ಹೈದರಾಬಾದ್: ಕೋವಿಡ್ 19 ಲಾಕ್ಡೌನ್ ನಿಂದ ಸೃಷ್ಟಿಯಾಗಿರುವ ಹಣಕಾಸು ಸಮಸ್ಯೆಯನ್ನು ಪರಿಹಾರ ಮಾಡಲು ತನ್ನ ಕೆಲ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ತಿರುಪತಿ ತಿರುಮಲ ದೇಗುಲ (ಟಿಟಿಡಿ)ದ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಹೌದು. ಮಾರ್ಚ್ ಮೂರನೇ ವಾರದಲ್ಲಿ ತಿರುಪತಿ ದೇಗುಲದ ಬಾಗಿಲು ಮುಚ್ಚಿದ್ದು, ಜೂನ್ ತಿಂಗಳಿನಲ್ಲಿ ಬಾಗಿಲು ತೆರೆಯಲು ತೆರೆಯಲು ಅನುಮತಿ ಸಿಗುತ್ತದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಜೂನ್ ತಿಂಗಳಿನಲ್ಲೂ ದೇವಾಲಯದ ಬಾಗಿಲು ತೆರೆಯದಿದ್ದರೆ ಭಕ್ತರು ದೇಣಿಗೆ …
Read More »ಹುಬ್ಬಳ್ಳಿ:ಕೋವಿಡ್-19 ಸೋಂಕಿನಿಂದ ಗುಣಮುಖರಾದ ರೋಗಿಗಳು ರಕ್ತ ನೀಡಲು ಒಪ್ಪುತ್ತಿಲ್ಲ.
ಹುಬ್ಬಳ್ಳಿ: ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಐಸಿಎಂಆರ್ ನಿಂದ ಅನುಮತಿ ನೀಡಲಾಗಿದ್ದು, ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕಿಮ್ಸ್ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ರಕ್ತವೇ ಸಿಗುತ್ತಿಲ್ಲ. ಕೋವಿಡ್-19 ಸೋಂಕಿನಿಂದ ಗುಣಮುಖರಾದ ರೋಗಿಗಳು ರಕ್ತ ನೀಡಲು ಒಪ್ಪುತ್ತಿಲ್ಲ. ಮೊದಲು ರಕ್ತ ನೀಡಲು ಒಪ್ಪಿಕೊಂಡಿದ್ದ ಕೊರೊನಾ ಸೋಂಕಿನಿಂದ ಗುಣಮುಖರಾದವರು ಈಗ ರಕ್ತ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹೊರ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ರಕ್ತಕ್ಕಾಗಿ ಕಿಮ್ಸ್ …
Read More »ಹಮ್ ಮೋದಿ ಕೊ ಮಾರೆಂಗೇ’ – ಕೊರೊನಾ ಗೆದ್ದು ಬಂದ 6ರ ಪೋರ ಮಾತು……
ನವದೆಹಲಿ: ‘ಹಮ್ ಮೋದಿ ಕೊ ಮಾರೆಂಗೇ’ ಎಂದು ಆರು ವರ್ಷದ ಪುಟ್ಟ ಪೋರನೊಬ್ಬ ಕೂಗಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾದಿಂದ ಗುಣಮುಖರಾದ ಕುಟುಂಬವೊಂದು ಕೊರೊನಾ ಗೆದ್ದು ಬಂದಿದ್ದೇವೆ ಎಂದು ಕ್ಯಾಮೆರಾಗೆ ಪೋಸ್ ನೀಡುತ್ತಿತ್ತು. ಈ ವೇಳೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಕೊರೊನಾ ವಾರಿಯರ್ಸ್ ಎಲ್ಲ ನಿಂತುಕೊಂಡು ಸಂಭ್ರಮಾಚರಣೆ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ನಿಂತಿದ್ದ ಪುಟ್ಟಪೋರನೊಬ್ಬ ನಾವು ಮೋದಿಯನ್ನು ಕೊಲ್ಲುತ್ತೇವೆ ಎಂದು ಘೋಷಣೆ …
Read More »ನಾಳೆಯಿಂದ ಬಸ್ ಸಂಚಾರ ಸಾಧ್ಯತೆ – ಏನು ಸೇವೆ ಇರಬಹುದು?
ಬೆಂಗಳೂರು: ಇವತ್ತಿಗೆ ಲಾಕ್ಡೌನ್ 3.0 ಅಂತ್ಯಗೊಳ್ಳಲಿದ್ದು, ನಾಳೆಯಿಂದ ಹೊಸ ಸ್ವರೂಪದಲ್ಲಿ, ಹೊಸ ಆಯಾಮದಲ್ಲಿ ಲಾಕ್ಡೌನ್ ಜಾರಿಯಾಗಲಿದೆ. ಈಗಾಗಲೇ ಲಾಕ್ಡೌನ್ 4.0 ಹೇಗಿರುತ್ತೆ ಅನ್ನೋ ಕುತೂಹಲ ದೇಶದೆಲ್ಲೆಡೆ ಮನೆಮಾಡಿದೆ. ಅಲ್ಲದೇ ರಾಜಧಾನಿ ಬೆಂಗಳೂರಿಗೆ ಬಿಗ್ ರಿಲೀಫ್ ಸಿಗುತ್ತಾ ಅಂತ ಜನ ಕಾಯುತ್ತಿದ್ದಾರೆ. ಲಾಕ್ಡೌನ್ ಟಫ್ ಇದ್ದಷ್ಟು ದಿನ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಆದರೆ ಲಾಕ್ಡೌನ್ ಸಡಿಲಿಕೆಯಾದ ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರೋವಾಗ 3ನೇ ಲಾಕ್ಡೌನ್ ಮುಗೀತಾ ಬಂದಿದೆ. ಇದರ ನಡುವೆ …
Read More »ನಾಳೆಯಿಂದ ಹೊಸ ಲಾಕ್ಡೌನ್ – ಪ್ಲ್ಯಾನ್ ಹೇಗಿರಬಹುದು? …..
ನವದೆಹಲಿ: ಕೋವಿಡ್ 19 ಲಾಕ್ಡೌನ್ 3.0 ಇಂದು ಅಂತ್ಯವಾಗಲಿದ್ದು, ಸೋಮವಾರದಿಂದ ಹೊಸ ಲಾಕ್ಡೌನ್ 4.0 ಜಾರಿಯಾಗುತ್ತಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರ ಇಂದು ಹೊಸ ಮಾರ್ಗಸೂಚಿ ಪ್ರಕಟ ಮಾಡಲಿದೆ. ಹೊಸ ಲಾಕ್ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಎನ್ನುವುದೇ ಕುತೂಹಲ. ಯಾಕಂದ್ರೆ, ಈಗಾಗಲೇ 3 ಲಾಕ್ಡೌನ್ಗಳಲ್ಲೂ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಜೊತೆಗೆ, ಲಾಕ್ಡೌನ್ 3ರಲ್ಲಿ ಮತ್ತಷ್ಟು …
Read More »ಜಿಲ್ಲಾಡಳಿತಗಳ ಎಡವಟ್ಟಿಗೆ ಬೀದಿಗೆ ಬಿದ್ದ ವೃದ್ಧ……….
ಚಿತ್ರದುರ್ಗ: ಕೊರೊನಾ ನಡುವೆಯೂ ಎರಡು ಜಿಲ್ಲಾಡಳಿತಗಳ ಎಡವಟ್ಟಿನಿಂದ ವಯೋವೃದ್ಧ ಬೀದಿಪಾಲಾಗಿರುವ ಮನಕಲಕುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಮಾರ್ಚ್ ತಿಂಗಳಲ್ಲಿ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಶಿವಮೂರ್ತಿ ಅವರನ್ನು ತಡೆದ ಮಂಡ್ಯ ಜಿಲ್ಲಾಡಳಿತ 30 ದಿನಗಳ ಕಾಲ ಕ್ವಾರಂಟೈನ್ ಮಾಡಿತ್ತು. ಬಳಿಕ ಅವರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸ್ವ-ಗ್ರಾಮಕ್ಕೆ ಶಿವಮೂರ್ತಿಯವರನ್ನು ಕಳುಹಿಸುವ ಬದಲಾಗಿ ಸರ್ಕಾರಿ ವಾಹನದಲ್ಲಿ ಚಿತ್ರದುರ್ಗಕ್ಕೆ ಕಳುಹಿಸಿದೆ. ಅಲ್ಲದೇ ಅಧಿಕಾರಿಗಳ ಎಡವಟ್ಟಿನಿಂದಾಗಿ ಚಿತ್ರದುರ್ಗಕ್ಕೆ ಬಂದ ಶಿವಮೂರ್ತಿ ಅವರನ್ನು ಅಲ್ಲೂ …
Read More »ತಬ್ಲಿಘಿಗಳ ನಂತರ ಮಲೆನಾಡಿಗೆ ಮುಂಬೈ ನಂಟಿನ ಕಂಟಕ……….
ಶಿವಮೊಗ್ಗ: ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದ ದಿನದಿಂದಲೂ ಮಲೆನಾಡಿನ ಶಿವಮೊಗ್ಗ ಜಿಲ್ಲೆ ಗ್ರೀನ್ ಝೋನ್ ನಲ್ಲಿತ್ತು. ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಒಂದೆಡೆ ಅಹಮದಾಬಾದ್ನ ತಬ್ಲಿಘಿಗಳು, ಮತ್ತೊಂದೆಡೆ ಮುಂಬೈನಿಂದ ಬಂದ ವಲಸೆ ಕಾರ್ಮಿಕರು ಮಲೆನಾಡಿನ ಮಂದಿಗೆ ಕಂಟಕವಾಗಿ ಕಾಡುತ್ತಿದ್ದಾರೆ. ಹೀಗಾಗಿ ಇಂದು ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೇರಿದೆ. ಕೊರೊನಾ ಕಾಣಿಸಿಕೊಂಡ ಆರಂಭದಿಂದಲೂ ಜಿಲ್ಲೆ ಹಸಿರು ವಲಯದಲ್ಲಿತ್ತು. ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿದ …
Read More »ಮುಂಬೈನಿಂದ ಬಂದವರ ಕ್ವಾರಂಟೈನ್- ಅಂಬುಲೆನ್ಸ್ಗೆ ಕಲ್ಲು ತೂರಾಟ…………
ಹಾಸನ: ಮುಂಬೈನಿಂದ ಬಂದವರನ್ನು ಜಿಲ್ಲೆಯ ಹೊಳೆನರಸೀಪುರದಲ್ಲಿ ಕ್ವಾರಂಟೈನ್ ಮಾಡುತ್ತಿರುವುದಕ್ಕೆ ವಿರೋಧಿಸಿ ಅಂಬ್ಯುಲೆನ್ಸ್ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ. ಹೊಳೆನರಸೀಪುರ ತಾಲೂಕಿನ ದೇವರ ಮುದ್ದನಹಳ್ಳಿ ಬಳಿ ಘಟನೆ ನಡೆದಿದ್ದು, ಮುಂಬೈನಿಂದ ಬಂದವರನ್ನು ಇಲ್ಲಿ ಕ್ವಾರಂಟೈನ್ ಮಾಡಿದರೆ ಹಳ್ಳಿಯ ಜನರಿಗೂ ಕೊರೊನಾ ಬರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ವಾರಂಟೈನ್ ಮಾಡಲು ಕರೆದೊಯ್ದಿದ್ದ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೇ.15ರಂದು ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರನ್ನು …
Read More »ಸಾಮೂಹಿಕ ವಿಶೇಷ ಪ್ರಾರ್ಥನೆಗೆ ಬಿಎಸ್ವೈಗೆ ಪತ್ರ ಬರೆದ ಶಾಸಕ ಹ್ಯಾರಿಸ್……….
ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಬೆನ್ನಲ್ಲೇ ಶಾಸಕ ಎನ್.ಎ.ಹ್ಯಾರಿಸ್ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸಿಎಂ ಇಬ್ರಾಹಿಂ ಅವರ ಪತ್ರಕ್ಕೆ ಕಾಂಗ್ರೆಸ್ನ ಮುಸ್ಲಿಂ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿದ್ದರೂ ಶಾಸಕ ಹ್ಯಾರಿಸ್ ಅವರು ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ. ಪತ್ರದಲ್ಲಿ ಏನಿದೆ?: ಮುಸ್ಲಿಂ ಬಾಂಧವರು ಚಂದ್ರ ದರ್ಶನ ನಂತರ ಮೇ …
Read More »ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ
ಬಳ್ಳಾರಿ: ಶ್ರಮಿಕ್ ವಿಶೇಷ ರೈಲಿನ ಮೂಲಕ 1,452 ಜನ ಬಿಹಾರಿ ವಲಸೆ ಕಾರ್ಮಿಕರು ತಮ್ಮ ತವರಿನತ್ತ ತೆರಳಿದರು. ಸುರಕ್ಷಿತವಾಗಿ ಊರು ತಲುಪಿ ಮತ್ತೆ ಬಳ್ಳಾರಿಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿ.ಪಂ. ಸಿಇಒ ಕೆ.ನಿತೀಶ್ ಸೇರಿದಂತೆ ಅನೇಕರು ಶುಭಹಾರೈಸಿ ಬೀಳ್ಕೊಟ್ಟರು. ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಬಿಹಾರದ 1,452 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ …
Read More »