Breaking News

ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ

ಮಳೆಗಾಲ ಆರಂಭಗೊಳ್ಳಲಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಮೇ 26) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿಯ ಭೀಕರ ಪ್ರವಾಹ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ಜನರ ತುರ್ತು ರಕ್ಷಣೆಗೆ …

Read More »

ಈ ಮೂಲಕ ಬೆಳಗಾವಿ ಜಿಲ್ಲೆಗೆ ತಬ್ಲಿಗಿ, ಅಜ್ಮೀರ್, ಮುಂಬಯಿ ನಂಟಿನ ಜೊತೆಗೆ ಜಾರ್ಖಂಡ್ ನಂಟು ನಿಖರವಾಗಿದೆ.

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಂದು ಮಂಗಳವಾರ(ಮೇ 26) ಮತ್ತೆ 13 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು  ಹೆಲ್ತ್  ಬುಲೆಟಿನ್ ದೃಢಪಡಿಸಿದೆ. ಈ ಮೂಲಕ ಬೆಳಗಾವಿ ಜಿಲ್ಲೆಗೆ ತಬ್ಲಿಗಿ,  ಅಜ್ಮೀರ್, ಮುಂಬಯಿ ನಂಟಿನ ಜೊತೆಗೆ ಜಾರ್ಖಂಡ್ ನಂಟು ನಿಖರವಾಗಿದೆ. ಕ್ವಾರಂಟೈನ್ ಇದ್ದವರಲ್ಲಿ ಹದಿಮೂರು ಜನರಿಗೆ ಕೊರೊನಾ ತಗುಲಿದೆ. ತಾಲೂಕಿನ ಸವದಿ ಗ್ರಾಮದಲ್ಲಿ ಕ್ವಾರಂಟೈನ್ ಆಗಿದ್ದವರಲ್ಲಿ ಕೊರೋನಾ ಕಾಣಿಸಿದೆ. ಹುಕ್ಕೇರಿ -1 ಸೇರಿದಂತೆ ಅಥಣಿ  ತಾಲೂಕಿನ  ಸವದಿ-7, ಬೆಳವಕ್ಕಿ-1, ನಂದಗಾವ -3, ಜುಂಜರವಾಡ-1 ಕೇಸ್ ಬೆಳಕಿಗೆ …

Read More »

ಮೂರು ದಿನಗಳ ಹಿಂದೆ ಬೆಂಗಳೂರು ಖಾಲಿ ಮಾಡಿದ್ದ ಜನ ಇದೀಗ ಮತ್ತೆ ರಾಜಧಾನಿಗೆ ಮುಖಮಾಡಿದ್ದಾರೆ.

ಬೆಂಗಳೂರು: ಮೂರು ದಿನಗಳ ಹಿಂದೆ ಬೆಂಗಳೂರು ಖಾಲಿ ಮಾಡಿದ್ದ ಜನ ಇದೀಗ ಮತ್ತೆ ರಾಜಧಾನಿಗೆ ಮುಖಮಾಡಿದ್ದಾರೆ. ಪರಿಣಾಮ ಸಂಜೆಯಿಂದ ತುಮಕೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಜೆ 7 ಗಂಟೆಯ ಒಳಗಡೆ ಮನೆ ಸೇರಬೇಕಾದ ಹಿನ್ನೆಲೆಯಲ್ಲಿ ನೆಲಮಂಗಲ ಟೋಲ್ ಬಳಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿತ್ತು. ಇನ್ನೊಂದು ಕಡೆ ಉತ್ತರ ಭಾರತ ಕಾರ್ಮಿಕರು ಬೆಂಗಳೂರು ಬಿಟ್ಟು ದೊಡ್ಡ ಸಂಖ್ಯೆಯಲ್ಲಿ ತಮ್ಮೂರುಗಳಿಗೆ ತೆರಳುವುದು ಮುಂದುವರಿದಿದೆ. ಇವತ್ತು ಕೂಡ ಮಿಜೋರಾಂ, ಒಡಿಶಾ …

Read More »

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪ್ರಯೋಗಕ್ಕೆ ತಾತ್ಕಾಲಿಕ ಸ್ಥಗಿತ

ಜಿನಿವಾ: ಕೊರೊನಾ ಜ್ವರಕ್ಕೆ ತಕ್ಷಣದ ಔಷಧಿ ಎಂದೇ ಪರಿಗಣಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ಮೇಲಿನ ಪ್ರಯೋಗಾರ್ಥ ಪರೀಕ್ಷೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಾತ್ಕಾಲಿಕವಾಗಿ ಕೈಬಿಟ್ಟಿದೆ. ವೈದ್ಯಕೀಯ ಅಧ್ಯಯನಕ್ಕಾಗಿರುವ ಜಗತ್ತಿನ ಅತೀ ಶ್ರೇಷ್ಠ ನಿಯತಕಾಲಿಕೆ ಲ್ಯಾಸೆಟ್ ‘ಕೊರೊನಾ ಪೀಡಿತ ರೋಗಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಿದ್ರೆ ಸಾಯುವ ಸಾಧ್ಯತೆ ಹೆಚ್ಚಿದೆ’ ಎಂದು ಅಧ್ಯಯನ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ರೋಗಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಬಳಸುವ ಸಂಬಂಧ ಆರಂಭಿಸಿದ್ದ …

Read More »

ಮುಂಬೈನ ಧಾರಾವಿ ಸ್ಲಂ ಸ್ಥಿತಿ ಬೆಂಗ್ಳೂರಿಗೂ ಬರುತ್ತಾ?…………

ಬೆಂಗಳೂರ: ಮುಂಬೈ ಮಹಾನಗರಕ್ಕೆ ಭಾರೀ ಸಂಕಷ್ಟ ತಂದಿದ್ದು ಧಾರಾವಿ ಸ್ಲಂ ಪ್ರದೇಶ. ಅದೇ ಸಮಸ್ಯೆ ಬೆಂಗಳೂರಿಗೂ ಎದುರಾಗುತ್ತಾ ಎನ್ನುವ ಅನುಮಾನ ಶುರುವಾಗಿದೆ. ಪುಲಿಕೇಶಿ ನಗರ ಕ್ಷೇತ್ರದ ಎಸ್.ಕೆ. ಗಾರ್ಡನ್ ಸ್ಲಂ ಪ್ರದೇಶದ 38 ವರ್ಷದ ಮಹಿಳೆಗೆ ಕೊರೊನಾ ತಗುಲಿದೆ. ಅವರನ್ನು ರೋಗಿ-2180 ಎಂದು ಗುರುತಿಸಲಾಗಿದೆ. ಅವರು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ರಿಪೋರ್ಟ್ ಪಾಸಿಟಿವ್ ಬಂದಿದೆ. ಮಹಿಳೆ ಪ್ರಾಥಮಿಕ ಸಂಪರ್ಕಿದಲ್ಲಿ 35 …

Read More »

ವಿಜಯಪುರದಲ್ಲಿ ಗರಿಷ್ಠ 45.3 ಡಿಗ್ರಿ ಉಷ್ಣಾಂಶ ದಾಖಲು………

ವಿಜಯಪುರ: ಗುಮ್ಮಟಗಳ ಜಿಲ್ಲೆ ವಿಜಯಪುರ ಜನರಲ್ಲಿ ಒಂದು ಕಡೆ ಕೊರೊನಾ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ಭಯಾನಕ ಬಿಸಿಲಿನಿಂದ ಆತಂಕ ಶುರುವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಇತಿಹಾಸದಲ್ಲಿಯೇ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ ವಿಜಯಪುರ ಜಿ. ಆಲಮೇಲ ಪಟ್ಟಣದಲ್ಲಿ ದಾಖಲಾಗಿದೆ. ಗರಿಷ್ಠ 45.3 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಈ ತಾಪಮಾನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ …

Read More »

ಇಂದಿನಿಂದ ಟಿಕೆಟ್ ಪಡೆದು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ- 4 ಸಾವಿರ ಬಸ್‍ಗಳ ಓಡಾಟ

ಬೆಂಗಳೂರು: ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು,  ಬಿಎಂಟಿಸಿ ಇಂದಿನಿಂದ ಪ್ರಯಾಣಿಕರಿಗೆ ಟಿಕೆಟ್ ನೀಡಲು ಶುರು ಮಾಡಿದೆ. ಹೀಗಾಗಿ ಇವತ್ತಿನಿಂದ ಪ್ರಯಾಣಿಕರು ಬಿಎಂಟಿಸಿಯಲ್ಲಿ ಟಿಕೆಟ್ ಪಡೆದು ಪ್ರಯಾಣಿಸಬಹುದು. ಈಗಾಗಲೇ ಬಿಎಂಟಿಸಿ ಬಸ್‍ಗಳ ಓಡಾಟ ಶುರುವಾಗಿದ್ದು, ಪಾಸ್ ಇದ್ದವರಿಗಷ್ಟೇ ಅಲ್ಲ, ಟಿಕೆಟ್ ಪಡೆದೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೇ ಇವತ್ತಿನಿಂದ ಹೆಚ್ಚುವರಿಯಾಗಿ 4 ಸಾವಿರ ಬಿಎಂಟಿಸಿ ಬಸ್‍ಗಳ ಸಂಚಾರ ಆರಂಭ ಮಾಡುತ್ತಿವೆ. ಲಾಕ್‍ಡೌನ್ ಬಳಿಕ ಪ್ರಯಾಣಿಕರಿಗೆ …

Read More »

ಜುಲೈನಿಂದ ದೇಶಾದ್ಯಂತ ಶಾಲೆಗಳು ಆರಂಭವಾಗೋ ಸಾಧ್ಯತೆ………….

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಜುಲೈನಿಂದ ದೇಶಾದ್ಯಂತ ಆರಂಭವಾಗುವ ಸಾಧ್ಯತೆ ಇದೆ. ಶೇಕಡಾ 30ರಷ್ಟು ಹಾಜರಾತಿಯೊಂದಿಗೆ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ಮಾಡಿದೆ. ಜೊತೆಗೆ ಗ್ರೀನ್, ಆರೆಂಜ್‍ಝೋನ್‍ಗಳಲ್ಲಿರುವ ಶಾಲೆಗಳ ಆರಂಭ ಮಾಡುವ ಸಾಧ್ಯತೆ ಇದೆ. ಆರಂಭದಲ್ಲಿ ಹೈಸ್ಕೂಲ್ ತರಗತಿಗಳಷ್ಟೇ ಶುರುವಾಗಲಿದ್ದು, ಉಳಿದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಮುಂದುವರಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ …

Read More »

ಲಾಕ್‍ಡೌನ್ ಎಫೆಕ್ಟ್- ಮಲೆಮಹದೇಶ್ವರನಿಗೆ 15 ಕೋಟಿಗೂ ಹೆಚ್ಚು ನಷ್ಟ

ಚಾಮರಾಜನಗರ: ಕೊರೊನಾ ಲಾಕ್ ಡೌನ್ ಎಪೆಕ್ಟ್ ನಿಂದ ಮಲೆಮಹದೇಶ್ವರನಿಗೆ 15 ಕೋಟಿಗೂ ಹೆಚ್ಚು ನಷ್ಟವಾಗಿದೆ. ಚಾಮರಾಜನಗರ ಜಿಲ್ಲೆಯ ಹನೀರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ದೇವಾಲಯ ಕಳೆದ ಎರಡು ತಿಂಗಳಿಂದ ಮುಚ್ಚಿದೆ. ಹೀಗಾಗಿ ಭಕ್ತರಿಲ್ಲದೆ ಮಹದೇಶ್ವರನ ಆದಾಯದಲ್ಲಿ ಭಾರೀ ನಷ್ಟವಾಗಿದೆ. ಹುಂಡಿಯೊಂದರಲ್ಲೇ ಪ್ರತಿ ತಿಂಗಳು ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗುತ್ತಿತ್ತು. ಚಿನ್ನದ ತೇರು, ವಿವಿಧ ಸೇವೆ ಲಾಡು ಮಾರಾಟ ಹಾಗೂ ವಸತಿಗೃಹ ಮೊದಲಾದ ಮೂಲಗಳಿಂದ ಬರುತ್ತಿದ್ದ ಆದಾಯದಲ್ಲಿ ಇದೀಗ ಕೋಟಿಗಟ್ಟಲೆ ಕಡಿತವಾಗಿದೆ. …

Read More »

ಬೆಳಗಾವಿ ಜಿಲ್ಲಾಡಳಿತ ಒಟ್ಟು 1009 ಜನರ ರಿಪೋರ್ಟ್ ಗಾಗಿ ಕಾಯುತ್ತಿದೆ.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಬೆಂಬಿಡದೇ ಗಡಿನಾಡು ಬೆಳಗಾವಿ ಜಿಲ್ಲೆಯನ್ನು ನಡುಗಿಸಿದೆ,ಈವರೆಗೆ ಜಿಲ್ಲೆಯಲ್ಲಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ 130 ಸೊಂಕಿತರು ಪತ್ತೆಯಾಗಿದ್ದಾರೆ ಜೆಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು ಇಂದು ಬರೊಬ್ಬರಿ 1009 ಜನರ ರಿಪೋರ್ಟ್ ಬಾಕಿ ಇದೆ . ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಈ ವರೆಗೆ ಹತ್ತು ಸಾವಿರದ 293 ಜನರ ಮೇಲೆ ನಿಗಾ ಇಟ್ಟಿದೆ. ಇದರಲ್ಲಿ ಹಲವಾರು ಜನ …

Read More »