ಚಿಕ್ಕೋಡಿ : ಗ್ರಾಪಂ. ಚುನಾವಣೆಯ ಕಣದಲ್ಲಿದ್ದಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ಜೋಡಕುರಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಮಾರುತಿಗೌಡ ಭೀಮಗೌಡ ಪಾಟೀಲ್(65) ಬೆಳಿಗ್ಗೆ ಚಹಾ ಕುಡಿಯುತ್ತಲೇ ಕೊನೆಯುಸಿರೆಳಿದ್ದಾರೆ. ಇವರು ಗ್ರಾಮದ ವಾರ್ಡ್ ನಂ.3ರಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಡಿ.27ರಂದು ಮತದಾನ ನಡೆಯಲಿದೆ. ಮಾರುತಿಗೌಡ ಅವರು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.
Read More »ನೈಟ್ ಕರ್ಫ್ಯೂ ತೀರ್ಮಾನ ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕೊರೊನಾ ಹೊಸ ಪ್ರಭೇದ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರಾತ್ರಿ ವೇಳೆ ಮಾತ್ರ ಜಾರಿಗೊಳಿಸಿರುವ ನೈಟ್ ಕರ್ಫ್ಯೂ ವಿಚಾರ ತೀವ್ರ ಟೀಕೆಗೆ ಗುರಿಯಾಗಿದೆ. ವಿಪಕ್ಷ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ. ರೂಪಾಂತರಿ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರದ ಕ್ರಮಗಳು ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತಿದೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಕಾಟಾಚಾರದ ರಾತ್ರಿ ಕರ್ಫ್ಯೂ ಹೇರಿ …
Read More »ಲಿಂಗಾಯತ ಮೀಸಲಾತಿ; ರಕ್ತ ದಾಸೋಹದ ಮೂಲಕ ಸರ್ಕಾರದ ಗಮನಸೆಳೆಯಲು ಮುಂದಾದ ಜಯ ಮೃತ್ಯುಂಜಯ ಶ್ರೀಗಳು
ಬಾಗಲಕೋಟೆ : ಪಂಚಮಸಾಲಿ ಲಿಂಗಾಯತ ಸಮಾಜ 2ಎ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೂರನೇ ಹಂತದ ಹೋರಾಟಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 23 ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹುಟ್ಟು ಹಬ್ಬದ ದಿನ ಹಾಗೂ ರೈತ ದಿನಾಚರಣೆ ಹಿನ್ನೆಲೆಯಲ್ಲಿ ವಿಶಿಷ್ಟ ರೀತಿಯ ಹೋರಾಟಕ್ಕೆ ಅಣಿಯಾಗಿದ್ದಾರೆ. ಸ್ವತಃ ಸ್ವಾಮೀಜಿ ರಕ್ತ ದಾನ ಮಾಡುವ ಮೂಲಕ ರಕ್ತದಾಸೋಹಕ್ಕೆ ಚಾಲನೆ ನೀಡಿದರು. ರಕ್ತ …
Read More »ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ನಟಿ ರಾಗಿಣಿ ದ್ವಿವೇದಿ ಉಸಿರಾಟದ ಸಮಸ್ಯೆ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಡ್ರಗ್ಸ್ ಕೇಸ್ ನಲ್ಲಿ ಬಂಧನಕ್ಕೀಡಾಗಿರುವ ನಟಿ ರಾಗಿಣಿ ಕಳೆದ ನಾಲ್ಕು ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ಜೈಲು …
Read More »9 ಎಕರೆಯಷ್ಟು ಕಬ್ಬು ಬೆಂಕಿಗಾಹುತಿ
ಬೆಳಗಾವಿ; 9 ಎಕರೆಯಷ್ಟು ಕಬ್ಬು ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬು ಬೆಳೆಗೆ ಬೆಂಕಿ ಬಿದ್ದಿದ್ದು, 9 ಎಕರೆಯಷ್ಟು ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ. ಶಿವನಗೌಡ ಪಾಟೀಲ್ ಎಂಬುವವರಿಗೆ ಸೇರಿದ 6 ಎಕರೆ, ಮಾಬು ಸುಭಾವಿ ಎಂಬುವವರಿಗೆ ಸೇರಿದ 2 ಎಕರೆ ಹಾಗೂ ದಸಕೀರಸಾಬ್ ಎಂಬುವವರಿಗೆ ಸೇರಿದ 1 ಎಕರೆ ಕಬ್ಬು ಬೆಳೆ ನಾಶವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ …
Read More »ನ್ಯೂಮೋನಿಯಾಗೆ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೈಗೆಟುಕುವ ಬೆಲೆಯ ಲಸಿಕೆ ಮುಂದಿನ ವಾರದಿಂದ ಜನರಿಗೆ ದೊರೆಯುವ ಸಾಧ್ಯತೆಗಳಿವೆ.
ನವದೆಹಲಿ, ಡಿ.24- ನ್ಯೂಮೋನಿಯಾಗೆ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೈಗೆಟುಕುವ ಬೆಲೆಯ ಲಸಿಕೆ ಮುಂದಿನ ವಾರದಿಂದ ಜನರಿಗೆ ದೊರೆಯುವ ಸಾಧ್ಯತೆಗಳಿವೆ. ಭಾರತದಲ್ಲೇ ಅಭಿವೃದ್ದಿಪಡಿಸಿರುವ ಲಸಿಕೆಯನ್ನು ಲೋಕಾರ್ಪಣೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮುಂದಿನ ವಾರದಿಂದ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ವಿದೇಶಿ ನಿರ್ಮಿತ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ವಿದೇಶಿ ಲಸಿಕೆಗಳಿಗಿಂತ ಕಡಿಮೆ ದರದಲ್ಲಿ ಸೆರಂ ಸಂಸ್ಥೆಯ ನ್ಯೂಮೋನಿಯಾ ಲಸಿಕೆ ದೊರೆಯಲಿದೆ. ಪೂನಾ ಮೂಲದ …
Read More »ಬೀದರ್ನಲ್ಲಿ ಕನಿಷ್ಠ ತಾಪಮಾನ ದಾಖಲು : ಮತ್ತಷ್ಟು ಚಳಿ ದಟ್ಟವಾಗುವ ಸಾಧ್ಯತೆ
ಬೀದರ್(ಡಿಸೆಂಬರ್. 24 ): ಗಡಿ ಜಿಲ್ಲೆ ಬೀದರ್ ನಲ್ಲೀಗ ಮೈಕೊರೆಯುವ ಚಳಿ ಶುರುವಾಗಿದೆ. ಮಂಗಳವಾರ ರಾಜ್ಯದಲ್ಲೇ ಅತೀ ಕಡಿಮೆ ಅಂದರೆ 5.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜಿಲ್ಲೆಯ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದ್ದು, ದಿನವಿಡೀ ಚಳಿಯ ಅನುಭವ ಹೊಂದುವಂತಾಗಿದೆ. ಬೆಳಗ್ಗೆ 7 ಗಂಟೆಯಾದರೂ ಬೆಳಕು ಮೂಡುತ್ತಿಲ್ಲ. ಸಂಜೆ 5:30ಗಂಟೆಗೆ ಕತ್ತಲು ಆವರಿಸುತ್ತಿದೆ. ಬರುವ ದಿನಗಳಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಇಳಿಯುವ …
Read More »ಮಂಜಿನಗರಿಯಲ್ಲಿ ಪ್ರವಾಸೋದ್ಯಮ ಪ್ರೋತ್ಸಾಹಿಸಲು ಒಂದು ವಾರ ಹೆಲಿಟೂರಿಸಂ
ಕೊಡಗು: ಮಂಜಿನನಗರಿ ಮಡಿಕೇರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿನ ಸೌಂದರ್ಯ ಸವಿಯಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ತನ್ನದೇ ವಿಶಿಷ್ಠ ಸಂಪ್ರದಾಯಗಳಿಂದ ಎಲ್ಲರ ಗಮನ ಸೆಳೆಯುವ ಜಿಲ್ಲೆಯಲ್ಲಿ ಎತ್ತ ನೋಡಿದರೂ ಕಾನನಗಳ ಹೊದ್ದು ಗಗನ ಚುಂಬಿಸುವ ಬೆಟ್ಟ ಗುಡ್ಡಗಳು, ಬೆಟ್ಟಗಳಿಗೆ ಮುತ್ತಿಕ್ಕುವ ಮೋಡಗಳ ಕಾಣಸಿಗುತ್ತವೆ. ಇಂತಹ ಸುಂದರ ತಾಣದಲ್ಲಿ ಪ್ರವಾಸಿಗರಿಗೂ ಸುತ್ತಾಡುವುದು ಎಂದರೆ ತುಂಬಾನೇ ಮಜಾ. ಆದರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾದ ಭೀಕರ ಭೂಕುಸಿತ ಇಡೀ ಜಿಲ್ಲೆಯನ್ನು ತತ್ತರಿಸುವಂತೆ …
Read More »ನಾನು ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ಅವರ ಎಲ್ಲಾ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ: ಡಿ.ಕೆ.ಸುರೇಶ್
ರಾಮನಗರ(ಡಿಸೆಂಬರ್.24): ಟೊಯೋಟಾ ಕಿರ್ಲೋಸ್ಕರ್ ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಒಕ್ಕೂಟದ ಜಗಳ ಕಳೆದ ಸುಮಾರು ದಿನಗಳಿಂದ ನಡೆಯುತ್ತಿದೆ. ಇದೇ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಆಡಳಿತ ಮಂಡಳಿಯ ಜೊತೆಗೆ ಸಂಧಾನ ಸಭೆ ನಡೆಸಿದರು. ಆದರೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದೇ ಸಭೆ ವಿಫಲವಾಯ್ತು. ಡಿ.ಕೆ.ಸುರೇಶ್ ಕೂಡ ಟೊಯೋಟಾ ವಿರುದ್ಧ ಕಿಡಿಕಾರಿದ್ದಾರೆ. ಕಾರ್ಮಿಕರು ಸಹ ಹೋರಾಟ ಮುಂದುವರೆಸಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹಾಗೂ …
Read More »ಸದ್ದಿಲ್ಲದೇ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಆಟ ಶುರು ಮಾರಿಹಾಳ ಗ್ರಾಮ ಪಂಚಾಯತಿಯ ಐವರು ಸದಸ್ಯರು ಅವಿರೋಧ ವಾಗಿ ಆಯ್ಕೆ
ಬೆಳಗಾವಿ-ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸದ್ದಿಲ್ಲದೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಟ ಶುರು ಮಾಡಿದ್ದಾರೆ. ಗ್ರಾಮ ಮಟ್ಟದಿಂದಲೇ ಸಂಘಟನೆ ಕಟ್ಟುತ್ತಿರುವ ರಮೇಶ್ ಜಾರಕಿಹೊಳಿ ಅವರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಕೈಯಾಡಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಯಾಕಂದ್ರೆ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದು.ಸಾಹುಕಾರ್ ರಮೇಶ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಈ ಕ್ಷೇತ್ರದಲ್ಲಿ ಬೀಜ ಬೀತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮ …
Read More »