ಬೆಂಗಳೂರು: ರಾಜ್ಯದಲ್ಲಿ ಇಂದು 1843 ಮಂದಿಗೆ ಸೋಂಕು ಬಂದಿದ್ದು, 30 ಮಂದಿ ಮೃತಪಟ್ಟು 680 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 981 ಮಂದಿಗೆ ಸೋಂಕು ಬಂದಿದೆ. ಒಟ್ಟು ರಾಜ್ಯದ ಸೋಂಕಿತರ ಸಂಖ್ಯೆ 25,317ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 401 ಮಂದಿ ಮೃತಪಟ್ಟಿದ್ದು 10,527 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 14,385 ಸಕ್ರಿಯ ಪ್ರಕರಣಗಳಿದ್ದು, 279 ಮಂದಿ ಐಸಿಯನಲ್ಲಿ ಚಿಕಿತ್ಸೆ ಪಡೆಯುತ್ತಿ ಎಲ್ಲಿ ಎಷ್ಟು ಮಂದಿಗೆ ಸೋಂಕು? ಬೆಂಗಳೂರು ನಗರ 981, …
Read More »ಚನ್ನರಾಯನಪಟ್ಟಣ 14 ದಿನ ಲಾಕ್‍ಡೌನ್- 3 ದಿನ ಮಾತ್ರ ಅಗತ್ಯವಸ್ತು ಖರೀದಿಗೆ ಅವಕಾಶ
ಹಾಸನ: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಪಥವನ್ನು ವಿಸ್ತರಿಸಿಕೊಳ್ತಿದೆ. ಇದಕ್ಕೆ ಹಾಸನದ ಜನ ಮದ್ದು ಅರೆದಿದ್ದಾರೆ. ಸರ್ಕಾರದ ಆದೇಶ ಇಲ್ಲದಿದ್ದರೂ ಹಾಸನ ಜಿಲ್ಲೆ ಭಾಗಶಃ ಲಾಕ್‍ಡೌನ್ ಆಗುತ್ತಿದೆ. ಹೌದು. ಜಿಲ್ಲೆಯಲ್ಲಿ ಕೊರೊನಾ ನಾಗಾಲೋಟದಿಂದ ಓಡುತ್ತಿದ್ದು ಕೊರೊನಾ ವಾರಿಯರ್ಸ್ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 541 ಕೊರೊನಾ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 255 ಜನ ಗುಣಮುಖರಾಗಿದ್ರೆ 278 ಕೇಸ್‍ಗಳು ಆಕ್ಟೀವ್ ಆಗಿದ್ದು 8 ಜನ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲೇ ಅದರಲ್ಲೂ ಚನ್ನರಾಯಪಟ್ಟಣದಲ್ಲಿ …
Read More »ಕೊರೊನಾಗೆ ಮೃತಪಟ್ಟವರ ಗೌರವಯುತ ಸಂಸ್ಕಾರಕ್ಕೆ ಮುಂದಾಗಿರೋ ಸ್ವಯಂ ಸೇವಕರು….”
ಮಡಿಕೇರಿ: ಕೊರೊನಾ ಮಹಾಮಾರಿಗೆ ಮೃತಪಟ್ಟರೆಂದರೆ ಮುಗಿಯಿತು. ಅಂತ ಸಾವನ್ನು ಅತ್ಯಂತ ಕೀಳಾಗಿ ನೋಡಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ಸಂದರ್ಭ ನಡೆದುಕೊಂಡ ರೀತಿ ಅದನ್ನು ಸಾಬೀತು ಪಡಿಸಿವೆ. ಹೀಗಾಗಿ ಎಂತಹದ್ದೇ ಸಾವಿಗೂ ಗೌರವಯುವಾದ ಅಂತ್ಯ ಸಂಸ್ಕಾರವನ್ನು ಮಾಡಬೇಕೆಂಬ ದೃಷ್ಟಿಯಿಂದ ಕೊಡಗಿನ ಸ್ವಯಂ ಸೇವಕರ ತಂಡಗಳು ಸಿದ್ಧವಾಗಿವೆ. ಕೊರೊನಾ ಡೆಡ್ಲಿ ವೈರಸ್ ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೂರು ಧರ್ಮಗಳ ಸ್ವಯಂ …
Read More »ರಾಘವೇಂದ್ರ ಕೋ -ಆಪರೇಟಿವ್ ಬ್ಯಾಂಕ್ ಮಾಜಿ ಸಿಇಓ ಆತ್ಮಹತ್ಯೆ
ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ- ಆಪರೇಟೀವ್ ಬ್ಯಾಂಕ್ ಮಾಜಿ ಸಿಇಓ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ನಿವಾಸದಲ್ಲಿ ವಾಸುದೇವ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆ ಮುಂದೆ ಕಾರಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಕಾರಿನಲ್ಲಿ ಮದ್ಯ ಸೇವಿಸಿದ್ದಾರೆ. ಮದ್ಯದಲ್ಲಿ ವಿಷವನ್ನು ಮಿಶ್ರಣ ಮಾಡಿರುವ ವಿಚಾರ ಈಗ ತಿಳಿದುಬಂದಿದೆ. ಬ್ಯಾಂಕ್ ವಿರುದ್ದ 1,400 ಕೋಟಿ ರೂ. ಅವ್ಯವಹಾರ ಕೇಳಿ ಬಂದಿತ್ತು. ಹಗರಣದಲ್ಲಿ ವಸುದೇವ ಮಯ್ಯ ಪ್ರಮುಖ ಆರೋಪಿಯಾಗಿದ್ದರು. ಜೂನ್ 18 …
Read More »ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಒಂದು ವರ್ಷವಾಯ್ತು:ಬಿ.ಸಿ.ಪಾಟೀಲ್
ಶಿವಮೊಗ್ಗ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಇಂದಿಗೆ ಒಂದು ವರ್ಷವಾಯ್ತು ಎಂದು ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದಿನವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ನೆನಪಿಸಿಕೊಂಡರು. ಶಿವಮೊಗ್ಗದ ಇರುವಕ್ಕಿಯಲ್ಲಿ ನಿರ್ಮಾಣ ಆಗುತ್ತಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ ವೀಕ್ಷಣೆಗೆ ಸಚಿವರು ಆಗಮಿಸಿದ್ದ ವೇಳೆ ಕೃಷಿ ವಿವಿ ಉಪಕುಲಪತಿ ಅವರು ಸಚಿವರನ್ನು ಸನ್ಮಾನಿಸಿದರು. ಈ ವೇಳೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದನ್ನು ನೆನಪಿಸಿಕೊಂಡ ಸಚಿವರು ಇಂದು ಕಾಂಗ್ರೆಸ್ ಗೆ …
Read More »22 ವರ್ಷದ ಯುವಕ ಸೇರಿ, ರಾಜ್ಯದಲ್ಲಿ ಕೋವಿಡ್‌ಗೆ 30 ಮಂದಿ ಸಾವು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು ಇಂದು 30 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 401ಕ್ಕೇರಿದೆ. ಬೆಂಗಳೂರಲ್ಲಿ 10 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಒಟ್ಟು 155 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ, ಬೆಂಗಳೂರಿನಲ್ಲಿ 10, ಬೀದರ್ 8, ಮೈಸೂರು 3, ದಕ್ಷಿಣ ಕನ್ನಡ 2, ದಾವಣಗೆರೆ, ಬಳ್ಳಾರಿ, ಹಾಸನ, ಕೊಡಗು, ತುಮಕೂರು, ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. …
Read More »ಸಿಲಿಕಾನ್ ಸಿಟಿ ಬಿಟ್ಟು ಹೋಗುವವರಿಗೆ ಇದೀಗ ಅಷ್ಟದಿಗ್ಬಂಧನ
ಬೆಂಗಳೂರು: ಸಿಲಿಕಾನ್ ಸಿಟಿ ಬಿಟ್ಟು ಹೋಗುವವರಿಗೆ ಇದೀಗ ಅಷ್ಟದಿಗ್ಬಂಧನ ಹೇರಲಾಗಿದೆ. ಈ ಟೈಟ್ ನಿಯಮಗಳನ್ನು ಸರ್ಕಾರ ಕ್ಯಾಬಿನೆಟ್ ಸಭೆಯ ಬಳಿಕ ತರುವ ಸಾಧ್ಯತೆಗಳಿವೆ. ಬೆಂಗಳೂರಿಂದ ತಮ್ಮ ಊರಿಗೆ ಈಗ ಹೋಗೋರಿಗೆ ತರುವ ರೂಲ್ಸ್ ಗಳ ಇನ್ ಸೈಡ್ ಡೀಟೆಲ್ಸ್ ಲಭ್ಯವಾಗಿದೆ. ಹೌದು. ಸಾವಿರಾರು ಮಂದಿ ಶನಿವಾರ, ಸೋಮವಾರದಿಂದ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕೊರೊನಾ ಭಯ, ಬದುಕಿಗೆ ಬರೆ ಹಾಗೂ ಜೀವನ ಕುಂಟುವುದು ಖರೆ ಅಂತ ಜಾಗ …
Read More »15 ಸಾವಿರ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ!
ಹುಬ್ಬಳ್ಳಿ: ನಗರದ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 15,820 ರೂ. ಹಣ ಮತ್ತು ದಾಖಲಾತಿಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಬಸ್ ಚಾಲಕ, ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಬಸ್ ನಿರ್ವಾಹಕ ಗುರುಸಿದ್ದಯ್ಯ ಜಿ. ಗೌಡರ್ ಮತ್ತು ಚಾಲಕ ಬಸವರಾಜ ಎನ್. ಬಾದಾಮಿ ರವರನ್ನು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಾಕರಸಾಸಂಸ್ಥೆಯ ಬಾಗಲಕೋಟೆ ವಿಭಾಗದ ಗುಳೇದಗುಡ್ಡ ಘಟಕಕ್ಕೆ ಸೇರಿದ ಕೆ.ಎ.29 ಎಫ್ 1251 ಸಂಖ್ಯೆಯ ಬಸ್ಸು …
Read More »ಹುಬ್ಬಳ್ಳಿಯ ಯಾದಗಿರಿ/ ಕ್ವಾರಂಟೈನ್ ಕೇಂದ್ರಗಳಲ್ಲಿನರಕಯಾತನೆ
ಯಾದಗಿರಿ/ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಮಧ್ಯೆ ಮತ್ತೊಂದು ಅವಾಂತರ ಸೃಷ್ಟಿಯಾಗುತ್ತಿದೆ. ಹೇಳೋಕೆ ಅವರಿಗೆಲ್ಲಾ ಉತ್ತಮ ವ್ಯವಸ್ಥೆ ಇದೆ ಅಂತಾರೆ. ಆದರೆ ಅವರು ಪ್ರತಿ ಕ್ಷಣಕ್ಕೂ ನರಕಯಾತನೆ ಆನುಭವಿಸುತ್ತಿದ್ದಾರೆ. ಹೌದು. ಯಾದಗಿರಿ ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ನಾನ ಮಾಡೋಕೆ ನೀರಿಲ್ಲ. ರಾತ್ರಿ ಸೊಳ್ಳೆ ಕಡಿತದಿಂದ ನಿದ್ದೆ ಇಲ್ಲ. ಊಟಕ್ಕೆ ಹಳಸಿದ ಬೇಳೆ ಸಾರು ನೀಡುತ್ತಾರೆ. ರೂಮ್‍ನಲ್ಲಿ ಸ್ವಚ್ಛತೆ ಇಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಾರೆ. ಕ್ವಾರೆಂಟೈನ್ ಕೇಂದ್ರ ಕೊರೊನಾ …
Read More »ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ- 2 ಗಂಟೆ ಅಂಬುಲೆನ್ಸ್‌ನಲ್ಲೇ ಸೋಂಕಿತ……..
ಹಾವೇರಿ: ಮಹಾಮಾರಿ ಕೊರೊನಾದಿಂದ ಅಂಬುಲೆನ್ಸ್, ಬೆಡ್ ಸಿಗುತ್ತಿಲ್ಲ ಎಂಬ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತನನ್ನು ಸೇರಿಸಿಕೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಹಾವೇರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಉಂಟಾಗಿದೆ. ಇದರಿಂದ ಸುಮಾರು ಎರಡು ಗಂಟೆ ಸಮಯ ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್‌ನಲ್ಲೇ ಕೊರೊನಾ ಸೋಂಕಿತ ಕುಳಿತಿದ್ದರು. ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಹೀಗಾಗಿ ಬೆಡ್ ಖಾಲಿ ಆಗುವರೆಗೂ ಕಾಯಿರಿ ಎಂದು ಆಸ್ಪತ್ರೆ …
Read More »