Breaking News

ಬೆಳಗಾವಿ ಜಿಲ್ಲೆಯ ಶಬರಿ ಕೊಳ್ಳದಲ್ಲಿ ವಿಶೇಷ ಪೂಜೆ

ಬೆಳಗಾವಿ ಜಿಲ್ಲೆಯ ಶಬರಿ ಕೊಳ್ಳದಲ್ಲಿ ವಿಶೇಷ ಪೂಜೆ ಪ್ರಭು ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭವ್ಯ ದಿವ್ಯ ಶ್ರೀ ರಾಮ ಮಂದಿರದ ಭೂಮಿಪೂಜೆ ಕಾರ್ಯಕಮ. ಅಂಗವಾಗಿ ಭಾರತ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ರಾಮದುರ್ಗ ಮಂಡಲವತಿಯಿಂದ ಇಂದು ಪ್ರಭು ಶ್ರೀರಾಮ ಮಾತೆ ಸೀತಾದೇವಿ ಲಕ್ಷ್ಮಣ ದೇವರು ಗಳು ಪಾದಸ್ಷರ್ಷಿಸಿದ ಪುಣ್ಯಭೂಮಿ ಶಬರಿ ಕೊಳ್ಳ . ಮಾತೆ ಶಬರಿ ದೇವಿಗೆ ದರ್ಶನ ನೀಡಿದ ಒಂದು ಪವಿತ್ರ ಸ್ಥಳ. ಶಾಂತಿಃ ಸಮೃದ್ಧ ಕ್ಕಾಗಿ …

Read More »

ನಿಜಾಮುದ್ದೀನ್  EXPRESS ಎಂಜಿನ್ ಮೇಲೆ ಗುಡ್ಡ ಕುಸಿತವಾಗಿದ್ದು, ರೈಲು ಸಂಚಾರ ಬಂದ

ಬೆಳಗಾವಿ: ಜಿಲ್ಲೆಯ ಕ್ಯಾಸರ್ಲೋಕ್ ದಿಂದ ಕರಂಜೋಲ್ ರೈಲ್ವೆ ಸ್ಟೇಷನ್ ಮಧ್ಯದಲ್ಲಿ ನಿಜಾಮುದ್ದೀನ್  ಎಸ್ಪ್ರೇಸ್ ಎಂಜಿನ್ ಮೇಲೆ ಗುಡ್ಡ ಕುಸಿತವಾಗಿದ್ದು, ರೈಲು ಸಂಚಾರ ಬಂದ ಆಗಿದೆ.  ಬುಧವಾರ ನಿಜಾಮುದ್ದೀನ್ ದಿಂದ ವಾಸ್ಕೋಡಗಾಮ ಎಸ್ಪ್ರೇಸ್ ಎಂಜಿನ್ ಮೇಲೆ ಗುಡ್ಡ ಕುಸಿತವಾಗಿದ್ದು, ರೈಲ್ವೆ ಸ್ಥಳದಲ್ಲಿಯೇ ನಿಂತುಕೊಂಡಿದೆ. ಕ್ಯಾಸರ್ಲೊಕ್ ದಿಂದ ಕರಂಜೋಲ್ ರೈಲ್ವೆ ಸ್ಟೇಷನ್ ನಡುವೆ ಸಂಭವಿಸಿರುವ ಘಟನೆ ಸಂಭವಿಸಿದೆ. ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.   ಜಿಲ್ಲೆಯಾದ್ಯಂತ ಕಳೆದ 3 ದಿನಗಳಿಂದ ನಿರಂತರ …

Read More »

ರಾಹುಲ್ ಗಾಂಧಿ ಪ್ರಭು ಶ್ರೀ ರಾಮನ ಅನೇಕ ಶ್ರೇಷ್ಠ ಗುಣಗಳನ್ನು ಒಳಗೊಂಡ ಟ್ವೀಟ್ ವೊಂದನ್ನು ಮಾಡಿದ್ದಾರೆ.

ಹೊಸದಿಲ್ಲಿ:  ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಭವ್ಯ ಅಡಿಪಾಯ ಹಾಕುವ ಸಮಾರಂಭ ನಡೆಯುತ್ತಿರುವ ದಿನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಭು ಶ್ರೀ ರಾಮನ ಅನೇಕ ಶ್ರೇಷ್ಠ ಗುಣಗಳನ್ನು ಒಳಗೊಂಡ ಟ್ವೀಟ್ ವೊಂದನ್ನು ಮಾಡಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ, ಪ್ರಭು ರಾಮ್ ಅತ್ಯುತ್ತಮ ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಾಗಿದ್ದಾರೆ, “ಅವರು ನಮ್ಮ ಹೃದಯದ ಆಳದಲ್ಲಿ ನೆಲೆಸಿರುವ ಮಾನವೀಯತೆಯ ಚೈತನ್ಯ” ಎಂದು ಹೇಳಿದ್ದಾರೆ. “ರಾಮ್ ಎಂದರೆ ಪ್ರೀತಿ, ಅವನು ಎಂದಿಗೂ …

Read More »

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ನಿಧನ…..

ಪುಣೆ:  ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನೀಲಂಗೆಕರ್ ಅವರು ಪುಣೆಯಲ್ಲಿ ಬುಧವಾರ ನಿಧನರಾದರು. ಪುಣೆಯ ರೂಬಿ ಹಾಲ್ ಕ್ಲಿನಿಕ್ ನಲ್ಲಿ ಅವರು ಕೊನೆಯುಸಿರೆಳೆದರು. COVID-19 ನಿಂದ ಚೇತರಿಸಿಕೊಂಡ ನಂತರ ಅವರನ್ನು ಇತ್ತೀಚೆಗೆ ಬೇರೆ  ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಆದರೆ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಮೂತ್ರಪಿಂಡ ವೈಫಲ್ಯದಿಂದ ಅವರು  ಮೃತಪಟ್ಟಿದ್ದಾರೆ ಎಂದು ಅವರ ಮೊಮ್ಮಗ ಬಿಜೆಪಿ ಶಾಸಕ ಸಂಭಜಿರಾವ್ ಪಾಟೀಲ್ ನೀಲಂಗೆಕರ್ ಖಚಿತಪಡಿಸಿದ್ದಾರೆ. …

Read More »

ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. 

ಬೆಳಗಾವಿ: ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ.  ಸಂಜು ಅವರು ಉತ್ತರ ಸಂಚಾರಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ರಜೆ ಮೇಲೆ ಖಾನಾಪುರ ತಾಲ್ಲೂಕಿನ ಹಟ್ಟಿಹೊಳ್ಳಿ ತಮ್ಮ ಸ್ವ ಗ್ರಾಮಕ್ಕೆ ತೆರಳಿದ್ದರು. ಬಳಿಕ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಹೃದಯಾಘಾತದಿಂದ ಕೊನೆಯೂಸಿರೆಳೆದಿದ್ದಾರೆ.

Read More »

ಎರಡು ದಿನಗಳಿಂದ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ.

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಹೀಗಾಗಿ  ನದಿಗಳು ಉಕ್ಕಿ ಹರಿಯುತ್ತಿವೆ. ನೇತ್ರಾವತಿ, ಅಘನಾಶಿನಿ, ಕಾವೇರಿ, ಕಾಳಿ ಸೇರಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ.  ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್​ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ನಂತರ ಮಳೆ ಆಗಿರಲೇ ಇಲ್ಲ. ಹೀಗಾಗಿ ರಾಜ್ಯದ ಜಲಾಶಯಗಳು ಅಂದುಕೊಂಡ ಮಟ್ಟಿಗೆ ತುಂಬಿಲ್ಲ. ಆದರೆ, ಈಗ …

Read More »

ರಾಮ ಬಿಟ್ಟ ಬಾಣಕ್ಕೆ ನಿರ್ಮಾಣವಾದ ಹೊಂಡವಿದೆ ಬೆಳಗಾವಿಯಲ್ಲಿ!

ಚಿಕ್ಕೋಡಿ(ಬೆಳಗಾವಿ): ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಪ್ರಾಚೀನ ಕಾಲದಲ್ಲಿ ನಿರ್ಮಿಸಿರುವ ರಾಮಲಿಂಗೇಶ್ವರ ದೇವಸ್ಥಾನ.ಶ್ರೀ ರಾಮ ವನವಾಸದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯ ಶಿಪ್ಪೂರ ಗ್ರಾಮಕ್ಕೆ ವಿಶ್ರಾಂತಿ ಪಡೆದು ಹೋಗಿದ್ದರು ಎನ್ನುವದಕ್ಕೆ ಇಲ್ಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನವೇ ಸಾಕ್ಷಿ. ಇಲ್ಲಿ ಸ್ವತಃ ಶ್ರೀ ರಾಮನು ಶಿವಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಿದ ಕಾರಣ ಈ ಕ್ಷೇತ್ರಕ್ಕೆ ಪೌರಾಣಿಕ ಕಥೆಯಿದೆ. ಗುಡ್ಡಗಾಡಿನಲ್ಲಿ ಇದ್ದ ಈ ಪ್ರದೇಶದಲ್ಲಿ ಶ್ರೀ ರಾಮನಿಗೆ ಕುಡಿಯಲು …

Read More »

ರಾಮಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ಮಾಡ್ತೀರೋ 82ರ ವೃದ್ಧೆ

ಭೋಪಾಲ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ದೀಕ್ಷೆ ಸ್ವೀಕಾರ ಮಾಡಿ, ಕಳೆದ 28 ವರ್ಷಗಳಿಂದ ಮಧ್ಯ ಪ್ರದೇಶದ ಜಬಲ್‍ಪುರಕ್ಕೆ ನಿವಾಸಿ ಊರ್ಮಿಳಾ ಚರ್ತುವೇದಿ (82) ಉಪವಾಸ ಮಾಡುತ್ತಿದ್ದಾರೆ.1992ರ ಡಿ.6 ರಂದು ವಿವಾದತ್ಮಾಕ ಕಟ್ಟದ ನೆಲಸಮ ಮಾಡಿದ ಸಮಯದಿಂದ ಊರ್ಮಿಳಾ ಅವರು ಉಪವಾಸ ಮಾಡುತ್ತಿದ್ದಾರೆ. ರಾಮನಿಗೆ ಮತ್ತೆ ಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು. ಕಳೆದ ವರ್ಷ ರಾಮಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಅನುಮತಿ …

Read More »

ಕೊಪ್ಪಳದ ಮುಸ್ಲಿಂ ಯುವಕಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ

ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಮುಸ್ಲಿಂ ಯುವಕನಲ್ಲಿ ಸಂಭ್ರಮ ಮನೆ ಮಾಡಿದೆ.ಹೌದು. ಮೂರು ವರ್ಷಗಳ ಹಿಂದೆ ಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ ತೆರಳಿದ್ದರು. 2017ರ ಏಪ್ರೀಲ್ 27 ರಂದು ಕೊಪ್ಪಳದಿಂದ ರೈಲು ಮೂಲಕ ತೆರಳಿ, 2017ರ ಮೇ 1 ರಂದು ಅಯೋಧ್ಯೆಯಲ್ಲಿದ್ದರು. ಅಲ್ಲದೆ ಅಂದೇ ಟ್ರಸ್ಟ್ ಗೆ ಒಂದು ಚೀಲ ಸಿಮೆಂಟ್ ನೀಡಿದ್ದರು. ಈ ವೇಳೆ ಶ್ರೀರಾಮ ಮಂದಿರ ಶೀಘ್ರವೇ ನಿರ್ಮಾಣವಾಗಲೆಂದು …

Read More »

ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ ಗಳಲ್ಲಿ ರಾಜ್ಯದ ಒಟ್ಟು 37 ಜನರು

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆಇದ್ದಾರೆ. ಯಶಸ್ವಿನಿ.ಬಿ ರಾಜ್ಯದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಚಿಕ್ಕಮಗಳೂರು ಮೂಲದ ಯಶಸ್ವಿನಿ 71ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇನ್ನು ಎಚ್. ವಿನೋದ್ ಪಾಟೀಲ್ (132) ಹಾಗೂ ಎಚ್.ಎಸ್.ಕೀರ್ತನಾ(167) ಕ್ರಮವಾಗಿ ರಾಜ್ಯಕ್ಕೆ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ. ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ …

Read More »