ಶಾರುಖ್ ಖಾನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನಿರ್ದೇಶಿಸುತ್ತಿರುವ ಹಿಟ್ ನಿರ್ದೇಶಕನಿಗೆ ಸೆಟ್‌ನಲ್ಲಿಯೇ ಸಹಾಯಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಗೆ ಸಹಾಯಕ ನಿರ್ದೇಶಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಬಾಲಿವುಡ್ ಹಂಗಾಮ ಹಾಗೂ ಇನ್ನೂ ಕೆಲವು ಬಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ. ಸಿದ್ಧಾರ್ಥ್ ಆನಂದ್ ತುಸು ಸಿಟ್ಟಿನ ವ್ಯಕ್ತಿಯಾಗಿದ್ದು, ಸೆಟ್‌ನಲ್ಲಿ ತಮ್ಮ ಸಹಾಯಕನೊಬ್ಬ ಸೂಕ್ತವಾಗಿ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ಸಹಾಯಕನ ಕಪಾಳಕ್ಕೆ …
Read More »ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
ಸ್ಟಾರ್ ನಟರ ಚಿತ್ರಗಳು ಒಂದೊಂದೆ ಬಿಡುಗಡೆ ದಿನಾಂಕ ಘೋಷಿಸಿದೆ. ಸ್ಯಾಂಡಲ್‌ವುಡ್‌ನಲ್ಲಿ ಇನ್ನು ಎರಡು ತಿಂಗಳು ಸ್ಟಾರ್ ನಟರ ಅಬ್ಬರ ಜೋರಾಗಿರಲಿದೆ. ಈ ಗ್ಯಾಪ್‌ನಲ್ಲಿ ಹೊಸಬರ ಸಿನಿಮಾಗಳು ತೆರೆಗೆ ಬರುವುದು ಸ್ವಲ್ಪ ಮಟ್ಟಿಗೆ ಕಷ್ಟ ಎನ್ನಬಹುದು. ಬಹುಶಃ ಅದಕ್ಕಾಗಿಯೇ ಈ ವಾರ ಐದು ಕನ್ನಡ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. ಜನವರಿ 22 ರಂದು ಐದು ಕನ್ನಡ ಸಿನಿಮಾ ಥಿಯೇಟರ್‌ಗೆ ಬರ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ‘ತಲಾಖ್ ತಲಾಖ್ ತಲಾಖ್ ಸಿನಿಮಾ ಈ …
Read More »ಯುವತಿಯರು ಅರೆಸ್ಟ್.. ಮಾನವ ಹಕ್ಕು ಮತ್ತು ಮಾಧ್ಯಮದ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್!
ಮೈಸೂರು: ಮಾನವ ಹಕ್ಕುಗಳು ಮತ್ತು ಮಾಧ್ಯಮದ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್ ಒಡ್ಡಿ ಕೆ.ಆರ್.ಆಸ್ಪತ್ರೆ ವೈದ್ಯರಿಂದ ಹಣ ವಸೂಲಿ ಮಾಡಲು ಹೊರಟ ಆರೋಪಿಗಳನ್ನು ಬಂಧಿಸಲಾಗಿದೆ. ಕೆ.ಆರ್ ಆಸ್ಪತ್ರೆಯ ವೈದ್ಯರಾದ ಡಾ.ರಾಜೇಶ್ ಎಂಬವರಿಗೆ ಮಾಧ್ಯಮದ ಹೆಸರಿನಲ್ಲಿ, ಸುವರ್ಣ ಕಾವೇರಿ ಎಕ್ಸ್‌ಪ್ರೆಸ್ ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿ ಆಯಿಷಾ ಬಾಯಿ ಮತ್ತು ಕ್ರೈಂ ವರದಿಗಾರ್ತಿ ಅಮ್ರೀನ್ ಹಾಗೂ ಶಹೀನಾ ನವೀದ್‌ಎಂದು ನಕಲಿ ಗುರುತಿನ ಚೀಟಿಯನ್ನು ಸಿದ್ಧಪಡಿಸಿಕೊಂಡು ಬೆದರಿಕೆ ಒಡ್ಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೀವು …
Read More »ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ರೈಲ್ವೆ ಹಳಿಮೇಲೆ ಎಸೆದು ಹೋದ ಆರೋಪಿಗಳು!
ಇಂದೋರ್: ಮಧ್ಯಪ್ರದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ ಕಾಲೇಜು ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ರೈಲ್ವೆ ಹಳಿ ಮೇಲೆ ಎಸೆದು ಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಂದೋರ್ ನ 19 ವರ್ಷದ ಕಾಲೇಜು ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಚೂರಿಯಿಂದ ಇರಿದು ರೈಲ್ವೆ ಹಳಿ ಮೇಲೆ ಎಸೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಬದುಕುಳಿದಿರುವುದಾಗಿ ವರದಿ ತಿಳಿಸಿದೆ. ವ ದೂರಿನ ಪ್ರಕಾರ, ಯುವತಿಯನ್ನು …
Read More »ಶಿವಸೇನೆ ಪುಂಡಾಟ ಸಹಿಸೋಲ್ಲ, : ಸಚಿವೆ ಶಶಿಕಲಾ ಜೊಲ್ಲೆ
ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಉದ್ಧಟತನ ಮೆರೆಯುತ್ತಿದ್ದು, ಪಾಲಿಕೆ ಮುಂದೆ ಭಗವ ಧ್ವಜಾ ಹಾರಿಸುತ್ತೇವೆ ಎಂದು ಕ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರದಿಂದ ಶಿವಸೇನೆ ಪುಂಡರು ಬೆಳಗಾವಿ ಗಡಿ ಪ್ರವೇಶಿಸಲು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ. ಇನ್ನು ಶಿವಸೇನೆ ಪುಂಡರನ್ನ ತಡೆ ಹಿಡದ ಕರ್ನಾಟಕ ಪೊಲೀಸರು ಲಾಠಿ ಚಾರ್ಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ಬೆಳಗಾವಿ ಪ್ರತಿನಿಧಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಸಿದ್ದು, ಶಿವಸೇನೆ ಪುಂಡರ …
Read More »ಬೆಳಗಾವಿಯಲ್ಲಿ ಪುಂಡಾಟ ಮೆರೆದ ‘ಶಿವಸೇನೆ ಪುಂಡ’ರನ್ನು ಬಂಧಿಸಿ – ವಾಟಾಳ್ ನಾಗರಾಜ್
ಬೆಂಗಳೂರು : ಬೆಳಗಾವಿಯಲ್ಲಿ ಭಗವಾ ಧ್ವಜ ಸ್ತಂಭ ನೆಡಲು ಶಿವಸೇನೆ ಯತ್ನಿಸಿದ್ದು ಖಂಡನೀಯ. ಇದಕ್ಕೆಲ್ಲಾ ಕಾರಣ ಬೆಳಗಾವಿ ಜಿಲ್ಲೆ ರಾಜಕಾರಣಿಗಳು. ಬೆಳಗಾವಿಯಲ್ಲಿ ಪುಂಡಾಟ ಮೆರೆದಂತ ಶಿವಸೇನೆ ಪುಂಡರನ್ನು ಬಂಧಿಸುವಂತೆ ನಾಳೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನ ನಡೆಸುವುದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪುಂಡಾಟ ಮೆರೆದಂತ ಶಿವಸೇನೆ ಪುಂಡರನ್ನು ಬಂಧಿಸಬೇಕು. ಇದಕ್ಕೆಲ್ಲಾ ಬೆಳಗಾವಿ ಜಿಲ್ಲೆ ರಾಜಕಾರಣಿಗಳೇ ಕಾರಣ. …
Read More »ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ.
ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಉದ್ಧಟತನ ಮೆರೆಯುತ್ತಿದ್ದು, ಪಾಲಿಕೆ ಮುಂದೆ ಹಾರಿಸಿರುವ ಕನ್ನಡ ಧ್ವಜಾವನ್ನ ತೆರವುಗೊಳಿಸಿ, ಭಗವ ಧ್ವಜಾ ಹಾರಿಸುತ್ತೇವೆ ಎಂದು ಕ್ಯಾತೆ ತೆಗೆದಿದ್ದಾರೆ. ಹಾಗಾಗಿ ಗಡಿ ಪ್ರವೇಶಿಸಲು ಯತ್ನಿಸಿದ್ದ ಶಿವಸೇನೆ ಪುಂಡರನ್ನ ಪೊಲೀಸರು ತಡೆದಿದ್ದಾರೆ. ಬೆಳಗಾಮಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗುತ್ತಿದ್ದು, ಶಿವಸೇನಾ ಪುಂಡರನ್ನ ಬೆಳಗಾವಿ ಗಡಿ ಪ್ರವೇಶಿಸದಂತೆ ಪೊಲೀಸರು ತಡೆಯಿಡಿದ್ದಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ. ಬೆಳಗಾವಿಯ …
Read More »ಕೋವಿಶೀಲ್ಡ್ ಲಸಿಕೆ ಬಗ್ಗೆ ಭಯ ಬೇಡ : ರಾಜೇಶ್ವರಿ ಹಿರೇಮಠ
ಬೆಟಗೇರಿ : ನಮ್ಮ ದೇಶದ ವಿಜ್ಞಾನಿಗಳು ತಯಾರಿಸಿದ ಕೋವಿಡ್-19 ಲಸಿಕೆ ಬಗ್ಗೆ ವಿಶ್ವವೇ ಹೆಮ್ಮೆಪಡುತ್ತಿದೆ. ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗುವುದು ತುಂಬಾ ವಿರಳ, ಇದು ಸುರಕ್ಷಿತವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ತಿಳಿಸಿದರು. ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರದಂದು ನಡೆದ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ …
Read More »ಕನ್ನಡ ಧ್ವಜದ ಬಗ್ಗೆ ಪ್ರಶ್ನಿಸಲು ನಾಡದ್ರೋಹಿ, ಎಂಇಎಸ್-ಶಿವಸೇನೆ ಯಾವೂರ ದೊಣ್ಣೆ ನಾಯಕರು..ಮಾಜಿ ಸಿಎಂ ಎಚ್‍ಡಿಕೆ ಗರಂ..!
ಕರ್ನಾಟಕದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವುದಾಗಿ ಉದ್ಧ(ಟ)ವ ಠಾಕ್ರೆ ಹೇಳಿದ್ದರು. ಬೆಳಗಾವಿಯಲ್ಲಿ ಕಿಡಿಗೇಡಿಗಳು, ಸಮಾಜಘಾತುಕರು ನಡೆಸುತ್ತಿರುವ ಧ್ವಜವಿರೋಧಿ ಹೋರಾಟ ಬೆಂಬಲಿಸುವ ಮೂಲಕ ಶಿವಸೇನೆ ಠಾಕ್ರೆ ಇಚ್ಛೆಯನ್ನು ಜಾರಿಗೆ ತರಲು ಹೊರಟಿದೆ. ನ್ಯಾಯದ ಉದ್ದೇಶವಿಲ್ಲದ ಈ ಹೋರಾಟವನ್ನು ಸರ್ಕಾರ ಮುಲಾಜಿಲ್ಲದೇ ಹತ್ತಿಕ್ಕಬೇಕು. ಸರಣಿ ಟ್ವೀಟ್ ಮೂಲಕ ನಾಡದ್ರೋಹಿಗಳ ವಿರುದ್ಧ ಗರಂ ಆಗಿರುವ ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ನೆಲ, ನಮ್ಮ ಭಾಷಾ , ನಮ್ಮ ಧ್ವಜ. ಕನ್ನಡ ಮಾತಾಡುತ್ತೇವೆ, ಕನ್ನಡದ ಧ್ವಜ …
Read More »ಒಬ್ಬರನ್ನ ಬಲಿ ಪಡಿದು ಸತ್ತ ಶ್ವಾನ
ಚಲಿಸುತ್ತಿದ್ದ ಬೈಕ್ಗೆ ಶ್ವಾನವೊಂದು ಅಡ್ಡಬಂದ ಪರಿಣಾಮ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ. ಧಾರವಾಡದ ಬೆನಕಟ್ಟಿ ಗ್ರಾಮದ ದಿಲ್ ಶಾದ್ ಬಿಸ್ಮಿಲ್ಲಾ ಚಪ್ಪರಬಂಧ್ (43) ಮೃತ ಮಹಿಳೆ. ನಿಗದಿ ಗ್ರಾಮದಿಂದ ಪ್ರಕಾಶ ಎಂಬುವರ ಬೈಕ್ನಲ್ಲಿ ಧಾರವಾಡಕ್ಕೆ ಮನೆಗೆಲಸಕ್ಕೆಂದು ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಬೈಕ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಬೈಕ್ ಡಿಕ್ಕಿ ಹೊಡೆದ …
Read More »