Breaking News

ಕುದುರೆ ಏರಿ ನಿಂತ. ಚೆಂದನೇ ಪೋಸ್​ ಕೊಟ್ಟ.. ಹೆಣ್ಮಕ್ಕಳು ಫಿದಾ. ಗಂಡುಮಕ್ಕಳು ಗರಂ!

ಮುಂಬೈ: ಇಲ್ಲಿ ಕುದುರೆ ಮೇಲೆ ಏರಿನಿಂತು ಫೋಟೋಗೆ ಪೋಸ್​ ಕೊಟ್ಟವನು ಖ್ಯಾತ ಬಾಲಿವುಡ್ ನಟ ವಿಕ್ಕಿ ಕೌಶಲ್. ಅಪಾಯಕಾರಿ ಎನ್ನುವಂಥ ಪೋಸ್​ ನೀಡಿರುವ ಈತ ಇದೀಗ ಸಾಮಾಜಿಕ ಜಾಲತಾಣದ ಹೀರೋ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಧವಾದ ಪೋಟೋದಲ್ಲಿ ಕಾಣಿಸಿಕೊಂಡಿರುವ ನಟ ಕುದುರೆ ಸವಾರಿ ಮಾಡುವಾಗ ಬಳಸಲಾಗುವ ಉಡುಪನ್ನು ಧರಿಸಿದ್ದು, ಜೊತೆಯಲ್ಲಿ ಹೆಲ್ಮೆಟ್ ಹಾಗೂ ಕಾಲಿಗೆ ಶೂ ಧರಿಸಿದ್ದು, ಕುದುರೆ ಮೇಲೆ ನಿಂತು ಬ್ಯಾಲೆನ್ಸ್ …

Read More »

ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​

ಬಿಗ್​ ಬಾಸ್​ ಮನೆ ಸೇರಿರುವ ಪ್ರಶಾಂತ್​ ಸಂಬರಗಿ ತುಂಬಾನೇ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಕಾರಣ ಅವರು ಎಲ್ಲಾ ಸ್ಪರ್ಧಿಗಳ ಬಗ್ಗೆ ರೇಗೋದು. ಮತ್ತೊಂದು ಎಂದರೆ, ಪ್ರಶಾಂತ್​ ಸಂಬರಗಿ ಹೆಣ್ಣುಮಕ್ಕಳನ್ನು ಟೈಟ್​ ಆಗಿ ಹಗ್​ ಮಾಡಿಕೊಳ್ಳುವುದು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಟ್ರೋಲ್​ ಕೂಡ ಹರಿದಾಡಿತ್ತು. ಈಗ ಈ ವಿಚಾರದಲ್ಲಿ ಪ್ರಶಾಂತ್​ಗೆ ಸುದೀಪ್​ ಖಡಕ್​ ಆಗಿ ವಾರ್ನಿಂಗ್​ ನೀಡಿದ್ದಾರೆ. ವೈರಸ್​ …

Read More »

ವಿದ್ಯುತ್ ಸಮಸ್ಯೆ ಖಂಡಿಸಿ 15ರಂದು 20 ಕಿ.ಮೀ. ಪಾದಯಾತ್ರೆ

ಹೊಸನಗರ: ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಮಾರ್ಚ್ 15ರಂದು 20 ಕಿ.ಮೀ. ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯುತ್ ಬಳಕೆದಾರರ ಹೋರಾಟ ಸಮಿತಿಯ ವಾಟಗೋಡು ಸುರೇಶ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ತಾಲ್ಲೂಕಿನ ಬಟ್ಟೆಮಲ್ಲಪ್ಪದಿಂದ ಪಾದಯಾತ್ರೆ ಆರಂಭವಾಗಲಿದ್ದು, ಮಾರುತಿಪುರ, ಕಚ್ಚಿಗೆಬೈಲು, ಬ್ರಹ್ಮೇಶ್ವರ, ಮಾವಿನಕೊಪ್ಪ ವೃತ್ತ ಮಾರ್ಗವಾಗಿ ತಹಶೀಲ್ದಾರ್ ಕಚೇರಿಯ ತನಕ ನಡೆಯಲಿದೆ ಎಂದರು. ಈ ಪಾದಯಾತ್ರೆಯಲ್ಲಿ ರೈತರು, ರೈತ ಕಾರ್ಮಿಕರು, ಸ್ವ-ಸಹಾಯ ಸಂಘದ ಸದಸ್ಯರು, ವಿದ್ಯುತ್ …

Read More »

ಪೊಲೀಸ್‌ ದೌರ್ಜನ್ಯ ಮುಂದುವರಿದರೆ ಎಲ್ಲ ಠಾಣೆಗಳಿಗೆ ಮುತ್ತಿಗೆ: ಸಿದ್ದರಾಮಯ್ಯ

ಶಿವಮೊಗ್ಗ: ರಾಜ್ಯದ ಕಾರ್ಯಕರ್ತರು ಮುಖಂಡರ ಮೇಲೆ ಭದ್ರಾವತಿಯಲ್ಲಿ ನಡೆದಂತಹ ಪೊಲೀಸ್‌ ದೌರ್ಜನ್ಯ ಮುಂದುವರಿದರೆ ರಾಜ್ಯದ ಎಲ್ಲ ಠಾಣೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು. ನಗರದ ಬಿ.ಎಚ್‌.ರಸ್ತೆಯ ಸೈನ್ಸ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ಚಲೋ-ಜನಾಕ್ರೋಶ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋಟಿಗಟ್ಟಲೆ ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿದರು. ಲೂಟಿ‌ ಹೊಡೆದು ಆಸ್ತಿ ಮಾಡಿದರು. ಹಾಗಂತ ಅವರೇ ಪೊಲೀಸರಿಗೆ ಸಂಬಳ ಕೊಡುತ್ತಾರಾ? …

Read More »

ಕುತೂಹಲ ಕೆರಳಿಸಿದೆ ಸಿಎಂ ಸಭೆ

ಬೆಂಗಳೂರು,ಮಾ.13- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಚಿವರ ಸಭೆ ಕರೆದಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಕರೆಯಲಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮೇಲ್ನೋಟಕ್ಕೆ ಇದು ಒಂದು ಅನೌಪಚಾರಿಕ ಸಭೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಕೆಲವು ವಿದ್ಯಮಾನಗಳ ಬಗ್ಗೆ ಚರ್ಚಿಸಲು ಸಚಿವರ ಸಭೆ ಕರೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ …

Read More »

ನಕಲಿ ಸಿಡಿ ತಯಾರಿಸಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ.

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಆಪ್ತ, ಮಾಜಿ ಶಾಸಕ ಎಂ.ವಿ. ನಾಗರಾಜ್ ಮೂಲಕ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಿಡಿ ಪ್ರಕರಣದ ವಿರುದ್ಧ ಮಾಜಿ ಶಾಸಕ ನಾಗರಾಜ್, ರಮೇಶ್ ಜಾರಕಿಹೊಳಿ ಪರವಾಗಿ ಲಿಖಿತ ದೂರು ದಾಖಲಿಸಿದ್ದು, ನಕಲಿ ಸಿಡಿ ತಯಾರಿಸಿ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿ ತೇಜೋವಧೆ ಮಾಡಲಾಗಿದೆ ಎಂದು ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಸಿಡಿಯಲ್ಲಿರುವುದು ತಾನಲ್ಲ ಎಂದು …

Read More »

ಮನುಷ್ಯನ ವಾಸನೆ ಹಿಡಿದು ಪರಾರಿಯಾಯ್ತಾ ಪೊನ್ನಂಪೇಟೆ ವ್ಯಾಘ್ರ?

ಕೊಡಗು: ಪೊನ್ನಂಪೇಟೆಯ ನರಭಕ್ಷಕನಿಗಾಗಿ ಇಂದೂ ಕೂಡ ಹುಡುಕಾಟ ಮುಂದುವರಿದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಶಾರ್ಪ್‌ ಶೂಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಾರ ಕಳೆದರೂ ಹುಲಿ ಕೈಗೆ ಸಿಗದಿರುವುದನ್ನು ನೋಡಿದರೆ ಹುಲಿಗೆ ಮನುಷ್ಯರ ವಾಸನೆ ಗೊತ್ತಾಗಿ ಸುತ್ತಮುತ್ತ ಸುಳಿಯುತ್ತಿಲ್ಲವೇನೋ ಎನ್ನುವ ಅನುಮಾನ ಕಾಡುತ್ತಿದೆ. ಹುಲಿ ಕಾರ್ಯಾಚರಣೆಗೆ ಇನ್ನಷ್ಟು ಸಿಬ್ಬಂದಿ ಅಗತ್ಯವಿದ್ದ ಕಾರಣ ಶಾರ್ಪ್‌ಶೂಟರ್‌ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಮಧ್ಯೆ ಹುಲಿ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಆನೆಗಳನ್ನು ತಕ್ಷಣದಿಂದಲೇ ನಿಲ್ಲಿಸಲಾಗಿದೆ. ಆನೆಗಳು ಕಾಫಿ ತೋಟದ …

Read More »

ಇತಿಹಾಸದ ನಗರಿಯಾಗಿರುವ ಹಂಪಿಯು ಕೋಟೆ ಗೋಡೆಯ ಒಂದು ಭಾಗದಲ್ಲಿ ಕುಸಿತ

ಹಂಪಿ: ಐತಿಹಾಸಿಕ ನೆಲೆಗಟ್ಟಾಗಿರುವ ಹೊಸಪೇಟೆ ತಾಲ್ಲೂಕಿನ ಹಂಪಿ ಕಮಲ ಮಹಲ್ ಸ್ಮಾರಕ ಸುತ್ತಲಿನ ಕೋಟೆ ಗೋಡೆಯ ಒಂದು ಭಾಗ ಶುಕ್ರವಾರ ಬೆಳಗ್ಗೆ ಕುಸಿದುಬಿದ್ದಿದೆ. ಕಲ್ಲುಗಳಿಂದ ನಿರ್ಮಿಸಿದ್ದ ಗೋಡೆಯ ಒಂದು ಭಾಗ ಭಾಗಶಃ ಕುಸಿದಿದ್ದು, ಪುರಾತನ ಗೋಡೆಯಾಗಿರುವುದರಿಂದ ಕುಸಿದು ಬಿದ್ದಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಯಾವುದೇ ಸ್ಮಾರಕಕ್ಕೆ ಹಾನಿಯಾಗಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ . ಕಾಳಿಮುತ್ತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ …

Read More »

ಸಿದ್ದರಾಮಯ್ಯ ಆರಂಭಿಸಿದ ಯೋಜನೆಗಳಿಂದಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಹಾವೇರಿ, ಮಾರ್ಚ್ 13: ಸಿದ್ದರಾಮಯ್ಯ ಆರಂಭಿಸಿದ ಯೋಜನೆಗಳಿಂದಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಶನಿವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚಿಸಿದ ಯೋಜನೆಗಳಿಂದಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದರು. ಹಾವೇರಿಯು ಕಾಂಗ್ರೆಸ್‌ನ …

Read More »

ಎಸ್‌ಐಟಿ’ ತನಿಖೆ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಹತ್ವದ ಪ್ರತಿಕ್ರಿಯೆ!

ಬೆಂಗಳೂರು, ಮಾ. 13: ರಮೇಶ್ ಜಾರಕಿಹೊಳಿ ಅವರ ‘ಸಿಡಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದು, ಅವರ ಹೇಳಿಕೆ ಕುತೂಹಲ ಮೂಡಿಸಿದೆ. ಈಗಾಗಲೇ ‘ಸಿಡಿ’ ಕುರಿತು ಎಸ್‌ಐಟಿ ತನಿಖೆ ಆರಂಭಿಸಿದ್ದು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂಬ ಮಾಹಿತಿಯಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗದೆ ಸರಿಯಾದ ತನಿಖೆ ನಡೆಸುವುದು ಅಸಾಧ್ಯ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸುತ್ತಾರಾ ಎಂಬ ಪ್ರಶ್ನೆಗೆ …

Read More »