Breaking News

ಕೆಪಿಸಿಸಿ ನಿಯೋಜಿತ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​ ಅವರು ಆಯ್ದೆಯಾದ ಕುರಿತು ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​ ಅವರು ಆಯ್ದೆಯಾದ ಕುರಿತು ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದಾರೆ. ದೆಹಲಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಬಗ್ಗೆ ನಾನೇ ಅವರಿಗೆ ತಿಳಿಸಿದ್ದೆ, ಮುಂದಿನ ದಿನಗಳಲ್ಲಿ ಎಲ್ಲರನ್ನೂಒಟ್ಟುಗೂಡಿಸಿಕೊಂಡು ಪಕ್ಷವನ್ನ ಬಲಪಡಿಸುವ ಕೆಲಸ ಮಾಡ್ತಾರೆ. ಎಲ್ಲ ಹಿರಿಯ, ಕಿರಿಯ, ಕಾರ್ಯಕರ್ತರು ಅವರಿಗೆ ಸಹಕಾರ ಇದ್ರೆ ಮಾತ್ರ ಉತ್ತಮ ಸಂಘಟನೆ ಸಾಧ್ಯ. ಒಬ್ಬ ವ್ಯಕ್ತಿ ಎಷ್ಟೇ ಸಮರ್ಥನಾಗಿದ್ದರೂ ಎಲ್ಲರ ಸಹಕಾರ …

Read More »

ಬೈಕ್‍ಗೆ ಕನ್ನಡದ ನಂಬರ್ ಪ್ಲೇಟ್ ಹಾಕಿದ್ದಕ್ಕಾಗಿ ದಂಡ ವಿಧಿಸಿದ ಪೊಲೀಸರು

ಬೆಂಗಳೂರು, ಮಾ.14- ಕನ್ನಡದಲ್ಲಿ ನಂಬರ್ ಪ್ಲೇಟ್ ಹಾಕಿದ್ದಕ್ಕಾಗಿ ಪೀಣ್ಯ ಸಂಚಾರಿ ಠಾಣೆ ಪೊಲೀಸರು 500 ರೂ. ದಂಡ ವಿಧಿಸಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪೀಣ್ಯ ಬಳಿ ಸಂಚರಿಸುತ್ತಿದ್ದ ಹೀರೋ ವೊಂಡಾ ಬೈಕ್‍ನನ್ನು ತಡೆದ ಪೊಲೀಸರು ಚಾಲಕ ಮಹೇಶ್‍ಗೆ 500 ರೂ. ದಂಡ ವಿಧಿಸಿದ್ದಾರೆ. ಕಾರಣ ಕೇಳಿದಾಗ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ ಸಂಪೂರ್ಣವಾಗಿ ಕನ್ನಡದಲ್ಲಿ ಬರೆಸಲಾಗಿದೆ. ಇದು ನಿಯಮ ಬಾಹೀರ, …

Read More »

ವಿರೊಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು.

ಬೆಂಗಳೂರು: ವಿರೊಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು. ಇಲ್ಲಿನ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಶಿವಕುಮಾರ ಅವರನ್ನು ಸಿದ್ಧರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು ಪಕ್ಷ ಸಂಘಟನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಿದ್ಧರಾಮಯ್ಯ ಅವರ ಜೊತೆ ಶಿವಕುಮಾರ ಕೆಲಹೊತ್ತು ಚರ್ಚೆ ನಡೆಸಿದ್ದಾರೆ.ಡಿಕೆಶಿ ಸಹೋದರ ಸಂಸದ ಡಿ.ಕೆ.ಸುರೇಶ ಕೂಡ ಈ ಸಂದರ್ಭದಲ್ಲಿ ಇದ್ದರು

Read More »

ರಾಯಚೂರಿನಲ್ಲಿ ಇಂದಿರಾ ಕ್ಯಾಂಟೀನ್‍ಗೂ ತಟ್ಟಿದ ಕೊರೊನಾ ಬಿಸಿ

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್ ಭೀತಿ ಇಂದಿರಾ ಕ್ಯಾಂಟೀನಿಗೂ ತಟ್ಟಿದ್ದು, ಪ್ರತಿ ದಿನ ನೂರಾರು ಜನರಿಂದ ತುಂಬಿರುತ್ತಿದ್ದ ಕ್ಯಾಂಟೀನ್ ಗಳು ಇಂದು ಜನರಿಲ್ಲದೆ ಬಣಗುಡುತ್ತಿವೆ. ಕೂಲಿ ಕಾರ್ಮಿಕರು, ಪ್ರಯಾಣಿಕರು, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದರಿಂದ ಕ್ಯಾಂಟೀನಿಗೆ ಬರುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ರಾಜ್ಯಾದ್ಯಂತ ಬಂದ್ ಇರುವುದರಿಂದ ಜನ ಹೋಟೆಲ್ ಗಳಿಗೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಪ್ರತಿ ದಿನ ಬೆಳಗ್ಗೆ 9 ಗಂಟೆಗೆ 500 ಟೋಕನ್ ಗಳು ಖಾಲಿಯಾಗುತ್ತಿದ್ದವು ಆದರೆ ಇದೀಗ 50 …

Read More »

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ಜೀವ ಉಳಿಸಿಕೊಳ್ಳಲು ಊರಿಗೆ ಹೊರಟ ಜನ..!

ಬೆಂಗಳೂರು,ಮಾ.14- ರಾಯಚೂರು, ಗುಲ್ಬರ್ಗಾ, ಬಿಜಾಪುರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬದುಕು ಕಟ್ಟಿಕೊಳ್ಳಲು ಗುಳೇ ಬಂದು ವಿವಿಧ ನಗರಗಳಲ್ಲಿ ನೆಲೆಸಿದ್ದ ಸಾವಿರಾರು ಜನ ಕೊರೋನ ಭೀತಿಯಿಂದ ತಮ್ಮ ಜೀವ ಉಳಿಸಿಕೊಳ್ಳಲು ಸ್ವಗ್ರಾಮಗಳತ್ತ ತೆರಳುತ್ತಿದ್ದಾರೆ. ನಿನ್ನೆಯಷ್ಟೇ ಸರ್ಕಾರ ಒಂದು ವಾರ ಕಾಲ ಶಾಲಾಕಾಲೇಜು, ಸಭೆ-ಸಮಾರಂಭ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಿದೆ. ಸಂಪೂರ್ಣ ರಾಜ್ಯ ಸ್ತಬ್ದಗೊಂಡಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರು ಮಹಾನಗರ ಸೇರಿದಂತೆ ವಿವಿಧ ನಗರಗಳಿಗೆ ಬಂದು ನೆಲೆಸಿದ್ದ ಕಟ್ಟಡ …

Read More »

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

ಬೆಂಗಳೂರು, ಮಾ.14- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಕನಿಷ್ಠ 15 ರೂ.ಗಳನ್ನಾದರು ಕಡಿಮೆ ಮಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತೆ ಕಾಂಗ್ರೆಸ್ ಒತ್ತಾಯಿಸಿದೆಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ವೈರಸ್ ಹಾಗೂ ಇನ್ನಿತರ ವಿದ್ಯಮಾನಗಳಿಂದ ಕಚ್ಚಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ, ಈ ಹಂತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಬದಲಾಗಿ ಆಮದು ಶುಲ್ಕವನ್ನು ಹೆಚ್ಚಿಸಿ ಪ್ರತಿ ಲೀಟರ್‍ಗೆ …

Read More »

ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಅಭಿನಂದನೆ ಸಲ್ಲಿಸಿದರು.

ಬೆಳಗಾವಿ: ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ನೇಮಕರಾದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಅಭಿನಂದನೆ ಸಲ್ಲಿಸಿದರು. ಇಲ್ಲಿನ ಶಾಸಕರ ಕಚೇರಿಗೆ ಕಾರ್ಯಕರ್ತರೊಂದಿಗೆ ಶನಿವಾರ ಆಗಮಿಸಿ ಶುಭ ಕೋರಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಲು ಸದಾ ನಿಮ್ಮೊಂದಿಗೆ ಇರಲಿದ್ದೆವೆ. ನಿಮ್ಮ ಸಲಹೆಯಲ್ಲಿ ಮುನ್ನಡೆಯುವುದಾಗಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು. ಕಾಂಗ್ರೆಸ್ ಮುಖಂಡರು ಇದ್ದರು

Read More »

ಸತೀಶ ಜಾರಕಿಹೊಳಿ ಅವರಿಗೆ ದೇವರು ಒಳ್ಳೆಯದು ಮಾಡಲಿ :ರಮೇಶ ಜಾರಕಿಹೊಳಿ ..

ಕೊಪ್ಪಳ: ಸತೀಶ ಜಾರಕಿಹೊಳಿ ಅವರಿಗೆ ದೇವರು ಒಳ್ಳೆಯದು ಮಾಡಲಿ ಅಂತಾ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಒಲಿದು ಬಂದ ಹಿನ್ನೆಲೆ ಮಾಧ್ಯದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮದು ಬಿಜೆಪಿ ಪಕ್ಷ. ಕಾಂಗ್ರೆಸ್ ಮುಗಿದು ಹೋದ ಅಧ್ಯಾಯ. ಹೀಗಾಗಿ ಸಹೋದರರ ಕುರಿತು ನಾನು ಯಾವುದೇ ಹೇಳಿಕೆ ನೀಡಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನಮ್ಮ ಸಹೋದದರರ ಬಗ್ಗೆ ಯಾಕೆ ಗೊಂದಲ ಸೃಷ್ಠಿ …

Read More »

“ನನ್ನ ಹುಟ್ಟುಹಬ್ಬದಂದು ಮನೆ ಬಳಿ ಬರಬೇಡಿ ಪ್ಲೀಸ್” : ಅಭಿಮಾನಿಗಳಲ್ಲಿ ಅಪ್ಪು ಮನವಿ

“ನನ್ನ ಹುಟ್ಟುಹಬ್ಬದಂದು ಮನೆ ಬಳಿ ಬರಬೇಡಿ ಪ್ಲೀಸ್” : ಅಭಿಮಾನಿಗಳಲ್ಲಿ ಅಪ್ಪು ಮನವಿ ಬೆಂಗಳೂರು,ಮಾ.14- ದೇಶಾದ್ಯಂತ ಕೊರೋನ ಭೀತಿ ಹಿನ್ನೆಲೆಯಲ್ಲಿ ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ದಯವಿಟ್ಟು ಅಭಿಮಾನಿಗಳ್ಯಾರು ಮನೆ ಬಳಿ ಬರಬಾರದು ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಹುಟ್ಟು ಹಬ್ಬದಂದು ನಾನು ಮನೆಯಲ್ಲಿ ಇರುವುದಿಲ್ಲ. ದಯವಿಟ್ಟು ಮನೆ ಬಳಿ ಬಂದು ನಿರಾಶರಾಗದಿರಿ. ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯ …

Read More »

ಮಿಳ್ಳೆ ಹುಡುಗನ ಮೂತಿಗೆ ತಿವಿದರು ಮೂಡಿಗೆರೆ ಮಂದಿ

ಮಿಳ್ಳೆ ಹುಡುಗನ ಮೂತಿಗೆ ತಿವಿದರು ಮೂಡಿಗೆರೆ ಮಂದಿ! ಕಳೆದ ಬಿಗ್ ಬಾಸ್ ಸೀಜ಼ನ್ನಿನಲ್ಲಿ ಸ್ಪರ್ಧಿಸಿದ್ದ ಕಿಶನ್ ಗೊತ್ತಲ್ಲಾ? ವಯ್ಯಾರಿಯಂತೆ ನುಲಿಯುವ ಕಿಶನ್ ಕಿಸ್ಸಿಂಗ್ ಸ್ಟಾರ್ ಅನ್ನೋ ಪಟ್ಟ ಪಡೆದು ನೋಡುಗರಿಗೆ ಬಲು ಮಜಾ ಕೊಟ್ಟಿದ್ದ. ಈಗ ಹುಟ್ಟೂರಿಗೆ ಬಂದು ಸನ್ಮಾನ ಸ್ವೀಕರಿಸಲೂ ಕಾಸು ಕೇಳಿ ಮಕ್ಕುಗಿಸಿಕೊಂಡಿದ್ದಾನೆ. ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿ, ನಂತರ ಬಿಗ್ ಬಾಸ್ ಸ್ಪರ್ಧಿಯಾದ ಕಿಶನ್ ಬೆಳಗಲಿ ಮೂಲತಃ ಚಿಕ್ಕಮಗಳೂರಿನವನು. ಡ್ಯಾನ್ಸು, ರಿಯಾಲಿಟಿ …

Read More »