ಗೋಕಾಕ: ತಮ್ಮ ಸ್ವಂತ ಹೊಲದಲ್ಲಿ ಬೆಳೆದ ತರಕಾರಿಗಳನ್ನು ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕುಕೊಂಡಿರುವ ಗೋಕಾಕ ಸುತ್ತಮುತ್ತಲಿನ ಪ್ರದೇಶದ ಕಡುಬಡವರಿಗೆ ವಿತರಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮುಂದಾಗಿದ್ದಾರೆ. ಇಲ್ಲಿನ ಬ್ಯಾಳಿ ಬಸ್ಸಾಪುರದಲ್ಲಿ 3 ಎಕರೆ ಜಮೀನಿನಲ್ಲಿ ಬೆಳೆದುನಿಂತ ಟೊಮೆಟೊ, ಮೆಣಸಿನಕಾಯಿ ಮತ್ತು ಇತರೆ ತರಕಾರಿಗಳನ್ನು ಪರಿಶೀಲಿಸಿದ ಬಳಿಕ ಗೋಕಾಕ ತಾಲೂಕಿನ ಕಡುಬಡವರಿಗೆ ಮತ್ತು ನಿರ್ಗತಿಕರಿಗೆ ವಿತರಿಸಲು ಅವರು ತಮ್ಮ ಕಾರ್ಯಕರ್ತರಿಗೆ ತಿಳಿಸಿದರು. ಈಗಾಗಲೇ ರೈತರ ಬೆನ್ನೆಲುಬಾಗಿ ನಿಂತಿರುವ ಶಾಸಕರು ರೈತರು ಬೆಳೆದ …
Read More »ಹುಟ್ಟುಹಬ್ಬಕ್ಕೆ ಕೂಡಿಟ್ಟ 11,111 ರೂ. ಕೊರೊನಾ ಹೋರಾಟಕ್ಕೆ ನೀಡಿದ ಬಾಲಕಿ
ಕೋಲಾರ: ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪುಟಾಣಿ ಬಾಲಕಿಯೊರ್ವಳು ಮಾದರಿಯಾಗಿದ್ದಾಳೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮೂಲದ 2ನೇ ತರಗತಿ ವಿದ್ಯಾರ್ಥಿನಿ ಚರಿತ ಆರ್. ರಾಯಲ್ ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ. ಹುಟ್ಟುಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನ ಕೊರೊನಾ ಪರಿಹಾರ ನಿಧಿಗೆ ಬಾಲಕಿ ನೀಡಿದ್ದಾಳೆ. ಕೋವಿಡ್-19 ಚಿಕಿತ್ಸೆಗಾಗಿ ತಾನೂ ಕೂಡಿಟ್ಟಿದ್ದ 11,111 ರೂಪಾಯಿ ಹಣವನ್ನು ಕೋಲಾರ ಜಿಲ್ಲಾಧಿಕಾರಿ …
Read More »ಪಾದರಾಯನಪುರ ಜಮೀರ್ ಫಾದರ್ ಪ್ರಾಪರ್ಟಿ ಅಲ್ಲ: ಸಿ.ಟಿ ರವಿ
ಚಿಕ್ಕಮಗಳೂರು: ಅನುಮತಿ ಪಡೆದು ಹೋಗಬೇಕು ಎಂದು ಹೇಳಲು ಪಾದರಾಯನಪುರ ಜಮೀರ್ ಅಹ್ಮದ್ ಅವರ ಫಾದರ್ ಪ್ರಾಪರ್ಟಿ ಅಲ್ಲ ಎಂದು ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವಾಗ ವಿಧಾನಸಭೆಗೆ ಬಂದಿದೇನೋ ಅವಾಗಲೇ ಜಮೀರ್ ಅಹ್ಮದ್ ಕೂಡ ಬಂದಿರೋದು. ಹೀಗಾಗಿ ಜಮೀರ್ ಅವರಿಗೆ ಒಂದು ಕಾನೂನು ನನಗೊಂದು ಕಾನೂ ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಈಗಾಗಲೇ …
Read More »ಬಳ್ಳಾರಿ: ಮಾಹಾ ಮಾರಿ ಕೊರೊನಾ ವಿರುದ್ಧ ಹೋರಾಡಲು ಗಣಿ ನಾಡು ಬಳ್ಳಾರಿಯ ಗಣಿ ಕಂಪನಿಗಳು ಸಹ ಸಾತ್
ಬಳ್ಳಾರಿ: ಮಾಹಾ ಮಾರಿ ಕೊರೊನಾ ವಿರುದ್ಧ ಹೋರಾಡಲು ಗಣಿ ನಾಡು ಬಳ್ಳಾರಿಯ ಗಣಿ ಕಂಪನಿಗಳು ಸಹ ಸಾತ್ ನೀಡಿವೆ. ಬಳ್ಳಾರಿ ನಗರದ ಸುತ್ತ ಸ್ಯಾನಿಟೈಜರ್ ಸಿಂಪಡಣೆ ಮಾಡುವ ಮೂಲಕ ತಮ್ಮದೇ ಆದ ಸಹಾಯ ಮಾಡಿವೆ. ಲಾಕ್‍ಡೌನ್ ಸಮಯದಲ್ಲಿ ಜಿಲ್ಲೆಯ ಕೈಗಾರಿಕೆಗಳು ಸಹಾಯ ಮಾಡಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕಲು ಕೇಳಿದ್ದರು. ಹೀಗಾಗಿ ಬಳ್ಳಾರಿಯ ಎನ್‍ಎಮ್‍ಡಿಸಿ ಕಂಪನಿ ಜಿಲ್ಲಾಡಳಿತಕ್ಕೆ ಸಾತ್ ನೀಡಿದ್ದು, ಕಂಪನಿ ವತಿಯಿಂದ ನಗರದ ನೈರ್ಮಲ್ಯೀಕರಣ ಕೈಗೊಳ್ಳಲು ಮುಂದಾಗಿದೆ. ನಗರದ ಜನ ನಿಬಿಡ …
Read More »BIG NEWS : ಉತ್ತರ ಕೊರಿಯಾ ಸರ್ವಾಧಿಕಾರಿ ‘ಕಿರಿಕ್’ ಕಿಮ್ ನಿಗೂಢ ಕಣ್ಮರೆ..!?
ಸಿಯೋಲ್, ಏ.22-ವಿಶ್ವಸಂಸ್ಥೆಯ ಎಚ್ಚರಿಕೆಯನ್ನೂ ಲೆಕ್ಕಿಸದೆ ಸತತ ಅಣ್ವಸ್ತ್ರಗಳ ಪರೀಕ್ಷೆಗಳನ್ನು ನಡೆಸುತ್ತಾ ಏಷ್ಯಾ ಖಂಡವಲ್ಲದೆ ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕಾ ನಿದ್ದೆಗೆಡಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮರಣಶಯ್ಯೆಯಲ್ಲಿದ್ದಾರೆಂಬ ವರದಿಗಳ ನಡುವೆಯೇ ಅವರು ಕಣ್ಮರೆಯಾಗಿದ್ದಾರೆ ಎಂಬ ಸಂಗತಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದು ಮೂಲದ ಪ್ರಕಾರ, ಹುಚ್ಚು ದೊರೆಯ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಆಗಿದೆ ಎಂದು ಹೇಳುತ್ತಿದ್ದರೆ, ಮತ್ತೊಂದು ಮೂಲ ಕಳೆದ ಒಂದು ವಾರದಿಂದ ಅವರು …
Read More »ಭಾರತದಲ್ಲಿ ಕೊರೋನಾಗೆ ಕಳೆದ 24 ಗಂಟೆಯಲ್ಲಿ 50 ಮಂದಿ ಸಾವು..! 20,000 ಸೋಂಕಿತರು
ನವದೆಹಲಿ/ಮುಂಬೈ,ಏ.22-ವೈದ್ಯರು ಮತ್ತು ಆರೋಗ್ಯರಕ್ಷಕರ ನಿರಂತರ ಹೋರಾಟದ ನಡುವೆಯೂ ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಮುಂದೇನು ಎಂಬ ಆತಂಕ 135 ಕೋಟಿ ಭಾರತೀಯರಲ್ಲಿ ಮನೆ ಮಾಡಿದೆ. ಭಾರತದಲ್ಲಿ ಮೃತರ ಸಂಖ್ಯೆ 650ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 20,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿನ್ನೆ ಮಧ್ಯರಾತ್ರಿವರೆಗಿನ ಅಧಿಕೃತ ವರದಿ …
Read More »ಉಚಿತ ಹಾಲಿನಿಂದ ರಾಜ್ಯದಲ್ಲಿ ಕೊರೋನಾ ಹರಡುವುದು ಖಚಿತ..!
ಬೆಂಗಳೂರು, ಏ.22- ಸರ್ಕಾರವೇನೋ ಬಡವರಿಗಾಗಿ ಉಚಿತ ಹಾಲು ನೀಡುತ್ತಿದೆ. ಆದರೆ ಇದನ್ನು ಪಡೆಯಲು ಜನ ಮುಗಿ ಬೀಳುತ್ತಿರುವುದನ್ನು ನೋಡಿದರೆ ಮಹಾ ಮಾರಿ ಕೊರೊನಾ ಉಚಿತವಾಗಿ ಹರಡುತ್ತಿದೆಯೇನೋ ಎಂದೆನಿಸುತ್ತಿದೆ.ಬಿಟ್ಟಿ ಹಾಲು ಪಡೆಯಲು ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಾ ಮುಂದು ತಾ ಮುಂದು ಎಂದು ನುಗ್ಗುತ್ತಿರುವುದು ಒಬ್ಬರ ಮೇಲೊಬ್ಬರು ಬಿದ್ದು ಪೈಪೋಟಿಗೆ ಬೀಳುತ್ತಿರುವುದರಿಂದ ಹಾಲು ಉಚಿತ ಕೊರೊನಾ ಖಚಿತ ಎಂಬಂತಾಗಿದೆ. ನಗರದ ಯಲಹಂಕ, ಬಾಪೂಜಿ ನಗರ, ನೆಲಮಂಗಲ ಮುಂತಾದೆಡೆ ಉಚಿತ ಹಾಲು …
Read More »ಬ್ರೇಕಿಂಗ್ : ರಾಜ್ಯದಲ್ಲಿ 4 ತಿಂಗಳ ಮಗು ಸೇರಿ ಇಂದು 7 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 425ಕ್ಕೇರಿಕೆ
ಬೆಂಗಳೂರು, ಏ.22- ಕಲಬುರಗಿಯಲ್ಲಿ ನಾಲ್ಕು ತಿಂಗಳ ಗಂಡು ಮಗುವಿಗೆ ಕೊರೊನಾ ಸೋಂಕು ತಗುಲಿರುವುದು ಸೇರಿದಂತೆ ಇಂದು ಒಟ್ಟು 7 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, 129 ಮಂದಿ ಕೋವಿಡ್-19ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 54 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ಕೊರೊನಾ ಸೋಂಕಿತರಾಗಿದ್ದು, ಇವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.ಕೊರೊನಾ ಸೋಂಕಿತ ರೋಗಿ …
Read More »ಸೈಕಲ್‍ನಲ್ಲಿ ಬಂದು ನಾಣ್ಯಗಳನ್ನು ಎಸೆದು ಹೋದ ವ್ಯಕ್ತಿ, ಮೈಸೂರಲ್ಲಿ ಆತಂಕ..!
ಮೈಸೂರು, ಏ.22- ನಗರದ ಸೀಬಯ್ಯ ರಸ್ತೆಯಲ್ಲಿ ಸೈಕಲ್‍ನಲ್ಲಿ ಬಂದ ವ್ಯಕ್ತಿಯೊಬ್ಬ ನಾಣ್ಯಗಳನ್ನು ಎಸೆದು ಹೋಗಿದ್ದು, ಈ ನಾಣ್ಯಗಳನ್ನು ತೆಗೆದುಕೊಂಡಿದ್ದ ವ್ಯಕ್ತಿಯನ್ನು ಪಾಲಿಕೆ ಆರೋಗ್ಯ ಅಧಿಕಾರಿಗಳು ಪತ್ತೆಹಚ್ಚಿ ನಾಣ್ಯಗಳನ್ನು ವಶಕ್ಕೆ ಪಡೆದು ವೈರಾಣು ನಿರೋಧಕ ಸಿಂಪಡಿಸಿದ್ದಾರೆ. ಈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸೈಕಲ್‍ನಲ್ಲಿ ಬಂದು ನಾಣ್ಯಗಳನ್ನು ದಾರಿಯುದ್ದಕ್ಕೂ ಎಸೆದು ಹೋಗಿದ್ದಾನೆ. ಈ ಸಂದರ್ಭದಲ್ಲಿ ಈ ಮಾರ್ಗವಾಗಿ ಬರುತ್ತಿದ್ದ ದಾರಿಹೋಕರೊಬ್ಬರು ನಾಣ್ಯ ಬಿದ್ದಿರುವುದನ್ನು ಗಮನಿಸಿ ತೆಗೆದುಕೊಂಡಾಗ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಇನ್ನೂ ಹಲವು ನಾಣ್ಯಗಳು …
Read More »ಬೆಂಗಳೂರಲ್ಲಿ ಲಾಕ್‍ಡೌನ್ ಮತ್ತಷ್ಟು ಟೈಟ್ : ರಸ್ತೆಗಿಳಿದರೆ ವಾಹನ ಸೀಜ್ ಆಗುತ್ತೆ ಹುಷಾರ್..!
ಬೆಂಗಳೂರು, ಏ.22- ಬೇಕಾಬಿಟ್ಟಿ ವಾಹನ ಸಂಚಾರದಿಂದ ನಿನ್ನೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಂಚಾರಿ ಪೊಲೀಸರು ಇಂದು ನಗರದಲ್ಲಿ ಲಾಕ್‍ಡೌನ್ ಬಿಗಿಗೊಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ 1000ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದುವರೆಗೂ 759 ವಾಹನಗಳನ್ನು ವಶಪಡಿಸಿಕೊಂಡಿದ್ದು, ತಪಾಸಣೆ ಮುಂದುವರಿಸಿರುವ ಪೊಲೀಸರು ರಸ್ತೆಯಲ್ಲಿ ಓಡಾಡುವ ಪ್ರತಿಯೊಂದು ವಾಹನಗಳ ನಂಬರ್ ನೋಟ್ ಮಾಡಿಕೊಳ್ಳುತ್ತಿದ್ದು, ವಾಹನ …
Read More »