ಬಳ್ಳಾರಿ: ಕೊರೊನಾ ಸೋಂಕಿತ ಮೃತದೇಹವನ್ನು ಮಳೆಯಲ್ಲೇ ನೆನೆಯಲು ಬಿಟ್ಟು ಬಳ್ಳಾರಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತೊಮ್ಮೆ ಅಮಾನವೀಯವಾಗಿ ನಡೆದುಕೊಂಡಿದೆ. ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಆರು ಜನರು ಸಾವನ್ನಪ್ಪಿದ್ದರು. ಇದರಲ್ಲಿ ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲೂ ಓರ್ವ ಸೋಂಕಿತ ಮೃತಪಟ್ಟಿದ್ದರು. ಈ ವೇಳೆ ಆತನ ಶವವನ್ನು ಆಸ್ಪತ್ರೆಯ ಆವರಣದಲ್ಲಿ ನೆನೆಯಲು ಬಿಟ್ಟು ಆಸ್ಪತ್ರೆಯ ವೈದ್ಯರ ಮತ್ತೊಂದು ಎಡವಟ್ಟು , ಈ ಆಸ್ಪತ್ರೆಗೆ ಪ್ರತಿನಿತ್ಯ ಗರ್ಭಿಣಿಯರು ಸೇರಿದಂತೆ ಅನೇಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. …
Read More »ಎಸ್ಎಸ್ಎಲ್ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು……….
ಕೊಪ್ಪಳ: ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವೇಳೆ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದ್ದು, ಇದೀಗ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತಂಕ ಎದರಾಗಿದೆ. ಜಿಲ್ಲೆಯ ಕಾರಟಗಿ ನಗರದ ಖಾಸಗಿ ಶಾಲಾ ಪರೀಕ್ಷಾ ಕೇಂದ್ರದಲ್ಲಿನ ವಿದ್ಯಾರ್ಥಿನಿಗೆ ಸೋಂಕು ದೃಢವಾಗಿದೆ. ಕಳೆದ ಎರಡು ವಿಷಯಗಳ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿನಿಗೆ ಇಂದು ಸೋಂಕು ದೃಢವಾಗಿದೆ. ಈ ಹಿನ್ನಲೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಸಮಯದಲ್ಲಿಯೇ ವಿದ್ಯಾರ್ಥಿನಿಗೆ ಕೊರೊನಾ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ರಾಯಚೂರು …
Read More »ನನಸಾಯ್ತು ‘ಕನಕಪುರ ಬಂಡೆ’ಯ ದಶಕಗಳ ಕನಸು- ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಡಿಕೆಶಿ ಪಟ್ಟಾಭಿಷೇಕ
ಬೆಂಗಳೂರು: ಡಿ.ಕೆ. ಶಿವಕುಮಾರ್ ಕೊನೆಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಘೋಷಣೆಯಾದ ಬಳಿಕ ಹಲವಾರು ಅಡೆತಡೆಗಳ ಬಳಿಕ ಇಂದು ಬೆಳಗ್ಗೆ 11.30ಕ್ಕೆ ಪದಗ್ರಹಣ ಸ್ವೀಕರಿಸಲಿದ್ದಾರೆ. ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅಂದ್ರೆ ಡಿಕೆಶಿ. ಕಾಂಗ್ರೆಸ್ಸಿನ ಪ್ರಭಾವಿ ನಾಯಕರಲ್ಲಿ ಒಬ್ಬರು. ಕನಕಪುರದಿಂದ ಸತತವಾಗಿ ಗೆಲ್ಲುತ್ತಲೇ ವಿಧಾನಸೌಧಕ್ಕೆ ಎಂಟ್ರಿ ಕೊಡ್ತಿರೋ ಡಿಕೆಶಿ, ಇದೀಗ ಕಾಂಗ್ರೆಸ್ಸಿನ ಹೆಮ್ಮರವಾಗಿ ಬೆಳೆದಿದ್ದಾರೆ. ಪಕ್ಷದ ಅಧ್ಯಕ್ಷ ಗಾದಿಗೇರುವ ಡಿಕೆಶಿ ದಶಕಗಳ ಕನಸು ಈಗ ನನಸಾಗ್ತಿದೆ. ಹಲವಾರು …
Read More »ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಗೆ ಬಿಡದೇ ಕಾಡುತ್ತಿದೆ.
ಬೆಳಗಾವಿ: ನಗರದಲ್ಲಿ ಕೊರೊನಾ ಸೋಂಕಿಗೆ 74 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಆ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದೆ. ಗುಡ್ ಶೆಡ್ ರಸ್ತೆ ನಿವಾಸಿಯಾಗಿರುವ 74 ವರ್ಷದ ವ್ಯೆಕ್ತಿಗೆ ನಿನ್ನೆ ಮಧ್ಯಾಹ್ನ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸ್ಸು ಮಾಡಿದ್ದರು,, …
Read More »ಬಡ್ಡಿ ಹೆಚ್ಚು ಪಡೆದುಕೊಳ್ಳುತ್ತಿದ್ದರೆ ಎಂದು ಆರೋಪಿಸಿ ಬ್ಯಾಂಕಗಳಿಗೆ ಮುತ್ತಿಗೆ ಹಾಕಿ ಗೋಕಾಕ ರೈತ ಸಂಘಟನೆಯಿಂದ ಪ್ರತಿಭಟನೆ…!
ಗೋಕಾಕ :ನಿಗದಿ ದರಕಿಂತ ಹೆಚ್ಚು ಬಡ್ಡಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಜಾಜ್ ಪೈನಾನ್ಸ್ ಲಿಮಿಟೆಡ್ ಹಾಗೂ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸೇರಿದಂತೆ ಗೋಕಾಕನ ವಿವಿಧ ಬ್ಯಾಂಕ್ ಕಚೇರಿಯ ಮುಂದೆ ರೈತ ಸಂಘಟನೆಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಒಂದು ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ನಡೆದಿದೆ… ಸುಮಾರು ವರ್ಷಗಳ ಹಿಂದೆ ಸಾಗಣ್ಣಾ ಹಡಿಗನಾಳ ಹಾಗೂ ಈರಣ್ಣಾ ಹಡಿಗನಾಳ ಅನಾರೋಗ್ಯದಿಂದ ಸಾವನ್ನಪ್ಪಿದು ಅವರ ಸಾವಿಗೆ ಬ್ಯಾಂಕ್ …
Read More »ಕ್ವಾರಂಟೈನ್ ನಿಯಮಗಳನ್ನು ಗಾಳಿಗೆ ತೂರಿದ ಬೆಳಗಾವಿ ಜಿಲ್ಲೆಯ ಜನರ ಮೇಲೆ ಪ್ರಕರಣ ದಾಖಲಿಸಲು ಸೂಚನೆ
ಬೆಳಗಾವಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಬೆಳಗಾವಿ ಜಿಲ್ಲೆಯ 573 ಜನ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲು ಕ್ವಾರಂಟೈನ್ ನೊಡಲ್ ಅಧಿಕಾರಿಗಳು ಜಿಲ್ಲೆಯ ಉಪವಿಭಾಗಾಧಿಕಾರಿಗಳುಮತ್ತು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ಮತ್ತು ಪಕ್ಕದ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಬಂದಿರುವ 573 ಜನ ಹೋಮ್ ಕ್ವಾರಂಟೈನ್ ನಲ್ಲಿ ಇರದೇ ಸುತ್ತಾಡಿದ್ದು ಇವರನ್ನು ಟ್ರ್ಯಾಕ್ ಮಾಡಿರುವ ಕ್ವಾರಂಟೈನ್ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿರುವ 573 ಜನರ ಪಟ್ಟಿ ಮಾಡಿ ಬೆಳಗಾವಿ ಜಿಲ್ಲೆಯ ಎಲ್ಲ ಉಪ …
Read More »ಕೊರೊನಾ ಸೋಂಕಿರುವುದನ್ನು ಮುಚ್ಚಿಟ್ಟ ವರ- ಮದ್ವೆಯಾದ 5 ದಿನಕ್ಕೆ ಸಾವು
ಕಾರವಾರ: ಮದುವೆ ಸಂಭ್ರಮದಲ್ಲಿ ತನಗೆ ಕೊರೊನಾ ಸೋಂಕು ಹರಡಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಮದುಮಗ ವಿವಾಹ ಜರುಗಿದ 5ದಿನಕ್ಕೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಮದುಮಗ ಸದ್ಯ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ನೆಂಟರು ಹಾಗೂ ಕುಟುಂಬಕ್ಕೆ ಸೋಂಕು ಹರಡಲು ಕಾರಣನಾಗಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ ಭಟ್ಕಳದ 26 ವರ್ಷದ ಯುವಕ ತನ್ನ ಮದುವೆ ಸಂಭ್ರಮದಲ್ಲಿದ್ದ. ಈತನಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಇದರಿಂದ ತನ್ನ …
Read More »ಗೋಕಾಕ ತಾಲೂಕಿನ ಘಟಪ್ರಭಾ ನಗರದ 2 ಜನರಿಗೆ ಕೊರೋನಾ ಪಾಸಿಟಿವ್ ಕೇಸ್ ಪತ್ತೆ
ಘಟಪ್ರಭಾ: ಇಷ್ಟು ದಿನ ಸದ್ದಿಲ್ಲದೆ ಶಾಂತವಾಗಿ ನಡೆಯುತ್ತಿದ್ದ ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮದ ಜನಜೀವನ ಅಸ್ತವ್ಯಸ್ಥ ವಾಗುವ ಕಾಲ ಸನ್ನಿಹಿತವಾಗಿದೆ. ಏಕೆಂದರೆ ಬಲ್ಲ ಮೂಲಗಳ ಪ್ರಕಾರ ಘಟಪ್ರಭಾದಲ್ಲಿ ಎರಡು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ* ಪ್ರಾಥಮಿಕ …
Read More »ಕೊರೊನಾ ಎಫೆಕ್ಟ್- ಉಡುಪಿಯಲ್ಲಿ ಭಕ್ತರಿಗೆ ಮುದ್ರಾಧಾರಣೆ ಇಲ್ಲ
ಉಡುಪಿ: ಕೊರೊನಾ ಮಹಾಮಾರಿ ಸೋಂಕು ಉಡುಪಿಯಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ತಪ್ಪಿಸಿದೆ. ಕೃಷ್ಣಮಠದಲ್ಲಿ ಸಾಂಕೇತಿಕವಾಗಿ ತಪ್ತಮುದ್ರಾಧಾರಣೆ ಕಾರ್ಯಕ್ರಮ ನಡೆಸಲಾಗಿದೆ. ಪ್ರಥಮ ಏಕಾದಶಿಯಂದು ಮುದ್ರಾಧಾರಣೆ ನಡೆಸುವುದು ಶತಮಾನಗಳಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಈ ಬಾರಿ ಯಾವುದೇ ಭಕ್ತರಿಗೆ ಮುದ್ರಾಧಾರಣೆ ಮಾಡದೆ ಕೇವಲ ಯತಿಗಳು ಮಾತ್ರ ಪರಸ್ಪರ ಮುದ್ರಾಧಾರಣೆ ಮಾಡಿಸಿಕೊಂಡರು. ಕೊರೊನಾ ಬಂದ ನಂತರ ಲಾಕ್ಡೌನ್ ಘೋಷಣೆಯಾದ ಕ್ಷಣದಿಂದ ಉಡುಪಿ ಕೃಷ್ಣ ಮಠ ಮುಚ್ಚಿದೆ. ರಾಜ್ಯದ ಇತರ ಎಲ್ಲಾ ದೇವಾಲಯಗಳು ತೆರೆದಿದ್ದರೂ ಕೃಷ್ಣಮಠವನ್ನು ತೆರೆಯುವ …
Read More »ಈ ವರ್ಷ ಮುಂಗಾರು ಮಳೆಯಿಲ್ಲದೆ ಕಂಗಾಲಾಗಿದ್ದ ರೈತರ ಪಾಲಿಗೆ ಬೇವು ಈ ವರ್ಷ ಸಿಹಿಯಾಗಿದೆ.
ಕೊಪ್ಪಳ : ಈ ವರ್ಷ ಮುಂಗಾರು ಮಳೆಯಿಲ್ಲದೆ ಕಂಗಾಲಾಗಿದ್ದ ರೈತರ ಪಾಲಿಗೆ ಬೇವು ಈ ವರ್ಷ ಸಿಹಿಯಾಗಿದೆ. ಮುಂಗಾರು ಮಳೆಗಳಲ್ಲಿಯೇ ಬೀಜ ಮಳೆ ಎಂದು ಹೆಸರಾಗಿರುವ ರೋಹಿಣಿ ಮಳೆ ಈ ವರ್ಷ ಕೈ ಕೊಟ್ಟ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಕಂಗಾಲಾಗಿ ಕೈಕಟ್ಟಿ ಕುಳಿತುಕೊಂಡಿರುವ ಈ ಸಂದರ್ಭದಲ್ಲಿ ರೈತರ ಬಾಳೀಗೆ ಸಿಹಿಯಾಗಿ ಬಂದಿದ್ದು, ಬೇವಿನ ಬೀಜ ಎಂದರೆ ತಪ್ಪಾಗಲಾರದು. ಅತ್ಯಂತ ಕಹಿಯಾಗಿರುವ ಮತ್ತು ಔಷಧ ಗುಣಗಳನ್ನು ಹೊಂದಿರುವ ಬೇವು ಮಾತ್ರ (ಬೇವಿನ ಬೀಜ) …
Read More »