ಬೆಂಗಳೂರು: ರಾಜ್ಯದ ಜನತೆಯ ಬೇಡಿಕೆ ಹಿನ್ನೆಲೆಯಲ್ಲಿ ಭಾನುವಾರ (ಮೇ 31 2020) ರಂದು ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಂತದಲ್ಲಿ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್‌ಡೌನ್ ಇರಬೇಕು. ಅಗತ್ಯ ಸೇವೆ ಹೊರತುಪಡಿಸಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ರಾಜ್ಯ ಸರ್ಕಾರ …
Read More »ಜನತೆಗೆ ಆಡಿಯೋ ಸಂದೇಶ ರವಾನಿಸಿರುವ ಪ್ರಧಾನಿ ಕೊರೊನಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೇಶದ ಜನತೆಗೆ ಧೈರ್ಯ ತುಂಬಿದರು
ನವದೆಹಲಿ: ಕೊರೊನಾ ಸೋಂಕನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ. ಆದರೆ ದೇಶದಲ್ಲಿ ವಲಸೆ ಕಾರ್ಮಿಕರಿಂದ ಕೊಂಚ ತೊಂದರೆಯಾಗಿದೆ. ದುರಂತವಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು ಹೀಗಾಗಿ ನಿಯಮ, ಮಾರ್ಗಸೂಚಿಗಳನ್ನು ಭಾರತೀಯರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದು ಇಂದಿಗೆ 1 ವರ್ಷ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ದೇಶದ ಜನತೆಗೆ ಆಡಿಯೋ ಸಂದೇಶ ರವಾನಿಸಿರುವ ಪ್ರಧಾನಿ ಕೊರೊನಾ …
Read More »ಕೊರೊನಾ ಇದ್ರೂ ಮನೆಯಿಂದ ಹೊರ ಬಾರದ ಪಾಷಾ-
ಬೆಂಗಳೂರು: ವಾರ್ಡ್ ನಂಬರ್ 135 ಪಾದರಾಯನಪುರದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಆದರೂ ಇಮ್ರಾನ್ ಪಾಷಾ ಮನೆಯಿಂದ ಹೊರಬರುತ್ತಿಲ್ಲ. ಇಮ್ರಾನ್ ಪಾಷಾಗೆ 158 ಜನ ಕಾಂಟ್ಯಾಕ್ಟ್ ಇದ್ದು, ಅದರಲ್ಲೂ 75 ಜನ ಪ್ರೈಮರಿ ಕಾಂಟ್ಯಾಕ್ಟ್ ಇದ್ದಾರೆ. ಉಳಿದವರೆಲ್ಲ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ತಿಳಿದುಬಂದಿದೆ. ಹೀಗಾಗಿ ಶಾಸಕರು, ಅಧಿಕಾರಿಗಳು ಆಪ್ತರೆಲ್ಲ ಕ್ವಾರಂಟೈನ್ ಆಗುವ ಸಾಧ್ಯತೆ ಇದೆ. ಇಮ್ರಾನ್ ಪಾಷಾ ಕೊರೊನಾ ಪಾಸಿಟಿವ್ ಬಂದರೂ ಇನ್ನೂ ವಿಕ್ಟೋರಿಯಾ …
Read More »ಕೊರೊನಾ ಬಗ್ಗೆ ಗಮನ ಕೊಡಿ, ಬಾಕಿ ವಿಚಾರ ನಮಗೆ ಬಿಡಿ- ಬಿಎಸ್‍ವೈಗೆ ಅಮಿತ್ ಶಾ ಭರವಸೆ
ಬೆಂಗಳೂರು: ಕೊರೊನಾ ಬಗ್ಗೆ ಗಮನ ಕೊಡಿ, ಬಾಕಿ ವಿಚಾರ ನಮಗೆ ಬಿಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ. ಸದ್ಯ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಮಾತು ಜೋರಾಗಿ ಕೇಳಿ ಬರುತ್ತಿದೆ. ಆದರೆ ನೇರವಾಗಿ ಇದನ್ನು ಯಾರೂ ಒಪ್ಪಿಕೊಳ್ಳದಿದ್ದರೂ ಪರೋಕ್ಷವಾಗಿ ಬಂಡಾಯದ ಮಾತುಗಳನ್ನು ಆಡುತ್ತಿದ್ದಾರೆ. ಈ ವಿಚಾರವಾಗಿ ಅಮಿತ್ ಶಾ ಅವರು ಯಡಿಯೂರಪ್ಪನವಿಗೆ ಕರೆ ಮಾಡಿ ಮಾತನಾಡಿದ್ದು, ಈ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. …
Read More »ಆರೋಗ್ಯ ಇಲಾಖೆ ದಿನನಿತ್ಯ ಎರಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತಿತ್ತು. ಆದ್ರೆ ಇನ್ನು ಮುಂದೆ ಸಂಜೆ ಮಾತ್ರ ಸುದ್ದಿಗೋಷ್ಠಿ
ಬೆಂಗಳೂರು: ಕೊರೊನಾ ಸೋಂಕಿತರು, ಗುಣಮುಖರಾದವರ ಬಗ್ಗೆ ಈವರೆಗೂ ರಾಜ್ಯ ಆರೋಗ್ಯ ಇಲಾಖೆ ದಿನನಿತ್ಯ ಎರಡು ಬಾರಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತಿತ್ತು. ಆದ್ರೆ ಇನ್ನು ಮುಂದೆ ಸಂಜೆ ಮಾತ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸುಧಾಕರ್, ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಇತರೆ ರಾಜ್ಯಗಳಂತೆಯೇ ಮಧ್ಯಾಹ್ನದ …
Read More »ಶಾಪಿಂಗ್ ಮಾಡಲು ಭಾನುವಾರ ಒಂದೇ ದಿನ ಅವಕಾಶಭಾನುವಾರ ಕರ್ಫ್ಯೂ ತೆಗೆಯಲಾಗಿದೆ
ಬೆಂಗಳೂರು: ಶಾಪಿಂಗ್ ಮಾಡಲು ಭಾನುವಾರ ಒಂದೇ ದಿನ ಅವಕಾಶ ಇರುವುದು. ಹೀಗಾಗಿ ಖರೀದಿಗೆ ಹಾಗೂ ಸ್ನೇಹಿತರನ್ನ ಭೇಟಿಯಾಗಲು ಅವಕಾಶ ಬೇಕಿತ್ತು. ಅದಕ್ಕೆ ಭಾನುವಾರ ಕರ್ಫ್ಯೂ ತೆಗೆಯಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾನುವಾರ ಲಾಕ್ ಡೌನ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸಿಎಂ ನಿರ್ಧಾರ ಸ್ವಾಗತಾರ್ಹ ಎಂದರು. ದುಡಿಯುವ ವರ್ಗಕ್ಕೆ ರಿಲ್ಯಾಕ್ಸ್ ಮಾಡಿಕೊಡಲು ಅನುಕೂಲವಾಗಿದೆ. ವಾರವೆಲ್ಲ ನೌಕರರು, ಉದ್ದಿಮೆದಾರರು ಕೆಲಸ ಮಾಡಿರುತ್ತಾರೆ. …
Read More »ಬಿಯರ್ ಶೇರ್ ಮಾಡದ್ದಕ್ಕೆ ಐಸ್ ಪಿಕ್‍ನಿಂದ ಸ್ನೇಹಿತನನ್ನೇ ಕೊಂದ……
ಮುಂಬೈ: ಬಿಯರ್ ಬಾಟಲ್ ಶೇರ್ ಮಾಡದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಮುಂಬೈನ ಜೋಗೇಶ್ವರಿ ಪ್ರದೇಶದಲ್ಲಿ ನಡೆದಿದೆ. ಅಜಯ್ ದ್ರಾವಿಡ್ (29) ಕೊಲೆಯಾದ ಸ್ನೇಹಿತ. ಮೇಘವಾಡಿ ಪೊಲೀಸರು ಆರೋಪಿ ಸೋನು ಅಲಿಯಾಸ್ ಷಣ್ಮುಗ ರಾಜೇಂದ್ರನನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ? ಮೃತ ಅಜಯ್ ದ್ರಾವಿಡ್ ಮತ್ತು ಆತನ ಸಹೋದರ ಬಿಯರ್ ತರಿಸಿಕೊಂಡು ತಮ್ಮ ಮನೆಯ ಸಮೀಪವಿರುವ ಮೀನು ಮಾರುಕಟ್ಟೆಯಲ್ಲಿ ಕುಳಿತು ಕುಡಿಯುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರ ಸ್ನೇಹಿತನಾಗಿದ್ದ ಆರೋಪಿ …
Read More »ಭುಜಕ್ಕೆ ಹಗ್ಗಕಟ್ಟಿಕೊಂಡು ಹೊಲ ಸಮ ಮಾಡ್ತಿದ್ದಾರೆ ಕುಸ್ತಿಪಟು ಸಾಕ್ಷಿ………..
ನವದೆಹಲಿ: ನಾನು ನನ್ನ ಪದಕದ ಬಣ್ಣವನ್ನು ಬದಲಿಸಬೇಕು ಎಂದು ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಹೇಳಿದ್ದಾರೆ. ಸಾಕ್ಷಿ ಅವರು ಭಾರತದ ಪ್ರತಿಭಾನ್ವಿತ ಕುಸ್ತಿಪುಟು, ಅವರು ದೇಶಕ್ಕಾಗಿ ಮೂರು ಪದಕಗಳನ್ನು ಗೆದ್ದು ತಂದಿದ್ದಾರೆ. ಆದರೆ ಮೂರು ಪದಕದಲ್ಲಿ ಒಂದು ಬಾರಿ ಸಿಲ್ವರ್ ಮತ್ತು ಎರಡು ಬಾರಿ ಕಂಚಿನ ಪದಕ ಗೆದ್ದಿದ್ದೇನೆ ಎಂಬ ನೋವು ಅವರಿಗಿದೆ. ಹೀಗಾಗಿ ಮುಂದೆ ನಡೆಯುವ ಟೋಕಿಯೊ ಒಲಿಪಿಂಕ್ಸ್ ನಲ್ಲಿ ನಾನು ನನ್ನ ಪದಕದ ಬಣ್ಣವನ್ನು …
Read More »ಇನ್ಮುಂದೆ ನಮಗೂ,(ಡಬ್ಲ್ಯೂಹೆಚ್‍ಒ) ಅದಕ್ಕೂ ಸಂಬಂಧವೇ ಇಲ್ಲ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‍ಒ) ಜೊತೆಗಿನ ಸಂಬಂಧವನ್ನು ಅಮೆರಿಕ ಕಡಿದುಕೊಂಡಿದ್ದು, ಇನ್ಮುಂದೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ನಾವು ಮನವಿ ಮಾಡಿದ್ದ ಹಾಗೂ ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಅದರ ಜೊತೆಗಿನ ಸಂಬಂಧವನನ್ನು ಕಡಿತಗೊಳಿಸುವುದಾಗಿ ಮಾಧ್ಯಮಗಳ ಮುಂದೆ ಟ್ರಂಪ್ ಹೇಳಿಕೆ ನೀಡಿದ್ದಾರೆ.ಕೊರೊನಾ ತಡೆಗೆ ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ …
Read More »177 ಯುವತಿಯರನ್ನು ತವರು ರಾಜ್ಯಕ್ಕೆ ಕಳುಹಿಸಿ ಮತ್ತೆ ಮಾನವೀಯತೆ ಮೆರೆದ ಸೋನು ಸೂದ್
ಹೈದರಾಬಾದ್: ಇತ್ತೀಚೆಗಷ್ಟೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಬಾಲಿವುಡ್ ನಟ ಸೋನು ಸೂದ್ ಬಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದರು. ಇದೀಗ ನೂರಾರು ಯುವತಿಯರನ್ನು ಅವರ ತವರು ರಾಜ್ಯ ಒಡಿಶಾಕ್ಕೆ ಕಳುಹಿಸಲು ಸಹಾಯ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಸುಮಾರು ಒಡಿಶಾದ 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ …
Read More »