ಬೆಳಗಾವಿ, : ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣಕ್ಕೆ ಸಮನ್ವಯ ಸಮಿತಿ ರಚನೆ ಹಾಗೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ವಿನಿಮಯಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗವು ಇಂದು ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚೆ ನಡೆಸಿತು. ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ರಾಜ್ಯ ನಿಯೋಗವು ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಜಯಂತ್ ಪಾಟೀಲ್ ಅವರೊಂದಿಗೆ ಮುಂಬೈಯಲ್ಲಿ ಸಭೆ ನಡೆಸಿತು. ಆಲಮಟ್ಟಿ ಜಲಾಶಯದ ಎತ್ತರದ …
Read More »ಕಾಫಿನಾಡಲ್ಲಿ ಕೊರೊನಾ ದರ್ಬಾರ್- ……………..
ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಎಗ್ಗಿಲ್ಲದೆ ಕೊರೊನಾ ಸೋಂಕು ಹಬ್ಬುತ್ತಿದೆ. ಇಂದು ಒಂದೇ ದಿನ 23 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಜಿಲ್ಲೆಯ ಜನ ಮತ್ತಷ್ಟು ಕಂಗಾಲಾಗಿದ್ದಾರೆ. ಚಿಕ್ಕಮಗಳೂರು ಹಾಗೂ ಕಡೂರು ತಾಲೂಕಿನಲ್ಲಿ ಕೊರೊನಾ ಅಬ್ಬರ ಮುಂದುವರಿದಿದೆ. ಇಂದು ಚಿಕ್ಕಮಗಳೂರಿನಲ್ಲಿ 12 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಕಡೂರಿನಲ್ಲಿ ಎಂಟು ಪ್ರಕರಣಗಳು ಬೆಳಕಿಗೆ ಬಂದಿದೆ. ಉಳಿದಂತೆ ಜಿಲ್ಲೆಯ ಕೊಪ್ಪ, ಎನ್.ಆರ್.ಪುರ ಹಾಗೂ ಅಜ್ಜಂಪುರದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಕಡೂರು ನಗರದ …
Read More »1.20 ಲಕ್ಷ ಮಂದಿ ಕೊರೋನಾ ಸೋಂಕಿಗೆ ತುತ್ತಾಗಬಹುದು
ಬೆಂಗಳೂರು: ಮನುಕುಲಕ್ಕೆ ಬೆನ್ನಿಗಂಟಿದ ಬೇತಾಳದಂತೆ ಮಾರ್ಪಟ್ಟಿರುವ ಕೊರೋನಾ ಹೆಮ್ಮಾರಿ ಸದ್ಯಕ್ಕೆ ಬಿಟ್ಟು ಹೋಗುವ ರೀತಿ ಕಾಣುತ್ತಿಲ್ಲ. ನವೆಂಬರ್ವರೆಗೆ ಅಲ್ಲ, ಡಿಸೆಂಬರ್ವರಗೆ ಅಲ್ಲ, ಫೆಬ್ರವರಿ ಕಳೆದರೂ ಕೂಡ ಸೋಂಕು ಕಡಿಮೆ ಆಗುವ ಲಕ್ಷಣವೂ ಇಲ್ಲ. ಅಕ್ಟೋಬರ್, ನವೆಂಬರ್ ಹೊತ್ತಿಗೆ ಅಂದ್ರೆ ದೀಪಾವಳಿ ವೇಳೆಗೆ ನೀವು ಊಹಿಸಲಾಗದ ಮಟ್ಟಕ್ಕೆ ಕೊರೋನಾ ಸೋಂಕು ವ್ಯಾಪಿಸುತ್ತದೆ. ಸೋಂಕು ಪೀಕ್ಗೆ ಹೋಗುತ್ತೆ. ಸಾವು ನೋವುಗಳು ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಕೊರೋನಾ ಹಾಟ್ಸ್ಪಾಟ್ ಸಿಟಿಯಾಗಿ ಮಾರ್ಪಟ್ಟಿರುವ ಬೆಂಗಳೂರಿನಲ್ಲಿ ಫೆಬ್ರವರಿ ಹೊತ್ತಿಗೆ …
Read More »ರಾಯಚೂರು: ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್
ರಾಯಚೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಗುಳೆ ಹೋದವರು ಸ್ವಗ್ರಾಮಕ್ಕೆ ವಾಪಾಸ್ ಆಗಮಿಸುತ್ತಿದ್ದು, ಇಂತಹವರಿಗೆ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಕೊರೊನಾ ಭೀತಿಯಿಂದ ಬೆಂಗಳೂರಿನಿಂದ ಬಂದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಬೆಂಗಳೂರಿನಿಂದ ವಾಪಸ್ ಆಗುವವರಿಗೆ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ 14 ದಿನಗಳ ಹೋಂ ಕ್ವಾರಂಟೈನ್ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಮೈಕ್ ಮೂಲಕ ಪ್ರಚಾರ …
Read More »ಮುಖ್ಯ ಶಿಕ್ಷಕನಿಂದ ಸರ್ಕಾರಿ ಶಾಲೆಯಲ್ಲಿ ನಿತ್ಯ ಗುಂಡು, ತುಂಡು ಪಾರ್ಟಿ
ಯಾದಗಿರಿ: ಶಾಲೆ ಎಂದರೆ ಜ್ಞಾನ ದೇಗುಲ ಎಂಬ ಭಾವನೆ. ಇಂತಹ ಶಾಲೆಯಲ್ಲಿ ಗುರುವಿನ ಸ್ಥಾನದಲ್ಲಿರುವ ಶಿಕ್ಷಕನೇ ಶಾಲೆಯಲ್ಲಿ ನೀತಿಗೆಟ್ಟ ಕೆಲಸ ಮಾಡಿದ್ದಾನೆ. ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರಿನ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವಿಂದ್ರಪ್ಪ ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾನೆ. ಕೊರೊನಾ ಹಿನ್ನೆಲೆ ಶಾಲೆಗೆ ಶಿಕ್ಷಕರು ಮಾತ್ರ ಬರುತ್ತಿದ್ದು, ಶಾಲೆಯಲ್ಲಿ ಮುಖ್ಯ ಶಿಕ್ಷಕ ಆಡಿದ್ದೆ ಆಟ ಎನ್ನುವಂತಾಗಿದೆ. ಕಳೆದ ಹಲವು ದಿನಗಳಿಂದ, ಶಾಲೆಯೊಳಗೆ ಮುಖ್ಯ ಶಿಕ್ಷಕನ ನೇತೃತ್ವದಲ್ಲೇ ಗುಂಡು-ತುಂಡಿನ …
Read More »ಒಂದೂರಿನ ಶವ ಮತ್ತೊಂದು ಊರಲ್ಲಿ ………
ಮಂಡ್ಯ: ಮಹಾಮಾರಿ ಕೊರೊನಾದಿಂದ ಜನರು ಈಗಾಗಲೇ ಭಯಭೀತರಾಗಿದ್ದಾರೆ. ಇದೀಗ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿದ್ದಾರೆ. ನಾಗರಾಜು (50) ಸಾವನ್ನಪ್ಪಿರುವ ವ್ಯಕ್ತಿ. ನಾಗರಾಜು ಮೂಲತಃ ಟಿ.ನರಸಿಪುರ ತಾಲೂಕಿನ ಮುಸುಕನಕೊಪ್ಪಲು ಗ್ರಾಮದವರು. ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹಚ್ಚಾಗುತ್ತಿದೆ. ಇದರಿಂದ ಗಾಬರಿಗೊಂಡು ನಾಗರಾಜು ಮಂಗಳವಾರ ಬೆಂಗಳೂರಿನಿಂದ ಹೊರಟ್ಟಿದ್ದಾರೆ. ಆದರೆ ತಮ್ಮ ಗ್ರಾಮಕ್ಕೆ ಹೋಗುವಷ್ಟಲ್ಲಿ ಕತ್ತಲಾಗುತ್ತದೆ ಎಂದು …
Read More »ಬಿಎಲ್ ಸಂತೋಷ್ ಅವರ ವಿರುದ್ಧಕಿಡಿಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್
ಬೆಂಗಳೂರು: ಬಿಜೆಪಿ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯನ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿಯೇ ತಿರುಗೇಟು ನೀಡಿದ್ದಾರೆ. ಬಿಎಲ್ ಸಂತೋಷ್ ಅವರ ವಿರುದ್ಧ ಟ್ವೀಟ್ ಮೂಲಕವೇ ಕಿಡಿಕಾರಿದ್ದ ಸಿದ್ದರಾಮಯ್ಯ, ಚೀನಾ ವಿಚಾರದ ಬಗ್ಗೆ ಮಾತನಾಡಲು ಸಂತೋಷ್ ಯಾರು? ಸಂತೋಷ್ ಅವರು ಸಿಎಂ ಯಡಿಯೂರಪ್ಪಗೆ ಶಹಭಾಸ್ ಗಿರಿ ನೀಡಿದ್ದು ಮನಸ್ಸಿನಿಂದಲೋ ಇಲ್ಲ ನಾಲಿಗಿಯಿಂದಲೋ ಎಂದು ಪ್ರಶ್ನಿಸಿದ್ದರು. …
Read More »ನಾಲ್ಕು ತಿಂಗಳ ಬಳಿಕ ಟಿವಿ ಪರದೆಯ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನೋಡುವ ಅವಕಾಶ
ನವದೆಹಲಿ: ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಟಿವಿ ಪರದೆಯ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನೋಡುವ ಅವಕಾಶ ಲಭಿಸಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಟೂರ್ನಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಟದ ನಿಯಮಗಳಲ್ಲಿ ಕೆಲ ಮಧ್ಯಂತರ ಬದಲಾವಣೆಗಳನ್ನು ಮಾಡಿ ಮಾಹಿತಿ ನೀಡಿದೆ. ಪಂದ್ಯದ ವೇಳೆ ಚೆಂಡು ಹೊಳೆಯುವಂತೆ ಮಾಡಲು ಲಾಲಾರಸ(ಎಂಜಲು) ಹಾಕುವುದನ್ನು ನಿಷೇಧಿಸಿದೆ. ಅಲ್ಲದೇ ಅಂತಾರಾಷ್ಟ್ರೀಯ ಟೂರ್ನಿಗಳ …
Read More »ಕಾರ್ಪೊರೇಟರ್ ಓರ್ವರಿಗೂ ಕೋವಿಡ್-19 ಪಾಸಿಟಿವ್ ದೃಢ……….
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕಾರ್ಪೊರೇಟರ್ ಓರ್ವರಿಗೂ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕುಂಜತ್ತಬೈಲ್ ದಕ್ಷಿಣ 15ನೇ ವಾರ್ಡಿನ ಕಾರ್ಪೊರೇಟರ್ ಸುಮಂಗಲಾ ರಾವ್ ಅವರಿಗೆ ಇಂದು ಪಾಸಿಟಿವ್ ಪತ್ತೆಯಾಗಿದೆ. ಈ ಬಗ್ಗೆ ಸ್ವತಃ ಸುಂಮಗಲಾ ರಾವ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಕಿದ್ದು, ತಮ್ಮ ಪತಿಗೂ ಪಾಸಿಟಿವ್ ಆಗಿದ್ದು ಗುಣಮುಖರಾಗುತ್ತಿದ್ದೇವೆ ಎಂದಿದ್ದಾರೆ. https://youtu.be/ZwocKpMtUVY ಕಳೆದ ಕೆಲ ದಿನದ …
Read More »ವಿಜಯ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟ್ಟಿಸಿದ್ದ ಸುಶೀಲ್ ಅವರು ಆತ್ಮಹತ್ಯೆಗೆ ಶರಣರಾಗಿದ್ದಾರೆ
ಬೆಂಗಳೂರು: ಸ್ಯಾಂಡಲ್ವುಡ್ ಉದಯೋನ್ಮುಖ ನಟ, ದುನಿಯಾ ವಿಜಯ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟ್ಟಿಸಿದ್ದ ಸುಶೀಲ್ ಅವರು ಆತ್ಮಹತ್ಯೆಗೆ ಶರಣರಾಗಿದ್ದಾರೆ ಎನ್ನಲಾಗಿದೆ. ಸುಶೀಲ್ ಸಾವಿನ ಬಗ್ಗೆ ದುನಿಯಾ ವಿಜಯ್ ಫೇಸ್ ಬುಕ್ ನಲ್ಲಿ ಕಂಬನಿ ಮಿಡಿದಿದ್ದಾರೆ. ‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡ್ತಿದ್ರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ …
Read More »