ಬೆಂಗಳೂರು: ಶೇಕಡಾ 30ರಷ್ಟು ಪಠ್ಯವನ್ನು ಕಡಿತಗೊಳಿಸುವ ನಿರ್ಧಾರವನ್ನು ಸರ್ಕಾರ ಬದಲಿಸಿದ್ದು ಟಿಪ್ಪು ಸುಲ್ತಾನ್ (Tippu Sultan) ಮತ್ತು ಸಂವಿಧಾನದ ಬಗ್ಗೆ ಪಠ್ಯ ಕಡಿತ ಮಾಡಿದ ವಿವಾದ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯ ಹಿಂಪಡೆಯಲು ಸರ್ಕಾರ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್, ಹೈದರ್ ಅಲಿಗೆ ಸಂಬಂಧಿಸಿದ ಹಲವಾರು ಅಧ್ಯಾಯಗಳನ್ನು 7 ನೇ ತರಗತಿಯ ಪಠ್ಯಪುಸ್ತಕದಿಂದ ಕೈಬಿಟ್ಟಿದ್ದಕ್ಕಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸದ್ಯಕ್ಕೆ ಪಠ್ಯ ಕಡಿತ …
Read More »ಹುಲಿ ಚರ್ಮ ಸಾಗಿಸುತ್ತಿದ್ದವರ ಬಂಧನ……..
ಮೈಸೂರು : ಹುಲಿ ಚರ್ಮ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಡಿಸಿಎಫ್ ಎ.ಟಿ. ಪೂವಯ್ಯ ಹಾಗೂ ಅಧಿಕಾರಿಗಳಾದ ಲಕ್ಷ್ಮೀಶ್, ಮೋಹನ್, ಸುಂದರ್, ಪ್ರಮೋದ್ ನೇತೃತ್ವದ ತಂಡ ನಡೆಸಿದ ಕಾರ್ಯಚರಣೆಯಲ್ಲಿ ಇವರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರನ್ನು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ (KRS) ಬಳಿಯ ಸಂತೆಮಾಳದ ನಿವಾಸಿಗಳಾದ ಆಕಾಶ್ ರಾವ್, ವಿಷ್ಣು ಎಂದು ಗುರುತಿಸಲಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಕೃತಕ ಅಂಗ ಪಡೆಯಲಿರುವ ವಿಶ್ವದ ಮೊದಲ ಹುಲಿ ಹುಲಿ …
Read More »ಕರೋನಾದೊಂದಿಗೆ ‘ಹೇಗೆ ಬದುಕಬೇಕು’ ಎಂದು ಕಲಿಯಬೇಕು, ದೀರ್ಘಕಾಲೀನ ಲಾಕ್‌ಡೌನ್ ಸರಿಯಲ್ಲ: ಗಡ್ಕರಿ
ಕೋವಿಡ್ -19 ಸಾಂಕ್ರಾಮಿಕ ರೋಗಕ್ಕಿಂತ ದೀರ್ಘಕಾಲದ ಲಾಕ್‌ಡೌನ್ ಹೆಚ್ಚು ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವೈರಸ್ ಅನ್ನು ಎದುರಿಸಲು ‘ಹೇಗೆ ಬದುಕಬೇಕು’ ಎಂದು ಕಲಿಯಲು ಅವರು ಸಲಹೆ ನೀಡಿದರು. ಮುಂಬೈ: ದೀರ್ಘಕಾಲದ ಲಾಕ್‌ಡೌನ್ (Lockdown) ಕೋವಿಡ್ -19 ಸಾಂಕ್ರಾಮಿಕ ರೋಗಕ್ಕಿಂತ ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ತಿಳಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಕರೋನಾದೊಂದಿಗೆ ‘ಹೇಗೆ ಬದುಕಬೇಕು’ ಎಂದು …
Read More »ನವೆಂಬರ್ ವರೆಗೂ ಅಕ್ಕಿ ವಿತರಣೆಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ
ಬೆಂಗಳೂರು,ಜು.31-ಬಿಪಿಎಲ್ ಕಾರ್ಡ್ ಇಲ್ಲದವರು ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ, ಮುಖ್ಯವಾಗಿ ವಲಸಿಗರಿಗೆ ನವೆಂಬರ್‍ವರೆಗೆ ಅಕ್ಕಿ ಮತ್ತು ಧಾನ್ಯಗಳನ್ನು ವಿತರಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯ ಸರ್ಕಾರವು ತನ್ನ ಗೋದಾಮಿನಲ್ಲಿ 28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹೊಂದಿದ್ದು, ಇದು ಎರಡು ತಿಂಗಳವರೆಗೆ ಮಾತ್ರ ಸಾಕಾಗಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಈ ಸಂಬಂಧ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ …
Read More »ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವು
ಆನೇಕಲ್: ಸರ್ಕಾರಿ ಆಸ್ಪತ್ರೆಗೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ತಾಲ್ಲೂಕು ಆಡಳಿತ ತೆರವುಗೊಳಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನಡೆದಿದೆ. ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದ ತಾಲ್ಲೂಕು ಆಡಳಿತ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿದ್ದ ಸುಮಾರು ಐವತ್ತಕ್ಕೂ ಅಧಿಕ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎರಡು ಬದಿಗಳಲ್ಲಿ ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಹಲವು …
Read More »ಮೃತ ದೇಹದಿಂದ ಕೊರೋನಾ ವೈರಸ್ ಹರಡುತ್ತದೆಯೇ?;
ಹಾವೇರಿ: ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯಿಂದ ಅಥವಾ ಮೃತದೇಹದಿಂದ ಕೊರೋನಾ ವೈರಸ್ ಹರಡುತ್ತಿದೆಯಾ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುವುದು ಸಹಜ. ಈ ಅನುಮಾನ ಅಥವಾ ಗೊಂದಲಕ್ಕೆ ಇಲ್ಲಿದೆ ಉತ್ತರ. ಕೊರೋನಾ ಸೋಂಕಿನಿಂದ ಮೃತರಾದ ವ್ಯಕ್ತಿಯ ದೇಹದಲ್ಲಿ ಜೀವಹೋದ ನಾಲ್ಕು ತಾಸಿನವರೆಗೆ ಕೊರೋನಾ ವೈರಸ್ ಜೀವಂತವಾಗಿರುತ್ತದೆ. ನಂತರ ವೈರಸ್ ನಾಶವಾಗುತ್ತದೆ. ಕೊರೋನಾ ವೈರಸ್ ಪರಾವಲಂಬಿ ಜೀವಿಯಾಗಿರುವುದರಿಂದ ಸ್ವಂತವಾಗಿ ಬೆಳೆಯಲು ಅಥವಾ ಜೀವಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸೋಂಕಿನಿಂದ ಸತ್ತ ವ್ಯಕ್ತಿಯ ಶವವನ್ನು …
Read More »ಬೆಂಗಳೂರು : ಮಹಾಮಾರಿ ಕೊರೋನಾ ವೈರಸ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕಹಾಮ ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರದಂದು ಈ ಹೇಳಿಕೆ ನೀಡಿರುವ ಅವರು, ಕಹಾಮ 992 ನೌಕರರಿಗೆ ವಿಮೆ ಮಾಡಿಸಲು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನಾ …
Read More »ಆ.16ರಿಂದ ಬೆಂಗಳೂರು-ಹುಬ್ಬಳ್ಳಿ-ದೆಹಲಿ ವಿಮಾನ ಸಂಚಾರ ಪುನರಾರಂಭ
ಹುಬ್ಬಳ್ಳಿ, – ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಿದ್ದ ಸ್ಟಾರ್ ಏರ್ ವಿಮಾನ ಆಗಸ್ಟ್ 16ರಿಂದ ಬೆಂಗಳೂರು- ಹುಬ್ಬಳ್ಳಿ- ದೆಹಲಿ (ಹಿಂಡಾನ್) ನಡುವೆ ಸಂಚಾರ ಪುನರಾರಂಭಿಸಲಿದೆ. ವಾರದಲ್ಲಿ ನಾಲ್ಕು ದಿನ ಸೋಮವಾರ, ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ವಿಮಾನ ಸಂಚರಿಸಲಿದೆ. ಈಗಾಗಲೇ ಆನ್‍ಲೈನ್ ಬುಕ್ಕಿಂಗ್ ಶುರು ಮಾಡಲಾಗಿದೆ. ಶೀಘ್ರದಲ್ಲೇ ಮುಂಬೈ, ಅಹಮದಾಬಾದ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಲಾಕ್‍ಡೌನ್‍ಗೂ ಮುನ್ನ ನಿತ್ಯ 14 ವಿಮಾನ ಹಾರಾಡುತ್ತಿದ್ದವು. ಬಳಿಕ ಎಲ್ಲ ಸ್ಥಗಿತಗೊಂಡಿದ್ದವು. …
Read More »ಸಿ.ಪಿ ಯೋಗೇಶ್ವರ್‌ಗೆ ಸಿಎಂ ಬಿಎಸ್‍ವೈ ಖಡಕ್ ವಾರ್ನಿಂಗ್…………
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಆರೋಪ ಮಾಡಿರುವ ಸಿಪಿ ಯೋಗೇಶ್ವರ್‌ಗೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷ, ಸರ್ಕಾರಕ್ಕೆ ಮುಜುಗರ ಆಗುವಂಥ ಹೇಳಿಕೆ ಕೊಡಬೇಡಿ. ಕೊರೊನಾ ಸಮಯದಲ್ಲಿ ಅನಗತ್ಯ ಹೇಳಿಕೆ ಕೊಡಬೇಡಿ. ನಿಮ್ಮ ಕಿತ್ತಾಟ ಕ್ಷೇತ್ರದ ಮಟ್ಟಿಗೆ ಇಟ್ಕೊಳ್ಳಿ. ಸುಮ್ನೆ ನಿಮ್ ಜಂಜಾಟದಲ್ಲಿ ನಮ್ಮನ್ನ್ಯಾಕೆ ಎಳೀತೀರಾ ಅಂದಿದ್ದಾರೆ ಅಂತ ತಿಳಿದುಬಂದಿದೆ. ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ …
Read More »ವರಮಹಾಲಕ್ಷ್ಮಿ ಸರಳ ಆಚರಣೆ
ದಾವಣಗೆರೆ: ಕೊರೊನಾ ನಡುವೆಯೂ ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸರಳ, ಸಂಭ್ರಮದಿಂದ ನಡೆಯಿತು. ಮನೆಮನೆಗಳಲ್ಲಿ ಹಬ್ಬದ ಸಡಗರ ನೆಲೆಸಿತ್ತು. ಮುತ್ತೈದೆಯರು ಕೊರೊನಾ ಪರಿಣಾಮ ಸರಳತೆಯ ಆಚರಣೆಗೆ ಮೊರೆಹೋಗಿದ್ದರು. ಪ್ರತಿ ವರ್ಷವೂ ಅಕ್ಕಪಕ್ಕದ ಮನೆಯವರು, ಸ್ನೇಹಿತರು ಹಾಗೂ ಸಂಬಂಧಿಕರನ್ನು ಕರೆದು ಮಹಿಳೆಯರು ಸಡಗರ, ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗಷ್ಟೇ ಸೀಮಿತಗೊಂಡಿತು. ನೆರೆಹೊರೆಯ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವುದು ಸಂಪ್ರದಾಯ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಕರೆಯಲು ಹಿಂಜರಿಯುವಂತಾಯಿತು. …
Read More »