Breaking News

ಕೋಯ್ನಾ ಡ್ಯಾಂನಿಂದ ನೀರು ಬಿಟ್ಟಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಕಳೆದ ಎರಡು ದಿನಕ್ಕೆ ಹೋಲಿಸಿದ್ರೆ ಮಳೆ ಪ್ರಮಾಣ ಕಡಿಮೆ ಆಗಿದೆ. ಆದ್ರೆ ಕೃಷ್ಣೆಯಲ್ಲಿ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ದೂದ್‍ಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಮಾತ್ರ ಸ್ವಲ್ಪ ಶಾಂತಗೊಂಡಿವೆ. ಕೋಯ್ನಾ ಡ್ಯಾಂನಿಂದ ನೀರು ಬಿಟ್ಟಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ನೀರಾವರಿ ಅಧಿಕಾರಿಗಳು ಮನವಿ ಮಾಡ್ಕೊಂಡಿದ್ದಾರೆ. https://m.facebook.com/story.php?story_fbid=187610026057095&id=105350550949710 ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಮುಳುಗಡೆಯಾಗಿವೆ ಇವೆ. ಇಲ್ಲಿ …

Read More »

ರೈಲು ದೇಶದ ಪ್ರಗತಿಯ ಎಂಜಿನ್: ಸಚಿವ ಪಿಯುಷ್ ಗೋಯಲ್

ಬೆಳಗಾವಿ, ಆ.9(ಕರ್ನಾಟಕ ವಾರ್ತೆ): ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿರುವ ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಅನ್ನು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಭಾನುವಾರ ದೇಶಕ್ಕೆ ಸಮರ್ಪಿಸಿದರು. ನೈರುತ್ಯ ರೈಲ್ವೆ ವತಿಯಿಂದ ವರ್ಚುವಲ್ ವೇದಿಕೆಯ ಮೂಲಕ ಭಾನುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹುಬ್ಬಳ್ಳಿಯ ರೈಲು ಮ್ಯೂಸಿಯಂ ಅನ್ನು ದೇಶಕ್ಕೆ ಸಮರ್ಪಿಸಲಾಯಿತು. ನಂತರ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ ಅವರು, ಐತಿಹಾಸಿಕ ಮಹತ್ವ ಹೊಂದಿರುವ ಹುಬ್ಬಳ್ಳಿಯಲ್ಲಿ …

Read More »

ಬೆಳಗಾವಿ ಜಿಲ್ಲೆಯಲ್ಲಿ 235 ಜನ ಸೊಂಕಿತರು ಪತ್ತೆ,ಇವತ್ತು ಒಂದೇ ದಿನ 455 ಜನ ಸೊಂಕಿತರು ಗುಣಮುಖ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಸಂಡೇ ಸಿಹಿ ಸುದ್ಧಿ ಹೊರಬಿದ್ದಿದೆ ಇವತ್ತೂ ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ ಸೊಂಕಿತರಕ್ಕಿಂತ ದುಪ್ಪಟ್ಟು ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇಂದು ಭಾನುವಾರದ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಇವತ್ತು ಬೆಳಗಾವಿ ಜಿಲ್ಲೆಯಲ್ಲಿ 235 ಜನ ಸೊಂಕಿತರು ಪತ್ತೆಯಾಗಿದ್ದು,ಇವತ್ತು ಒಂದೇ ದಿನ 455 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವದು ಸಂತಸದ ಸಂಗತಿಯಾಗಿದೆ ನಿನ್ನೆ ಶನಿವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ ಸೊಂಕಿತರಕ್ಕಿಂತ ಹೆಚ್ಚು ಜನ …

Read More »

ಬಳ್ಳಾರಿ ನಾಲಾದಲ್ಲಿ ಶನಿವಾರ ಸಂಜೆ ಕೊಚ್ಚಿ ಹೋದ ಯುವಕನ  ಶವ ಭಾನುವಾರ ಸಂಜೆ ಪತ್ತೆಯಾಗಿದೆ.

ಬೆಳಗಾವಿ : ಕಾಲು ಜಾರಿ ಬಳ್ಳಾರಿ ನಾಲಾದಲ್ಲಿ ಶನಿವಾರ ಸಂಜೆ ಕೊಚ್ಚಿ ಹೋದ ಯುವಕನ  ಶವ ಭಾನುವಾರ ಸಂಜೆ ಪತ್ತೆಯಾಗಿದೆ. ಗೋಕಾಕ್ ತಾಲ್ಲೂಕಿನ ಡುಮ್ಮ ಉರುಬಿನಟ್ಟಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಜಲಾವೃತಗೊಂಡ ಗದ್ದೆಯಲ್ಲಿ ಮುಳುಗಡೆಯಾದ ಪಂಪ್ ಸೆಟ್  ನೋಡಲು ಹೋಗಿದ್ದ ನಾಗರಾಜ್ ಹುಬ್ಬಳ್ಳಿ‌   ( 18) ಎಂಬ ಯುವಕ  ಕಾಲು ಜಾರಿ ಬಳ್ಳಾರಿ ನಾಲಾದಲ್ಲಿ ಕೊಚ್ಚಿ ಹೋಗಿದ್ದನು. ವಿಷಯ ತಿಳಿದ  ಬಳಿಕ ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು  …

Read More »

ಹೊಗೇನಕಲ್ ಜಲವೈಭವ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

ಚಾಮರಾಜನಗರ: ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಂದ ಒಂದೂವರೆ ಲಕ್ಷ ಕ್ಯೂಸೆಕ್‍ಗೂ ಹೆಚ್ಚು ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಹೊಗೇನಕಲ್‍ನಲ್ಲಿ ಜಲವೈಭವವೇ ಸೃಷ್ಟಿಯಾಗಿದೆ. ಈ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ, ವಿಶಾಲವಾಗಿ ಹರಿಯುತ್ತಾ ಹೊಗೇನಕಲ್ ಬಳಿ ಭೋರ್ಗೆರೆದು ಹಾಲ್ನೊರೆಯಂತೆ ಧುಮ್ಮಿಕ್ಕುವ ದೃಶ್ಯ ವರ್ಣನಾತೀತವಾಗಿದೆ. ಕೊಡಗಿನಲ್ಲಿ ಹುಟ್ಟಿ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹರಿದು ಹೊಗೇನಕಲ್ ಬಳಿ ತಮಿಳುನಾಡಿಗೆ ಪ್ರವೇಶಿಸುವ ಕಾವೇರಿಯ ಸೊಬಗು ಈಗ ಇಮ್ಮಡಿಗೊಂಡಿದೆ. …

Read More »

ಆರೋಗ್ಯ ಸಚಿವ ಶ್ರೀರಾಮುಲುಗೆ ಕೊರೊನಾ ಸೋಂಕು…………

ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸಚಿವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಟ್ವೀಟ್: ಇಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನನ್ನ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳೂ ಜೀವದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹಗಲಿರುಳೂ ಶ್ರಮಿಸುತ್ತಿವೆ. ಕೊರೊನಾ ಕಾಣಿಸಿಕೊಂಡ ಸಮಯದಿಂದಲೂ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸೂಕ್ತ …

Read More »

ಕೊರೊನಾ ಸೋಂಕಿತೆಯನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಆ್ಯಂಬುಲೆನ್ಸ್ ಪಲ್ಟಿ

ಬೆಳಗಾವಿ:  ಕೊರೊನಾ ಸೋಂಕಿತೆಯನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಆ್ಯಂಬುಲೆನ್ಸ್ ಪಲ್ಟಿಯಾಗಿದ್ದು,  ತೀವ್ರ ಗಾಯಗಳಾಗಿವೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹತ್ತರಗಿ  ಟೋಲ್ ಗೇಟ್ ಸಮೀಪ ಘಟನೆ ಸಂಭವಿಸಿದೆ. ಅಂಕಲಿಯಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ  ಕೊರೊನಾ ಸೋಂಕಿತೆಯನ್ನು  ಕರೆ ತರುವ ವೇಳೆ ದುರ್ಘಟನೆ ನಡದಿದೆ. ರಸ್ತೆ ವಿಭಜಕಕ್ಕೆಆ್ಯಂಬುಲೆನ್ಸ್  ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿದೆ ಎನ್ನಲಾಗಿದೆ. ಚಾಲಕ, ನರ್ಸ್ , ಸೋಂಕಿತೆ  ಗಾಯಗೊಂಡಿದ್ದಾರೆ. ಬೇರೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೋಂಕಿತೆಯನ್ನು ಕರೆತಂದಿದ್ದಾರೆ.

Read More »

ಹುಬ್ಬಳ್ಳಿಯಿಂದ ಧಾರವಾಡದ ಕಡೆ ಬರುತ್ತಿದ್ದ ಅಪರಿಚಿತ ಬೈಕ್ ಸವಾರ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ

ಧಾರವಾಡ: ಲಾರಿ ಚಕ್ರದಡಿ ಸಿಲುಕಿ ಅಪರಿಚಿತ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಾಯಗಳಾಗಿರುವ ಘಟನೆ ಧಾರವಾಡದ ನವಲೂರು ಬಡಾವಣೆ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡದ ಕಡೆ ಬರುತ್ತಿದ್ದ ಅಪರಿಚಿತ ಬೈಕ್ ಸವಾರ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸವಾರ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದ್ದು, ಬೈಕ್ ಸವಾರನ ಜೊತೆಯಲ್ಲಿದ್ದ ಇನ್ನೋರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡ ವ್ಯಕ್ತಿಯನ್ನುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಸದ್ಯ ಧಾರವಾಡ ಟ್ರಾಫಿಕ್ …

Read More »

, ಬ್ಯಾಲ್ಯದ ಸ್ನೇಹಿತ ಎಸ್.ಎ.  ಕೋತ್ವಾಲ್ ನಿಧನ ಹಿನ್ನೆಲೆ ಸಚಿವರ ಪ್ರವಾಸ ರದ್ದು

ಬೆಳಗಾವಿ:  ಮಾರ್ಕಂಡೇಯ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರವನ್ನು ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ. ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಸಮೀಪದ ಮಾರ್ಕಂಡೇಯ ಜಲಾಶಯಕ್ಕೆ ಇಂದು ಸಚಿವ ರಮೇಶ ಜಾರಕಿಹೊಳಿ ಅವರು ಬಾಗಿನ ಅರ್ಪಿಸಲಿದ್ದರು. ಆದ್ರೆ ಕಾರಣಾಂತರಿಗಳಿಂದ ಕಾರ್ಯಕ್ರವನ್ನು ಮುಂದೂಡಲಾಗಿದೆ ಎಂದು ನೀರಾವರಿ ನಿಗಮ ಅಧಿಕಾರಿಗಳು ತಿಳಿಸಿದ್ದಾರೆ. ಗೋಕಾಕ ನಗರಸಭೆ ಸದಸ್ಯ, ಬ್ಯಾಲ್ಯದ ಸ್ನೇಹಿತ ಎಸ್.ಎ.  ಕೋತ್ವಾಲ್ ನಿಧನ ಹಿನ್ನೆಲೆ ಸಚಿವರ ಪ್ರವಾಸ ರದ್ದುಗೊಳಿಸಿದ್ದಾರೆ ಎನ್ನಲಾಗುತ್ತಿದೆ.

Read More »

ಮರಾಠ ಹಾಗೂ ಕನ್ನಡಿಗರ ನಡುವೆ ಭಾಷಾ ಧ್ವೇಷ ಮೂಡಿಸಲು ಶಿವ ಸೇನೆ ಪುಂಡರು ಯತ್ನ

ಹುಕ್ಕೇರಿ :  ತಾಲ್ಲೂಕಿನಲ್ಲಿ ಮನಗುತ್ತಿಯಲ್ಲಿ ಸ್ಥಾಪಿಸಿದ್ದ ಶಿವಾಜಿ ಮೂರ್ತಿ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಶಿವ ಸೇನೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ದೊಣ್ಣೆಗಳಿಂದ ಬಡಿದಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ಮನಗುತ್ತಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಸಮೀಪ ಸ್ಥಾಪಿಸಿರುವ ಶಿವಾಜಿ ಮೂರ್ತಿಯೂ ಗ್ರಾಮ ದೇವತೆ ಜಾತ್ರೆಗೆ ಸಮಸ್ಯೆಯಾಗುತ್ತದೆ ಎಂದು ಗ್ರಾಮದ ಹಿರಿಯರು, ಮುಖಂಡರು ಒಮ್ಮತದಿಂದ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಮ್ಮತಿಸಿರುತ್ತಾರೆ. ಆದರೆ ಇದನ್ನೇ ಮಹಾರಾಷ್ಟ್ರ ಶಿವ ಸೇನೆ ಕಾರ್ಯಕರ್ತರು ಮೂರ್ತಿ ಸ್ಥಳಾಂತರಕ್ಕೆ ವಿರೋಧ …

Read More »