ಬೆಳಗಾವಿ: ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ ಜನರ ಜಾಗೃತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾರೋ ಈ ರೀತಿ ಬೆದರಿಕೆಯೊಡ್ಡುತ್ತಿದ್ದಾರೆ ಅಂತಾ ಹೇಳಿದ್ದಾರೆ. ಯಾರು ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿಯುತ್ತಿಲ್ಲ. ಸಮಾಜದಲ್ಲಿ ನಿಜ ಹೇಳುವವರೆಗೆ ಈ ರೀತಿ ಸಮಸ್ಯೆ ಆಗುತ್ತದೆ. ಮೊದಲು ಆತ್ಮಸ್ಥೈರ್ಯ ಕುಗ್ಗಿಸಲು ಯತ್ನಿಸುತ್ತಾರೆ. ಕುಗ್ಗದಿದ್ದಾಗ ದೈಹಿಕವಾಗಿ ಕುಗ್ಗಿಸಲು ಯತ್ನಿಸುತ್ತಾರೆ. ಈ …
Read More »ರಫೇಲ್ ಡೀಲ್ – ಆಫ್ಸೆಟ್ ನಿಯಮವನ್ನೇ ಕೈಬಿಟ್ಟ ಸರ್ಕಾರ
ನವದೆಹಲಿ: ರಕ್ಷಣಾ ವ್ಯವಹಾರದ ವೇಳೆ ಈಗ ಇದ್ದ ಆಫ್ಸೆಟ್ ನಿಯಮವನ್ನೇ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 36 ರಫೇಲ್ ಯುದ್ಧ ವಿಮಾನ ಸಂಬಂಧ 59 ಸಾವಿರ ಕೋಟಿ ರೂ. ಒಪ್ಪಂದ ನಡೆದು 5 ವಿಮಾನ ಭಾರತಕ್ಕೆ ಬಂದರೂ ಡಸಾಲ್ಟ್ ಕಂಪನಿ ತನ್ನ ಆಫ್ಸೆಟ್ ನಿಯಮ ಪಾಲನೆ ಮಾಡಿಲ್ಲ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಉಲ್ಲೇಖಿಸಿತ್ತು. ಸಂಸತ್ತಿನಲ್ಲಿ ಸಿಎಜಿ ವರದಿ ಮಂಡನೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ರಕ್ಷಣಾ ಖರೀದಿ ನಿಯಮಗಳಿಗೆ ಬದಲಾವಣೆ …
Read More »ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊರೊನಾ ಸೋಂಕು
ಬೆಂಗಳೂರು: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ ನಲ್ಲಿದ್ದಾರೆ. ಶಾಸಕರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಸೋಂಕು ತಗುಲಿರೋದು ದೃಢಪಟ್ಟಿದೆ. ಇದುವರೆಗೂ ಶಾಸಕರು 10 ಬಾರಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇಂದು ನನಗೆ ಕೊರೊನಾ ಸೋಂಕು ತಗುಲಿರೋದು ಧೃಡಪಟ್ಟಿದೆ. ನನ್ನ ಸಂಪರ್ಕಕ್ಕೆ …
Read More »ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ:ಶ್ರೀರಾಮುಲು
ಚಿತ್ರದುರ್ಗ: ನಾಡಿನ ಜನರು ಶ್ರೀರಾಮುಲುಗೆ ಒಳ್ಳೆಯದಾಗಬೇಕೆಂದು ಬಯಸುತ್ತಾರೆ. ಏನೇ ಸ್ಥಾನ ಕೊಟ್ಟರು ನಿಭಾಯಿಸುವ ಶಕ್ತಿ ಭಗವಂತ ನನಗೆ ನೀಡಿದ್ದಾನೆ. ಪಕ್ಷ ಯಾವ ತಿರ್ಮಾನ ಕೈಗೊಳ್ಳಲಿದೆ ಕಾದು ನೋಡುತ್ತೇನೆ ಅಂತ ಹೇಳುವ ಮೂಲಕ ಪರೋಕ್ಷವಾಗಿ ತಾವು ಡಿಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸಂದೇಶದವನ್ನು ಸಚಿವ ಶ್ರೀರಾಮಲು ಪಕ್ಷಕ್ಕೆ ರವಾನಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪಟ್ಟಣದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ದೆಹಲಿಗೆ …
Read More »ಅಂಗಡಿ ಕುಟುಂಬ ಹೊರತುಪಡಿಸಿ ಟಿಕೆಟ್ ನೀಡೋದಾದ್ರೆ ಕತ್ತಿಗೆ ನೀಡಿ – ಅಭಿಮಾನಿಗಳ ಆಗ್ರಹ
ಚಿಕ್ಕೋಡಿ(ಬೆಳಗಾವಿ): ಇತ್ತಿಚೆಗೆ ನಿಧನರಾದ ಬೆಳಗಾವಿ ಸಂಸದ ಹಾಗೂ ರಾಜ್ಯ ರೇಲ್ವೆ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ನಿಧನದ ಬೆನ್ನಲ್ಲೇ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಲು ನಳಿನ್ ಕುಮಾರ್ ಭೇಟಿ ನೀಡಿ ಟಿಕೆಟ್ ಸಂಬಂಧಿಸಿದಂತೆ ಅನೌಪಚಾರಿಕ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮುಂಬರುವ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಗಾಗಿ ಕಮಲ ನಾಯಕರಲ್ಲಿ ಪೈಪೋಟಿ ಶುರುವಾಗಿದ್ದು, ಈ ಪೈಕಿ ಹಲವು ನಾಯಕರು …
Read More »ಬೆಂಗಳೂರು ಉಗ್ರರ ಕೇಂದ್ರವಾಗಿದೆ’ ಎಂಬ ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ
ಬೆಂಗಳೂರು, ಸೆ. 29: `ಬೆಂಗಳೂರು ಉಗ್ರರ ಕೇಂದ್ರವಾಗಿದೆ’ ಎಂಬ ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ. ಇಂಥ ಹೇಳಿಕೆಯನ್ನು ಸಮರ್ಥಿಸಲಾಗದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಕಟ ಅನುಭವಿಸಿದ್ದನ್ನು ನಾನು ಮಾಧ್ಯಮದ ಮೂಲಕ ನೋಡಿದೆ. ಈ ಅಪ್ರಬುದ್ಧ ಹೇಳಿಕೆ ಬಿಜೆಪಿಯ ಹಿರಿಯರಿಗೆ ಮಾಡಿದ ಅಪಮಾನವೂ ಹೌದು’ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ …
Read More »ಜೀವ ಜಲವಿಲ್ಲದೆ ಬೇಸತ್ತ ಸೋಂಕಿತರ ಬಗ್ಗೆ ಯಾಕಿಷ್ಟು ತಾತ್ಸಾರ?
ಬೆಳಗಾವಿ: ಕೊರೊನಾ.. ಆರಂಭದಲ್ಲೇ ಹೊಸ ವರ್ಷದ ಹರುಷವನ್ನೇ ಹಾಳು ಮಾಡಿ ದಾರಿದ್ರ್ಯ ತುಂಬಿದ ಮಹಾಮಾರಿ ಕೊರೊನಾ ದೇಶಕ್ಕೆ ಕಂಟಕವಾಗಿ ಕಾಡುತ್ತಿದೆ. ಜೀವನವನ್ನೇ ನರಕ ಮಾಡಿರುವ ಕೊರೊನಾ ಇನ್ನೂ ಕಡಿಮೆಯಾಗಿಲ್ಲ. ದಿನೇ ದಿನೇ ತನ್ನ ಪ್ರತಾಪ ತೋರಿಸುತ್ತಲೇ ಸಾಗಿದೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಸಹ ಎಡವುತ್ತಿದ್ದಾರೆ. ಜಿಲ್ಲೆಯ ಬಿಮ್ಸ್ನಲ್ಲಿ ನೀರಿಗಾಗಿ ಕೊರೊನಾ ಸೋಂಕಿತರು ಪರದಾಡುತ್ತಿರುವಂತ ಪರಿಸ್ಥಿತಿ ಎದುರಾಗಿದೆ. ಕುಡಿಯುವುದಕ್ಕೂ ನೀರಿಲ್ಲ, ಶೌಚಾಲಯಕ್ಕೂ ನೀರಿಲ್ಲ. ಕೊವಿಡ್ ವಾರ್ಡ್ನಲ್ಲಿ …
Read More »IPS ಅಧಿಕಾರಿ ಮಾಡ್ತೀನಿ ಅಂತಾ TV ನಟಿ ಮತ್ತು ಪತಿಯಿಂದ 3.5 ಕೋಟಿ ರೂ ವಂಚನೆ, ಎಲ್ಲಿ?
ಮುಂಬೈ: ಐಪಿಎಸ್ ಅಧಿಕಾರಿಯಾಗಿ ನೇಮಕಗೊಳಿಸುವುದಾಗಿ ಭರವಸೆ ನೀಡಿ 3.5 ಕೋಟಿ ರೂ.ಗೆ ವಂಚನೆ ಮಾಡಿದ್ದ ಟಿವಿ ನಟಿ ಸಪ್ನಾ ರಹಾನ್ (28) ಮತ್ತು ಅವರ ಪತಿ ಪುನೀತ್ ಕುಮಾರ್ ರಹಾನ್ (26) ದಂಪತಿಯನ್ನು ಬಂಧಿಸಲಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಭಾನುವಾರ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. ಸಪ್ನಾ ರಹಾನ್ ಟಿವಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಹೀಗಾಗಿ ಅವರಿಗೆ ಅನೇಕ ಪ್ರಭಾವಿಗಳ ಪರಿಚಯವಿರುತ್ತೆ ಎಂದು ವ್ಯಕ್ತಿಯೊಬ್ಬ ಇವರನ್ನು ನಂಬಿದ್ದ. ಈ ನಂಬಿಕೆಯನ್ನೇ ಅದಾಯ ಮಾಡಿಕೊಳ್ಳಲು …
Read More »ರಾಜ್ಯದಲ್ಲಿ ಸಾಲಬಾಧೆಯಿಂದ ಶರಣಾಗುತ್ತಿರುವ ರೈತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
ಬೆಂಗಳೂರು (ಸೆ. 29): ರಾಜ್ಯದಲ್ಲಿ ಸಾಲಬಾಧೆಯಿಂದ ಶರಣಾಗುತ್ತಿರುವ ರೈತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಭಾನುವಾರವಷ್ಟೇ ಆತ್ಮಹತ್ಯೆ ಮಾಡಿಕೊಂಡ ಮೂವರು ರೈತರು ಸೇರಿದಂತೆ ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೂ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ವಿಜಯಪುರದ ಸಿಂದಗಿ ತಾಲೂಕಿನ ಯರಗಲ್ ಬಿ.ಕೆ.ಗ್ರಾಮದ ಮಲಕಪ್ಪೆ ಜೆಟ್ಟೆಪ್ಪ ಬಾಲಪ್ಪಗೋಳ (4 ಲಕ್ಷ ರು. ಸಾಲ), ಹಾವೇರಿಯ ರಾಣೆಬೆನ್ನೂರಿನ ನದಿಹರಳಹಳ್ಳಿಯ ಮಹಾಂತೇಶಪ್ಪ ಹನುಮಂತಪ್ಪ ಬಜಾರಿ (3 ಲಕ್ಷ ರು. ಸಾಲ) ಮತ್ತು ಬಾಗಲಕೋಟೆ ಮುಧೋಳ …
Read More »ಸುರೇಶ್ ಅಂಗಡಿಯನ್ನ ಮುಖ್ಯಮಂತ್ರಿಯಾಗಿ ಮಾಡುವ ಸಭೆ ನಡೆದಿತ್ತಂತೆ: ಎಲ್ಲಿ, ಯಾವಾಗ?
ಬೆಳಗಾವಿ: ಕೇಂದ್ರ ಸಚಿವ, ಸ್ಥಳೀಯ ಸಂಸದ ಸುರೇಶ್ ಅಂಗಡಿ ಅಕಾಲಿಕ ಸಾವಿಗೀಡಾದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸುರೇಶ್ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ, ದಿ. ಸುರೇಶ್ ಅಂಗಡಿ ಸೋದರ ಮಾವ ಲಿಂಗರಾಜ್ ಪಾಟೀಲ್ ಅವರು ರಾಜ್ಯ ರಾಜಕೀಯದ ಮೇಲೆ ಹೊಸ ಬಾಂಬ್ ಹಾಕಿದ್ದಾರೆ. ನಾಲ್ಕು ತಿಂಗಳ ಹಿಂದೆ ಸುರೇಶ್ ಅಂಗಡಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಕುರಿತು ಸಭೆ ನಡೆದಿತ್ತು. ಕರ್ನಾಟಕ …
Read More »