆಯ ಒಂಬತ್ತನೇ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ರೋಗಿ ನಂಬರ್ 98 ಕಾರವಾರದ ನೌಕಾ ನೆಲೆಯ ಪತಾಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಭಟ್ಕಳದ 26 ವರ್ಷದ ಯುವಕ ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದನು. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ …

Read More »

ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ನಂಬಿದ ಭಕ್ತರನ್ನು ಕಾಯುವ ವಿಶ್ವ ಚೇತನ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರರಿಂದ ಅನ್ನ ದಾಸೋಹ ಮಾಡಿದರು

ಗೋಕಾಕ್: ದೇಶದಲ್ಲಿ ದಿನದಿನಕ್ಕೆ ಅಟ್ಟಹಾಸ ಮೇರೆಯುವ ಮಹಾಮಾರಿ ಕೋರೊನಾ ವೈರಸ್ ಹರಡುವಿಕೆಯಿಂದ ದೇಶವ್ಯಾಪ್ತಿ ಲಾಕ್ ಡೌನ್ ಆಗಿದ್ದು ಗೋಕಾಕ್ ನಗರ್ ಪ್ರದೇಶ ದಲ್ಲಿ ಸಿಂಧೂಳ್ಳಿ ಮಠ ದವಾಖಾನೆಯ ಹಿಂದುಗಡೆ ಅಲೆಮಾರಿ ಜನಾಂಗದವರು ಕೂಲಿ ಕಾರ್ಮಿಕರು ವ್ಯಾಪಾರವಿಲ್ಲದೆ ಮತ್ತು ಊಟವಿಲ್ಲದೆ ಪರದಾಡುತ್ತಿದ್ದರು. ಅವರಿಗೆ ಶ್ರೀ ಬಸವಗೋಪಾಲ ನೀಲಮಾಣಿಕ ಬಂಡಿಗಣಿ ಮಠದ ದಾಸೋಹ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ ಅಪ್ಪಾಜಿ ಅವರಿಂದ ಅನ್ನದಾಸೋಹ ಮಾಡಲಾಯಿತು ಬಾಗಲಕೋಟ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಬಂಡಿಗಣಿಯ …

Read More »