Breaking News

ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ,ಬೇಸತ್ತ ಪೊಲೀಸರ ಲಾಠಿ ಚಾರ್ಜ್

ರಾಯಚೂರು: ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಇದರಿಂದ ಬೇಸತ್ತ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ತಿಂಗಳ ಅಂತ್ಯದ ವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಜನ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಹೀಗೆ ನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ರಾಜ್ಯದ ಬಹುತೇಕ ಕಡೆ ಲಾಕ್‍ಡೌನ್ ಉಲ್ಲಂಘಿಸಲಾಗುತ್ತಿದ್ದು, ಜನ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ರಾಯಚೂರಿನಲ್ಲಿ ಸಹ ಇಂದು ಬೈಕ್ ಸಂಚಾರ ಹೆಚ್ಚಾಗಿತ್ತು. ಹೀಗಾಗಿ ಪೊಲೀಸರು …

Read More »

ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿದೆ.

ಬೆಂಗಳೂರು: 1,450 ಪ್ರವಾಸಿ ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿ ಘಾಜಿಯಾಬಾದ್ ತಲುಪಿದೆ. ಗುರುವಾರ ಸಂಜೆ ಬೆಂಗಳೂರಿನ ಚಿಕ್ಕಬಾಣವಾರ ಸ್ಟೇಶನ್ ನಿಂದ ಹೊರಟಿದ್ದ ರೈಲು ಉತ್ತರ ಪ್ರದೇಶದ ಬಸ್ತಿ ತಲುಪಬೇಕಿತ್ತು. 20 ಗಂಟೆಗೂ ಅಧಿಕ ಸಮಯದವರೆಗೆ ಪ್ರವಾಸಿ ಕಾರ್ಮಿಕರು ಊಟ ಮಾಡಿಲ್ಲ. ಇನ್ನು ಹಲವರಿಗೆ ತಾವು ಊರು ಸೇರುತ್ತೇವೆ ಎಂಬ ನಂಬಿಕೆ ಇಲ್ಲ ಅನ್ನೋ ಅನುಮಾನ ಮೂಡಿದೆ. ಗುರುವಾರ ಸಂಜೆ 6.45ಕ್ಕೆ ಚಿಕ್ಕಬಾಣವಾರದಿಂದ ಈ …

Read More »

“ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೊಲೀಸರ ಏಟು ಆತನ ಸಾವಿಗೆ ಕಾರಣವಾಯ್ತು ಎನ್ನುವ ವದಂತಿ ಹರಡಿದೆ”.?

ಅಥಣಿ –  ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೊಲೀಸರ ಏಟು ಆತನ ಸಾವಿಗೆ ಕಾರಣವಾಯ್ತು ಎನ್ನುವ ವದಂತಿ ಹರಡಿದೆ. ಜಗದೀಶ್ ಸುರೇಶ ತೆಗ್ಗಿನವರ (26)ಮೃತ ಯುವಕ. ಅಂಗಡಿ ಬಾಗಿಲು ಹಾಕದ ಹಿನ್ನೆಲೆಯಲ್ಲಿ ಕಾಗವಾಡ ಪೋಲಿಸರು ಈ ಯುವಕನಿಗೆ ಥಳಿಸಿದ್ದರೆನ್ನಲಾಗಿದೆ. ಸ್ವಲ್ಪ ಹೊತ್ತಿನ ನಂತರ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಆತ ಸಾವಿಗೀಡಾಗಿದ್ದಾನೆ. ಸಾವಿನಲ್ಲಿ ಅನುಮಾನವಿದೆ, ತನಿಖೆ ನಡೆಸಬೇಕೆಂದು …

Read More »

ಕೊರೊನಾ ವರದಿ ನೆಗೆಟಿವ್ ಬಂದಿದ್ರೂ ಆತ್ಮಹತ್ಯೆ……….

ಚಿಕ್ಕಮಗಳೂರು: ವ್ಯಕ್ತಿಯೋರ್ವ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೇ 19ರಂದು ಕೊಪ್ಪ ಮೂಲದ 53 ವರ್ಷದ ವ್ಯಕ್ತಿಯ ಗಂಟಲು ಮೂಗಿನ ದ್ರವ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಹಾಗಾಗಿ ವ್ಯಕ್ತಿಯನ್ನು ಮೇ 20ರಂದು ಚಿಕ್ಕಮಗಳೂರಿನ ಕೆಎಸ್‍ಓಯು ಕಟ್ಟಡದಲ್ಲಿರುವ ಕೋವಿಡ್-19 ಕೇರ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿತ್ತು. ಸಾಂದರ್ಭಿಕ ಚಿತ್ರ ನೋವು ಮತ್ತು ರಕ್ತಸ್ರಾವದ ಮೂಲವ್ಯಾಧಿ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಐಸೋಲೇಶನ್ ವಾರ್ಡಿಗೆ …

Read More »

ಮೊಬೈಲ್ ಸಿಗ್ನಲ್‍ಗಾಗಿ ಗುಡ್ಡ ಏರಿದವನಿಗೆ ಗುಂಡೇಟು!

ಕಾರವಾರ: ಮೊಬೈಲ್ ಸಿಗ್ನಲ್‍ಗಾಗಿ ಗುಡ್ಡ ಏರಿ ಕುಳಿತಿದ್ದ ಯುವಕ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರ ತಾಲೂಕಿನ ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ನಡೆದಿದೆ. ಕುಂಬಾರಕುಳಿ ಮೂಲದ ಹಾಲಿ ಗೊಂಟನಾಳದ ನಿವಾಸಿ ಪ್ರದೀಪ್ ನಾರಾಯಣ್ ಗೌಡ (19) ಗಾಯಗೊಂಡ ಯುವಕ. ನಾರಾಯಣ್ ಗೌಡ ಮೊಬೈಲ್ ನೆಟ್‍ವರ್ಕ್ ಸಂಪರ್ಕ ಅರಸಿ ಗುಡ್ಡ ಏರಿ ಕುಳಿತು ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಚಟವುಳ್ಳ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ ಕಾಡು ಪ್ರಾಣಿಗಳನ್ನು …

Read More »

ಎಣ್ಣೆ ಏಟಲ್ಲಿ ಪತ್ನಿ, ಮಗಳಿಗೆ ಬೆಂಕಿ ಇಟ್ಟ ಪಾಪಿ………..

ಧಾರವಾಡ: ಮದ್ಯದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿ ಹಾಗೂ ಮಗಳಿಗೆ ಬೆಂಕಿಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ನಡೆದಿದೆ. ಗುಡಿಸಾಗರ ಗ್ರಾಮದ ಭೀರಪ್ಪ ಕಟಿಗಾರ (40) ಕೃತ್ಯ ಎಸೆಗಿದ ಪಾಪಿ. ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ ಭೀರಪ್ಪ ಹಾಗೂ ಪತ್ನಿ ಫಕೀರವ್ವ (34) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 12 ವರ್ಷದ ಮಗಳ ಪರಿಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.   ಭೀರಪ್ಪ ಮದ್ಯ …

Read More »

ಗ್ರಾಮದ ಮಹಿಳೆಗೆ ಕೊರೊನಾ- ಹಾಲು ಖರೀದಿ ನಿಲ್ಲಿಸಿದ ಕೆಎಂಎಫ್……..

ಬೆಂಗಳೂರು: ಗರ್ಭಿಣಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಕೆಎಂಎಫ್ ಗ್ರಾಮದಿಂದ ಹಾಲು ಖರೀದಿಯನ್ನು ನಿಲ್ಲಿಸಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೊರಟಿ ಗ್ರಾಮದ ರೈತರ ಹಾಲು ಚರಂಡಿ ಸೇರಿದೆ. ಚಿಕ್ಕಕೊರಟಿ ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಗ್ರಾಮದ ರೈತರಿಂದ ಹಾಲು ಖರೀದಿಯನ್ನು ಕೆಎಂಎಫ್ ನಿಲ್ಲಿಸಿದೆ. ಶುಕ್ರವಾರದಿಂದ ಹಾಲು ಖರೀದಿ ನಿಲ್ಲಿಸಲಾಗಿದ್ದು, ಸುಮಾರು ನಾಲ್ಕು ಸಾವಿರ ಲೀಟರ್ ನಷ್ಟು ಹಾಲನ್ನು ರೈತರನ್ನು ಚರಂಡಿಗೆ ಚೆಲ್ಲಿದ್ದಾರೆ. ಗ್ರಾಮದ ಬಹುತೇಕ ಜನರು ಹೈನುಗಾರಿಕೆಯಿಂದಲೇ ಜೀವನ …

Read More »

ಹೊರ ರಾಜ್ಯದ ಪುಂಡರಿಂದ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹಲ್ಲೆ……..

ವಿಜಯಪುರ: ಕೊರೊನಾ ವಾರೊಯರ್ಸ್‍ಗಳಂತೆಯೇ ಕೆಲಸ ಮಾಡುತ್ತಿರುವ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹೊರ ರಾಜ್ಯದ ಪುಂಡರು ಹಲ್ಲೆ ಮಾಡಿದ್ದಾರೆ. ಜಿಲ್ಲೆಯ ಸಿಂದಗಿಪಟ್ಟಣದ ಸರ್ಕಾರಿ ಶಾಲೆ, ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಡುಗೆ ಕೆಲಸ ಮಾಡುತ್ತಿದ್ದ ಮೈಬೂಬಸಾಬ ಬನ್ನೆಟ್ಟಿ(60) ಅವರ ಮೇಲೆ ಯುವಕರಾದ ದೇವರನಾವದಗಿಯ ಅರುಣ ರಾಠೋಡ್ ಹಾಗೂ ರಾಹುಲ್ ರಾಠೋಡ್ ಹಲ್ಲೆ ನಡೆಸಿದ್ದಾರೆ. ಯುವಕರಿಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕೊರೊನಾ ವೈರಸ್ ಹಿನ್ನೆಲೆ ಹೊರ ರಾಜ್ಯದಿಂದ …

Read More »

ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವು……

ಬೆಂಗಳೂರು: ಮಹಿಳೆಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಜಗಜೀವನ್‌ ರಾಮ್‌ ನಗರದಲ್ಲಿ ನಡೆದಿದೆ. ಆರ್.ಆರ್ ನಗರದ ನಿವಾಸಿ ಯಶೋಧಾ (45) ಮೃತ ಮಹಿಳೆ. ಜೆಜೆ ನಗರದ ಸಂಬಂಧಿಕರ ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ.   ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಗಳಿಂದ ಬಳಲುತ್ತಿದ್ದ ಯಶೋಧಾ ಅವರು ಸಂಬಂಧಿಕರ ಮನೆ ಹೋಗಿದ್ದರು. ಇಂದು ಊಟ ಮಾಡಿ ಮನೆಯ 5ನೇ ಮಹಡಿಗೆ ಹೋಗಿದ್ದರು. ಈ ವೇಳೆ ತಲೆ ತಿರುಗಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ …

Read More »

ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ……….

ಕಾರವಾರ: ಸೂಟ್‍ಕೇಸ್‍ನಲ್ಲಿ 15 ಲಕ್ಷ ರೂ.ಗೂ ಅಧಿಕ ಹಣ ಸಾಗಿಸುತ್ತಿದ್ದ ಕದಂಬ ನೌಕಾನೆಲೆಯ ಅಧಿಕಾರಿಯನ್ನು ನೌಕಾನೆಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೌಕಾನೆಲೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್‍ನ ಅಧಿಕಾರಿಯೋರ್ವ ನೇವಲ್ ಬೇಸ್‍ನಲ್ಲೇ 15 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸೂಟ್‍ಕೇಸ್‍ನಲ್ಲಿ ಬೇಸ್‍ನ ಹೊರಗಡೆ ಕೊಂಡೊಯ್ಯುತ್ತಿದ್ದ. ಈ ವೇಳೆ ಸೂಟ್‍ಕೇಸ್ ಜತೆ ಹೊರ ಬರುತ್ತಿದ್ದ ಎಂಇಎಸ್ ಅಧಿಕಾರಿಯನ್ನು ನೇವಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್ ಅಧಿಕಾರಿಯನ್ನು ಹಿಡಿದು ನೇವಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, …

Read More »