Breaking News

3 ವರ್ಷದ ಬಾಲಕಿ ಮೇಲೆ ಅತ್ಯಾಚಾರ- ಇಬ್ಬರಿಗೆ 20 ವರ್ಷ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಇಬ್ಬರು ನೆರೆಹೊರೆಯವರಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.ಲೈಂಗಿಕ ಅಪರಾಧಗಳಿಗೆ ಮಕ್ಕಳ ವಿಶೇಷ ಸಂರಕ್ಷಣಾ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ನ್ಯಾಯಾಲಯವು 19 ವರ್ಷದ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. 2018 ರಲ್ಲಿ ನೆರೆ ಮನೆಯ 3 ವರ್ಷದ ಬಾಲಕಿಯ ಮೇಲೆ ಈ ಇಬ್ಬರು ಅತ್ಯಾಚಾರ ನಡೆಸಿದ್ದರು. ಈ ಕುರಿತಾಗಿ ತನಿಖೆ ನಡೆಯುತ್ತಿತ್ತು. ಇದೀಗ ಈ …

Read More »

ಅರುಣ್ ಸಿಂಗ್‍ಗೆ ಸಚೇತಕ ಸುನೀಲ್ ಕುಮಾರ್ ದೂರು

ಬೆಂಗಳೂರು, ಡಿ.6- ಹಲವು ಸಚಿವರು ಹಾಗೂ ಶಾಸಕರ ಇತ್ತೀಚಿನ ಬಹಿರಂಗ ಹೇಳಿಕೆಗಳು ನೋವುಂಟು ಮಾಡಿದ್ದು, ಪಕ್ಷದ ಸಿದ್ಧಾಂತ, ಶಿಸ್ತಿನ ಚೌಕಟ್ಟಿನ ಉಲ್ಲಂಘನೆ ಮಾಡಿರುವವರಿಗೆ ಕೂಡಲೇ ಕಡಿವಾಣ ಹಾಕುವಂತೆ ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ರಾಜ್ಯ ನೂತನ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾದ ಸುನಿಲ್ ಕುಮಾರ್, ಮಂತ್ರಿ …

Read More »

ನಾನು ಸಹಕಾರ ಮಂತ್ರಿಯಾಗಿ ಸಾಲ ಮನ್ನಾ ಮಾಡೋದು ಗ್ಯಾರಂಟಿ”

ಮಧುಗಿರಿ, – ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಹಾಗೂ ನಾನು ಸಹಕಾರ ಮಂತ್ರಿಯಾಗಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದು ನಿಶ್ಚಿತ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜೊತೆಗೆ ಅನೇಕ …

Read More »

ಕೊರೊನಾದಿಂದಾಗಿ ಬಡತನಕ್ಕೆ ಸಿಲುಕಿದ 100ಕೋಟಿ ಜನ..!

ನವದೆಹಲಿ : ಮಹಾಮಾರಿ ಕೊರೊನಾದಿಂದಾಗಿ ಮುಂದಿನ 10 ವರ್ಷದಲ್ಲಿ ಸುಮಾರು 100 ಕೋಟಿ ಜನ ಕಡುಬಡತನಕ್ಕೆ ಸಿಲುಕಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್‍ಡಿಪಿ) ನಡೆಸಿರುವ ಸಮೀಕ್ಷೆ ಪ್ರಕಾರ ಕೊರೊನಾದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ 207 ಮಿಲಿಯನ್ ಜನ ಕಡು ಬಡತನಕ್ಕೆ ದೂಡಲ್ಪಟ್ಟಿದ್ದಾರೆ. 2030ರ ವೇಳೆಗೆ ಒಂದು ಬಿಲಿಯನ್ ಸರಿಸುಮಾರು 100 ಕೋಟಿ ಜನ ಬಡತನಕ್ಕೆ ಸಿಲುಕಲಿದ್ದಾರೆ ಎಂದು ಹೇಳಲಾಗಿದೆ. ಕೊರೊನಾದಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. …

Read More »

ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ನಿಂದ ಕಸಿಯಲು ಬಿಜೆಪಿ ಪ್ರಯತ್ನ

ಬೆಂಗಳೂರು – ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ನಿಂದ ಕಸಿಯಲು ಬಿಜೆಪಿ ಪ್ರಯತ್ನ ನಡೆಸಿದ್ದು, ಜೆಡಿಎಸ್ ಬೆಂಬಲದೊಂದಿಗೆ ಯಶಸಾಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ನ ಪ್ರತಾಪ ಚಂದ್ರ ಶೆಟ್ಟಿಯನ್ನು ಕೆಳಗಿಳಿಸಿ ಬಿಜೆಪಿಯ ಒಬ್ಬರನ್ನು ಸಭಾಪತಿ ಮಾಡುವುದು ಬಹುತೇಕ ನಿಚ್ಛಳವಾಗಿದೆ. ಜೆಡಿಎಸ್ ಬೆಂಬಲ ಪಡೆಯದಿರಲು ಕಾಂಗ್ರೆಸ್ ಈಗಾಗಲೆ ನಿರ್ಧರಿಸಿದೆ. ಹಾಗಾಗಿ ಜೆಡಿಎಸ್ ಬಿಜೆಪಿಗೆ ಬಂಬಲ ನೀಡುವುದು ಖಚಿತವಾಗಿದೆ. ಸೋಮವಾರದಿಂದ ಅಧಿವೇಶನ ಆರಂಭವಾಗಲಿದ್ದು, ಬಿಜೆಪಿಯ ಮೂವರ ಹೆಸರು ಪ್ರಸ್ತಾಪವಾಗಿದೆ.  ಮಹಾಂತೇಶ ಕವಟಗಿಮಠ,  …

Read More »

ಅಮ್ಮನನ್ನ ನೋಡಲು ಆಸ್ಪತ್ರೆಗೆ ಬಂದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್

ಶಿವಮೊಗ್ಗ: ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯನ್ನ ನೋಡಲು ಬಂದ ಬಾಲಕಿಯ ವಾರ್ಡ್ ಬಾಯ್ ತನ್ನ ಗೆಳೆಯರ ಜೊತೆ ಸೇರಿ ಅತ್ಯಾಚಾರಗೈದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅಪ್ರಾಪ್ತೆ ತಾಯಿ ಅನಾರೋಗ್ಯ ಹಿನ್ನೆಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ತಾಯಿಯನ್ನ ನೋಡಲು ಬರುತ್ತಿದ್ದ ಬಾಲಕಿಯನ್ನ ಆಸ್ಪತ್ರೆಯ ವಾರ್ಡ್ ಬಾಯ್ ಪರಿಚಯ ಮಾಡಿಕೊಂಡಿದ್ದಾನೆ. ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆ ಬಹುತೇಕ ಹೋಟೆಲ್ ಗಳು ಮುಚ್ಚಿವೆ. ಇದನ್ನೇ …

Read More »

ದೇವಾಲಯಕ್ಕೆ ನುಗ್ಗಿದ ಕರಡಿ-

ತುಮಕೂರು: ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾಮದ ಬಳಿ ಪ್ರತಿನಿತ್ಯ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಗ್ರಾಮದ ಪಿಲ್ಲೆಕಮ್ಮ ದೇವಸ್ಥಾನದ ಬಳಿ ಭಾನುವಾರ ಕರಡಿಯೊಂದು ಕಾಣಿಸಿಕೊಂಡಿದೆ. ಕರಡಿ ದೇವಸ್ಥಾನ ಪ್ರವೇಶಿಸುತ್ತಿರುವ ವಿಡಿಯೋವನ್ನು ಗ್ರಾಮದ ಶಿವರಾಜು ಎಂಬುವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಗ್ರಾಮಸ್ಥರ ಕೂಗಾಟ ಚೀರಾಟ ಕೇಳಿ ಕರಡಿ ದೇವಸ್ಥಾನದಿಂದ ಕಾಡಿನತ್ತ ತೆರಳಿದೆ. ಈ ಭಾಗದಲ್ಲಿ ನಾಲ್ಕೈದು ಕರಡಿಗಳು ಓಡಾಡಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಬಗ್ಗೆ ಹಲವು ಬಾರಿ …

Read More »

ಅಧಿವೇಶನದಲ್ಲಿ ಕೋಲಾಹಲ, ಗದ್ದಲ ಸಾಧ್ಯತೆ…………..

ಬೆಂಗಳೂರು: ಇಂದಿನಿಂದ ಇದೇ 15 ರವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಉಭಯ ಸದನಗಳ ಕಲಾಪಗಳಲ್ಲೂ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಪರಸ್ಪರ ವಾಕ್ಸಮರ ನಡೆಯಲಿದೆ. ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ನೆರೆ ಪರಿಹಾರದಲ್ಲಿನ ವೈಫಲ್ಯ, ಕೇಂದ್ರದಿಂದ ಪರಿಹಾರ ಬಿಡುಗಡೆಯಲ್ಲಿನ ತಾರತಮ್ಯ, ರೈತರ ಸಮಸ್ಯೆಗಳು, ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ, ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳಿಂದ …

Read More »

ಕೃಷಿ ಕಾಯ್ದೆ ವಿರೋಧಿಸಿ ನಾಳೆ ಭಾರತ್ ಬಂದ್ – ಕರ್ನಾಟಕದಲ್ಲೂ ಬಂದ್‍ಗೆ ಕರೆ

ಬೆಂಗಳೂರು: ಕೇಂದ್ರದ ವಿರುದ್ಧ ಅನ್ನದಾತನ ಹೋರಾಟದ ಕಿಚ್ಚು, ನೂತನ ಕೃಷಿ ಮಸೂದೆಯ ವಿಚಾರಕ್ಕೆ ದೆಹಲಿಯಂಗಳದಲ್ಲಿ ಈಗ ಹಸಿರು ಹೋರಾಟದ ಕಾವು. ಈಗ ಇದು ಬೆಂಗಳೂರಿನಲ್ಲೂ ಆರಂಭವಾಗಲಿದೆ. ಅಧಿವೇಶನದ ಬೆನ್ನಲ್ಲೆ ನಾಳೆ ಭಾರತ್ ಬಂದ್ ಪ್ರಯುಕ್ತ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೂ ಕರೆಕೊಟ್ಟಿದೆ. ಈ ಮಧ್ಯೆ ನಾಳೆಯುಂದ ಕುರುಬೂರು ಶಾಂತಕುಮಾರ್ ಹಾಗೂ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ಸರ್ಕಲ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯೂ ನಡೆಯಲಿದೆ. ನಾಳೆ ಸರ್ಕಾರದ ವಿರುದ್ಧ ಹೋರಾಟದ …

Read More »

ಮುಂದುವರಿದ ‘ಸಂಪುಟ’ ಸಸ್ಪೆನ್ಸ್ – ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ

ಬೆಂಗಳೂರು: ಬಿಜೆಪಿ ಮನೆಯ ಸಚಿವಾಕಾಂಕ್ಷಿ ಹಕ್ಕಿಗಳಿಗೆ ಇವತ್ತು ಬೆಳಗ್ಗೆ ಇದ್ದ ನಿರೀಕ್ಷೆ, ಕಾತರ ಸಂಜೆ ಹೊತ್ತಿಗೆ ಇಳಿದಿತ್ತು. ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜತೆ ಸಿಎಂ ಯಡಿಯೂರಪ್ಪ ಚರ್ಚಿಸಿ ನಮ್ಮನ್ನ ನಾಳೆ ಬೆಳಗ್ಗೆಯೊಳಗೆ ಸಚಿವರಾಗಿ ಮಾಡೇಬಿಡ್ತಾರೆಂಬ ನಿರೀಕ್ಷೆ ಠುಸ್ ಆಗಿದೆ. ಕಾವೇರಿ ನಿವಾಸದಲ್ಲಿ ಮಧ್ಯಾಹ್ನ ಸಿಎಂ ಮತ್ತು ಅರುಣ್ ಸಿಂಗ್ ನಡುವಿನ ಸಂಪುಟ ವಿಸ್ತರಣೆ ಕುರಿತ ಮಾತುಕತೆ ವಿಫಲವಾಗಿದೆ. ಹೈಕಮಾಂಡ್ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಡದೇ ತನ್ನ …

Read More »