Breaking News

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ

ಬೆಂಗಳೂರು: 7ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದಿಲ್ಲ. ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಮಾಡುವ ಮೂಲಕ ಮಗುವಿನ ಮೌಲ್ಯಮಾಪನ ಮಾಡಲಾಗುವುದು. ಈ ಮೌಲ್ಯಮಾಪನ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಪಾಸ್ ಅಥವಾ ಫೇಲ್ ಎಂದು ಮಾಡಲಾಗುವುದಿಲ್ಲ. …

Read More »

ಪ್ರಚೋದನಕಾರಿ ಹೇಳಿಕೆ ನೀಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ

ಬೆಳಗಾವಿ: ನಿರ್ದಿಷ್ಟ ಪಕ್ಷ ಹಾಗೂ ಸಮುದಾಯವನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‍ನ ಕಾರ್ಯಕರ್ತರು ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮನಬಂದಂತೆ ಮಾತನಾಡಿದ್ದಾರೆ. ಇತ್ತೀಚಿಗೆ ಸಿಎಎ ಬೆಂಬಲಿಸಿ ನಡೆಸಿದ ಜಾಗೃತಿ ಸಭೆಯಲ್ಲಿ …

Read More »

ವಾಲ್ಮೀಕಿ ಮೀಸಲಾತಿ ವಿಚಾರಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ:ಪ್ರಸನ್ನಾನಂದ ಪುರಿ ಸ್ವಾಮೀಜಿ

ಸಿ. ಎಂ. ಬಿಎಸ್​ವೈ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಸಭೆ/ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಚಿವ ಶ್ರೀರಾಮುಲು, ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ,ಸೇರಿದಂತೆ ಇತರರು ಭಾಗಿ/ಮೀಸಲಾತಿ ಕುರಿತು ಸಿಎಂ ಸ್ಪಂದಿಸಿದ್ದಾರೆ ಎಂದ ಶ್ರೀಗಳು ಇಂದು ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದರು. ಸಿಎಂ ಗೃಹ ಕಚೇರಿಯಲ್ಲಿ ನಡೆದ …

Read More »

ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿ ಉದ್ಘಾಟಿಸಿದರು

  ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸರಕಾರಿ ಉರ್ದು ಪ್ರೌಢ ಶಾಲೆ ರಬಕವಿಯಲ್ಲಿ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿಯವರು ರಿಬ್ಬನ್ ಕಟ್ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಶಾಸಕರಾದ ಸಿದ್ದು ಸವರಿಯವರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನ್ಯಾಮಗೌಡ ಸರ್‌ ಅವರಿಗೆ, ಶಿಕ್ಷಣ ಸಂಯೋಜಕರಾದ ಶ್ರೀಶೈಲ ಬುರ್ಲಿಯವರಿಗೆ ಸನ್ಮಾನ ಮಾಡುವುದರ ಮೂಲಕ …

Read More »

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಫೆ.8ಕ್ಕೆ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮಾಹಿತಿ ನೀಡಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಫೆ.8ಕ್ಕೆ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದಾ ಅವರು, ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಸ್ಥಾನಗಳಿದ್ದು, ಫೆಬ್ರವರಿ 8 ರಂದು ಮತದಾನ ನಡೆಯಲಿದ್ದರೆ, ಫೆಬ್ರವರಿ 11 ರಂದು ಫಲಿತಾಂಶ ಹೊರಬೀಳಲಿದೆ. ಇಂದಿನಿಂದಲೇ ನೀತಿ ಸಂವಿತೆ ಜಾರಿಯಾಗಿದೆ ಎಂದರು. ಒಟ್ಟು 1,46,92,136 ಜನರು ಮತದಾನದ ಹಕ್ಕು ಹೊಂದಿದ್ದಾರೆ. 13,750 ಮತಗಟ್ಟೆಗಳಲ್ಲಿ ಮತದಾನ …

Read More »

ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರೀಕ್ಷೆಯಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ಕಾತರದಿಂದ ಕಾಯುತ್ತ, ನಿರೀಕ್ಷೆಯಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಯಶ್ ಹುಟ್ಟುಹಬ್ಬದ ದಿನದಂದು ಟೀಸರ್ ಬದಲು ಚಿತ್ರದ ಎರಡನೇ ಫೋಸ್ಟರ್ ಬಿಡಿಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಹೀಗಾಗಿ ಈ ದನದಂದು ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಗಿಫ್ಟ್ ನೀಡಲಿದೆ ಎಂಬ ಸುದ್ದಿಯಾಗಿತ್ತು. ಆದರೆ …

Read More »

ಹುಬ್ಬಳ್ಳಿ- ಧಾರವಾಡ ಇಸ್ಕಾನ್‌ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ.

  ವೈಕುಂಠ ಏಕಾದಶಿ ಹಿನ್ನೆಲೆ. ಹುಬ್ಬಳ್ಳಿ- ಧಾರವಾಡ ಇಸ್ಕಾನ್‌ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ.   ರಾಯಾಪುರದ ಇಸ್ಕಾನ್‌ ದೇವಸ್ಥಾನದಲ್ಲಿವೈಕುಂಠ ಏಕಾದಶಿ ಸಂಭ್ರಮ ಸ್ವರ್ಣ ಬಣ್ಣ ಲೇಪಿತ ಭವ್ಯ ವೈಕುಂಠ ದ್ವಾರ ಪ್ರತಿಷ್ಠಾಪಣೆ. ಬಣ್ಣಬಣ್ಣದ ಸುಗಂಧಿತ ಪುಷ್ಪಗಳಿಂದ ಶೃಂಗಾರ. ಭಗವಂತನ ಒಂದು ಲಕ್ಷ ನಾಮ ಜಪಿಸುವ ಲಕ್ಷಾರ್ಚನೆ ಸೇವೆ ಆಯೋಜನೆ. ಶ್ರೀನಿವಾಸ ಗೋವಿಂದನ ಪ್ರತಿಮೆಗೆ ವಿಶೇಷ ಪೂಜೆ, ಪುನಸ್ಕಾರ. ಮಂಗಳಕರವಾದ ವೆಂಕಟೇಶ್ವರ ಹೋಮ‌ ಆಯೋಜನೆ. ಭಜನೆ, ನೃತ್ಯ, ನಾಟಕ, …

Read More »

ಜೆ ಎನ್ ಯು ವಿಧ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ. ಹುಬ್ಬಳ್ಳಿಯಲ್ಲಿ ಸಚಿವ ಜೋಶಿ ಹೇಳಿಕೆ.

  ಜೆ ಎನ್ ಯು ವಿಧ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ. ಹುಬ್ಬಳ್ಳಿಯಲ್ಲಿ ಸಚಿವ ಜೋಶಿ ಹೇಳಿಕೆ. ಜೆಎನ್ ಯು ಅಲ್ಲಿ ನಡೆದ ಘಟನೆಯನ್ನು ಬಿಜೆಪಿ ಪಾರ್ಟಿ ತೀವ್ರವಾಗಿ ಖಂಡಸುತ್ತದೆ. ಬಿಜೆಪಿ ಈ ಘಟನೆಯ ಬಗ್ಗೆ ತನಿಖೆ ಕೈಗೊಳ್ಳುತ್ತೆ. ಜೆಎಮ್ ಯು ನಲ್ಲಿ ನಡೆಯುತ್ತಿರುವ ಉಳಿದ ಘಟನೆ ಬಗ್ಗೆ ಸಮಾಜ ಹಾಗೂ ಮಾಧ್ಯಮ ಜಾಗೃತಿ ಮೂಡಿಸಬೇಕಿದೆ. ಜೆಎನ್ ಯು ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ …

Read More »

ಅಭಿಮಾನಿಗಳಿಂದ ಶಾಸಕರಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ; ಮಕ್ಕಳಿಗೆ ಸೇಬು ವಿತರಣೆ..

  ಬಾಕ್ಸ್ : ಏಳಪಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ರಮೇಶ ಜಾರಕಿಹೊಳಿ/ಅಭಿಮಾನಿಗಳಿಂದ ಸೇಬಿನ ಹಾರ ಹಾಕಿ ಗ್ರಾಮಕ್ಕೆ ಸ್ವಾಗತ/ಹಾರಕ್ಕೆ ಬಳಸಿದ ಹಣ್ಣುಗಳು ವಸತಿ ಶಾಲೆ ಮಕ್ಕಳಿಗೆ ವಿತರಣೆ ಕೆಲ ದಿನಗಳ ಹಿಂದೆ ಗೋಕಾಕ ಮತಕ್ಷೇತ್ರದ ಏಳಪಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಅಭಿಮಾನಿಗಳು ಸೇಬಿನ ಹಾರ ಹಾಕಿ ಸ್ವಾಗತಿಸಿ ಗ್ರಾಮಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡಿದ್ದರು.ನಂತರ ಭವ್ಯ ಮೆರವಣಿಗೆ ಮೂಲಕ ಗ್ರಾಮದ ದೇವಸ್ಥಾನ ಗಳಿಗೆ ಭೇಟಿ ನೀಡಿದ …

Read More »

ಆಸ್ಟ್ರೇಲಿಯಾದಲ್ಲಿ ತಿಂಗಳ ಹಿಂದೆ ಆರಂಭವಾಗಿರುವ ಕಾಡ್ಗಿಚ್ಚು ಇನ್ನೂ ಹತೋಟಿಗೆ ಬಂದಿಲ್ಲ

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ತಿಂಗಳ ಹಿಂದೆ ಆರಂಭವಾಗಿರುವ ಕಾಡ್ಗಿಚ್ಚು ಇನ್ನೂ ಹತೋಟಿಗೆ ಬಂದಿಲ್ಲ. ದಿನದಿಂದ ದಿನಕ್ಕೆ ಕಾಡ್ಗಿಚ್ಚು ಹೆಚ್ಚಾಗುತ್ತಿದ್ದು, ಸಂತ್ರಸ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಡುವೆ ಭಾರತೀಯ ಮೂಲದ ದಂಪತಿಯೊಂದು ಕಾಡ್ಗಿಚ್ಚು ಸಂತ್ರಸ್ತರಿಗೆ ಉಚಿತ ಉಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಮಲಜೀತ್ ಕೌರ್ ಮತ್ತು ಆಕೆಯ ಪತಿ ಕನ್ವಲ್ ಜೀತ್ ಕಳೆದ ಕೆಲವು ದಿನಗಳಿಂದ ಉಚಿತ ಊಟ ನೀಡುತ್ತಿದ್ದಾರೆ. ವಿಕ್ಟೊರಿಯಾದಲ್ಲಿ ದೆಸಿ ಗ್ರಿಲ್ ರೆಸ್ಟೋರೆಂಟ್ ನಡೆಸುತ್ತಿರುವ ದಂಪತಿ ತಮ್ಮ ಹೋಟೆಲ್ …

Read More »