ಹಾಸನ: ಕೊರೊನಾ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡ ಪೂಜಾರಿಗಳ ತಂಡ, ನಿಮಗೆ ಆಗದವರು ನಿಮ್ಮ ಜಮೀನಿನಲ್ಲಿ ಹಂದಿ ತಲೆ ಹೂತಿಟ್ಟು ಮಾಟ ಮಾಡಿಸಿದ್ದಾರೆ. ತಲೆಯನ್ನು ನಾವು ಹೊರ ತೆಗೆದು ಮಾಟದಿಂದ ಮುಕ್ತಿ ಕೊಡಿಸುತ್ತೇವೆ ಎಂದು ವಂಚಿಸುತ್ತಿದೆ. ಜಿಲ್ಲೆಯ ಗಾಣಿಗರ ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ತಂಡವನ್ನು ಗ್ರಾಮಸ್ಥರು ಪತ್ತೆಹಚ್ಚಿದ್ದಾರೆ. ದೇವರ ವಿಗ್ರಹದೊಂದಿಗೆ ಆಗಮಿಸಿದ ದಿಲೀಪ್, ತಾನೇ ತಂದಿರುವ ಹಂದಿ ತಲೆಯನ್ನು ಮೊದಲೇ ಹೂತಿಟ್ಟು, ನಂತರ ಅದೇ ಜಾಗದಲ್ಲಿ ಗುಂಡಿ ತೆಗೆಸಿ …
Read More »ಸರಳವಾಗಿ ಸ್ವಾತಂತ್ರ್ಯೋತ್ಸವ ಅಚರಣೆಗೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ
ನವದೆಹಲಿ, ಜು.24-ದೇಶದಾದ್ಯಂತ ಕೊರೊನಾ ವೈರಸ್ ಹಾವಳಿ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಆಗಸ್ಟ್ 15ರ ಸ್ವಾತಂತ್ರೋತ್ಸವ ದಿನಾಚರಣೆ ಸಡಗರ-ಸಂಭ್ರಮಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸುತ್ತೋಲೆಗಳನ್ನು ಹೊರಡಿಸಿ ಅತ್ಯಂತ ಸರಳವಾಗಿ ಮತ್ತು ಜಾಗ್ರತೆಯಿಂದ ರಾಷ್ಟ್ರ ಹಬ್ಬ ಆಚರಿಸುವಂತೆ ತಿಳಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸ್ವಾತಂತ್ರ ದಿನಾಚರಣೆಯಂದು ಅನುಸರಿಸಬೇಕಾದ ಕ್ರಮಗಳ ಕುರಿತು ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಅತಿ ಹೆಚ್ಚು ಜನರು ಸೇರಬಾರದು. ಅತ್ಯಂತ …
Read More »ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಕೊರೋನಾ ಆಸ್ಫೋಟ, ಇಂದು 5007 ಮಂದಿಗೆ ಪಾಸಿಟಿವ್, 110 ಸಾವು..!
ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೋನಾ ಆಸ್ಫೋಟಗೊಂಡಿದ್ದು ಕಳೆದ 24 ಗಂಟೆಯಲ್ಲಿ ಬರೋಬ್ಬರಿ 5007 ಮಂದಿಗೆ ಪಾಸಿಟಿವ್ ಬಂದಿದ್ದು, 110 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಸಂಖ್ಯೆ 85870ಕ್ಕೆ ಏರಿಕೆಯಾಗಿದೆ. ಹಾಗೂ ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1724 ಏರಿಕೆಯಾಗಿದೆ. ಇತ್ತ ರಾಜಧಾನಿ ಬೆಂಗಳೂರಲ್ಲೂ ಸಹ ಮಹಾಮಾರಿ ಅಟ್ಟಹಾಸ ಮುಂದುವರೆದಿದ್ದು ಇಂದು 2267 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಜೊತೆಗೆ 50 ಮಂದಿ …
Read More »ಕೊರೊನಾ ಪರಿಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ.: ಡಾ.ಕೆ.ಸುಧಾಕರ್
ಬೆಂಗಳೂರು: ಕೊರೊನಾ ಪರಿಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ. ಪ್ರಮಾಣಿಕವಾಗಿ ಕೆಲಸ ಮಾಡಿದ್ದೆವೆ ಎಂದರೆ ಭಯವೇಕೆ ? ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸವಾಲು ಹಾಕಿದ್ದಾರೆ. ನಿನ್ನೆ ಸಚಿವ ಸುಧಾಕರ್ ಅವರ ಮಾತಿಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ, ವೆಚ್ಚ ಅಂದರೆ ಏನು ಎಂದು ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿದ್ದೇನಾ..? ನಾನು …
Read More »ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಮುಖ್ಯ ಪೇದೆಯ ಸಾವು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವು
ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಮುಖ್ಯ ಪೇದೆಯ ಸಾವು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವು ತಂದಿದೆ. ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ಮುಖ್ಯ ಪೇದೆ ಗೌರಿಹಳ್ಳಿ ರವಿ (44) ಇಂದು ಮುಂಜಾನೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಆದರೆ ರವಿ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋವಿಡ್ ಸೆಂಟರ್ ನಲ್ಲಿ 14 ದಿನಗಳ …
Read More »ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಪಲ್ಸ್ ಆಕ್ಸಿಮೀಟರ್: ಧಾರವಾಡ ಎಸ್ಪಿ
ಧಾರವಾಡ: ಕೊರೊನಾ ವಿರುದ್ಧ ನಮ್ಮ ಪೊಲೀಸರು ಹೋರಾಡಬೇಕಿದೆ, ಕೆಲಸ ಮಾಡಬೇಕಿದೆ. ಹೀಗಾಗಿ ಮುನ್ನೆಚ್ಚರಿಕಾ ಪರಿಕರಗಳ ಅಗತ್ಯವಿದೆ ಎಂದು ಧಾರವಾಡ ಎಸ್ಪಿ ವರ್ತಿಕಾ ಕಟಿಯಾರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಠಾಣೆಗೆ ಪಲ್ಸ್ ಆಕ್ಸಿಮೀಟರ್ ಕೊಟ್ಟಿದ್ದೇವೆ, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಠಾಣೆಯವರು ಪಲ್ಸ್ ಆಕ್ಸಿಮೀಟರ್ ರೀಡಿಂಗ್ ತೆಗೆಯಬೇಕು ಎಂದು ಹೇಳಿದರು. ಈಗಾಗಲೇ ನಮ್ಮಲ್ಲಿ 8 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ, ಇಬ್ಬರು ಗುಣಮುಖರಾಗಿದ್ದಾರೆ, ನಮ್ಮೊಂದಿಗೆ ಕರ್ತವ್ಯ …
Read More »ಬೆಳಗಾವಿ ಜಿಲ್ಲೆಯಲ್ಲಿ ಇಂದು116 ಜನರಿಗೆ ಸೊಂಕುದೃಡ
ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ 116 ಜನರಿಗೆ ಸೊಂಕು ತಗಲಿದ್ದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಪತ್ತೆಯಾದ 116ಜನ ಸೊಂಕಿತರು ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕಿನವರಾಗಿದ್ದಾರೆ.ಇವತ್ತಿನವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1645 ಕ್ಕೆ ಏರಿಕೆಯಾಗಿದೆ https://youtu.be/tAGGn6JHTPE
Read More »ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. : ಸಚಿವ ಸುರೇಶ ಅಂಗಡಿ
ಬೆಳಗಾವಿ: ಬಿಮ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್ ಸುಟ್ಟವರು ದೇಶದ್ರೋಹಿಗಳು ಅಂತಾ ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ ನೀಡಿದ್ದಾರೆ. ಆ್ಯಂಬುಲೆಸ್ ಗೆಬೆಂಕಿ ಹಚ್ಚಿದ ವಿಚಾರವಾಗಿ ನಗರದ ಕಾಡಾ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಇದರ ಹಿಂದಿರುವವರನ್ನು ಪೊಲೀಸರು ಕಂಡು ಹಿಡಿಯಬೇಕು. ವೈದ್ಯಕೀಯ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು . ಕೃತ್ಯ ಎಸಗಿದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು …
Read More »50 ಜನ ರೋಗಿಗಳ ಶವಗಳನ್ನು ಹೈದರಾಬಾದ್ನಲ್ಲಿ ಸಾಮೂಹಿಕವಾಗಿ ದಹನ ಮಾಡಲಾಗಿದೆ.
ಹೈದರಾಬಾದ್: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ 50 ಜನ ರೋಗಿಗಳ ಶವಗಳನ್ನು ಹೈದರಾಬಾದ್ನಲ್ಲಿ ಸಾಮೂಹಿಕವಾಗಿ ದಹನ ಮಾಡಲಾಗಿದೆ. ಸರ್ಕಾರದ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರ್ರಗಡ್ಡ ಶವಾಗಾರದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ. ದೇಶಾದ್ಯಂತ ವ್ಯಾಪಿ ಭಾರೀ ಖಂಡನೆ ವ್ಯಕ್ತವಾಗಿದೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿರುವ ತೆಲಂಗಾಣ ಆರೋಗ್ಯ ಇಲಾಖೆ, ಈ ಮೃತ ದೇಹಗಳು ಒಂದೇ ದಿನ ಸಾವನ್ನಪ್ಪಿದವರದ್ದಲ್ಲ. ಕಳೆದ …
Read More »ರಾಮದುರ್ಗ ತಾಲ್ಲೂಕಿನಲ್ಲಿ 16 ಜನ ಸರ್ಕಾರಿ ಕಚೇರಿಯ ಸಿಬ್ಬಂದಿಗಳಿಗೆ ಶುಕ್ರವಾರ ಕೊರೊನಾ
ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ 16 ಜನ ಸರ್ಕಾರಿ ಕಚೇರಿಯ ಸಿಬ್ಬಂದಿಗಳಿಗೆ ಶುಕ್ರವಾರ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ರಾಮದುರ್ಗ ಪುರಸಭೆಯ ಸಿಬ್ಬಂದಿ, ಕಟಕೋಳ ಪೊಲೀಸ್ ಠಾಣೆಯ ಮೂವರು ಪೇದೆಗಳಿಗೆ , ಹಾಗೂ ರಾಮದುರ್ಗ ಕೆಎಸ್ಆರ್ಟಿಸಿ ಘಟಕದ 10 ಸಿಬ್ಬಂದಿಗೆ ಕೊರೊನಾ ದೃಢವಾಗಿದೆ. ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ 48 ಗಂಟೆಗಳ ಕಾಲ ರಾಮದುರ್ಗ ಪುರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಕಟಕೋಳ ಪೊಲೀಸ್ ಠಾಣೆಯ ಪೇದೆಗಳಿಗೂ …
Read More »