Breaking News

ಕುಡುಕರ ಎಡವಟ್ಟಿನಿಂದ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ

ಬಳ್ಳಾರಿ: ಲಾಕ್‍ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೆ ತಡ ಮದ್ಯಪ್ರಿಯರು ಮದ್ಯದಂಗಡಿ ಮುಂದೆ ಕ್ಯೂ ನಿಂತು ಖರೀದಿಸುತ್ತಿದ್ದಾರೆ. ಅಲ್ಲದೆ ಸಿಕ್ಕಿಸಿಕ್ಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದಾರೆ. ಇದೀಗ ಕುಡುಕರು ಮಾಡಿದ ಎಡವಟ್ಟಿನಿಂದಾಗಿ ಮೂರು ಬಣವೆಗಳು ಹೊತ್ತಿ ಉರಿದಿರುವ ಘಟನೆ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿ ನಡೆದಿದೆ. ಕಪ್ಪಗಲ್ಲು ರಸ್ತೆಯ ಡ್ರೀಮ್ ವರ್ಲ್ಡ್ ಶಾಲೆಯ ಹಿಂಭಾಗದ ಹೊಲದಲ್ಲಿರುವ ಮೂರು ಬಣವೆಗಳಿಗೆ ಬೆಂಕಿ ಬಿದ್ದಿದೆ. ಅಲ್ಲದೇ ಪಕ್ಕದಲ್ಲಿದ್ದ ಎಮ್ಮೆಗಳ ಮೈಗೂ ಬೆಂಕಿ …

Read More »

ಕುಡುಕನಿಂದ ವೈದ್ಯರ ಮೇಲೆ ಹಲ್ಲೆ, ಪೊಲೀಸ್ ಜೀಪ್ ಕೆಳಗೆ ಮಲಗಿ ರಂಪಾಟ……

ಚಿಕ್ಕೋಡಿ (ಬೆಳಗಾವಿ): ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ಕಳೆದ 43 ದಿನಗಳಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ ನಿನ್ನೆಯಿಂದ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿ ಕಂಟೈನಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಮದ್ಯ ಸಿಕ್ಕಿದ್ದೇ ತಡ ಕೆಲವೆಡೆ ಕುಡುಕರ ರಂಪಾಟ, ಗಲಾಟೆಗಳು ಜೋರಾಗಿ ಶುರುವಾಗಿವೆ. ಹೌದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕುಡುಕನೊಬ್ಬ ವೈದ್ಯರ ಮೇಲೆ ಹಲ್ಲೆ …

Read More »

ಬೆಳಗಾವಿ: ಇಪ್ಪತ್ತೆಂಟು ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಂದಿಗನೂರ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ: ಇಪ್ಪತ್ತೆಂಟು ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ನಡೆದಿದೆ. ಸ್ಥಳಿಯ ನಿವಾಸಿ ಕಿರಣ ಶೆಟ್ಟೆಪ್ಪಾ ಶಿನೋಳ್ಕರ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಗದ್ದೆಯಲ್ಲಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಕಾಕತಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.

Read More »

ನೇಕಾರರ ಸಮಸ್ಯೆ ಕುರಿತು B.S.Y. ಭೇಟಿ ಮಾಡಿಲಿರುವ ಅಭಯ್ ಪಾಟೀಲ್..

ಬೆಂಗಳೂರು – ಕೊರೋನಾ ಕಾಯಿಲೆ ಹೋರಾಟದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ನೇಕಾರ ಪರಿಸ್ಥಿತಿ ದುರಸ್ತವಾಗಿದ್ದು, ನೇಕಾರಿಕೆ ಉದ್ಯೋಗದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರಿದೆ. ಇದರಿಂದಾಗಿ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಂದು 12 ಗಂಟೆಗೆ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ನೇಕಾರರ ನಿಯೋಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ನೀಡಲಿದೆ. ನೇಕಾರರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು 12 ಗಂಟೆಗೆ ಸಭೆ ನಡೆಸಿ, …

Read More »

ಮುಂಬೈನಿಂದ ಬಂದಿದ್ದ ಮೂವರಲ್ಲಿ ಓರ್ವನಿಗೆ ಕೊರೊನಾ ಸೋಂಕು,ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ ಕೃಷ್ಣ ನಗರವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.

ಹಾವೇರಿ: ಮುಂಬೈನಿಂದ ಬಂದಿದ್ದ ಮೂವರಲ್ಲಿ ಓರ್ವನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದರಿಂದ ಸೋಂಕಿತ ವಾಸವಾಗಿದ್ದ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ ಕೃಷ್ಣ ನಗರವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ. ಏಪ್ರಿಲ್ 28 ರಂದು ಗೂಡ್ಸ್ ಲಾರಿಯಲ್ಲಿ ಮೂವರು ಮುಂಬೈನಿಂದ ಸವಣೂರು ಪಟ್ಟಣಕ್ಕೆ ಬಂದಿದ್ದರು. ಅವರನ್ನ ತಪಾಸಣೆಗೆ ಒಳಪಡಿಸಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಲ್ಯಾಬ್ ಕಳಿಸಿದ ನಂತರ ಮೂವರಲ್ಲಿ 32 ವರ್ಷದ ಓರ್ವನಿಗೆ ಕೊರೊನಾ ಸೋಂಕು ಇರೋದು ಸೋಮವಾರ ದೃಢಪಟ್ಟಿತ್ತು. …

Read More »

ಫ್ರೀ ಹಾಲು-ರೇಷನ್ ಗಾಗಿ ಗೋಗರೆಯುತ್ತಿದ್ದವರು ಇಂದು ದುಡ್ಡು ಹಿಡಿದು ಎಣ್ಣೆ ಅಂಗಡಿಗಳ ಮುಂದೆ ಕ್ಯೂ..!

ಬೆಂಗಳೂರು, ಮೇ 5- ಇಷ್ಟು ದಿನ ಕೆಲಸವಿಲ್ಲ, ಕೈಯಲ್ಲಿ ಕಾಸಿಲ್ಲ, ಬಡತನವಿದೆ, ಒಂದೊತ್ತಿನ ಊಟಕ್ಕೂ ಗತಿಯಿಲ್ಲ. ರೇಷನ್ ಕೊಡಿ, ಮಕ್ಕಳಿಗೆ ಹಾಲು ಕೊಡಿ ಎಂದು ಗೋಗರೆಯುತ್ತಿದ್ದ ಬಹುತೇಕ ಜನ ಇಂದು ದಿಢೀರೆಂದು ದುಡ್ಡು ಹಿಡಿದು ಎಣ್ಣೆ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದರು! ಸರ್ಕಾರ ಇದುವರಗೆ ಉಚಿತವಾಗಿ ಹಾಲು, ದಿನಸಿ ಕೊಟ್ಟಿದೆ. ಸ್ವಯಂಸೇವಾ ಸಂಸ್ಥೆಗಳವರು ಹಸಿದವರಿಗೆ ಅನ್ನ, ಆಹಾರಗಳನ್ನು ಸಾಧ್ಯವಾದಷ್ಟು ನೀಡಿದ್ದಾರೆ. ಲಾಕ್‍ಡೌನ್ ಸಡಿಲಗೊಂಡು ಮದ್ಯದಂಗಡಿ ಓಪನ್ ಆಗುತ್ತಿದ್ದಂತೆ ಬೆಳ್ಳಂಬೆಳಗ್ಗೆ ಲಿಂಗಬೇಧ …

Read More »

ವಿಕ್ಟೋರಿಯಾ ಆಸ್ಪತ್ರೆ ಸೇಫ್-ಸೋಂಕಿತ ಪೊಲೀಸ್ ಪೇದೆಯ ಅತ್ತಿಗೆಗೆ ನೆಗೆಟಿವ್

ಬೆಂಗಳೂರು: ಬೇಗೂರು ಪೊಲೀಸ್ ಠಾಣೆಯ ಕೊರೊನಾ ಸೋಂಕಿತ ಪೇದೆಯ ಅತ್ತಿಗೆಯ ವೈದ್ಯಕೀಯ ವರದಿ ಕೊರೊನಾ ನೆಗೆಟಿವ್ ಬಂದಿದೆ. ಪೇದೆಯ ಅತ್ತಿಗೆ ವೈದ್ಯೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್-19 ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ರೋಗಿ ನಂ.650ರ ಅತ್ತಿಗೆ ಅಂತಾ ಗೊತ್ತಾದ ತಕ್ಷಣವೇ ವೈದ್ಯಾಧಿಕಾರಿಗಳು ಕೋವಿಡ್ ಟೆಸ್ಟ್ ಮಾಡಿಸಿದ್ದರು. ಇಂದು ವರದಿಯಲ್ಲಿ ಕೋವಿಡ್-19 ನೆಗೆಟಿವ್ ಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ನಿರಾಳರಾಗಿದ್ದಾರೆ. ಒಂದು ವೈದ್ಯೆಗೆ ಕೊರೊನಾ ಪಾಸಿಟಿವ್ ಬಂದಿದ್ರೆ ಇಡೀ ಆಸ್ಪತ್ರೆಯನ್ನ ಕ್ವಾರಂಟೈನ್ ಮಾಡುವ …

Read More »

ಕಾಂಪೌಂಡ್‍ಗೆ ಕಾರು ಡಿಕ್ಕಿಯಾಗಿ ಚಾಲಕ ಸಾವು – ನಜ್ಜುಗುಜ್ಜಾದ ಕಾರ್……..

ಚಿಕ್ಕಬಳ್ಳಾಪುರ: ಕಾಂಪೌಂಡ್‍ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ. ಸೋಮವಾರ ರಾತ್ರಿ ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ 32 ವರ್ಷದ ವಿನೋದ್ ಮೃತ ವ್ಯಕ್ತಿ. ಮೃತ ವಿನೋದ್ ಬೆಂಗಳೂರಿನಲ್ಲಿ ಪೈಂಟ್ಸ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ವಿನೋದ್ ಬೆಂಗಳೂರಿನಿಂದ ವಾಪಸ್ ಬಂದು ತನ್ನ ಸ್ವಗ್ರಾಮದಲ್ಲಿದ್ದನು. ಸೋಮವಾರ ರಾತ್ರಿ ಗ್ರಾಮದಲ್ಲೇ ಕಾಂಪೌಂಡ್‍ಗೆ …

Read More »

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತಂತೆ ಇಲ್ಲಿದೆ ಹೊಸ ಅಪ್ಡೇಟ್ ………….

ಬೆಂಗಳೂರು : ಕೊರೊನಾ ಸೋಂಕು ಹೆಚ್ಚಾದ ಪರಿಣಾಮ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಾದ ಕಾರಣ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ದತೆಗಳನ್ನು ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ. ಸೋಮವಾರ ಎಲ್ಲ ಶಿಕ್ಷಣ ಉಪನಿರ್ದೇಶಕರ ಜತೆ ವಿಡಿಯೋ ಸಂವಾದ ನಡೆಸಿದ್ದು, ಈ ಸಂದರ್ಭ ಸೂಚನೆ ನೀಡಿದ್ದಾರೆ. ಲಾಕ್ ಡೌನ್ ಮುಗಿದ ತಕ್ಷಣವೇ ಎಸ್ ಎಸ್ ಎಲ್ ಸಿ …

Read More »

ಕಿಲ್ಲರ್ ಕೊರೊನಾಗೆ ವರ್ಷಾಂತ್ಯದಲ್ಲಿ ಲಸಿಕೆ ಸಿದ್ದವಾಗಲಿದೆ : ಟ್ರಂಪ್

ನ್ಯೂಯಾರ್ಕ್/ವಾಷಿಂಗ್ಟನ್, ಮೇ 4-ಡೆಡ್ಲಿ ಕೊರೊನಾ ವೈರಸ್ ಹೆಮ್ಮಾರಿ ನಿಗ್ರಹಕ್ಕಾಗಿ ಈ ವರ್ಷಾಂತ್ಯದಲ್ಲಿ ನಮ್ಮಲ್ಲೇ ಅತ್ಯಂತ ಪರಿಣಾಮಕಾರಿ ಲಸಿಕೆ ಸಿದ್ದವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೋವಿಡ್-19 ವಿರುದ್ಧ ಔಷಧಿ ತಯಾರಿಸಲು ನಮ್ಮ ವೈದ್ಯರು ನಿರಂತರ ಪ್ರಯತ್ನದಲ್ಲಿದ್ದಾರೆ. ಈ ವರ್ಷಾಂತ್ಯದೊಳಗೆ ಆ ಲಸಿಕೆ ನಮ್ಮ ಕೈ ಸೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಫಾಕ್ಸ್ ಟಿವಿಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಔಷಧಿ …

Read More »