Breaking News

ಇಂದಿನಿಂದ ಲಾಠಿ ಇಲ್ಲದ ಕರ್ತವ್ಯ ನಿರ್ವಹಿಸುವಂತೆ ಪೊಲೀಸರಿಗೆ ಕಮಿಷನರ್ ಸೂಚನೆ

ಬೆಂಗಳೂರು: ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ 14ರವರೆಗೆ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಮದ್ದಿಲ್ಲದ ಕೊರೋನಾ ಕಾಯಿಲೆಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾರಕ ಸೋಂಕನ್ನು ತಡೆಗಟ್ಟಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಇಡೀ ದೇಶವನ್ನು ಲಾಕ್​ಡೌನ್​ ಮಾಡಿದ್ದರು ಜನರು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದಾರೆ. ಇಂತಹವರಿಗೆ ಪೊಲೀಸರು ಕಂಡಕಂಡಲ್ಲಿ ಲಾಠಿ ರುಚಿ ತೋರಿಸುತ್ತಿದ್ದಾರೆ. ಕೆಲವರು ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಅಡ್ಡಾಡುತ್ತಾರೆ. ಆದರೆ, ಕೆಲವಷ್ಟು ಮಂದಿ ತುರ್ತು ಕೆಲಸ ಮೇಲೆ ಹೊರಗೆ …

Read More »

ವಿದೇಶದಿಂದ ಬಂದವರು ಸುತ್ತಾಡಿದ್ರೆ ಪಾಸ್‍ಪೋರ್ಟ್ ಮುಟ್ಟುಗೋಲು

ಉಡುಪಿ: ವಿದೇಶದಿಂದ ಬಂದು 28 ದಿನ ಗೃಹ ಬಂಧನದಲ್ಲಿ ಇರದೇ ಬೇಕಾಬಿಟ್ಟಿ ಸುತ್ತಾಡಿದ್ರೆ ನಿಮ್ಮ ಪಾಸ್‍ಪೋರ್ಟ್ ಮುಟ್ಟುಗೋಲು ಹಾಕುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಗೃಹ ಬಂಧನದಲ್ಲಿರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಕೊರೊನಾ ಹರಡದಂತೆ ಕೇಂದ್ರ ಸರ್ಕಾರ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಿದೆ. ಆದರೆ ಆದೇಶ ಉಲ್ಲಂಘಿಸಿ ಶಂಕಿತರು ಸುತ್ತಾಡುವ ಮಾಹಿತಿ ಸಾರ್ವಜನಿಕರಿಂದ ಸಿಕ್ಕಿದೆ. ಒಂದೊಂದು ಮನೆಗೆ ಮೂರು ಬಾರಿ ಅಧಿಕಾರಿಗಳು, …

Read More »

ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ – ಇಬ್ಬರ ವರದಿಗೆ ಕಾಯುತ್ತಿರುವ ವೈದ್ಯರು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಹೊಸದಾಗಿ 5 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟಪಡಿಸಿದ್ದಾರೆ. ಈ ಮೊದಲು 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಬ್ಬರೂ ಸಾವನ್ನಪ್ಪಿದ್ದರು. ಮೆಕ್ಕಾ ಪ್ರವಾಸ ಕೈಗೊಂಡು ವಾಪಸ್ ಆಗಿದ್ದ ನಂತರ ಮೊದಲು ಕೊರೊನಾ ಪತ್ತೆಯಾಗಿದ್ದ 31 ವರ್ಷದ ವ್ಯಕ್ತಿಯ ತಾಯಿ ಹಾಗೂ ಚಿಕ್ಕಮ್ಮ ಸೇರಿ ಮೂವರಿಗೆ ಸೋಂಕು ಧೃಢವಾಗಿತ್ತು. ಈ ಮೂವರು ಸಹ ಮೆಕ್ಕಾ …

Read More »

ಕೆಆರ್ ಮಾರ್ಕೆಟ್ ಶಿಫ್ಟ್ ಪ್ಲಾನ್ ಠುಸ್- ಬಸವನಗುಡಿ ಮೈದಾನದಲ್ಲಿ ಸಾಮಾಜಿಕ ಅಂತರವೇ ಇಲ್

ಬೆಂಗಳೂರು: ಜನದಟ್ಟನೆ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್ ಅನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಶಿಫ್ಟ್ ಮಾಡಿದ್ದ ಪ್ಲಾನ್ ವಿಫಲವಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಕೆ.ಆರ್ ಮಾರುಕಟ್ಟೆಯಂತೆ ಆಗಿದೆ. ಬಸವನಗುಡಿ ಮೈದಾನದಲ್ಲಿ ಅನೇಕ ತರಕಾರಿ ಲೋಡ್ ಲಾರಿಗಳು ನಿಂತಿವೆ. ಅಷ್ಟೇ ಅಲ್ಲದೆ ಯಾವುದೇ ಸಾಮಾಜಿಕ ಅಂತರ ಇಲ್ಲದಂತಾಗಿದೆ. ಈ ಮೂಲಕ ಜನಸಂದಣಿ ಕಡಿಮೆ ಮಾಡುವ ಬಿಬಿಎಂಪಿ ಪ್ಲಾನ್ ಠುಸ್ ಆಗಿದೆ. 20 ಅಡಿ ಅಂತರದಲ್ಲಿ ಸ್ಟಾಲ್ ನಿರ್ಮಾಣ ಮಾಡಲಾಗುವುದು ಎಂದು …

Read More »

ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿಬಂಧನೆ ಇಲ್ಲ : ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು,‌ಮಾ.25: ಮಹಾಮಾರಿ ಕೊರೊನಾದಿಂದ ಇಡೀ ಜಗತ್ತೇ‌ ತಲ್ಲಣಗೊಂಡಿದ್ದು, ಇಂತಹ ಸಂದರ್ಭದಲ್ಲಿ ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತನಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ರೈತರು ಬೆಳೆದಂತಹ ಬೆಳೆಗಳನ್ನು ಕೊಯ್ಲು ಮಾಡಲು ಮಾರಾಟ ಮಾಡಲು ಯಾವುದೇ ನಿಬಂಧನೆಗಳು ಇರುವುದಿಲ್ಲ. ಮಾನ್ಸೂನ್ ಪ್ರಾರಂಭವಾದಲ್ಲಿ ರೈತ ಹೊಲದಲ್ಲಿ ಬಿತ್ತನೆ ಮಾಡಲು, ಸರ್ಕಾರ ರೈತನಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಒದಗಿಸಲು ಕ್ರಮಗಳನ್ನು ಕೈಗೊಂಡಿದೆ. ಬೆಳೆಗಳನ್ನು …

Read More »

ಕರೋನಾ ರುದ್ರನರ್ತನ : ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ, ಮೋದಿ ಮಹತ್ವದ ಸಲಹೆ.!

ನವದೆಹಲಿ, ಮಾ.27-ಕಿಲ್ಲರ್ ಕೊರೊನಾ (ಕೋವಿಡ್-19) ವಿರುದ್ಧ ಹೋರಾಟದಲ್ಲಿ ಸಂಯುಕ್ತ ರಂಗವಾಗಿ ಮುಂಚೂಣಿಯಲ್ಲಿರಲು ಪಣ ತೊಟ್ಟಿರುವ ಜಿ-20 ರಾಷ್ಟ್ರಗಳು, ಈ ಪಿಡುಗಿನಿಂದಾಗಿ ತೀವ್ರವಾಗಿ ಕುಸಿದಿರುವ ಜಾಗತಿಕ ಪುನ:ಶ್ಚೇತನಕ್ಕೆ 5 ಲಕ್ಷ ಕೋಟಿ ಡಾಲರ್ ನೆರವಿಗೆ ಮನವಿ ಮಾಡಿದೆ. ಮಾರಕ ಕೊರೊನಾ ವೈರಸ್ ಜಾಗತಿಕ ಪಿಡುಗಾಗಿ ಪರಿಣಮಿಸಿದ್ದು, ಈ ಪಿಡುಗಿನ ವಿರುದ್ಧ ಪರಸ್ಪರ ಸಹಕಾರದೊಂದಿಗೆ ಸಂಘಟಿತ ಹೋರಾಟ ನಡೆಸಲು ಜಿ-20 ರಾಷ್ಟ್ರಗಳ ತುರ್ತು ಶೃಂಗಸಭೆ ನಡೆಯಿತು. ಈ ತುರ್ತು ಸಭೆಯಲ್ಲಿ 20 ದೇಶಗಳ …

Read More »

ಚಿಕ್ಕೋಡಿ :ಶಾನೂರಬಾಬಾ ದರ್ಗಾದ ಆವರಣದಲ್ಲಿ ಆಗಮಿಸಿದ ಕಟುಂಬ ತುತ್ತು ಅನ್ನಕ್ಕಾಗಿ‌ ಪರದಾಟ.. Mar, 27 2020

ಚಿಕ್ಕೋಡಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‍ಗೆ ಇಡೀ ಭಾರತ ಲಾಕ್‍ಡೌನ್ ಆಗಿದೆ. ಆದರೆ ಅಮವಾಸ್ಯೆಗೆ ಚಿಕ್ಕೋಡಿ ತಾಲೂಕಿನ ಕರೋಶಿ ಶಾನೂರಬಾಬಾ ದರ್ಗಾಕ್ಕೆ ದೇವರಿಗೆ ಬಂದಿದ್ದ ಬಡ ಕುಟುಂಬವೊಂದು ಹತ್ತಿರ ಹಣವೂ ಇಲ್ಲದೆ ಪರದಾಡುವಂತಾಗಿದೆ.   ನೆರೆಯ ಮಹಾರಾಷ್ಟ್ರ ಸೋಲ್ಲಾಪೂರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಬೋರಗಾಂವ ಎಂಬ ದೂರದ ಊರಿಂದ ನವಾಜ ಮುಲ್ಲಾ ಎನ್ನುವ ಕುಟುಂಬ ಅಮವಾಸ್ಯೆಯೆಂದು ದರ್ಗಾಕ್ಕೆ ದೇವರ ದರ್ಶಕ್ಕೆಂದು ಆಗಮಿಸಿದ್ದರು. ಅಮವಾಸ್ಯೆ ಮತ್ತು ಅಮವಾಸ್ಯೆಯಾದ ನಂತರ ಒಂದೆರಡು …

Read More »

ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಎರಡು ಪ್ರಕರಣ

ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಎರಡು ಪ್ರಕರಣ ಮಂಗಳೂರು: 21 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಂದೇ ದಿನ ರಾಜ್ಯದಲ್ಲಿ 9 ಜನರಿಗೆ ಸೋಂಕು ತಗುಲಿದ್ದು ಜನ ಆತಂಕಕ್ಕೊಳಗಾಗಿದ್ದಾರೆ. ಕೊರೊನಾ ಸೋಂಕಿತ ಪ್ರಕರಣ 64: 21 ವರ್ಷದ ಯುವಕ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಿದ್ದು, ದಿನಾಂಕ 22.03.2020 ರಂದು ಭಾರತಕ್ಕೆ ವಾಪಸ್ಸಾಗಿರುತ್ತಾರೆ. ಯುವಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ …

Read More »

ಕರ್ನಾಟಕದಲ್ಲಿ ಲಾಕ್‍ಡೌನ್ ಸಡಿಲ ಆಗುತ್ತಿದೆ ಪ್ರಧಾನಿ ಮೋದಿ ಅಸಮಾಧಾನ

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಇಡೀ ದೇಶವನ್ನೇ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ಮಾಡಿದ್ದರು. ಆದರೆ ಕರ್ನಾಟಕದಲ್ಲಿ ಲಾಕ್‍ಡೌನ್ ಸಡಿಲ ಆಗುತ್ತಿದೆ ಎಂದು ಪ್ರಧಾನಿ ಮೋದಿ ಅವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಲಾಕ್‍ಡೌನ್ ಇದ್ದರೂ ಜನರ ಓಡಾಟ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಸೋಂಕು ಕಡಿಮೆ ಆಗುತ್ತಿಲ್ಲ. ಆದ್ದರಿಂದ ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಬೇಕು. ಹೀಗಾಗಿ ಇನ್ನಷ್ಟು ಕಠಿಣ ಕ್ರಮ …

Read More »

ಜಯಂತ್ ಕಾಯ್ಕಿಣಿ ವಿರಚಿತ ಕೊರೊನಾ ಜಾಗೃತಿ ಗೀತೆಗೆ ಎಸ್‍ಪಿಬಿ ಧ್ವನಿ”………

ಬೆಂಗಳೂರು: ಮಹಾಮಾರಿ ಕೊರೊನಾ ಓಡಿಸಲು ದೇಶಾದ್ಯಂತ ಶತ ಪ್ರಯತ್ನ ನಡೆಯುತ್ತಿದ್ದು, ಚಿತ್ರರಂಗದ ಹಲವರು ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸಿನಿಮಾ ಕಾರ್ಮಿಕರಿಗೆ ಹಾಗೂ ಸರ್ಕಾರಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ಸಿನಿಮಾ ಗೀತೆ ರಚನೆಕಾರರು ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಅವರು ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ಹಲವು ನಟ, ನಟಿಯರು ವಿವಿಧ ಬಗೆಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ …

Read More »