Breaking News

ಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ದೇಶದ ಅತ್ಯಂತ ಅಪಾಯಕಾರಿ ಹಾಟ್‍ಸ್ಪಾಟ್‍

ಮುಂಬೈ/ಅಹಮದಾಬಾದ್/ಭೋಪಾಲ್, ಏ.30- ಭಾರತದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ದೇಶದ ಅತ್ಯಂತ ಅಪಾಯಕಾರಿ ಹಾಟ್‍ಸ್ಪಾಟ್‍ಗಳಾಗಿರುವುದು ಕಳವಳಕಾರಿಯಾಗಿದೆ. ದೇಶದ ಮೊದಲ ಮೂರು ಡೇಂಜರ್ ಸ್ಟೇಟ್ ಎಂದೇ ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು ಪ್ರಮಾಣದಲ್ಲಿ ಸಾವು ಮತ್ತು ಸೋಂಕು ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಲೇ ಇವೆ. ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದೆ ಒಟ್ಟು 67 ಸಾವು ಪ್ರಕರಣಗಳಲ್ಲಿ. …

Read More »

ಮೇ 5.ರಂದು ಪ್ರಥಮ ಪಿಯುಸಿ ಫಲಿತಾಂಶ………..

ಬೆಂಗಳೂರು : ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ನಿರ್ದೇಶನದಂತೆ ಮುಂದಿನ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಮೇ 5.ರಂದು, ಈಗಾಗಲೇ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಂಡಿರುವ ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಕಾಲೇಜು‌ಮಟ್ಟದಲ್ಲಿಯೇ ನಿರ್ವಹಿಸಲು‌ ಮಾನದಂಡಗಳನ್ನು ಮುಂದೆ ತಿಳಿಸಲಾಗುವುದು ಎಂದೂ ಸಹ ಸುತ್ತೋಲೆ ಸ್ಪಷ್ಟ ಪಡಿಸಿದೆ. ಖಾಸಗಿ ಕಾಲೇಜುಗಳು ಈ ಸಾಲಿನಲ್ಲಿ‌ ಶುಲ್ಕ ಹೆಚ್ಚಿಸುವ …

Read More »

ಲಾಕ್‍ಡೌನ್ ವೇಳೆ ಸೀಜ್ ಆದನಾಲ್ಕು ಚಕ್ರದ ವಾಹನಗಳಿಗೆ ಒಂದು ಸಾವಿರ ದಂಡ ಮತ್ತು ದ್ವಿಚಕ್ರ ಮತ್ತು ಆಟೋ ರಿಕ್ಷಾಗಳಿಗೆ 500 ದಂಡ

ಬೆಂಗಳೂರು : ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್ ಸೀಜ್ ಆದ ವಾಹನಗಳಿಗೆ ಫೈನ್ ಹಾಕಿ ನಂತರ ಬಿಡುಗಡೆ ಮಾಡುವಂತೆ ಸೂಚಿಸಿದೆ. ಹೈಕೋರ್ಟ್ ನೀಡಿರುವ ಆದೇಶದಲ್ಲಿ ಲಾಕ್‍ಡೌನ್ ವೇಳೆ ಸೀಜ್ ಮಾಡಲಾದ ವಾಹನಗಳಿಗೆ ಫೈನ್ …

Read More »

ಪಾದರಾಯನಪುರಕ್ಕೆ ‘ಫ್ಯಾಕ್ಟರಿ’ ಕಂಟಕ………….

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 3 ದಿನಗಳಿಂದ ಕಡಿಮೆಯಾಗಿದ್ದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇವತ್ತು ಏಕಾಏಕಿ ಜಿಗಿತ ಕಂಡು ಬಂದಿದೆ. ಇವತ್ತು 10 ಸೋಂಕಿತರ ಪೈಕಿ, 8 ಮಂದಿ ಪಾದರಾಯನಪುರದವರು. ಇಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ತಬ್ಲಿಘಿಯ ಸಂಪರ್ಕ ಹೊಂದಿದ್ದ ಲೆದರ್ ಫ್ಯಾಕ್ಟರಿಯ ಮಾಲೀಕ(ರೋಗಿ ನಂ.199)ನಿಂದ ಏಳು ಮಂದಿಗೆ ಸೋಂಕು ತಗುಲಿದೆ. ಕಾರ್ಮಿಕನೊಬ್ಬನ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿದ ಬಳಿಕ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಹರಡಿರುವುದು ಗೊತ್ತಾಗಿದೆ. …

Read More »

ಮಾಸ್ಕ್ ಧರಿಸದಿದ್ದರೆ, ಸರಿಯಾಗಿ ವಿಲೇವಾರಿ ಮಾಡದಿದ್ದರೆ 1 ಸಾವಿರ ರೂ. ದಂಡ ಹಾಗೂ ಕೇಸ್

ಬೆಂಗಳೂರು: ಕೊರೊನಾ ಅವಾಂತರದ ಹಿನ್ನೆಲೆ ಮಾಸ್ಕ್ ಧರಿಸುವ ಕುರಿತು, ಎಲ್ಲೆಂದರಲ್ಲಿ ಉಗುಳುವ ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ದಂಡ ಹಾಕಲಾಗುತ್ತಿದ್ದು, ಅದೇ ರೀತಿ ತಾಜ್ಯದಲ್ಲೂ ದಂಡ ಹಾಕಲು ಬಿಬಿಎಂಪಿ ನಿರ್ಧರಿಸಿದೆ. ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್  ಮಾಹಿತಿ ನೀಡಿದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದಲೇ ದಂಡ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕವಾಗಿ ಮಾಸ್ಕ್ ಹಾಕದಿದ್ದರೆ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ …

Read More »

ಕೊರೊನಾ ಮಹಾಮಾರಿ ಬಡವರು, ಕೂಲಿಕಾರ್ಮಿಕರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಮಡಿಕೇರಿ: ಕೊರೊನಾ ಮಹಾಮಾರಿ ಬಡವರು, ಕೂಲಿಕಾರ್ಮಿಕರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದು, ಲಾಕ್‍ಡೌನ್ ಆಗಿರುವುದರಿಂದ ಕೂಲಿ ಕೆಲಸ ಇಲ್ಲದೆ ಗಂಜಿ ಕುಡಿದು ಬದುಕು ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹಂಚಿತ್ತಿಟ್ಟು ಗ್ರಾಮದಲ್ಲಿ ಇಂತಹ ಮನಕಲಕುವ ಸ್ಥಿತಿ ಇದ್ದು, ಮಹಿಳೆ ಶಾಂತಮ್ಮ, ಬೆನ್ನು ಮೂಳೆ ಮುರಿದುಕೊಂಡು 13 ವರ್ಷದಿಂದ ಹಾಸಿಗೆ ಹಿಡಿದಿರುವ ಮಗನನ್ನು ಸಾಕುತ್ತಿದ್ದಾರೆ. ಕೂಲಿ ಮಾಡುತ್ತಿದ್ದ ಶಾಂತಮ್ಮ ಅದೇ ಹಣದಿಂದ ತನ್ನ ಮಗ ವಿಠಲನಿಗೆ ಮಂಗಳೂರಿನ ವೆನ್‍ಲಾಕ್ …

Read More »

ಕೊರೊನಾದಿಂದ ಮುಕ್ತಗೊಂಡ ಉತ್ತರ ಕನ್ನಡ- ಕೊನೆಯ ಸೋಂಕಿತ ಡಿಸ್ಚಾರ್ಜ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಕೊನೆಯ ಸೋಂಕಿತ ವ್ಯಕ್ತಿ ಕಾರವಾರದ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 36 ವರ್ಷದ ಭಟ್ಕಳ ಮೂಲದ ಸೋಂಕಿತ ಸಂಖ್ಯೆ 260 ಪತಂಜಲಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಸದ್ಯ ಆತನ ಕೋವಿಡ್‍ನಿಂದ ಗುಣಮುಖರಾಗಿದ್ದು, ಇಂದು ರಾತ್ರಿ ಆತನ ಡಿಸ್ಚಾರ್ಜ್ ನೊಂದಿಗೆ ಜಿಲ್ಲೆ ಈಗ ಕೊರೊನಾ ಪ್ರಕರಣದಿಂದ ಮುಕ್ತವಾಗಿದೆ. ಮಾರ್ಚ್ 17ರಂದು ದುಬೈನಿಂದ ವಾಪಸ್ಸಾಗಿದ್ದ 36 ವರ್ಷದ ವ್ಯಕ್ತಿಯಲ್ಲಿ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿದ್ದ 67 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿದ್ದ 67 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದದ ಕಸಬಾ ನಿವಾಸಿ ಸಾವನ್ನಪ್ಪಿದ ಮಹಿಳೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದು ಮೂರನೇ ಸಾವು ಆಗಿದ್ದು, ಮಂಗಳೂರಿನ ಜನತೆ ಆತಂಕಕ್ಕೊಳಗಾಗಿದ್ದಾರೆ. ವೃದ್ಧೆಯ ಸಾವನ್ನು ವೆನ್‍ಲಾಕ್ ಆಸ್ಪತ್ರೆ ದೃಢಪಡಿಸಿದೆ. ವೃದ್ಧೆ (ರೋಗಿ ಸಂಖ್ಯೆ-409) ನಾಲ್ಕು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತತಿದ್ದರು. ಮೊದಲು ಬಂಟ್ವಾಳ …

Read More »

ನಡೆದು ನಡೆದು ಸಾವನ್ನಪ್ಪಿದ್ದ ಮಹಿಳೆ-ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ

ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬಳ್ಳಾರಿಯಲ್ಲಿ ಸಾವನ್ನಪ್ಪಿದ್ದ ರಾಯಚೂರಿನ ಸಿಂಧನೂರಿನ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಕುಟುಂಬಕ್ಕೆ ಕೊನೆಗೂ ಕಾರ್ಮಿಕ ಕಲ್ಯಾಣ ಮಂಡಳಿ ಪರಿಹಾರ ನೀಡಿದೆ. ಗಂಗಮ್ಮನ ಇಬ್ಬರು ಮಕ್ಕಳ ಹೆಸರಲ್ಲಿ ತಲಾ 1 ಲಕ್ಷ 50 ಸಾವಿರದಂತೆ ಮೂರು ಲಕ್ಷ ರೂಪಾಯಿಯ ಎರಡು ಭದ್ರತಾ ಠೇವಣಿಯ ಬಾಂಡ್‍ಗಳನ್ನು ನೀಡಲಾಗಿದೆ. ಎರಡು ವರ್ಷದ ಅವಧಿಯ ಎರಡು ಬಾಂಡ್‍ಗಳನ್ನು ನೀಡುವ ಮೂಲಕ ಮಂಡಳಿ ಮಕ್ಕಳ ಸಹಾಯಕ್ಕೆ ಮುಂದಾಗಿದೆ. ಗಂಗಮ್ಮ ಮಂಡಳಿಯ ನೋಂದಾಯಿತ …

Read More »