Breaking News

ಬೆಂಗಳೂರು-ಬೆಳಗಾವಿ ರೈಲು ವೇಳಾಪಟ್ಟಿ ಬದಲಾವಣೆ

ಬೆಂಗಳೂರು: ಬೆಂಗಳೂರು-ಬೆಳಗಾವಿ-ಬೆಂಗಳೂರು ನಡುವೆ ಸಂಚಾರ ನಡೆಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಜೂನ್ 13ರಿಂದಲೇ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ. ವಾರದಲ್ಲಿ ಮೂರು ದಿನ ಬೆಂಗಳೂರು-ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ರೈಲು ರೈಲು ಸಂಖ್ಯೆ 06598 ಬೆಳಗಾವಿಯಿಂದ ಬೆಳಗ್ಗೆ 8 ಗಂಟೆಗೆ ಪ್ರತಿ ಮಂಗಳವಾರ, ಗುರುವಾರ …

Read More »

ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಹೊಸ ಆಶಾಕಿರಣ ಡಿ.ಕೆ.ಶಿವಕುಮಾರ ಪ್ರಮಾಣ ಎಂದು?

ಬೆಂಗಳೂರು – ಭರ್ಜರಿಯಾಗಿಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಉತ್ಸಾಹದಲ್ಲಿರುವ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ ಭಾನುವಾರ ಮೊದಲ ಹಂತದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಭಾನುವಾರ ಬೆಂಗಳೂರಿನ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಹೋಮ, ಹವನ ನಡೆಯಲಿದೆ. ತಮ್ಮ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಗೆ ಯಾವುದೇ ರೀತಿಯ ವಿಘ್ನಗಳು ಎದುರಾಗದಿರಲಿ ಎಂದು ಮತ್ತು ಕಾಂಗ್ರೆಸ್ ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಗೆ ತಲುಪಲಿ ಎನ್ನುವ ಆಶಯದೊಂದಿಗೆ ಹೋಮ, ಹವನ ನಡೆಯಲಾಗುತ್ತಿದೆ. ಈಗಾಗಲೆ ಹೋಮ ಕುಂಡಗಳು …

Read More »

ಪೌಷ್ಟಿಕ ಆಹಾರ ಕ್ರಮದಲ್ಲಿ ಬದಲಾವಣೆ ತರಲು ಸತತ ಪ್ರಯತ್ನ

  ಬೆಂಗಳೂರಿನ ವಿಕಾಸಸೌಧದ ಕಛೇರಿಯಲ್ಲಿ, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪೌಷ್ಟಿಕ ಆಹಾರದ ಕುರಿತು ಸುದೀರ್ಘವಾಗಿ ಚರ್ಚಿಸಿ, ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಯಿತು. ರಾಯಚೂರು, ಯಾದಗಿರಿ, ಕಲಬುರ್ಗಿ , ಬೀದರ ಜಿಲ್ಲೆಯಲ್ಲಿ ಸತತವಾಗಿ ಮಕ್ಕಳು, ಗರ್ಭಿಣಿಯರು ಹಾಗೂ ಕಿಶೋರಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಅಪೌಷ್ಟಿಕತೆ ನಿವಾರಿಸಲು ಚರ್ಚಿಸಲಾಯಿತು ಹಾಗೂ ರಾಜ್ಯದಲ್ಲಿ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ, ಸದ್ಯ ಅಂಗನವಾಡಿ ಕೆಂದ್ರಗಳಲ್ಲಿ ನೀಡುತ್ತಿರುವ ಆಹಾರ ಕ್ರಮದಲ್ಲಿ ಬದಲಾವಣೆ ತರಲಾಗುವುದು. ಈಗಾಗಲೇ ಪರಿಣಿತರೊಂದಿಗೆ ಚರ್ಚಿಸಿದ್ದು, …

Read More »

ಧರ್ಮಸ್ಥಳ: ಜೂ. 21ರಂದು ದೇವರ ದರ್ಶನ ಬದಲಾವಣೆ

ಬೆಳ್ತಂಗಡಿ: ಈ ವರ್ಷದ ಮೊದಲ ಸೂರ್ಯಗ್ರಹಣ ನಡೆಯುವ ಜೂ. 21ರಂದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಜೂ.21ರ ಬೆಳಗ್ಗೆ 5.30ರಿಂದ 9ರ ವರೆಗೆ ದೇವರ ದರ್ಶನ ಅವಕಾಶವಿದೆ. ಬೆಳಗ್ಗೆ 6ಕ್ಕೆ ದೇವರಿಗೆ ಅಭಿಷೇಕ ಪ್ರಾರಂಭಗೊಂಡು 9.30ಕ್ಕೆ ಮಹಾಪೂಜೆ ಜರುಗಲಿದೆ. ಆ ಬಳಿಕ ಸಂಜೆ 4 ಗಂಟೆಗೆ ದೇವಸ್ಥಾನ ಬಾಗಿಲು ತೆರಯಲಿದ್ದು ರಾತ್ರಿ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ …

Read More »

ನಟಿ ರಮ್ಯಾ ಕೃಷ್ಣ ಕಾರಿನಲ್ಲಿ 96 ಬಿಯರ್​, 8 ಲಿಕ್ಕರ್​ ಬಾಟಲಿ ಪತ್ತೆ; ವಶಪಡಿಸಿಕೊಂಡ ಪೊಲೀಸರು

ಕನ್ನಡ, ತಮಿಳು, ತೆಲುಗಿನ ಅನೇಕ ಸಿನಿಮಾದಲ್ಲಿ ನಟಿಸಿ ಖ್ಯಾತಿಗಳಿಸಿರುವ ರಮ್ಯಾ ಕೃಷ್ಣ ಅವರ ಕಾರಿನಲ್ಲಿ ಮದ್ಯದ ಬಾಟಲಿ ಸಿಕ್ಕಿದ್ದು, ತಮಿಳುನಾಡಿನ ಕಾನತ್ತೂರು ಪೊಲೀಸರು ವಶಕೊಂಡಿರುವ ಘಟನೆ ನಡೆದಿದೆ. ರಮ್ಯಾ ಕೃಷ್ಣ ಮತ್ತು ಅವರ ತಂಗಿ ವಿನಯ​ ಕೃಷ್ಣ ತಮ್ಮ ಇನೋವಾ ಕಾರಿನಲ್ಲಿ ಮಹಾಬಲಿಪುರಂನಿಂದ ಹಿಂತಿರುಗುತ್ತಿದ್ದರು.  ಮುತ್ತುಕಾಡು ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿ 96 ಬಿಯರ್​ ಬಾಟಲ್ ಸೇರಿದಂತೆ 8 ಲಿಕ್ಕರ್​ ಬಾಟಲಿ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. …

Read More »

ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಯ್ತು ಎಣ್ಣೆ ಪಾರ್ಟಿ..!

ಹಾಸನ ; ಮದ್ಯದ ಅಮಲು ಮನುಷ್ಯ ರನ್ನು ಯಾವ ರೀತಿ ದಿಕ್ಕುತಪ್ಪಿಸುತ್ತದೆ ಹಾಗೂ ಜೀವಕ್ಕೆ ಎರವಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ . ಅದೇ ರೀತಿ ಇಂದು ಮದ್ಯದ ಮತ್ತಿನಲ್ಲಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆಗೈದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದ ಪ್ರವೀಣ್ ಕೊಲೆಯಾದ ಯುವಕ. ಅದೇ ಗ್ರಾಮದ ಸಂತೋಷ್ ಹತ್ಯೆಗೈದ …

Read More »

ಬಡ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ ಸುದೀಪ್: ಶಿಕ್ಷಣಕ್ಕೆ ನೆರವು

ನಟ ಕಿಚ್ಚ ಸುದೀಪ್ ತಮ್ಮ ನಟನೆಯ ಜೊತೆ-ಜೊತೆಗೆ ಸಾಮಾಜಿಕ ಕಾರ್ಯಗಳಿಂದಲೂ ಖ್ಯಾತರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ಇರುತ್ತಾರೆ. ಇದೀಗ ಬಡ ಹೆಣ್ಣು ಮಗುವೊಂದಕ್ಕೆ ಓದಿಗೆ ಸಹಾಯ ಒದಗಿಸಿದ್ದಾರೆ ಕಿಚ್ಚ ಸುದೀಪ್. ಬೆಂಗೂರಿನ ನಾಗದೇವನಹಳ್ಳಿಯ ನಿವಾಸಿ ಆರನೇ ತರಗತಿ ಓದುತ್ತಿರುವ ಕನಿಶಾ ಗೆ ಶಾಲೆಯ ಫೀಸು ತುಂಬಲು ಕಷ್ಟವಾಗಿತ್ತು. ಅಪ್ಪನಿಲ್ಲದೆ ತಾಯಿಯ ಆರೈಕೆಯಿಂದ ಬೆಳೆಯುತ್ತಿರುವ ಕನಿಶಾ ಸಂದೀಪಿನ ಶಾಲೆಯಲ್ಲಿ ಕಲಿಯುತ್ತಿದ್ದರು.ಆದರೆ ಲಾಕ್‌ಡೌನ್‌ನಿಂದಾಗಿ ತಾಯಿಗೆ ಸೂಕ್ತ ಸಮಯದಲ್ಲಿ ಹಣ ದೊರಕದೆ ಶಾಲೆಯ ಫೀಸು …

Read More »

ಟ್ವೀಟ್ ಮೂಲಕ ತಿಳಿಸಿದ ಅಫ್ರಿದಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಆಟಗಾರ, ಶಾಹಿದ್ ಅಫ್ರಿದಿ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿದೆ. ಈ ಕುರಿತು ಖುದ್ದು ಶಾಹಿದ್ ಆಫ್ರಿದಿ ಅವರು ಟ್ವೀಟ್ ಮಾಡಿದ್ದಾರೆ.   “ಗುರುವಾರದಿಂದ ನನ್ನ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು, ನನ್ನ ದೇಹ ಬಹಳ ನೋವನ್ನು ಅನುಭವಿಸುತ್ತಿತ್ತು. ಟೆಸ್ಟ್ ಮಾಡಿಸಿದಾಗ, ಕೊರೊನಾ ಸೋಂಕು ಪಾಸಿಟಿವ್ ಎಂದು ರಿಪೋರ್ಟ ಬಂದಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಆದ ಶಾಹಿದ್ ಅಫ್ರಿದಿ.

Read More »

ವರ್ಷವಾದರೂ ದೊರಕದ ಪರಿಹಾರ: ಹೋರಾಟದ ಎಚ್ಚರಿಕೆ ನೀಡಿದ ಬೆಳಗಾವಿಯ ಪ್ರವಾಹ ಸಂತ್ರಸ್ತರು

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಬಂದು ವರ್ಷ ಕಳೆದರೂ ಸರಕಾರದಿಂದ 9 ಸಾವಿರಕ್ಕೂ ಹೆಚ್ಚಿನ ಸಂತ್ರಸ್ತ ಕುಟುಂಬಗಳಿಗೆ ಇಲ್ಲಿಯವರೆಗೂ ಯಾವುದೇ ಪರಿಹಾರ ದೊರಕಿಲ್ಲ ಎಂದು ತಿಳಿದುಬಂದಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಪ್ರವಾಹ ಬಂದು ಅಪಾರ ಹಾನಿ ಸಂಭವಿಸಿತ್ತು. ಆ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ತಾಂತ್ರಿಕ ಸಮಸ್ಯೆ ಕಾರಣ ನೀಡಿ ಪರಿಹಾರ ಮಂಜೂರು ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಡಳಿತದ ಅಧಿಕೃತ ಅಂಕಿ-ಅಂಶಗಳು ಹೇಳುತ್ತಿವೆ. ಮನೆ …

Read More »

1984 ಅಮೃತಸರ ಬ್ಲೂ ಸ್ಟಾರ್ ಆಪರೇಷನ್ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಸೋಮಣ್ಣ ವಿಧಿವಶ

ಮಡಿಕೇರಿ: 1984 ಅಮೃತಸರ ಬ್ಲೂ ಸ್ಟಾರ್ ಆಪರೇಷನ್ ನೇತೃತ್ವ ವಹಿಸಿದ್ದ ಅಂದಿನ ಭಾರತೀಯ ಸೇನಾ ಪಡೆಯ ಉಪ ಮುಖ್ಯಸ್ಥರಾಗಿದ್ದ ಕೊಡಗಿನ ಹೆಮ್ಮೆಯ ಕೋದಂಡ ಲೆ.ಜ. ಸೋಮಣ್ಣ (92) ವಿರಾಜಪೇಟೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಉತ್ತಮ ಹೆಸರು ಪಡೆದಿದ್ದ ಸೋಮಣ್ಣ ಅವರು ತಮ್ಮ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ. ಮೃತ ಸೋಮಣ್ಣ ಅವರು ಪತ್ನಿ ಸೇರಿದಂತೆ ಅಮೇರಿಕಾದಲ್ಲಿರುವ ಪುತ್ರ ಡಾ.ನಿವೇದ್ ಹಾಗೂ ಪುತ್ರಿ ಮುಕ್ಕಾಟಿರ ಶರನ್ ಅವರನ್ನು ಅಗಲಿದ್ದಾರೆ. ಡೆಪ್ಯುಟಿ ಚೀಫ್ …

Read More »