Breaking News

ಕೋವಿಡ್-೧೯: ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ಪರೀಕ್ಷೆ “ಮಾಧ್ಯಮ ಪ್ರತಿನಿಧಿಗಳು ಮುನ್ನೆಚ್ಚರಿಕೆ ವಹಿಸಲಿ”- ಡಾ.ಮುನ್ಯಾಳ

  ಬೆಳಗಾವಿ, ಏ.೨೫(ಕರ್ನಾಟಕ ವಾರ್ತೆ): ಕೋವಿಡ್-೧೯ ಹರಡುವಿಕೆ ತಡೆಗಟ್ಟುವ ಕುರಿತು ಜನಜಾಗೃತಿ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿರುವ ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದ ವರದಿಗಾರರು ಮತ್ತು ಛಾಯಾಗ್ರಾಹಕರು ಸೇರಿದಂತೆ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ “ವಾರ್ತಾಭವನ”ದಲ್ಲಿ ಶನಿವಾರ (ಏ.೨೫) ಕೋವಿಡ್-೧೯ ಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ನಡೆಸಲಾಯಿತು. ಈ …

Read More »

ಬೆಳಗಾವಿ ಜಿಲ್ಲೆಯ ಮತ್ತೆ ಮೂವರಿಗೆ ಸೊಂಕು…..54 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ ಜಿಲ್ಲೆಯ ಎಂಟು ವರ್ಷದ ಬಾಲಕ ಸೇರಿದಂತೆ ಬೆಳಗಾವಿ ಜಿಲ್ಲೆಯ ಮತ್ತೆ ಮೂವರಿಗೆ ಸೊಂಕು 54 ಕ್ಕೇರಿದ ಸೊಂಕಿತರ ಸಂಖ್ಯೆ ಎಂಟು ವರ್ಷದ   ಬಾಲಕ ಸೇರಿದಂತೆ ಬೆಳಗಾವಿ ಜಿಲ್ಲೆಯ ಮತ್ತೆ ಮೂವರಿಗೆ ಸೊಂಕು 54 ಕ್ಕೇರಿದ ಸೊಂಕಿತರ ಸಂಖ್ಯೆ ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದೆ ಎಂಟು ವರ್ಷದ ಬಾಲಕ ಸೇರಿದಂತೆ ಹಿರೇಬಾಗೇವಾಡಿಯ ಮೂವರಿಗೆ ಸೊಂಕು ತಗುಲಿ ರುವದು ದೃಡವಾಗಿದೆ ಇಂದು ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ …

Read More »

ಮೃತನಿಂದ ದಿನಸಿ ಕಿಟ್ ಪಡೆದಿದ್ದ ಮಹಿಳೆಗೂ ಅಂಟಿತು ಸೋಂಕು..!

ಚಿಕ್ಕಬಳ್ಳಾಪುರ, ಏ.25- ಮೃತ ಸೋಂಕಿತನ ಬಳಿ ದಿನಸಿ ಕಿಟ್ ಪಡೆದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ವಿವಿಧ ವಾರ್ಡ್‍ಗಳ ಜನತೆ ತಲ್ಲಣಗೊಂಡಿದ್ದಾರೆ.ಚಿಕ್ಕಬಳ್ಳಾಪುರ ನಗರದಲ್ಲಿ ಇದೀಗ ಮತ್ತೊರ್ವ 39 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಗೊಂಡ ನಂತರ , ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾದಂತಾಗಿದೆ ಮಾ.5ರಂದು ಈಕೆ ಕೊರೊನಾ ಸೋಂಕಿಗೆ ಬಲಿಯಾದ ವೃದ್ಧ ರೋಗಿ-250ರ ಮನೆಗೆ ತೆರಳಿ ದಿನಸಿ ಕಿಟ್ ಪಡೆದುಕೊಂಡಿದ್ದರು. ಈಕೆಗೆ ಕೊರೊನಾ ಸೋಂಕು ದೃಢವಾಗಿದ್ದು, …

Read More »

ಒಂದೇ ದಿನ 18 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 11 ಜನರನ್ನು ವೈರಾಣು ಹೊಸಕಿ ಹಾಕಿದೆ.

ಮುಂಬೈ, ಏ.25- ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿನ ಸಾವು ಮತ್ತು ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರ ನಂಬರ್ ಒನ್ ಹಾಟ್‍ಸ್ಪಾಟ್ ರಾಜ್ಯ ಎನಿಸಿದೆ. ರಾಜ್ಯದ ವಿವಿಧೆಡೆ ಕೊರೊನಾ ಹೆಮ್ಮಾರಿಯ ಮರಣ ಮೃದಂಗದ ಮಾರ್ದನಿ ಮುಂದುವರಿದಿದ್ದು, ಒಂದೇ ದಿನ 18 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 11 ಜನರನ್ನು ವೈರಾಣು ಹೊಸಕಿ ಹಾಕಿದೆ. ದೇಶದಲ್ಲಿ ಮಾರಕ ಕೋವಿಡ್-19 ಸೋಂಕಿನಿಂದ 24 ತಾಸುಗಳಲ್ಲಿ ಇಷ್ಟು ರೋಗಿಗಳು ಅಸುನೀಗಿರುವುದು ಇದೇ …

Read More »

ಮತದಾರರ ಋಣ ತೀರಿಸಲು ಇದೊಂದು ಅಳಿಲು ಸೇವೆ.:ಶಾಸಕ ಬಾಲಚಂದ್ರ ಜಾರಕಿಹೊಳಿ

ಮತದಾರರ ಋಣ ತೀರಿಸಲು ಇದೊಂದು ಅಳಿಲು ಸೇವೆ. ಮೇ 3ರ ತನಕ ಲಾಕ್ ಡೌನ್ ನಿಯಮ ಪಾಲಿಸಿ: ಮೂಡಲಗಿಯಲ್ಲಿಂದು ಎಲ್ಲ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ಟ್ ವಿತರಿಸಿದ ಗಣ್ಯರು ಮೂಡಲಗಿ: ಅರಭಾಂವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಮಹಾನ್ ದಾನಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸತ್ಕಾರ್ಯ  ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸಮಾಜ ಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ …

Read More »

ಬಡವರಿಗೆ 3 ಸಾವಿರ ದಿನಸಿ, ತರಕಾರಿ ಕಿಟ್ ವಿತರಿಸಿದ ಗ್ರಾ.ಪಂ.ಸದಸ್ಯ…….

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿವರಿಗೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆ ಮನೆಗೂ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ವಿ.ಕೆ.ಎಸ್.ಕೆಂಪರಾಜು ಬಡವರಿಗೆ ಕಿಟ್‍ಗಳನ್ನ ವಿತರಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಈ ಅಪಾಯಕಾರಿ ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತೆಯನ್ನ ವಹಿಸಿ ಲಾಕ್‍ಡೌನ್ ಜಾರಿಗೆ …

Read More »

ಅನಾವಶ್ಯಕವಾಗಿ ಹೊರಬಂದ್ರೆ ಅಂಬುಲೆನ್ಸ್‌ನಲ್ಲಿ ಶಿಕ್ಷೆ: ಪೊಲೀಸರ ಹೊಸ ಪ್ರಯೋಗ

ರಾಯಚೂರು: ಕೊರೊನಾ ಸೋಂಕಿತ ರೋಗಿಯನ್ನು ಅಂಬುಲೆನ್ಸ್ ನಲ್ಲಿ ಇರಿಸಿ ಅದೇ ವ್ಯಾನಿನಲ್ಲಿ ಅನಗತ್ಯವಾಗಿ ತಿರುಗಾಡುವವರನ್ನು ಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೇ ಮಾದರಿಯಲ್ಲಿ ಇಂದು ರಾಯಚೂರು ಜಿಲ್ಲಾ ಪೊಲೀಸರು ಸಹ ಅನಗತ್ಯವಾಗಿ ತಿರುಗಾಡುವವರಿಗೆ ಶಿಕ್ಷೆ ನೀಡಿದ್ದಾರೆ. ಗ್ರೀನ್ ಜೋನಿನಲ್ಲಿರುವ ರಾಯಚೂರಿನಲ್ಲಿ ಲಾಕ್‍ಡೌನ್‍ನ್ನು ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತ್ರಿಬ್ಬಲ್ ರೈಡ್ ಹೋಗುತ್ತಿದ್ದಾರೆ. ಕೆಲವರು ಅನಾವಶ್ಯಕವಾಗಿ ಹೊರಗಡೆ ತಿರುಗಾಡುತ್ತಿದ್ದರು. ಇಂಥವರನ್ನು ನಗರದ ಚಂದ್ರಮೌಳೇಶ್ವರ ವೃತ್ತ ಹಾಗೂ …

Read More »

ಕೊರೋನಾ ವಿರುದ್ಧ ಸರಕಾರ ಮತ್ತು ಸಮಾಜದ ಜಂಟೀ ಹೋರಾಟದ ಅಗತ್ಯವಿದೆ” :ಅಶೋಕ ಚಂದರಗಿ

ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ವೈರಾಣುವಿನ ವಿರುದ್ಧ ಸರಕಾರ ಮತ್ತು ಸಮಾಜದ ಜಂಟೀ ಹೋರಾಟದ ಅಗತ್ಯವಿದ್ದು ಪ್ರತಿಯೊಬ್ಬ ನಾಗರಿಕರಿಗೆ ಅವರದೇ ಆದ ಹೊಣೆಗಾರಿಕೆ ಇದೆ.ಎಲ್ಲವನ್ನೂ ಸರಕಾರವೇ ಮಾಡಬೇಕು ಎಂಬ ಭಾವನೆ ಸರಿಯಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಇಂದು ಮಧ್ಯಾನ್ಹ ಬೆಳಗಾವಿ ಸಮೀಪದ ಕಣಬರ್ಗಿಯಲ್ಲಿ ಹೇಳಿದರು. ಕಳೆದ ಮಾರ್ಚ 20 ರಿಂದ ಕ್ರಿಯಾ ಸಮಿತಿಯು ಆರಂಭಿಸಿರುವ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನದ …

Read More »

ಇದ್ದಕ್ಕಿದ್ದಂತೆ ಜಾನುವಾರಗಳ ಸಾವು – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಯಾದಗಿರಿ: ಸದ್ಯ ಕೊರೊನಾ ಗ್ರೀನ್ ಜೋನ್‍ನಲ್ಲಿರುವ ಯಾದಗಿರಿಗೆ ಮತ್ತೊಂದು ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಕೆಳದ ಮೂರು ದಿನಗಳಿಂದ ದನ-ಕರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿವೆ. ಜಿಲ್ಲೆಯ ಯಾದಗಿರಿ ತಾಲೂಕಿನ ನಗಲಾಪುರ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ಆರು ದನಗಳು ಸಾವನ್ನಪ್ಪಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದನಗಳ ಸಾವಿಗೆ ಯಾವುದೇ ಕಾರಣವಿಲ್ಲ ಮತ್ತು ಅವುಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಮೇಯಿಯಲು ಹೊರಗಡೆ ತಿರುಗಾಡಿ ಮನೆಗೆ ಬಂದು ನೀರು ಕುಡಿದ ತಕ್ಷಣವೇ ದನಗಳು …

Read More »

ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜಾಗೃತಿ

ಹಾವೇರಿ: ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹೊಸಪೇಟೆ ಓಣಿಯ ನಾಲ್ವರಲ್ಲಿ ಓರ್ವ ಯಮನ ವೇಷ, ಇಬ್ಬರು ಕಿಂಕರರ ವೇಷ ಹಾಗೂ ಮತ್ತೊಬ್ಬ ಕೊರೊನಾ ವೈರಸ್ ನ ವೇಷ ಹಾಕಿಕೊಂಡು ಪಟ್ಟಣದಲ್ಲಿ ಜನರಿಗೆ ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಯಮ …

Read More »