ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಭಾರೀ ಗಾಳಿ ಜೊತೆ ಧಾರಾಕಾರ ಮಳೆ ಸುರಿಯುತ್ತಿದೆ.ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಲ್ಲಲ್ಲಿ ಮನೆಗಳು ಧರೆಗುರುಳಿವೆ. ಮೂಡಿಗೆರೆ ತಾಲೂಕಿನ ಹೊರಟ್ಟಿ ಹಾಗೂ ಕಲ್ಮನೆ ಗ್ರಾಮದಲ್ಲಿ ಎರಡು ಮನೆಗಳು ಸಂಪೂರ್ಣ ಜಖಂಗೊಂಡಿವೆ. ಹೊರಟ್ಟಿ ಗ್ರಾಮದ ವಸಂತ ಪೂಜಾರಿ ಎಂಬುವರ ಮನೆಗೆ ತೇವ ಹೆಚ್ಚಾಗಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಅರ್ಧ ಭಾಗ ಕುಸಿದು ಬಿದ್ದಿದೆ. …
Read More »2024ರ ಚುನಾವಣೆಗೆ ಧೋನಿ ಸ್ಪರ್ಧಿಸಬೇಕು: ಸುಬ್ರಮಣಿಯನ್ ಸ್ವಾಮಿ
ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಸ್ಪರ್ಧಿಸಬೇಕೆಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.ಧೋನಿ ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿಯ ನಂತರ ಧೋನಿ ಏನು ಮಾಡುತ್ತಾರೆ ಎಂಬ ಕುತೂಹಲ ಎದ್ದಿದೆ. .ಈ ಕುತೂಹಲದ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ, ಎಂ.ಎಸ್. ಧೋನಿ ಕ್ರಿಕೆಟ್ನಿಂದ ನಿವೃತ್ತರಾಗುತ್ತಿದ್ದಾರೆ ಹೊರತು ಬೇರೆ ಯಾವುದರಿಂದಲೂ ಅಲ್ಲ. ಅವರ ಪ್ರತಿಭೆ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗಬೇಕು. …
Read More »ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖ, ಡಿಸ್ಚಾರ್ಜ್
ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖರಾಗಿದ್ದಾರೆ.ಆಗಸ್ಟ್ -9 ರಂದು ಆಸ್ಪತ್ರೆ ಗೆ ದಾಖಲಾಗಿದ್ದ ಸಚಿವ ಶ್ರೀರಾಮುಲು ಕೊರೋನಾದಿಂದ ಚೇತರಿಸಿಕೊಂಡಿದ್ದು ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಸರ್ಕಾರಿ ಆಸ್ಪತ್ರೆ ಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದ ಶ್ರೀರಾಮುಲು ರಿಪೋರ್ಟ್ ನೆಗೆಟಿವ್ ಬಂದಿದ್ದು, ಎಂಟು ದಿನಗಳಲ್ಲಿ ಚೇತರಿಕೆ ಕಂಡಿದ್ದಾರೆ. ಟ್ವೀಟ್ ಮಾಡಿರುವ ಶ್ರೀರಾಮುಲು, ನಿಮ್ಮೆಲ್ಲರ ಶುಭ ಹಾರೈಕೆಯಿಂದ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಕೋವಿಡ್ ಸೋಂಕು ದೃಢಪಟ್ಟಾಗ ನಮ್ಮ …
Read More »ಕೊರೊನಾ ಸೋಂಕು ತಡೆ, ಲೋಕ ಕಲ್ಯಾಣಕ್ಕಾಗಿ ಹೋಮ
ಬೆಂಗಳೂರು: ವಿಶ್ವದಾದ್ಯಂತ ಹರಡಿರುವ ಕೊರೊನಾ ಸೋಂಕು ನಿವಾರಣೆಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಗ್ರಾಮಸ್ಥರು, ನಾಗರಿಕರು ಹೋಮ ಹವನ ನಡೆಸಿದ್ದಾರೆ.ನಗರದ ಹೊರವಲಯದ ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದಲ್ಲಿ ಪೂಜೆ ಕೈಗೊಂಡು, ರುದ್ರ ಮಂತ್ರ ಎಲ್ಲ ಔಷಧೀಯ, ಲಸಿಕೆಯ ಒಡೆಯನಿಗೆ ಶಾಂತಿ ಕೈಗೊಂಡಿದ್ದಾರೆ. ಉಷ್ಣಾಂಶದಿಂದ ಕ್ರಿಮಿಗಳ ನಾಶ 25 ಜನರ ಋತ್ವಿಕರಿಂದ ಹೋಮ ಹವನ ನಡೆಸಲಾಯಿತು. ವೇದ ಬ್ರಹ್ಮ ಶ್ರೀ ಸಂಪಿಗೆ ಶ್ರೀನಿವಾಸಮೂರ್ತಿ ಅರ್ಚಕರ ತಂಡದಿಂದ ಹೋಮದ ಪೂಜಾ ಕೈಂಕರ್ಯ ನಡೆದಿದೆ. ಗ್ರಾಮದ …
Read More »ತುಂಗಭದ್ರಾ ಜಲಾಶಯದ ಮೂರು ಗೇಟ್ ಓಪನ್: 4,539 ಕ್ಯೂಸೆಕ್ ನೀರು ಹೊರಕ್ಕೆ
ಬಳ್ಳಾರಿ: ಗಣಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗ ಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್ ನಿಂದ ಅಂದಾಜು 4,539 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.ಸದ್ಯ ತುಂಗಭದ್ರಾ ಜಲಾಶಯದಲ್ಲಿ 1,632.20 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಅಷ್ಟೇ ಬಾಕಿಯಿದೆ. 33,737 ಕ್ಯೂಸೆಕ್ ನಷ್ಟು ನೀರು ಈ ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಸಂಜೆ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್ ಮೂಲಕ ಸುಮಾರು 1,513 ಕ್ಯೂಸೆಕ್ ನೀರನ್ನು ಹರಿ …
Read More »ಕೆಜಿ ಹಳ್ಳಿಯಿಂದ ಸಾವಿರಾರು ಫೋನ್ ಕಾಲ್ 370ಕ್ಕೂ ಹೆಚ್ಚು ಆರೋಪಿಗಳು ಅಂದರ್
ಬೆಂಗಳೂರು: ಗಲಭೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆರೋಪಿಗಳ ಫೋನ್ ಕಾಲ್ ಲೆಕ್ಕ ನೋಡಿ ಶಾಕ್ ಆಗಿದ್ದಾರೆ.ಘಟನೆ ನಡೆದ ರಾತ್ರಿ ಸುಮಾರು 30 ಆರೋಪಿಗಳ ಮೊಬೈಲ್ಗಳಿಂದ ಹೊರ ಜಿಲ್ಲೆಗಳಿಗೆ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಿಂದಲೇ ಸಾವಿರಾರು ಕಾಲ್ ಹೋಗಿದೆ. ಎಲ್ಲವನ್ನು ಡಿ-ಕೋಡಿಂಗ್ ಮಾಡುವ ಕೆಲಸ ಆರಂಭಗೊಂಡಿದೆ. ಇನ್ನಷ್ಟು ಆರೋಪಿಗಳ ಪತ್ತೆಗಾಗಿ ಪೊಲೀಸರು 800ಕ್ಕೂ ಸಿಸಿಟಿವಿಗಳನ್ನು ವಶಕ್ಕೆ ಪಡೆದಿದ್ದಾರೆ. ದೊಂಬಿ ನಡೆಯುವ ಹಿಂದಿನ ದಿನ ಪುಂಡರನ್ನು ಸೇರಿಸಲು 10 ಫೇಸ್ಬುಕ್ …
Read More »ಬೈಂದೂರು ಸಮುದ್ರದಲ್ಲಿ ನಾಲ್ವರು ಮೀನುಗಾರರು ಕಣ್ಮರೆ- ಕ್ರೇನ್ ಬಳಸಿ ಶೋಧಕಾರ್ಯ
ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾಗಿದ್ದು, ಕ್ರೇನ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಬೈಂದೂರು ತಾಲೂಕು ಕಿರಿಮಂಜೇಶ್ವರದ ಕೊಡೇರಿಯಲ್ಲಿ ದುರ್ಘಟನೆ ನಡೆದಿದ್ದು, ಕೊಡೇರಿ ಅಳಿವೆಬಾಗಿಲಿನಲ್ಲಿ ಕಣ್ಮರೆಯಾದ ನಾಲ್ವರಿಗೆ ಶೋಧ ಕಾರ್ಯ ನಡೆಯುತ್ತಿದೆ. 11 ಮಂದಿ ಮೀನುಗಾರರಿದ್ದ ಬೋಟ್ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ 7 ಜನ ಈಜಿ ದಡ ಸೇರಿದ್ದಾರೆ. ನಾಲ್ವರು ಕಾಣೆಯಾಗಿದ್ದಾರೆ.
Read More »ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ:ರಮೇಶ್ ಜಾರಕಿಹೋಳಿ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ.ಇದರಿಂದಾಗಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2ಲಕ್ಷ ಕ್ಯೂಸೆಕ್ ಗೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಅಷ್ಟೇ ಅಲ್ಲದೇ ಜಿಲ್ಲೆಯ ಘಟಪ್ರಭಾದ ಹಿಡಕಲ್ ಜಲಾಶಯ ಮತ್ತು ಮಲಪ್ರಭಾದ ನವಿಲುತೀರ್ಥ ಜಲಾಶಯ ತುಂಬಿದ ಪರಿಣಾಮ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ. ಸದ್ಯ ಜಲಾಶಯಗಳ ಒಳ ಹರಿವು ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುವ ಸಾಧ್ಯತೆ …
Read More »ಸಂತ್ರಸ್ತರಿಗೆ ಪರಿಹಾರ ತ್ವರಿತ ಗತಿಯಲ್ಲಿ ಹಣ ಬಿಡುಗಡೆ:ಮಹೇಶ್ ಕುಮಟಳ್ಳಿ
ಅಥಣಿ: ಕಳೆದ ಬಾರಿ ಕೃಷ್ಣಾ ನದಿಯ ನೆರೆ ಸಂತ್ರಸ್ತರಿಗೆ ಪರಿಹಾರ ತ್ವರಿತ ಗತಿಯಲ್ಲಿ ಹಣ ಬಿಡುಗಡೆ ಮಾಡುವಂತೆ ಡಿಸಿಎಂ ಸವದಿ ಮತ್ತು ನಾನು ಜೊತೆಗುಡಿ ಸಿಎಂ ಯಡಿಯೂರಪ್ಪ ಬೇಟಿ ಮಾಡಿದ್ದೆವೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಅವರು ತಾಲೂಕಿನಲ್ಲಿ ಬುರ್ಲಟ್ಟಿ ಗ್ರಾಮದಲ್ಲಿ ನೂತನವಾಗಿ ಶಾಲೆ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ. ಕಳೆದ ಬಾರಿಯ ಕೃಷ್ಣಾ ನದಿ ಪ್ರವಾಹದ ೬೦ರಷ್ಟು ಸಂತ್ರಸ್ತರ ಪರಿಹಾರ …
Read More »ದೂರದರ್ಶನದಲ್ಲಿ ಬರುವ ಸಿರಿಯಲ್ ನೋಡಿ ಡಾಕ್ಟರ್ ಆಗುವ ಕನಸನ್ನ ಕಂಡರೈತನ ಮಗಳ
ಬೆಳಗಾವಿ: ರೈತನ ಮಗಳೊಬ್ಬಳು ಎಂ ಡಿ ಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಇತರ ಬಡ ಹಾಗೂ ರೈತನ ಮಕ್ಕಳಿಗೆ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಡಾ. ಅಶ್ವಿನಿ ಚಿದಾನಂದ ಸೋಂದಕರ ಎಂಬ ವಿದ್ಯಾರ್ಥಿನಿ ಅಪ್ಪಟ ಗ್ರಾಮೀಣ ಪರಿಸರದಲ್ಲಿಯೇ ಹುಟ್ಟಿ, ಬೆಳೆದು ಸರ್ಕಾರಿ ಶಾಲೆಯಲ್ಲಿ ಓದಿ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಲ್ಲಿ ಮೈಕ್ರೋ ಬಯೋಲಾಜಿ ವಿಭಾಗದಲ್ಲಿ 2019-20 ನೇ ಸಾಲಿನಲ್ಲಿ ರಾಜ್ಯಕ್ಕೆ ಪ್ರಥಮ …
Read More »