Breaking News

ಭಾನುವಾರದಂದು ಮದ್ಯ ಮಾರಾಟ ಕೂಡ ಮಾಡುವಂತಿಲ್ಲ

ಬೆಂಗಳೂರು: ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆಯಾಗಿದ್ದು, ರಾಜ್ಯ ಸರ್ಕಾರ ಕೆಲವು ನಿಯಮಗಳನ್ನು ಘೋಷಣೆ ಮಾಡಿದೆ.‌ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌ‌ನ್ ಇರಲಿದೆ ಎಂದು ತಿಳಿಸಿದ ಸರ್ಕಾರ ಭಾನುವಾರದಂದು ಯಾವುದೇ ವ್ಯಾಪಾರ, ವಹಿವಾಟು ನಡೆಯಲ್ಲ. ಭಾನುವಾರದಂದು ಮದ್ಯ ಮಾರಾಟ ಕೂಡ ಮಾಡುವಂತಿಲ್ಲ. ಹೀಗಾಗಿ ವಾರದ 6 ದಿನಗಳ ಕಾಲ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದೂ ಸಹ ಪಾರ್ಸೆಲ್ ಮಾತ್ರ ಅನುಮತಿ ಇರೋದು. 6 ದಿನ ಮಾರಾಟ ಮಾಡಿದರೂ, …

Read More »

ನಾಲ್ಕು ದಿನ ಹಸುಗೂಸಿಗೆ ವಿಷ ಕೊಟ್ಟು ಕೊಂದ ತಂದೆ, ಅಜ್ಜಿ

ಚೆನ್ನೈ: ಮತ್ತೆ ಹೆಣ್ಣು ಮಗುವಾಯಿತು ಎಂದು ನಾಲ್ಕು ದಿನದ ಹಸುಗೂಸನ್ನು ಸ್ವಂತ ತಂದೆ ಮತ್ತು ಅಜ್ಜಿ ಸೇರಿಕೊಂಡು ಕೊಲೆ ಮಾಡಿರುವ ಅಮಾನವೀಯ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಜಿಲ್ಲೆಯ ಸೊಲವಂದನ್ ಪಂಚಾಯತ್ ಪಟ್ಟಣದಲ್ಲಿ ಮಗುವಿನ ತಾಯಿ ಚಿತ್ರಾ ಮನೆಯಲ್ಲಿ ಇಲ್ಲದಿದ್ದಾಗ ಕೊಲೆ ಮಾಡಲಾಗಿದೆ. ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳನ್ನು …

Read More »

ಉದ್ದುದ್ದ ಕೂದಲು, ಕುರುಚಲು ಗಡ್ಡಕ್ಕೆ ಮುಕ್ತಿ- ಎಲ್ಲಾ ಸಲೂನ್ ಓಪನ್…..

ಉಡುಪಿ: ಜಿಲ್ಲೆಯಲ್ಲಿ 54 ದಿನಗಳ ನಂತರ ಸಲೂನ್ ಓಪನ್ ಆಗಿದೆ. ಲಾಕ್‍ಡೌನ್ ಆರಂಭದಿಂದ ಕೂದಲು ಗಡ್ಡ ಬಿಟ್ಟು ಟೆನ್ಷನ್ ಮಾಡಿಕೊಂಡಿದ್ದ ಪುರುಷರು ಫುಲ್ ರಿಲೀಫ್ ಆಗಿದ್ದಾರೆ. ಉಡುಪಿಯಲ್ಲಿ ಹೇರ್ ಕಟ್ಟಿಂಗ್ ಸಲೂನ್‍ಗಳು ಬಂದ್ ಆಗಿ 54 ದಿನ ಕಳೆದಿದೆ. ಲಾಕ್‍ಡೌನ್ ಘೋಷಣೆ ಆಗುವ ಮೊದಲೇ ಸಲೂನ್ ಗಳನ್ನು ಉಡುಪಿಯಲ್ಲಿ ಬಂದ್ ಮಾಡಲಾಗಿತ್ತು. ಒಟ್ಟು ನಾಲ್ಕು ಹಂತಗಳಲ್ಲಿ ಲಾಕ್‍ಡೌನ್ ರಿಲೀಸ್ ಆಗುತ್ತಾ ಬಂದರೂ ಹೇರ್ ಕಟ್ಟಿಂಗ್ ಗೆ ಅವಕಾಶ ಸರ್ಕಾರ ಕೊಟ್ಟಿರಲಿಲ್ಲ. …

Read More »

BIG BREAKING : ಎಸ್‍ಎಸ್‍ಎಲ್‍ಸಿ-ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು. ಮೇ. 18 ; .ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಕೊನೆಗೂ ಪ್ರಕಟವಾಗಿದೆ. ಜೂನ್ 26 ರಿಂದ ಜುಲೈ 4 ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ. ಇಂದು ಸುದ್ದಿಘೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ ಕುಮಾರ್ ವೇಳಾಪಟ್ಟಿ ಪ್ರಕಟ ಮಾಡಿದರು. ಕೋವಿಡ್ – 19 ಆತಂಕದ ನಡುವೆ ಗೊಂದಲದಲ್ಲಿದ್ದ ಪರೀಕ್ಷಾ ದಿನಾಂಕವನ್ನು ಕೊನೆಗೂ ಪ್ರಕಟಿಸಿದ್ದು 2879 ಕೇಂದ್ರಗಳಲ್ಲಿ 848196 ವಿದ್ಯಾರ್ಥಿಗಳು …

Read More »

ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲ್ಲ : ಡಿಸಿಎಂ ಸವದಿ ………….

ಬೆಂಗಳೂರು, ಮೇ 18-ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಎನ್‍ಇಕೆಎಸ್‍ಆರ್‍ಟಿ ಹಾಗೂ ಎನ್‍ಡಬ್ಲು ಕೆಎಸ್‍ಆರ್‍ಟಿಸಿ ಸೇರಿದಂತೆ ನಾಲ್ಕು ನಿಗಮಗಳು ನಷ್ಟದಲ್ಲಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಬಸ್ ಪ್ರಯಾಣವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮಗಳು ನಷ್ಟದಲ್ಲಿವೆ. ದರ ಹೆಚ್ಚಳ ಮಾಡುವುದು ಅನಿವಾರ್ಯವಾದರೂ ಇಂದಿನ ಪರಿಸ್ಥಿತಿಯಲ್ಲಿ ದರ ಏರಿಕೆ ಮಾಡುವುದಿಲ್ಲ ಎಂದು ಹೇಳಿದರು. ಲಾಕ್‍ಡೌನ್ ಜಾರಿಯಾಗಿ ಸರಿಸುಮಾರು ಒಂದೂವರೆ ತಿಂಗಳಾಗಿವೆ. ಸದ್ಯಕ್ಕೆ ಯಾವುದೇ ರೀತಿಯ ಆದಾಯ …

Read More »

ಜಗತ್ತಿನಾದ್ಯಂತ ಅರ್ಧ ಕೋಟಿ ಮಂದಿಗೆ ಕೊರೋನಾ ಅಟ್ಯಾಕ್..! 3,16,732 ಮಂದಿ ಬಲಿ

ವಾಷ್ಟಿಂಗ್ಟನ್/ಮ್ಯಾಡ್ರಿಡ್/ಮಾಸ್ಕೋ, ಮೇ 18-ಕಿಲ್ಲರ್ ಕೊರೊನಾ ಇಡೀ ಜಗತ್ತಿಗೆ ಕಂಟಕವಾಗಿ ಪರಿಣಮಿಸಿದೆ. ವೈರಸ್ ವಿಷವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಈವರೆಗೆ 3,16,732 ಮಂದಿ ಸಾವಿಗೀಡಾಗಿದ್ದು, 48,05,228 ಸೋಂಕು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗ ಪೀಡಿತರಲ್ಲಿ 46,000ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಬೀರವಾಗಿರುವ ಆತಂಕಕಾರಿಯಾಗಿದೆ. ವಿಶ್ವವ್ಯಾಪಿ ಸಾವಿನ ಸಂಖ್ಯೆ ಆತಂಕವಿರುವಾಗಲೇ, ಸುಮಾರು 18,60,059 ಮಂದಿ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು …

Read More »

BIG BREAKING : ನಾಳೆಯಿಂದ ಕರ್ನಾಟಕ ಲಾಕ್ ಓಪನ್..!, ಬಸ್-ವ್ಯಾಪಾರ-ಪಾರ್ಕ್ ಆರಂಭ..!

ಬೆಂಗಳೂರು, ಮೇ 18- ರಾಜ್ಯದ ಲಾಕ್‍ಡೌನ್ ಜಾರಿಯಿಂದಾಗಿ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಹಾಗೂ ಖಾಸಗಿ ಬಸ್ ಸೇರಿದಂತೆ ವೋಲ್ವಾ, ಊಬರ್, ಆಟೋ ರಿಕ್ಷಾ ಸಂಚಾರ ನಾಳೆಯಿಂದ ಕಾರ್ಯಾರಂಭ ಮಾಡಲಿವೆ. ನಾಳೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಎನ್‍ಡಬ್ಲು ಕೆಎಸ್‍ಆರ್‍ಸಿ, ಎನ್‍ಇ ಕೆಆರ್‍ಟಿಸಿ, ಟ್ಯಾಕ್ಸಿ, ವೋಲಾ, ಊಬರ್ ವಾಹನಗಳು ಕೂಡ ಕಾರ್ಯಾಚರಣೆ ಪ್ರಾರಂಭಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ ಕಡ್ಡಾಯವಾಗಿ ಬಸ್ ಹಾಗೂ …

Read More »

ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಬಸ್ತಿಗೆ ಇಂದು ವಿಶೇಷ ರೈಲು……..

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುವ ಉತ್ತರ ಪ್ರದೇಶ ಮೂಲದ ಪ್ರವಾಸಿ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಲು ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಬಸ್ತಿಗೆ ಇಂದು ವಿಶೇಷ ರೈಲು ಪ್ರಯಾಣಿಸಿತು. ಶ್ರಮಿಕ ಎಕ್ಸ್‌ಪ್ರೆಸ್‌ ರೈಲು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಟಿದೆ. ಈ ರೈಲಿನ ಮೂಲಕ 1,443 ಪ್ರಯಾಣಿಕರು ತಮ್ಮ ತಮ್ಮ ತವರಿಗೆ ತೆರಳಿದರು. ಉತ್ತರ ಪ್ರದೇಶಕ್ಕೆ ಹೋಗುತ್ತಿರುವ ಎಲ್ಲ ಪ್ರವಾಸಿ ಪ್ರಯಾಣಿಕರಿಗೆ ಬೆಳಗ್ಗೆ …

Read More »

ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ: KSRTC ಎಂಡಿ

ಬೆಂಗಳೂರು: ಯಾವ್ಯಾವ ಜಿಲ್ಲೆಗಳಿಗೆ ಬೇಡಿಕೆ ಇದೆಯೋ ಬೇಡಿಕೆಗೆ ತಕ್ಕಂತೆ ಬಸ್‍ಗಳ ಸಂಚಾರ ಮಾಡುತ್ತೇವೆ ಎಂದು ಕೆ.ಎಸ್.ಆರ್.ಟಿ.ಸಿ ಎಂಡಿ ಶಿವಯೋಗಿ ಕಳಸದ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ ಇಂದು ಸಭೆ ನಡೆಸಿ ನಾಲ್ಕನೇ ಹಂತದ ಲಾಕ್‍ಡೌನ್ ಮಾರ್ಗಸೂಚಿಯನ್ನು ಇಂದು ಮಧ್ಯಾಹ್ನ ಮಾಡಿದ ಬಿಎಸ್ ಯಡಿಯೂರಪ್ಪನವರು, ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ಖಾಸಗಿ ಬಸ್‍ಗಳು, ಆಟೋ ಮತ್ತು ಟ್ಯಾಕ್ಸಿಗಳು ಓಡಾಡಲು ಅನುಮತಿ ನೀಡಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಈಗ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರಲ್ಲಿ ಮತ್ತೆ ಸೊಂಕು ಪತ್ತೆ

ಬೆಳಗಾವಿ -ಸೋಮವಾರದ ಹೆಲ್ತ್ ಬುಲಿಟೀನ್ ಬೆಳಗಾವಿಗೆ ಮತ್ತೆ ಶಾಕ್ ನೀಡಿದೆ ,ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರಲ್ಲಿ ಮತ್ತೆ ಸೊಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಜಿಲ್ಲಾಡಳಿತದ ವರದಿಯ ಪ್ರಕಾರ 118ಕ್ಕೆ ತಲುಪಿದೆ. ಇಂದು ಸೊಂಕು ಪತ್ತೆಯಾದ ಇಬ್ಬರು ಮುಂಬೈಯಿಂದ ಬೆಳಗಾವಿಗೆ ಬಂದಿದ್ದರು ನಿಪ್ಪಾಣಿ ಬಳಿ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಓರ್ವ ಮಹಿಳೆಗೆ ಮಹಾರಾಷ್ಟ್ರದ ನಂಟಿನಿಂದ ಸೊಂಕು ತಗಲಿದ್ದು ,ಇನ್ನೋರ್ವರಿಗೆ ತಬ್ಲಿಗ್ ನಂಟಿನಿಂದ ಸೊಂಕು ತಗಲಿದೆ.

Read More »