ನವದೆಹಲಿ: ತಾನೊಬ್ಬ ಖ್ಯಾತ ಸೈಕ್ಲಿಸ್ಟ್ ಆಗಬೇಕು ಎಂದು ಕನಸು ಕಾಣುತ್ತಿರೋ ಬಡ ವಿದ್ಯಾರ್ಥಿಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಸೈಕಲ್ ಗಿಫ್ಟ್ ಮಾಡಿ ಸಾಧನೆಗೆ ಉತ್ತೇಜನ ನೀಡಿದ್ದಾರೆ. ಹೌದು. ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಯೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ರಿಯಾಜ್ ಇಂದು ರಾಷ್ಟ್ರಪತಿಯವರಿಂದ ಉಡುಗೊರೆ ಪಡೆದ ವಿದ್ಯಾರ್ಥಿ. ಈದ್ ಮಿಲಾದ್ ಹಬ್ಬದಂದೇ ಗಿಫ್ಟ್ ನೀಡಿರುವ ರಾಷ್ಟ್ರಪತಿಗಳು ವಿಶ್ವಮಟ್ಟದ ಸೈಕ್ಲಿಸ್ಟ್ ಆಗಿ ಮಿಂಚಬೇಕು ಎಂದು ಶುಭಹಾರೈಸಿದ್ದಾರೆ. ಮೂಲತಃ ಬಿಹಾರದ ಮಧುಬಾನಿ …
Read More »ಕೊರೊನಾ ಉಪಕರಣ ಖರೀದಿಯಲ್ಲಿ ಸರ್ಕಾರ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ………!
ಬೆಂಗಳೂರು: ಕೊರೊನಾ ಉಪಕರಣ ಖರೀದಿಯಲ್ಲಿ ಸರ್ಕಾರ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ಆರೋಪ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದೆ. ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಈ ಹಿಂದೆಯೇ ತಿಳಿಸಿತ್ತು. ಅದರಂತೆ ಸದ್ಯ ನೋಟಿಸ್ ಜಾರಿ ಮಾಡಲಾಗಿದ್ದು, ಮಾಹಿತಿಯೇ …
Read More »ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವರ್ಗಾವಣೆ
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಒಂದು ವರ್ಷದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಕಮಲ್ ಪಂಥ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಿ ಆದೇಶ ನೀಡಿದೆ. ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಆಗಿ ವಗಾವಣೆ ಮಾಡಲಾಗಿದೆ. ಉಳಿದಂತೆ ಕಮಲ್ ಪಂಥ್ ಜಾಗಕ್ಕೆ ದಯಾನಂದ ಅವರನ್ನು ಗುಪ್ತಚರ ಇಲಾಖೆಯ ಎಡಿಜಿಪಿ ಆಗಿ ನೇಮಕ ಮಾಡಲಾಗಿದೆ. ಆ.1ಕ್ಕೆ ಭಾಸ್ಕರ್ ರಾವ್ ಅವರು ಆಯುಕ್ತರಾಗಿ ಒಂದು ವರ್ಷ …
Read More »ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವವರು: ಬಿ.ಕೆ.ಹರಿಪ್ರಸಾದ್
ಕಾರವಾರ: ಕೊರೊನಾ ವಿಚಾರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವವರು. ಶವದ ಮೇಲೆ ಕುಳಿತು ಊಟ ಮಾಡುವವರು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ. ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರಿಗೆ ಯಾವುದೇ ನಾಚಿಕೆ, ಮಾನಮರ್ಯಾದೆ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ಇಂಥ ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದು …
Read More »ತಾಯಿಯ ಮಾಂಗಲ್ಯವನ್ನು ಬಿಡಿಸಿಕೊಡುವ ಜವಾಬ್ದಾರಿ ನನ್ನದು: ಸಿಸಿ ಪಾಟೀಲ್
ಗದಗ: ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದ ತಾಯಿ ಕಸ್ತೂರಿ ಅವರು ಅಡವಿಟ್ಟಿರುವ ಮಾಂಗಲ್ಯವನ್ನು ವಾಪಸ್ ಕೊಡಿದುವುದಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ಕಸ್ತೂರಿ ಅವರು ಮಾಂಗಲ್ಯವನ್ನು ಅಡವಿಟ್ಟು ಟಿವಿ ಖರೀದಿ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಸುದ್ದಿಯನ್ನುಮಾಡಿತ್ತು. ಈ ವರದಿಯನ್ನು ಗಮನಿಸಿಮಾತನಾಡಿದ ಸಚಿವ ಸಿಸಿ ಪಾಟೀಲ್, ಘಟನೆ ಬಗ್ಗೆ ನಾನು ಮಾಹಿತಿ ಪಡೆದು ಮಹಿಳೆಯೊಂದಿಗೆ ಮಾತನಾಡಿದ್ದೇನೆ. ಅಲ್ಲದೇ …
Read More »ಚಿಕಿತ್ಸೆ ಸಿಗದೆ ಆರು ದಿನದ ಬಾಣಂತಿ ಕೊರೊನಾಗೆ ಬಲಿ
ಬೆಂಗಳೂರು: ಆಸ್ಪತ್ರೆಯಲ್ಲಿ ಬೆಡ್ ಸಿಗದೆ 6 ದಿನದ ಬಾಣಂತಿ ಕೊರೊನಾಗೆ ಬಲಿಯಾಗಿರುವ ಅಮಾನವೀಯ ಘಟನೆ ರಾಜಾಜಿನಗರದಲ್ಲಿ ನಡೆದಿದೆ. ರಾಜಾಜಿನಗರ ಖಾಸಗಿ ಆಸ್ಪತ್ರೆಯಲ್ಲಿ 6 ದಿನಗಳ ಹಿಂದೆ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು. ಆದರೆ ಮನೆಗೆ ತೆರಳಿದ ಸಂದರ್ಭದಲ್ಲಿ ಮಹಿಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಬಾಣಂತಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಅವರಿಗೆ ಆ್ಯಂಟಿಜೆನ್ ಟೆಸ್ಟ್ ಮಾಡಿದ ವೇಳೆ …
Read More »ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ:ಪುನೀತ್ ರಾಜ್‍ಕುಮಾರ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ‘ಯುವರತ್ನ’ ಸಿನಿಮಾ ತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್ ಅನಂದರಾಮ್ ಅವರು, ಅಭಿಮಾನಿಗಳ ಕೋರಿಕೆಗಾಗಿ “ಯುವರತ್ನ” ಪೋಸ್ಟರ್ ವರಮಹಾಲಕ್ಷ್ಮಿಗೆ ದೊಡ್ಮನೆ ಅಭಿಮಾನಿ ಬಳಗಕ್ಕೆ ಇದು ಸಮರ್ಪಣೆ. ಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್ ಜೊತೆಗೆ ಒಂದು ಡೈಲಾಗ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. …
Read More »ನಾಳೆ ಪ್ರಧಾನಿ ನರೇಂದ್ರ ಮೋದಿ ಭಾಷಣ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉದ್ದೇಶಿಸಿ ಸಂಜೆ 4.30ಕ್ಕೆ ಮಾತನಾಡಲಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಈ ಕುರಿತು ಪ್ರಧಾನಿ ಮೋದಿ ಭಾಷಣದಲ್ಲಿ ಮಾತನಾಡಲಿದ್ದಾರೆ ಎಂದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತಿಳಿಸಿದೆ. ಅಲ್ಲದೇ ಕೊರೊನಾ ಅನ್‍ಲಾಕ್ 3.0 ನಾಳೆಯಿಂದ ಜಾರಿ ಆಗಲಿದೆ. ಈ ವೇಳೆಯಲ್ಲೇ ಪ್ರಧಾನಿಗಳು ಭಾಷಣ ಮಾಡುತ್ತಿರುವುದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.ಮಾತೃಭಾಷೆಯಲ್ಲೇ …
Read More »ಕೊರೊನಾ ಗೆದ್ದು ಬಂದ ಸಂಚಾರಿ ಪೊಲೀಸ್ ಠಾಣೆ ಸೇನಾನಿಗಳಿಗೆ ಸ್ವಾಗತ ಸನ್ಮಾನ
ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶತಾಯ ಗತಾಯ ಹೋರಾಟ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಬೆನ್ನುಬಿಡದೇ ಕಾಡುತಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಿ ಜಯಗಳಿಸಿದ ಜಿಲ್ಲೆಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪಿ.ಬಿ.ಕಾಟೆ, ಎನ್.ಸಿ.ಪೂಜಾರ, ಗದಿಗೆಪ್ಪ ಕಿತ್ತೂರ ಅವರು ಕೊರೊನಾ ವೈರಸ್ ನಿಂದ ಗುಣಮುಖರಾಗಿ ಇಂದು ವೃತ್ತಿಗೆ ಆಗಮಿಸಿದ್ದು, ಎಲ್ಲರಲ್ಲಿಯೂ ಸಂತೋಷದ ವಾತಾವರಣ ನಿರ್ಮಾಣವಾಯಿತು …
Read More »ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ ಫಿನಾಲೆಗೆ ಆಯ್ಕೆ
ಚಿಕ್ಕೋಡಿ: ನಿಪ್ಪಾಣಿ ವಿ.ಎಸ್.ಎಂ. ಸೋಮಶೇಖರ್ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಎರಡು ಯೋಜನೆಗಳು ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ 2020ರ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿವೆ. ಭಾರತ ಸರಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಹೊಸ ದೆಹಲಿಯ ಎಐಸಿಟಿಇ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಸಸ ಸ ಸ ಸಸಾಫ್ಟ್‌ವೇರ್‌ನ ವಿಶ್ವದ ಅತಿ ದೊಡ್ಡ ಮುಕ್ತ ನಾವಿನ್ಯತೆ ಮಾದರಿ ಸ್ಪರ್ಧೆಯಲ್ಲಿ ವಿಎಸ್‌ಎಂಎಸರ್ ಆರ್‌ಕೆಐಟಿ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದ್ದಾರೆ. ಪ್ರೊ| ಮಹಾದೇವ ಹರಕುಡೆ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ …
Read More »