Breaking News

ನಗರದಲ್ಲಿ ಬೆಳ್ಳಂಬೆಳಗ್ಗೆ ನಿವೃತ್ತ ಪ್ರೊಫೆಸರ್​ನನ್ನು ಕೊಲೆಗೈದಿರುವ ಘಟನೆ ಲಿಂಗರಾಜ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ: ನಗರದಲ್ಲಿ ಬೆಳ್ಳಂಬೆಳಗ್ಗೆ ನಿವೃತ್ತ ಪ್ರೊಫೆಸರ್​ನನ್ನು ಕೊಲೆಗೈದಿರುವ ಘಟನೆ ಲಿಂಗರಾಜ ನಗರದಲ್ಲಿ ನಡೆದಿದೆ. ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್ ಶಂಕ್ರಪ್ಪ ಮುಶನ್ನವರ ಕೊಲೆ ಮಾಡಲಾಗಿದೆ. ಶಂಕ್ರಪ್ಪ ಗದಗ ಜಿಲ್ಲೆಯ ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದ್ದು ಇತ್ತೀಚೆಗೆ ನಿವೃತ್ತಿ ಪಡೆದು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು ಎಂದು ತಿಳದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೇ ಕೊಲೆ ಮಾಡಿರುವ ಶಂಕೆ‌ ವ್ಯಕ್ತವಾಗಿದೆ. ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಶಂಕ್ರಪ್ಪರ …

Read More »

ಪೊಲೀಸರ ಮೇಲೂ ತಲವಾರು ಬೀಸಿದ ಬಂಟ್ವಾಳ ಹತ್ಯೆ ಪ್ರಕರಣದ ಆರೋಪಿ | ಆರೋಪಿಯ ಮೇಲೆ ಪೊಲೀಸರಿಂದ ಫೈರಿಂಗ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ ನಲ್ಲಿ ನಿನ್ನೆ ರಾತ್ರಿ ಉಮರ್ ಫಾರೂಕ್ ಎಂಬಾತನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು. ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಖಲೀಲ್ ಹಾಗೂ ಆತನ ಇಬ್ಬರು ಸಹಚರರು ಬೆಂಗಳೂರಿಗೆ ತೆರಳಲು ಯತ್ನಿಸುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ಅವರನ್ನು ಬೆನ್ನಟ್ಟಿ ಹೋಗಿದ್ದು, ಗುಂಡ್ಯ ಸಮೀಪದಲ್ಲಿ ಖಲೀಲ್ ಪೊಲೀಸರ ಮೇಲೆ ತಲವಾರು ಬೀಸಿದ್ದಾನೆ ಎಂದು …

Read More »

ರಾಜ್ಯದಲ್ಲಿ ಅಕ್ಟೋಬರ್ 27 ರವರೆಗೆ ಭಾರೀ ಮಳೆ,ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಆರ್ಭಟ ಮುಂದುವರಿಯಲಿದೆ

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 27ರವರೆಗೆ ಭಾರೀ ಮಳೆಯಾಗುತ್ತದೆ. ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಆಯ್ತು, ಈಗ ಬೆಂಗಳೂರು ಸರದಿ. ಮುಂಬೈ, ಹೈದರಾಬಾದ್ ರೀತಿ ಬೆಂಗಳೂರು ಕೂಡ ಮುಳುಗುತ್ತಾ ಎಂಬ ಆತಂಕ ಸದ್ಯ ಎದುರಾಗಿದೆ. ಅಕ್ಟೋಬರ್ ತಿಂಗಳ ಈ ಮಳೆ ಕಂಟಕ ಇನ್ನೆಷ್ಟು ದಿನ ಅನ್ನೋ ಪ್ರಶ್ನೆ ಮೂಡಿದೆ. ಈ ಮಧ್ಯೆ ಮಳೆ ಭವಿಷ್ಯದ ಮಾಹಿತಿ …

Read More »

ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ

ಇಸುವಾ(ಬಿಹಾರ),ಅ.23- ಅತ್ತ ಎನ್‍ಡಿಎ ಪರವಾಗಿ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಚುನಾವಣೆಗಾಗಿ ಪಾಂಚಜನ್ಯ ಮೊಳಗಿಸಿದ್ದರೆ, ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರ್‍ಜೆಡಿ ನೇತೃತ್ವದ ಮೈತ್ರಿಕೂಟಕ್ಕಾಗಿ ರಣಕಹಳೆ ಊದಿದ್ದಾರೆ. ಇಸುವಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಲಡಾಕ್‍ನಲ್ಲಿ ಚೀನಿ ಸೈನಿಕರು ಗಡಿಯೊಳಗೆ ನುಸುಳಿ ಹಿಂಸಾಚಾರ …

Read More »

ಪ್ರತಿ ತಿಂಗಳು ಪತಿಗೆ 2 ಸಾವಿರ ಜೀವನಾಂಶ ನೀಡಿ – 58ರ ಪತ್ನಿಗೆ ಕೋರ್ಟ್ ಆದೇಶ

ಲಕ್ನೋ: ಪತಿಗೆ ಪ್ರತಿ ತಿಂಗಳು 2 ಸಾವಿರ ರೂ. ಜೀವನಾಂಶ ನೀಡುವಂತೆ 58 ವರ್ಷದ ಮಹಿಳೆಗೆ ಕೋರ್ಟ್ ಆದೇಶಿಸಿದೆ.ಮುಜಾಫರ್ ನಗರ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದ್ದು, 62 ವರ್ಷದ ಕಿಶೋರಿ ಲಾಲ್ ಸೊಹಂಕರ್ ಟೀ ಅಂಗಡಿ ನಡೆಸುತ್ತಿದ್ದು, ಇವರಿಗೆ ಬೇರೆ ಯಾವುದೇ ಆದಾಯ ಮೂಲವಿಲ್ಲ. ಆದರೆ 58 ವರ್ಷದ ಇವರ ಪತ್ನಿ ಮುನ್ನಿ ದೇವಿ ಸೇನೆಯಿಂದ ನಿವೃತ್ತಿ ಹೊಂದಿದವರಾಗಿದ್ದಾರೆ. ಹೀಗಾಗಿ ಇವರಿಗೆ 12 ಸಾವಿರ ರೂ. ಪೆನ್ಷನ್ ಬರುತ್ತದೆ. ಇದರಲ್ಲಿ …

Read More »

ರ‍್ಯಾಶ್ ಡ್ರೈವಿಂಗ್ ಮಾಡುವವರಿಗೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ

ಬೆಂಗಳೂರು: 4 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಇಲ್ಲದಿದ್ರೆ ದಂಡದ ಜೊತೆ ಡಿಎಲ್ ಸಸ್ಪೆಂಡ್ ಮಾಡುವ ಆದೇಶ ಹೊರಡಿಸಿದ್ದ ಸಾರಿಗೆ ಇಲಾಖೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ರ‍್ಯಾಶ್ ಡ್ರೈವಿಂಗ್ ಮಾಡುವವರಿಗೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ಆದೇಶ ಹೊರಡಿಸಿದೆ. ವೀಲಿಂಗ್, ಸೈಲೆನ್ಸರ್ ಅಲ್ಟ್ರೇಷನ್, ಅಡ್ಡಾದಿಡ್ಡಿ ಚಾಲನೆ, ಅಪಾಯಕಾರಿ ಚಾಲನೆ ಮಾಡಿದರೆ ಅಪರಾಧ ದಂಡ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 107ರ ಆಡಿ ಕೇಸ್ …

Read More »

ಕೊರೊನಾ ವೈರಸ್‍ಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆಯಿದೆ.

ನವದೆಹಲಿ: ಕೊರೊನಾ ವೈರಸ್‍ಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಈಗಲೇ ಕೇಂದ್ರ ಸರ್ಕಾರ ಲಸಿಕೆಗೆ ಹಂಚಿಕೆ ಮಾಡಲು ಸಿದ್ಧತೆ ನಡೆಸುತ್ತಿದೆ. ಯಾವೆಲ್ಲ ಲಸಿಕೆ? ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಲಸಿಕೆ ದೇಶದಲ್ಲಿ ಮೊದಲು ಲಭ್ಯವಾಗಬಹುದು. ಈಗಾಗಲೇ ಪುಣೆಯ ಸೀರಂ ಸಂಸ್ಥೆ ಮೂರನೇ ಹಂತದ ಲಸಿಕೆ ಪ್ರಯೋಗ ನಡೆಸಿದೆ. ಇದರ ಜೊತೆ ಜೊತೆಗೆ 30 ಕೋಟಿ ಡೋಸ್ ಉತ್ಪಾದಿಸಲು ತಯಾರಿ ನಡೆಸಿದೆ. ರಷ್ಯಾದ ಸ್ಟುಟ್ನಿಕ್ ವಿ ಲಸಿಕೆ …

Read More »

ವಿಜಯದಶಮಿ ಬಳಿಕ ಸಿಎಂ ಯಡಿಯೂರಪ್ಪ ಅಖಾಡಕ್ಕೆ!

ಬೆಂಗಳೂರು: ವಿಜಯದಶಮಿಯ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಹೌದು. ಸೋಮವಾರದ ಬಳಿಕ ಬೈ ಎಲೆಕ್ಷನ್ ಕುರಿತು ಸಿಎಂ ಕ್ಯಾಂಪೇನ್ ಮಾಡಲಿದ್ದಾರೆ. ಆರ್ ಆರ್ ನಗರವೇ ಯಡಿಯೂರಪ್ಪ ಅವರ ಮೊದಲ ಟಾರ್ಗೆಟ್ ಆಗಿದೆ. ಎರಡು ಕ್ಷೇತ್ರಗಳನ್ನು ಕೂಡ ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಮಾಡಿದ್ದು, ಹೀಗಾಗಿ ರಾಜ್ಯ ಬಿಜೆಪಿ ನಾಯಕರಿಂದ ಮೆಗಾ ಗೇಮ್ ಪ್ಲಾನ್ ನಡೀತಿದೆ. ಎರಡು ಕ್ಷೇತ್ರಗಳ ಮೇಲೆ ಕಣ್ಗಾವಲಿನ ಮೇಲೆ ಕಣ್ಗಾವಲು ಇಡಲಾಗಿದೆ. ಕಡೆಯ …

Read More »

ಆರ್.ಎಂ.ಪಿ ವೈದ್ಯ ಮಾಡಿದ ನಿರ್ಲಕ್ಷತೆ ಹಾಗೂ ಎಡವಟ್ಟಿನಿಂದ ಬಾಲಕ ತನ್ನ ಎರಡು ಕಣ್ಣನ್ನು ಕಳೆದುಕೊಳ್ಳುವಂತಾಗಿದೆ.

ಶಿವಮೊಗ್ಗ: ನಗುನಗುತ್ತಾ ಎಲ್ಲ ಮಕ್ಕಳಂತೆ ಆಡಿ, ಕುಣಿದು ಬೆಳೆಯಬೇಕಿದ್ದ ಮಗು ಇದೀಗ ತಂದೆಯನ್ನು ಬಿಟ್ಟು ಇರದಂತಹ ಸ್ಥಿತಿಗೆ ಬಂದಿದೆ. ಆರ್.ಎಂ.ಪಿ ವೈದ್ಯ ಮಾಡಿದ ನಿರ್ಲಕ್ಷತೆ ಹಾಗೂ ಎಡವಟ್ಟಿನಿಂದ ಬಾಲಕ ತನ್ನ ಎರಡು ಕಣ್ಣನ್ನು ಕಳೆದುಕೊಳ್ಳುವಂತಾಗಿದೆ. ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ನಿವಾಸಿ ಗಿರೀಶ್ ಅವರ ಪುತ್ರ ಶರತ್ ಹುಟ್ಟಿದಾಗ ಎಲ್ಲರಂತೆ ಕಣ್ಣು ಚೆನ್ನಾಗಿಯೇ ಇತ್ತು. ಎಲ್ಲರ ಜೊತೆ ಆಡಿ ಕುಣಿದು ನಲಿಯುತ್ತಿದ್ದ. ಆದರೆ ಇದೀಗ ತಂದೆಯ ಆಶ್ರಯ ಇದ್ದರೆ ಮಾತ್ರ …

Read More »

ಉತ್ತರ ಕರ್ನಾಟಕದ ಬಳಿಕ ರಣ ಮಳೆ ಈಗ ಬೆಂಗಳೂರನ್ನು ಅಟಕಾಯಿಸಿಕೊಂಡಿದೆ.

ಬೆಂಗಳೂರು: ಉತ್ತರ ಕರ್ನಾಟಕದ ಬಳಿಕ ರಣ ಮಳೆ ಈಗ ಬೆಂಗಳೂರನ್ನು ಅಟಕಾಯಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಚಿತ್ತಾ ಮಳೆ ತನ್ನ ಕುರುಡಾಟ ಪ್ರದರ್ಶಿಸುತ್ತಿದೆ. ಯಾವಾಗಂದ್ರೆ ಆಗ ಮಳೆ ಸುರಿದು ನಾನಾ ಅವಾಂತರ ಸೃಷ್ಟಿ ಮಾಡುತ್ತಿದೆ. ಕುರುಡ ಚಿತ್ತನ ಆಟಕ್ಕೆ ಬೆಂಗಳೂರು ಮಂದಿ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಲ್ಲಿ ಬೆಳಗ್ಗೆಯಿಂದ ಸೂರ್ಯ ದರ್ಶನ ಆಗಿರಲಿಲ್ಲ. ಮಧ್ಯಾಹ್ನದವರೆಗೂ ನಗರದಲ್ಲಿ ಮೋಡಗಳ ಆಟ ಜೋರಿತ್ತು. ಆದರೆ ಆ ಬಳಿಕ ನಗರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯಿತು. ಅದ್ರಲ್ಲೂ ಸಂಜೆ …

Read More »