Breaking News

ಬಾರ್ ಓಪನ್ ಆಗಿದೆ ಅಂತ ಓಡೋಡಿ ಬಂದು ಏನೂ ಸಿಗದೆ ವಾಪಸ್ಸಾದ್ರು!

ಚಿಕ್ಕಮಗಳೂರು: ಬಾರ್ ಓಪನ್ ಆಗಿದೆ ಎಂದು ಓಡೋಡಿ ಬಂದ ಮದ್ಯ ಪ್ರಿಯರು ಬಳಿಕ ನಿರಾಸೆಗೊಂಡ ಘಟನೆ ಕಡೂರು ತಾಲೂಕಿನ ಯಗಟಿ ಬಳಿಯ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ. ಜನ ಎಷ್ಟರ ಮಟ್ಟಿಗೆ ಎಣ್ಣೆ-ಎಣ್ಣೆ ಅಂತಿದ್ದಾರೆ ಅಂದ್ರೆ ಬೆಳಗೆದ್ದು ದೇವರ ಮುಖ ನೋಡ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಎಣ್ಣೆ ಅಂಗಡಿ ಓಪನ್ ಆಗುತ್ತಾ, ಸಿಎಂ ಏನಾದರೂ ಹೇಳ್ತಾರಾ ಅಂತ ಟಿವಿ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಯಗಟಿ ಬಳಿ ಓರ್ವ ಎಣ್ಣೆ ಅಂಗಡಿ …

Read More »

ಈರುಳ್ಳಿಗೆ ಬೆಲೆ ಸಿಗ್ತಿಲ್ಲವೆಂದು ವಿಡಿಯೋ ಮಾಡಿದ್ದ ರೈತ ಮಹಿಳೆ – ಫೋನ್ ಮಾಡಿ ಧೈರ್ಯಹೇಳಿದ:B.S.Y. ಹೇಳಿದ ಸಿಎಂ

ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿದೆ. ಇದರಿಂದ ಅನೇಕರು ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ರೈತ ಮಹಿಳೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಧೈರ್ಯ ಹೇಳಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯನಕನಹಳ್ಳಿ ರೈತ ಮಹಿಳೆ ವಸಂತಕುಮಾರಿ ವಿಡಿಯೋ ಮಾಡುವ ಮೂಲಕ ಸಿಎಂ …

Read More »

ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಪ್ರತ್ಯೇಕವಾಗಿ 111000/- ರಂತೆ 222000/- ಗಳ ಚೆಕ್ ಸಲ್ಲಿಸಿದಶಿವನಪ್ಪ ಬಿ ಖಣಗಣ್ಣಿ…

ಬೆಳಗಗಾವಿ, .: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಆರೋಗ್ಯ ಮೇಲ್ವಿಚಾರಕರಾದ ಶಿವನಪ್ಪ ಬಿ ಖಣಗಣ್ಣಿ ಅವರು ಕೋವಿಡ್ ನಿಯಂತ್ರಣಕ್ಕಾಗಿ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಪ್ರತ್ಯೇಕವಾಗಿ 111000/- ರಂತೆ 222000/- ಗಳ ಚೆಕ್ ನ್ನು ಮಂಗಳವಾರ (ಏ.28) ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಚೆಕ್ ಸ್ವೀಕರಿಸಿದರು. ಆರೋಗ್ಯ ಇಲಾಖೆಯ ವಿಭಾಗೀಯ ಸಹ ನಿರ್ದೇಶಕರಾದ ಡಾ.ಅಪ್ಪಾಸಾಹೇಬ್ ನರಟ್ಟಿ, ಜಿಲ್ಲಾ ಆರೋಗ್ಯ ಮತ್ತು …

Read More »

ರಾಜ್ಯದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ: ಪ್ರಿಯಾಂಕ್ ಖರ್ಗೆ:ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ: ರಾಜ್ಯದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಲ್ಕು ಮಂದಿ ಕೊರೊನಾ ಸಚಿವರಿದ್ದಾರೆ. ಸುರೇಶ್ ಕುಮಾರ್ ಬರ್ತಾರೆ ನ್ಯೂಸ್ ಬುಲೆಟಿನ್ ಓದಿ ಹೇಳ್ತಾರೆ. ಹಾಗೆ ನೋಡಿದರೆ ಸುರೇಶ್ ಕುಮಾರ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಇಲ್ಲ ಎಂದು ಕಿಡಿಕಾರಿದರು. ಪ್ರತಿ ಜಿಲ್ಲೆಗೆ ಲ್ಯಾಬ್ ತೆಗೆಯುವುದಾಗಿ ಹೇಳಿದರು. ಆದರೆ ಇಲ್ಲಿಯವರೆಗೆ ಸರ್ಕಾರ …

Read More »

ಸಿ ಆ ಪಿ ಎಫ್ ಯೋಧನಿಗೆ ಜಾಮೀನು,ಆದೇಶದೊಂದಿಗೆ ವಕೀಲರು ಚಿಕ್ಕೋಡಿಯಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಪ್ರಯಾಣ..

ಬೆಳಗಾವಿ- ಇತ್ತೀಚಿಗೆ ಯಕ್ಸಂಬಾದಲ್ಲಿ ಇಬ್ಬರು ಪೋಲೀಸ್ ಪೇದೆಗಳ ಜೊತೆ ನಡೆದ ಗಲಾಟೆಗೆ ಸಮಂಧಿಸಿದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿ ಆ ಪಿ ಎಫ್ ಯೋಧನಿಗೆ ಜಾಮೀನು ಸಿಕ್ಕಿದೆ. *ಚಿಕ್ಕೋಡಿ 1ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯ 1ನೇ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿದೆ. ಮಾಸ್ಕ್ ಹಾಕದ ವಿಚಾರಕ್ಕೆ ಪೇದೆ – ಸಿಆರ್‌ಪಿಎಫ್ ಯೋಧನ ಮಧ್ಯೆ ಗಲಾಟೆ ನಡೆದಿತ್ತು ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ …

Read More »

ಕೊರೊನಾದಿಂದ ಲಾಕ್‍ಡೌನ್ ಆಗಿರುವ ಹಸಿರು ವಲಯದಲ್ಲಿರುವ ಜಿಲ್ಲೆಗಳಿಗೆ ಬಂಪರ್…..

ಬೆಂಗಳೂರು: ಕೊರೊನಾದಿಂದ ಲಾಕ್‍ಡೌನ್ ಆಗಿರುವ ಹಸಿರು ವಲಯದಲ್ಲಿರುವ ಜಿಲ್ಲೆಗಳಿಗೆ ಬಂಪರ್ ಸಿಕ್ಕಿದ್ದು, ಈಗ ಲಾಕ್‍ಡೌನ್ ನಿಂದ ವಿನಾಯಿತಿ ಸಿಕ್ಕಿದೆ. ಗ್ರೀನ್ ಝೋನ್ ನಲ್ಲಿರುವ 14 ಜಿಲ್ಲೆಗಳಿಗೆ ಲಾಕ್ ಡೌನ್ ಸಡಿಲಿಕೆ ಆಗಿದ್ದು, ರೆಡ್ ಝೋನ್ ನಲ್ಲಿ ಈಗ ಇರುವಂತೆ ಲಾಕ್‍ಡೌನ್ ಮುಂದುವರಿಯಲಿದೆ. ಇಂದಿನಿಂದ ಮೇ 3ರವರೆಗೆ ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರ ವಿನಾಯಿತಿ ಪ್ರಕಟಿಸಿದೆ. ಎಲ್ಲಿ ವಿನಾಯಿತಿ? ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಹಾವೇರಿ, …

Read More »

ಕುಡಚಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಚಿಕ್ಕೊಡಿಗು ಕೋರೋನ್ ಟೆಸ್ಟಿಂಗ್ ಲ್ಯಾಬ್ ಬೇಕು – ಗಣೇಶ್ ಹುಕ್ಕೇರಿ

ಚಿಕ್ಕೋಡಿ – ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಚಿಕ್ಕೋಡಿಯಲ್ಲೂ ಕೊರೋನಾ ಟೆಸ್ಟಿಂಗ್ ಲ್ಯಾಬ್ ಅಗತ್ಯವಾಗಿದ್ದು, ತಕ್ಷಣ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಗಣೇಶ ಹುಕ್ಕೇರಿ ಆಗ್ರಹಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಜೊತೆ ಮಾತನಾಡಿದ್ದೇನೆ. ಇಬ್ಬರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದಷ್ಟು ಬೇಗ ಲ್ಯಾಬ್ ಆರಂಭಿಸಬೇಕು ಎಂದರು. ಚಿಕ್ಕೋಡಿ ವ್ಯಾಪ್ತಿಯ ಕುಡಚಿಯಲ್ಲಿ ಅತ್ಯಂತ ಹೆಚ್ಚು ಕೊರೋನಾ ಸೋಂಕು ಕಂಡು ಬಂದಿದೆ. ಅಲ್ಲಿಯ ಜನರನ್ನು ಅಥವಾ ಬೇರೆ ಭಾಗದ …

Read More »

ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಬೆಳಗಾವಿ ಜಿಲ್ಲೆ ಒಂದು ಇಲ್ಲ

ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 520ಕ್ಕೇರಿದೆ. ಕಲಬುರ್ಗಿಯಲ್ಲಿ ಇಂದು 6 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ಹಾಗೂ ಗದಗದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಬೇರೆ ಯಾವುದೇ ಭಾಗಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಕಲಬುರ್ಗಿಯಲ್ಲಿ ಪತ್ತೆಯಾಗಿರುವ 6 ಪ್ರಕರಣಗಳಲ್ಲಿ ನಾಲ್ವರು ಮಹಿಳೆಯರು. 22 ಹಾಗೂ 28 ವರ್ಷದ ಯುವತಿಯರಿಗೂ ಸೋಂಕು ತಗುಲಿದೆ.

Read More »

ಕೊರೊನಾ ಲಾಕ್ ಡೌನ್ ನಡುವೆಯೂ ಅಕ್ರವಾಗಿ ವಿದೇಶಿ ಮದ್ಯ ಮಾರಾಟ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೂ ಅಕ್ರವಾಗಿ ವಿದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೋಹನ್ ಬತೇಜ್ (31) ಬಂಧಿತ ಆರೋಪಿ. ಬಂಧಿತನಿಂದ ವಿವಿಧ ಬ್ರಾಂಡ್‍ನ 22 ಲೀಟರ್ ವಿದೇಶಿ ಮದ್ಯ, ಐ10 ಕಾರು, ಒಂದು ಐ ಪೋನ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ರೋಹನ್ ಐ10 ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ವಿದೇಶಿ ಮದ್ಯ ಮಾರುತ್ತಿದ್ದ. ಈ ಕುರಿತು ಸಿಸಿಬಿ …

Read More »

ಪಾದರಾಯನಪುರ ಗಲಾಟೆ ಪ್ರಕರಣ: ಪ್ರಮುಖ ಆರೋಪಿ ಇರ್ಫಾನ್ ಬಂಧನ………

ಬೆಂಗಳೂರು(ಏ. 27): ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಪಾದರಾಯನಪುರ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಕೊನೆಗೂ ಖಾಕಿ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾಡುಗೊಂಡನ ಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ ಇರ್ಫಾನ್​ನನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಮತ್ತು ಜೆಜೆ ನಗರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇರ್ಫಾನ್​ನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಪಾದರಾಯನಪುರದಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್​ಗೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮತ್ತು ಗಲಾಟೆ …

Read More »