ಬೆಂಗಳೂರು: ಹೊರ ರಾಜ್ಯದಲ್ಲಿರುವ ಕನ್ನಡಿಗರು ಇನ್ನು ಮುಂದೆ ಕರ್ನಾಟಕಕ್ಕೆ ಬರಬಹುದು. ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದು. ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು. ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ …
Read More »ಶ್ರಮಿಕ ವರ್ಗಕ್ಕೆ B.S.Y. ನೆರವು……..
ಬೆಂಗಳೂರು: ಕೊರೊನಾ ಲಾಕ್‍ಡೌನ್ ಆಗಿ 47 ದಿನಗಳು ಕಳೆದಿವೆ. ಲಾಕ್‍ಡೌನ್ ಅವಧಿಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ಆಯಾ ದಿನದ ಕೆಲಸವನ್ನೇ ನಂಬಿ ಜೀವನ ನಡೆಸುತ್ತಾ ಬಂದಿವರೇ ಆಗಿದ್ದಾರೆ. ವೃತ್ತಿನಿರತ ಕ್ಷೌರಿಕರು, ಅಗಸರು, ರೈತರು, ಆಟೋ ಟ್ಯಾಕ್ಸಿ ಚಾಲಕರು, ಹೂ, ಹಣ್ಣು ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಉಂಡಿದ್ದರು. ಉದ್ಯಮ ವಲಯವೂ ಸ್ತಬ್ಧ ಆಗಿ ಉದ್ಯಮಿಗಳು ಕಂಗಾಲಾಗಿದ್ದರು. ಇದೀಗ ಈ ವರ್ಗದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. 1,610 ಕೋಟಿ …
Read More »ಕಲಬುರಗಿ ನಗರದಲ್ಲಿ ತಾಯಿ-ಮಗು ಸೇರಿದಂತೆ ಮತ್ತೆ ಮೂವರು ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖ
ಕಲಬುರಗಿ: ಕಲಬುರಗಿ ನಗರದಲ್ಲಿ ತಾಯಿ-ಮಗು ಸೇರಿದಂತೆ ಮತ್ತೆ ಮೂವರು ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದ ಮೋಮಿನಪುರ ಪ್ರದೇಶದ 26 ವರ್ಷದ ಮಹಿಳೆ (ರೋಗಿ ಸಂಖ್ಯೆ-425) ಹಾಗೂ ಇವರ ನಾಲ್ಕು ತಿಂಗಳ ಗಂಡು ಮಗು (ರೋಗಿ ಸಂಖ್ಯೆ-424) ಹಾಗೂ ಮಾಣಿಕೇಶ್ವರಿ ನಗರದ 46 ವರ್ಷದ ಮಹಿಳೆ (ರೋಗಿ ಸಂಖ್ಯೆ-421) ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ. ಈ ಮೂವರಿಗೂ ಏ.22ರಂದು ಕೊರೊನಾ ಸೋಂಕು …
Read More »ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ………
ಚಿಕ್ಕಮಗಳೂರು: ಹೆಂಡತಿ-ಮಕ್ಕಳಿಗೆ ಹಣ ಬೇಕು. ನಿಮ್ಮ ಕಾಲಿಗೆ ಬೀಳ್ತೀನಿ ಅಂದ್ರು ಮಾಲೀಕ ಹಣ ಕೊಡಲಿಲ್ಲ ಅಂತ ಹೇಳದೆ-ಕೇಳದೆ ಎಣ್ಣೆ ಏಟಲ್ಲಿ 14 ಚಕ್ರದ ಟಿಪ್ಪರ್ ಲಾರಿಯನ್ನ ತೆಗೆದುಕೊಂಡು ಊರಿಗೆ ಹೋಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಮಂಗಳೂರು ಮೂಲದ ರಂಗಪ್ಪ ಎಂಬವನು ಕಡೂರು ತಾಲೂಕಿನಲ್ಲಿ ಪ್ರಭಾಕರ್ ಅವರ ಬಳಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದಮೇಲೆ ಡ್ರೈವರ್ ರಂಗಪ್ಪ ಒಂದೂವರೆ ತಿಂಗಳು …
Read More »ಮದ್ಯದ ಮತ್ತಿನಲ್ಲಿ ಪತ್ನಿಯ ಕತ್ತು ಸೀಳಿದ ಪಾಪಿ…….
ಬೆಂಗಳೂರು: ಮದ್ಯದ ಮತ್ತಿನಲ್ಲಿ ಪಾಪಿ ಪತಿಯೊಬ್ಬ ಪತ್ನಿಯನ್ನ ಕೊಲೆಗೈದ ಘಟನೆ ನೆಲಮಂಗಲ ಸಮೀಪದ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ. ನೆಲಮಂಗಲ ಸಮೀಪದ ಸಿದ್ದೇಶ್ವರ ಬಡಾವಣೆಯ ದಿವ್ಯ (24) ಕೊಲೆಯಾದ ಪತ್ನಿ. ತೀರ್ಥಪ್ರಸಾದ್ ಕೊಲೆಗೈದ ಪತಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತೀರ್ಥಪ್ರಸಾದ್ ಕೃತ್ಯ ಎಸದಿದ್ದಾನೆ ಎನ್ನಲಾಗಿದೆ. ಕಾರು ಚಾಲಕನಾಗಿದ್ದ ತೀರ್ಥಪ್ರಸಾದ್ ಬುಧವಾರ ಮದ್ಯ ಕುಡಿದು ಮನೆ ಬಂದಿದ್ದ. ಈ ವೇಳೆ ಪತ್ನಿಯ ಜೊತೆಗೆ ಜಗಳ ಆರಂಭಿಸಿ ಚಾಕುವಿನಿಂದ ಕತ್ತು ಸೀಳಿ ನಾಪತ್ತೆಯಾಗಿದ್ದಾನೆ. ಈ …
Read More »ಸಾರಿಗೆ ನೌಕರರ ವೇತನವನ್ನು ಮೂರು ದಿನಗಳಲ್ಲಿ ಬಿಡುಗಡೆ ಆಗಲಿದೆ: ಸಚಿವ ಲಕ್ಷ್ಮಣ್ ಸವದಿ
ಬೆಂಗಳೂರು : ಲಾಕ್ ಡೌನ್ ಜಾರಿಯಾದ ಪರಿಣಾಮ ತಡೆಹಿಡಿಯಲಾಗಿದ್ದ ಸಾರಿಗೆ ನೌಕರರ ವೇತನವನ್ನು ಮೂರು ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಾನು ಮುಖ್ಯಮಂತ್ರಿ ಬಳಿ ಮಾತನಾಡಿದ್ದೇನೆ. ಇನ್ನು 3-4 ದಿನಗಳಲ್ಲಿ ಸಂಬಳ ಆಗುತ್ತದೆ. ಸರ್ಕಾರದಿಂದ ನೇರವಾರಿ 326 ಕೋಟಿ ರೂಪಾಯಿಯನ್ನು ಪಡೆದು ಸಂಬಳ ನೀಡುತ್ತೇವೆ ಎಂದಿದ್ದಾರೆ. ಸಾರಿಗೆ ಸಿಬ್ಬಂದಿಗಳ ವೇತನವನ್ನು ಮೂರು-ನಾಲ್ಕು …
Read More »ಅರಬ್ ರಾಷ್ಟ್ರಗಳಲ್ಲಿನ ಕನ್ನಡಿಗರನ್ನು ಕರೆತರಲು ಡಿಸಿಎಂ ಅಶ್ವತ್ಥನಾರಾಯಣ ಬರೆದಿದ್ದ ಪತ್ರಕ್ಕೆ ಸ್ಪಂದಿಸಿದ ಕೇಂದ್
ಬೆಂಗಳೂರು : ಕೊವಿಡ್‌ನಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ದೇಶಕ್ಕೆ ವಾಪಸಾಗಲು ಬಯಸಿರುವ ಕನ್ನಡಿಗರಿಗೆ ವಿಮಾನದ ವ್ಯವಸ್ಥೆ ಮಾಡುವಂತೆ ಕೋರಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬರೆದಿದ್ದ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಮೇ 10 ಅಥವಾ 11ಕ್ಕೆ ವಿಮಾನದ ವ್ಯವಸ್ಥೆ ಮಾಡಲಿದೆ. ಭಾನುವಾರ ದುಬೈ ಕನ್ನಡಿಗರ ಜತೆ ವೀಡಿಯೋ ಸಂವಾದ ನಡೆಸಿದ್ದ ಡಾ. ಅಶ್ವತ್ಥನಾರಾಯಣ, ಅವರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಕಡೆಯಿಂದ ಆಗುವ ಎಲ್ಲ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. …
Read More »ರಾಮನಗರ : 68 ಸಿಬ್ಬಂದಿಯ 2ನೇ ಕಾವಿಡ್ -19 ಟೆಸ್ಟ್ ಕೂಡ ನೆಗೆಟಿವ್ …….
ಬೆಂಗಳೂರು: ಪಾದರಾಯನಪುರ ಗಲಭೆಯ ಆರೋಪಿಗಳು ರಾಮನಗರದ ಜಿಲ್ಲಾ ಕಾರಾಗೃಹದಲ್ಲಿದ್ದ ವೇಳೆ ಅವರ ಮೇಲೆ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣಾ ಫಲಿತಾಂಶ ನೆಗಟಿವ್ ಬಂದಿದೆ. “ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜಿಲ್ಲೆ ಈಗಲೂ ಗ್ರೀನ್ ಝೋನ್ ಆಗಿ ಉಳಿದಿದೆ ಎಂಬ ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಖುಷಿ ಆಗುತ್ತಿದೆ, ” ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ …
Read More »ಕೊರೋನಾ ವಾರಿಯರ್ಸ್‍ಗೆ ಗೌರವ ನೀಡಿ :ನಾಗೇಶ ಶೇಖರಗೋಳ
ಗೋಕಾಕ : ಜಗತ್ತಿನಾದ್ಯಂತ ಕಾಡುತ್ತಿರುವ ಕೊರೋನಾ ವಿರುದ್ಧ ಸಮರ ಸಾರುತ್ತಿರುವ ಕೋರೋನಾ ವಾರಿಯರ್ಸ್ ಅವರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಿ ಕೃತಜ್ಞತೆ ಸಲ್ಲಿಸುವಂತೆ ಯುವ ಮುಖಂಡ ನಾಗೇಶ ಶೇಖರಗೋಳ ಹೇಳಿದರು. ತಾಲೂಕಿನ ಬಳೋಬಾಳ ಗ್ರಾಮ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಬುಧವಾರದಂದು ಗ್ರಾಮಸ್ಥರು ಹಮ್ಮಿಕೊಂಡಿದ್ದ ಕೊರೋನಾ ವೈರಸ್ ವಾರಿಯರ್ಸ್ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸುತ್ತಿರುವ ವೈದ್ಯರು, ದಾದಿಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರ …
Read More »ಕೊರೊನಾ ಹಾಟ್‍ಸ್ಪಾಟ್ ಆಯ್ತು ಮಂಗ್ಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ………
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗಲಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕು ತಗುಲಿಸಿಕೊಂಡಿದ್ದ ಇಬ್ಬರು ಮಹಿಳೆಯರಿಂದ ಅವರ ಮಕ್ಕಳಿಗೂ ಸೋಂಕು ಹರಡಿದೆ. ಎಪ್ರಿಲ್ 19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾ ನಿವಾಸಿ ಮಹಿಳೆಯ 16 ವರ್ಷದ ಪುತ್ರಿಗೆ ಸೋಂಕು ಆಗಿದ್ದರೆ, ಬೋಳೂರಿನ ವೃದ್ಧ ಮಹಿಳೆಯ ಸಂಪರ್ಕದಲ್ಲಿದ್ದ 11 ವರ್ಷದ ಬಾಲಕಿ ಮೊಮ್ಮಗಳು ಮತ್ತು 35 ವರ್ಷದ ಮಗಳಿಗೆ ಸೋಂಕು ಕಾಣಿಸಿಕೊಂಡಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಿಂದ …
Read More »