Breaking News

ಲಾಕ್‍ಡೌನ್ 4.0 ಮುಗಿಯಲು ಇನ್ನೂ ಮೂರು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಜೂನ್ 1 ರಿಂದ ಹೊಸ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ?………

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮಾಡಲಾಗಿದ್ದ ಲಾಕ್‍ಡೌನ್ 4.0 ಮುಗಿಯಲು ಇನ್ನೂ ಮೂರು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಜೂನ್ 1 ರಿಂದ ಹೊಸ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸುತ್ತಿದ್ದು, ಲಾಕ್‍ಡೌನ್ ಸ್ವರೂಪದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಲಾಕ್‍ಡೌನ್ ರಿಲೀಫ್ ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆದಿದ್ದಾರೆ. ಹೀಗಾಗಿ ಜನರಿಗೆ ಜೂನ್ …

Read More »

ಮಂಡ್ಯದ ಗಂಡು’, ‘ಕಲಿಯುವಗದ ಕರ್ಣ’ ಅಂಬರೀಶ್ ಅವರು ಜನ್ಮದಿನೋತ್ಸವ.

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿದ್ದ ‘ಮಂಡ್ಯದ ಗಂಡು’, ‘ಕಲಿಯುವಗದ ಕರ್ಣ’ ಅಂಬರೀಶ್ ಅವರು ಜನ್ಮದಿನೋತ್ಸವ. ಈ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅಂಬರೀಶ್ ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಇಂದು ಅಂಬರೀಶ್ ಅವರ 68ನೇ ಜನ್ಮದಿನವಾಗಿದ್ದು, ಈ ಹಿಂದೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅಂಬಿ ನಿಧನದ ನಂತರ ಅಭಿಮಾನಿಗಳು ಅವರ …

Read More »

ಕೊರೋನಾ ಯುದ್ಶದಲ್ಲಿ ಗೆದ್ದು ಗುಣಮುಖರಾಗಿ ಮನೆಗಳಿಗೆ ತೆರಳಿದ ಮುಂಬೈ ಕನ್ನಡಿಗರು ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಮರ್ಪಿಸಿ ತಮ್ಮ ಮನೆಗಳಿಗೆ ತೆರಳಿದರು.

ಮಂಡ್ಯ ಕೃಷ್ಣರಾಜಪೇಟೆಯ ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದು ಗುಣಮುಖರಾಗಿರುವ ಮುಂಬೈ ಕನ್ನಡಿಗರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬಿಡುಗಡೆ ಪತ್ರವನ್ನು ನೀಡಿ ಅಗತ್ಯ ಆರೋಗ್ಯ ಮುನ್ಸೂಚನೆಯನ್ನು ನೀಡಿ ಶುಭ ಹಾರೈಸಿ ಬೀಳ್ಕೊಟ್ಟರು. ಕಳೆದ 14ದಿನಗಳಿಂದಲೂ ಹೋಂ ಕ್ವಾರಂಟೈನ್ ನಲ್ಲಿದ್ದು ಕೊರೋನಾ ಟೆಸ್ಟಿಂಗ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶದಲ್ಲಿ ಗೆದ್ದು ಬಂದಿರುವ ಮುಂಬೈ ಕನ್ನಡಿಗರಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಶುಭ ಹಾರೈಸಿ ಬಿಡುಗಡೆ ಪತ್ರಗಳನ್ನು ನೀಡಿ ಬೀಳ್ಕೊಟ್ಟರು. ಕೊರೋನಾ ಮಹಾಮಾರಿಯನ್ನು …

Read More »

ದಿ. 29.05.2020 ರ ನಂತರ ಯಾವುದೇ ದಿನದಂದು ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ (ಅಸಹಕಾರ ಚಳುವಳಿ ಹೋರಾಟ) ಮುಷ್ಕರಕ್ಕಿಳಿಯುತ್ತಿದ್ದೆವೆಂದು ಸಂಘದಿಂದ ಸರ್ಕಾರಕ್ಕೆ ಅಂತಿಮ ಗಡುವು

  ಬೆಂಗಳೂರು :ಸರ್ಕಾರದ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ನಮ್ಮ ಬೇಡಿಕೆಗಳನ್ನು ನಿರ್ದಿಷ್ಟಾವಧಿಯಲ್ಲಿ (ಕಾಲಮಿತಿಯಲ್ಲಿ) ಈಡೇರಿಸಲು ಕ್ರಮವಹಿಸುವ ಬಗ್ಗೆ ಸನ್ಮಾನ ಸಚಿವರಿಗೆ ಹಾಗೂ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕು. ಕ. ಸೇವೆಗಳು ಹಾಗೂ ವೈ. ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಅಧಿಕೃತವಾಗಿ ಪತ್ರದ ಮುಖೇನ ಈಗಾಗಲೇ ತಿಳಿಸಲಾಗಿದೆ. ಅದಲ್ಲದೆ ಸಂಘದ ವತಿಯಿಂದ ಗೌರವಾಧ್ಯಕ್ಷರಾದ ಮಾನ್ಯ ಶ್ರೀ ಆಯನೂರು ಮಂಜುನಾಥ್ ರವರು ಸರ್ಕಾರದ ಅಪರ …

Read More »

ಮಹಿಳೆಯ ಕಣ್ಣೀರು ನೋಡಿ ಮರುಗಿದ ಜನ -ಯೋಗ, ಆಧ್ಯಾತ್ಮ ಅಧ್ಯಯನಕ್ಕಾಗಿ ಭಾರತಕ್ಕೆ ಆಗಮನ

ಧಾರವಾಡ: ತನ್ನ ತವರಿಗೆ ಹೋಗಲಾಗದೇ ಭಾರತದಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆ ಕಣ್ಣೀರು ಹಾಕುತ್ತ ಜಿಲ್ಲಾಧಿಕಾರಿ ಕಚೇರಿ ಎದುರು ನಿಂತ ಘಟನೆ ಧಾರವಾಡದಲ್ಲಿ ನಡೆದಿದೆ. ಆಸ್ಟ್ರೇಲಿಯಾ ಮೂಲದ ನೈಶಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಣ್ಣೀರು ಹಾಕುತ್ತಿದ್ದ ಮಹಿಳೆ. ಲಾಕ್‍ಡೌನ್ ಮುಂದೆ ಭಾರತೀಯ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಅಧ್ಯಯನ ಮಾಡಲು ಆಸ್ಟ್ರೇಲಿಯಾದಿಂದ ಬಂದಿದ್ದರು. ಪ್ರವಾಸ ಮಾಡುತ್ತ ಹುಬ್ಬಳ್ಳಿಗೆ ಬಂದಾಗ ಲಾಕ್‍ಡೌನ್ ಘೋಷಣೆಯಾಗಿತ್ತು. ಹೀಗಾಗಿ ಹುಬ್ಬಳ್ಳಿ ನಗರದಲ್ಲಿಯೇ ಸಿಲುಕಿದ್ದರು. ಸದ್ಯ …

Read More »

ಚುನಾವಣೆ ಗದ್ದಲದಲ್ಲಿ ಸಾಮಾಜಿಕ ಅಂತರವನ್ನೇ ಮರೆತ ಜನಪ್ರತಿನಿಧಿಗಳು, ಅಧಿಕಾರಿಗಳು

ಗದಗ: ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆಯ್ಕೆವೇಳೆ ಶಾಸಕರು ಹಾಗೂ ತಹಶಿಲ್ದಾರರಿಂದ ಸರ್ಕಾರದ ನಿಯಮ ಉಲ್ಲಂಘನೆಯಾಗಿದ್ದು, ಸಾಮಾಜಿಕ ಅಂತರ ಮರೆತು ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ. ಗುರುವಾರ ಲಕ್ಷ್ಮೇಶ್ವರ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. ಈ ವೇಳೆ ಸಾಮಾಜಿಕ ಅಂತರ, ಕೆಲವರು ಮುಖಕ್ಕೆ ಮಾಸ್ಕ್ ಧರಿಸದೆ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಬ್ರಮರಾಂಭ ಗುಬ್ಬಿಶೆಟ್ಟಿ ಹಾಗೂ …

Read More »

ಕೊರೊನಾ ವಿರುದ್ಧ ಹೋರಾಟಲು ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ

ಬೆಂಗಳೂರು: ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಹಲವು ತಜ್ಞರು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇತ್ತ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುಗಳನ್ನು ಚಾಚಿಕೊಳ್ಳುತ್ತಿರುವುದು ಬಹುದೊಡ್ಡ ಸವಾಲಾಗಿದೆ. ಲಾಕ್‍ಡೌನ್, ಸಾಮಾಜಿಕ ಅಂತರ, ಶುಚಿತ್ವ ಕುರಿತು ಜಾಗೃತಿ ಮೂಡಿಸಿದರು ಕೊರೊನಾ ನಿಯಂತ್ರಣ ಮಾತ್ರ ಕಷ್ಟಸಾಧ್ಯವಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿರುವವರಿಗೆ ಚಿಕಿತ್ಸೆ ನೀಡುವುದು ಕೂಡ ವೈದ್ಯ ಲೋಕಕ್ಕೆ ಸವಾಲಾಗಿದೆ. ಪರಿಣಾಮ ಮಾನವನ ದೇಹದಲ್ಲಿನ ರೋಗ ನಿರೋಧ ಶಕ್ತಿ ಹೆಚ್ಚಿಸುವ …

Read More »

ಜಾನುವಾರುಗಳಂತೆ ಲಾರಿಯಲ್ಲಿ ಕಾರ್ಮಿಕರ ಸಾಗಾಟ……….

ಧಾರವಾಡ/ಹುಬ್ಬಳ್ಳಿ: ಚಿತ್ರದುರ್ಗ ಜಿಲ್ಲೆಯಿಂದ ಲಾರಿಗಳ ಮೂಲಕ ಮಹಾರಾಷ್ಟ್ರಕ್ಕೆ ಹೊರಟಿದ್ದ ಕಾರ್ಮಿಕರನ್ನು ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಹಾಗೂ ಗ್ರಾಮೀಣ ತಹಶೀಲ್ದಾರ ಪ್ರಕಾಶ್ ನಾಶಿ ತಡೆದಿದ್ದಾರೆ. ಹುಬ್ಬಳ್ಳಿ ಸಮೀಪದ ವರೂರ- ಅಗಡಿ ಬಳಿ ಪೊಲೀಸರ ಕಣ್ಣು ತಪ್ಪಿಸಿ ಲಾರಿಯಲ್ಲಿ ನೂರಾರು ಜನರು ಮಹಾರಾಷ್ಟ್ರಕ್ಕೆ ಹೊರಟಿದ್ದರು. ಖಚಿತ ಮಾಹಿತಿ ಮೇಲೆ ಲಾರಿಯನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಎಲ್ಲರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಬೇರೆ ವಾಹನಗಳ ಮೂಲಕ ಕಳುಹಿಸಿಕೊಡುವ ಏರ್ಪಾಡುಗಳನ್ನು ಉಪವಿಭಾಗಾಧಿಕಾರಿ …

Read More »

ಹಗಲಿರುಳು  ಕೆಲಸ ಮಾಡಬೇಕಾದ ಪುರಸಭೆ ಸಿಬ್ಬಂದಿಯೊಬ್ಬ ಸರ್ಕಾರಿ ಕಚೇರಿಯಲ್ಲಿಯೇ ಅದ್ದೂರಿಯಾಗಿ  ಜನುಮದಿನ ಆಚರಿಸಿಕೊಂಡ ಆರೋಪ

ಗೋಕಾಕ: ರಾಜ್ಯದಲ್ಲಿ  ಕೊರೊನಾ ಸೋಂಕು ವ್ಯಾಪಕವಾಗಿ ಹಡರುಡುತ್ತಿದ್ದು ಜನರ ಬದುಕು ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಹಗಲಿರುಳು  ಕೆಲಸ ಮಾಡಬೇಕಾದ ಪುರಸಭೆ ಸಿಬ್ಬಂದಿಯೊಬ್ಬ ಸರ್ಕಾರಿ ಕಚೇರಿಯಲ್ಲಿಯೇ ಅದ್ದೂರಿಯಾಗಿ  ಜನುಮದಿನ ಆಚರಿಸಿಕೊಂಡ ಆರೋಪ ಕೇಳಿ ಬಂದಿದೆ.  ಗೋಕಾಕ ತಾಲೂಕಿನ ಕೊಣ್ಣೂರು ಪುರಸಭೆ ಕಚೇರಿಯಲ್ಲಿಯೇ ನಿನ್ನೆ ಎಫ್ ಡಿಸಿ ರಮೇಶ ಭಾಮನೆ  ಎಂಬಾತ ಅದ್ದೂರಿಯಾಗಿ ತನ್ನ ಜನುಮದಿನ ಆಚರಿಸಿಕೊಂಡಿದ್ದಾನೆ.  ಕಚೇರಿಯಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾನೆ.  ಕನಿಷ್ಟ ಮಾಸ್ಕ ಕೂಡ ಧರಿಸಿರದೆ, ಸಾಮಾಜಿಕ ಅಂತರ …

Read More »

ಒಟ್ಟು 9 ಮನೆಗಳಿಗೆ ತಲಾ 1 ಲಕ್ಷ ರೂ.ಗಳಂತೆ 9 ಲಕ್ಷ ರೂ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ:ಹೆಬ್ಬಾಳಕರ್

ಬೆಳಗಾವಿ: ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿಯಿಂದ ಮನೆಗಳು ಸುಟ್ಟು ಆರ್ಥಿಕ ನಷ್ಟಕ್ಕೀಡಾಗಿದ್ದವರಿಗೆ  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಟ್ಟು 9 ಮನೆಗಳಿಗೆ ತಲಾ 1 ಲಕ್ಷ ರೂ.ಗಳಂತೆ 9 ಲಕ್ಷ ರೂ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ ಮಂಜೂರು ಮಾಡಿದ್ದಾರೆ  ಹಲಗಾ, ಹಿರೇ ಬಾಗೇವಾಡಿ ಹಾಗೂ ಬಡಸ್ ಕೆ ಹೆಚ್ ಗ್ರಾಮಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಉಂಟಾಗಿತ್ತು. ಅನೇಕ ಮನೆಗಳು ಬೆಂಕಿಗೆ …

Read More »