Breaking News

ವಡೇರಹಟ್ಟಿಯ ಇಬ್ಬರು ಬಾಲಕರಿಗೆ ಕೆ.ತ್ಯಾಗರಾಜನ್ ಶುಕ್ರವಾರ ಸನ್ಮಾನ

ಬೆಳಗಾವಿ : ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಿದ್ದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಇಬ್ಬರು ಬಾಲಕರಿಗೆ ಇಲ್ಲಿನ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಕೆ.ತ್ಯಾಗರಾಜನ್ ಶುಕ್ರವಾರ ಸನ್ಮಾನಿಸಿ, ಕೇಂದ್ರ ಗೃಹ ಸಚಿವಾಲಯದಿಂದ ಕೊಡ ಮಾಡಿದ ಜೀವನ ರಕ್ಷಾ ಪದಕ ವಿತರಿಸಿದರು. ವಡ್ಡೇರಹಟ್ಟಿಯ  ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ, ಶಿವಾನಂದ ದಶರಥ ಹೊಸಟ್ಟಿ ಬಾಲಕರಿಗೆ  1 ಲಕ್ಷ ಚೆಕ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು. 2018ರ ಮೇ 8ರಂದು ಗೋಕಾಕ ತಾಲ್ಲೂಕಿನ ವಡೇರಹಟ್ಟಿ …

Read More »

ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ತೆಗೆದುಹಾಕಿ : ಗೌತಮ್ ಗಂಭೀರ್

ನವದೆಹಲಿ,ನ.7-ನಿರಂತರ ವೈಫಲ್ಯಕ್ಕೆ ಕಾರಣವಾಗಿರುವ ವಿರಾಟ್ ಕೊಹ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕತ್ವದಿಂದ ತೆಗೆದು ಹಾಕಬೇಕೆಂದು ಖ್ಯಾತ ಕ್ರಿಕೆಟ್ ತಾರೆ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ.  ನೇರ ಮತ್ತು ನಿಷ್ಠೂರ ಮಾತುಗಳಿಗೆ ಹೆಸರಾಗಿರುವ ಮಾಜಿ ಆರಂಭಿಕ ಆಟಗಾರ ಮತ್ತು ಎರಡು ಬಾರಿ ಐಪಿಎಲ್ ಚಾಂಪಿಯನ್‍ಶಿಪ್ ಗೆದ್ದ ತಂಡದ ನಾಯಕತ್ವದ ವಹಿಸಿದ್ದ ಗೌತಮ್, ವಿರಾಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ರೀಡಾ ವಾರ್ತಾ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ ಗೌತಮ್, ಇದು ವಿಶ್ವಾಸಾರ್ಹತೆ ಮತ್ತು …

Read More »

ಚೆಕ್‍ಬೌನ್ಸ್ ಪ್ರಕರಣದಲ್ಲಿ ಕಾಫಿ ಡೇಯ ನಿರ್ದೇಶಕರಾಗಿರುವ ಮಾಳವಿಕಾ ಹೆಗ್ಡೆ ಅವರಿಗೆ ಮೂಡಿಗೆರೆಯ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು

ಚಿಕ್ಕಮಗಳೂರು, ನ.7- ಚೆಕ್‍ಬೌನ್ಸ್ ಪ್ರಕರಣದಲ್ಲಿ ಕಾಫಿ ಡೇಯ ನಿರ್ದೇಶಕರಾಗಿರುವ ಮಾಳವಿಕಾ ಹೆಗ್ಡೆ ಅವರಿಗೆ ಮೂಡಿಗೆರೆಯ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು ನೀಡಿದೆ. ಕಾಫಿ ಡೇ ಮೂಡಿಗೆರೆ ಹಾಗೂ ಸುತ್ತಮುತ್ತಲ ಹಲವಾರು ಬೆಳೆಗಾರರಿಂದ ಕಾಫಿ ಖರೀದಿ ಮಾಡಿತ್ತು. ಅವರ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಗ್ರಾಮದ ಶಿವಪ್ರಕಾಶ್ ಎಸ್ಟೇಟ್ ಮಾಲೀಕ ಕೆ.ನಂದೀಶ್ ಅವರು ಬಾಕಿ ಹಣಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾಫಿ ಮಾರಾಟ ಮಾಡಿದ್ದ ಬಾಪ್ತು 45 ಲಕ್ಷದ ಪೈಕಿ 4 ಲಕ್ಷ ರೂ.ಗಳನ್ನು …

Read More »

ನಾವು ಯಾವಾಗ ಕಪ್ ಗೆಲ್ಲೋದು- ಆರ್‌ಸಿಬಿ ಸೋಲಿಗೆ ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸೆಂಡ್ರಾ ಬೇಸರ

ಲಂಡನ್: ಐಪಿಎಲ್ 12ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹೊರ ನಡೆದಿದ್ದಕ್ಕೆ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವ ಮೂಲಕ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅದೇ ರೀತಿ ಇಂಗ್ಲೆಂಡ್ ತಂಡದ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಅಲೆಕ್ಸೆಂಡ್ರಾ ಹಾರ್ಟ್ಲೆ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಪ್ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಆಕ್ರೋಶ ಹಾಗೂ ಬೇಸರದ ಟ್ವೀಟ್ ಮಾಡಿದ್ದಾರೆ. ಐಪಿಎಲ್ ಎಲಿಮಿನೇಟ್ …

Read More »

ಯಕ್ಷಗಾನ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ.

ಉಡುಪಿ: ಯಕ್ಷಲೋಕದ ರತ್ನ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ, ಯಕ್ಷ ಕವಿ ಮಲ್ಪೆ ವಾಸುದೇವ ಸಾಮಗ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಯಕ್ಷಗಾನ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ಸಾಮಗರಿಗೆ 71 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ನಿಧನರಾಗಿದ್ದಾರೆ. ಯಕ್ಷಗಾನ ರಂಗದಲ್ಲಿ ತನ್ನ ವಾಕ್ಪಟುತ್ವದಿಂದ ಖ್ಯಾತಿಗಳಿಸಿದ್ದ ವಾಸುದೇವ ಸಾಮಗರು, ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಮೃತೇಶ್ವರಿ ಮೇಳದ ಮೂಲಕ ಯಕ್ಷಗಾನ …

Read More »

ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

ಶಿವಮೊಗ್ಗ: ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವನ್ನು ಪೋಷಕರಿಗೆ ನೀಡದೇ, ಬದುಕಿರುವ ಮಗುವಿನ ಪೋಷಕರಿಗೆ ಸಿಬ್ಬಂದಿ ನೀಡಿರುವ ಆಘಾತಕಾರಿ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಣೆಬೆಳಕೆರೆ ನಿವಾಸಿಗಳಾದ ಸುಮಾ, ಅಂಜನಪ್ಪ ದಂಪತಿಗೆ ಕಳೆದ ಸೋಮವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿದೆ. ಅದೇ ದಿನ ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಾ, ಗೋಪಾಲಪ್ಪ ದಂಪತಿಗೂ ಹೆಣ್ಣು ಮಗು ಜನಿಸಿದೆ. ಇಬ್ಬರ ಮಕ್ಕಳನ್ನು ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ …

Read More »

ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ್ದ ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್

ಮಂಗಳೂರು: ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ್ದ ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾದ ಘಟನೆ ಮಂಗಳೂರಿನ ಬಜ್ಪೆಯಲ್ಲಿ ನಡೆದಿದೆ. ಮಂಗಳೂರಿನ ಹೊರವಲಯದ ಗಂಜಿಮಠದ ಅಪ್ರಾಪ್ತೆ, ಮೂಡಬಿದಿರೆಯ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಪ್ರತಿದಿನ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಹೆತ್ತವರೊಂದಿಗೆ ಬಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದಳು. ಆದರೆ ಬಜ್ಪೆ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಳ್ಳದೆ, ದೂರು ನೀಡಲು ಬಂದಿದ್ದ …

Read More »

ಹೆಣ್ಣು ಮಗುವಿಗಾಗಿ ಬರೋಬ್ಬರಿ 14 ಗಂಡು ಮಕ್ಕಳನ್ನು ಹೆತ್ತ ಮಹಾತಾಯಿ

ವಾಷಿಂಗ್ಟನ್: ಗಂಡು ಮಗು ಬೇಕೆಂದು ಹೆಣ್ಣು ಮಗುವನ್ನು ಹೆತ್ತು ಕಾಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದಂಪತಿ ಹೆಣ್ಣು ಮಗುವಿಗಾಗಿ ಬರೋಬ್ಬರಿ 14 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಲ್ಲದೆ ಬರೋಬ್ಬರಿ ಮೂರು ದಶಕಗಳ ಬಳಿಕ ಇದೀಗ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಅಮೆರಿಕದ ಮಿಚಿಗಾನ್ ರಾಜ್ಯದಲ್ಲಿ ಈ ಘಟನೆ ನಡೆದಿದ್ದು, ಕಟೇರಿ ಶ್ವಾಂಡ್ಟ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟಿದ ಸಮಯದಲ್ಲಿ 3.4 ಕೆ.ಜಿ ತೂಕವಿದ್ದ ಮ್ಯಾಗಿ …

Read More »

ಸಿಂಪಲ್ಲಾಗಿ ಯಥರ್ವ್ ಹುಟ್ಟುಹಬ್ಬ ಗೋವಾ ಬೀಚ್‍ನಲ್ಲಿ ಹಡಗಿನಲ್ಲಿ ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ಬೆಂಗಳೂರು: ಮನೆಯಲ್ಲಿ ಸಿಂಪಲ್ಲಾಗಿ ಯಥರ್ವ್ ಹುಟ್ಟುಹಬ್ಬ ಆಚರಿಸಿದರೂ ಬಳಿಕ ತುಂಬಾ ವಿಷೇಶವಾಗಿ ಹಾಗೂ ವಿಭಿನ್ನವಾಗಿ ತಮ್ಮದೇ ಶೈಲಿಯಲ್ಲಿ ಯಶ್ ಕುಟುಂಬ ಆಚರಿಸಿದ್ದು, ಗೋವಾ ಬೀಚ್‍ನಲ್ಲಿ ಹಡಗಿನಲ್ಲಿ ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತುಂಬಾ ರಿಚ್ ಆಗಿ ಆಚರಿಸಿರುವುದನ್ನು ನೋಡಬಹುದಾಗಿದೆ. ಈ ಸಂಭ್ರಮಾಚರಣೆಯಲ್ಲಿ ಕೇವಲ ನಾಲ್ಕೈದು ಮಂದಿ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದು, ಗೋವಾದ ಬೀಚ್‍ನಲ್ಲಿ ಬೃಹತ್ ಹಡಗಿನಲ್ಲಿ ಆನಂದಿಸಿ, …

Read More »

ಸಿಂಹ ರೂಪ ತಾಳಿದ ಮಂಗಳೂರಿನ ಮಾಡೆಲ್

ಮಂಗಳೂರು: ವಿದೇಶಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿದ್ದ ಫೇಸ್ ಪೈಂಟಿಂಗ್ ಇದೀಗ ನಮ್ಮ ರಾಜ್ಯದ ಕರಾವಳಿಯಲ್ಲೂ ಮೊದಲ ಬಾರಿಗೆ ಕಾಣ ಸಿಕ್ಕಿದೆ. ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಬ್ಯೂಟಿ ಲಾಂಜ್ ಆ್ಯಂಡ್ ಅಕಾಡೆಮಿಯ ಮುಖ್ಯಸ್ಥೆ ಚೇತನಾ ಎಂಬ ಮಾಡೆಲ್, ಮುಖದ ಮೇಲೆ ಮಾಡಿರುವ ಫೇಸ್ ಪೈಂಟಿಂಗ್ ಈಗ ಮಂಗಳೂರಿನಲ್ಲಿ ಸಖತ್ ಫೇಮಸ್ ಆಗಿದೆ. ವಿದೇಶಗಳಲ್ಲಿ ಹೆಚ್ಚಾಗಿ ಮಾಡುವ ಫೇಸ್ ಪೈಂಟಿಂಗ್ ಅನ್ನು ಇವರು ಮಾಡಿ ಈಗ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಶಿವಮೊಗ್ಗ …

Read More »