ಹುಬ್ಬಳ್ಳಿ (ಡಿ. 16): ಲಂಚ ಪಡೆಯುತ್ತಿದ್ದ ಕುಂದಗೋಳ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಹುಬ್ಬಳ್ಳಿಯ ಮುತ್ತುಗೌಡ ಗಂಗನಗೌಡರ ಎಂಬುವವರ ಜಮೀನು ಕುಂದಗೋಳದ ಬೆಳ್ಳಿಗಟ್ಟಿ ಬಳಿ ಇದೆ. ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರದವರು ಜಮೀನನ್ನು ವಶಕ್ಕೆ ಪಡೆದಿದ್ದಾರೆ. ಜಮೀನು ಸ್ವಾಧೀನ ಪಡಿಸಿಕೊಂಡ ನಂತರ ಅದರಲ್ಲಿ ಎಷ್ಟು ಮರಗಳಿದ್ದವು ಎಂಬ ಮಾಹಿತಿಯನ್ನ ತೋಟಗಾರಿಕೆ ಇಲಾಖೆಯಿಂದ ಪಡೆಯಬೇಕಿತ್ತು. ಮರಗಳ ಮಾಹಿತಿ ನೀಡಿದರೆ ಹೆದ್ದಾರಿ ಪ್ರಾಧಿಕಾರದವರು ಪರಿಹಾರ ಹಣವನ್ನು ಕೊಡುತ್ತಿದ್ದರು. …
Read More »ಉಪಯೋಗಕ್ಕಿಲ್ಲದ ಸಿಸಿ ಟಿವಿ ಕ್ಯಾಮೆರಾಗಳು!
ಪುತ್ತೂರು(ಡಿಸೆಂಬರ್.16): ನಗರ ಪ್ರದೇಶವಾಗಿ ಬೆಳೆಯುತ್ತಿರುವ ಪುತ್ತೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ, ಕಳ್ಳತನ ಪ್ರಕರಣಗಳೂ ಹೆಚ್ಚಾಗಲಾರಂಭಿಸಿದೆ. ಹಾಡುಹಗಲೇ ಕಾರುಗಳ ಕಳ್ಳತನ ಸೇರಿದಂತೆ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ, ಕಳ್ಳರನ್ನು ಪತ್ತೆ ಹಚ್ಚಲು ಮಾತ್ರ ಪೋಲೀಸರು ವಿಫಲರಾಗುತ್ತಿದ್ದಾರೆ. ಇಂಥಹ ಅಪರಾಧ ಕೃತ್ಯಗಳ ತಡೆಗೆಂದೇ ಪುತ್ತೂರು ನಗರದ ಸುತ್ತಮತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಅವುಗಳಲ್ಲಿ ಹಲವು ಇದೀಗ ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದ್ದು, ಕಳ್ಳತನ, ಹಿಟ್ …
Read More »ನಿವೃತ್ತ ಸೈನಿಕನ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜ್ಯ ಮಟ್ಟದಲ್ಲಿ ಸದ್ದು
ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ನಿವೃತ್ತ ಸೈನಿಕನ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಲ್ಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಪಕ್ಷಪಾತ ಮಾಡಿದ್ದಾರೆ ಎಂದು ಪೋಲಿಸ್ ಇಲಾಖೆ ವಿರುದ್ದ ರಾಜ್ಯ ಮಾಜಿ ಸೈನಿಕರ ಸಂಘ ಆರೋಪದ ಜತೆ ಅಸಮಾಧಾನ ವ್ಯಕ್ತ ಪಡಿಸಿದೆ. ಕಳೆದ ನಾಲ್ಕು ದಿನದ ಹಿಂದೆ ಜಿಲ್ಲೆಯ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ಹತ್ತು ಜನರ ಗುಂಪೊಂದು ಜಮೀನು ದಾರಿಯ ವಿವಾದಕ್ಕೆ …
Read More »ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ
ಬೆಂಗಳೂರು, – ಕೊರೊನಾ ಎರಡನೇ ಅಲೆಯ ಆತಂಕಕ್ಕೆ ಬೆಚ್ಚಿರುವ ಬಿಬಿಎಂಪಿ ಮತ್ತು ಸರ್ಕಾರ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ನಿಷೇಧಕ್ಕೆ ಮುಂದಾಗಿದೆ. ಎಂ.ಜಿ.ರೋಡ್, ಚರ್ಚ್‍ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಮುಂತಾದ ಕಡೆಗಳಲ್ಲಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಸಾರ್ವಜನಿಕವಾಗಿ ಹೊಸ ವರ್ಷಾಚಣೆ ಮಾಡಿದರೆ ದಂಡ ವಿಧಿಸಲು ನಿರ್ಧರಿಸಿದೆ. ಆ ಕಳೆದ ಒಂದು ವಾರದ ಹಿಂದೆ ಬಿಬಿಎಂಪಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಸಿದ್ದಮಾಡಿದೆ. ನಿಯಮಗಳನ್ನು …
Read More »ಆಸ್ತಿ ತೆರಿಗೆ ಹೆಚ್ಚಳಕ್ಕೆ ಸದ್ದಿಲ್ಲದೆ ತಯಾರಿ
ಬೆಂಗಳೂರು, ಡಿ.- ಆಸ್ತಿ ತೆರಿಗೆ ಹೆಚ್ಚಳಕ್ಕೆ ಸದ್ದಿಲ್ಲದೆ ತಯಾರಿ ನಡೆದಿದೆ. ವಸತಿ ಕಟ್ಟಡಗಳಿಗೆ ಶೇ.25 ಹಾಗೂ ವಸತಿಯೇತರ ಕಟ್ಟಡಗಳಿಗೆ ಶೇ.30ರಷ್ಟು ಆಸ್ತಿ ತೆರಿಗೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಲಯವಾರು ಗೈಡ್‍ಲೈನ್ಸ್ ಆಧಾರದಲ್ಲಿ ಆಸ್ತಿ ತೆರಿಗೆ ವಿಧಿಸುವ ಕುರಿತಂತೆ ಟಿಪ್ಪಣಿ ತಯಾರಿಸಿ ನೀಡುವಂತೆ ಗೌರವ್ ಗುಪ್ತ ಆದೇಶ ನೀಡಿದ್ದು ಜನವರಿಯಿಂದ ಬೆಂಗಳೂರಿನ ನಾಗರಿಕರು ಹೆಚ್ಚುವರಿ ಆಸ್ತಿ ತೆರಿಗೆ ಪಾವತಿಸಬೇಕಾಗುವುದು ಬಹುತೇಕ ಖಚಿತಪಟ್ಟಿದೆ. …
Read More »ಬಿಜೆಪಿಯು ಸಮುದಾಯಗಳಲ್ಲಿ ಗಲಭೆ ಮತ್ತು ದ್ವೇಷದ ಹೊಸ ಧರ್ಮವನ್ನು ಸೃಷ್ಟಿಸಿದೆ’:
ಜಲ್‌ಪೈಗುರಿ: ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರವನ್ನು ನಡೆಸುತ್ತಿರುವ ಕೇಂದ್ರ ಸರ್ಕಾರವು, ಪಶ್ಚಿಮ ಬಂಗಾಳವನ್ನು ಗಲಭೆಪೀಡಿತ ಗುಜರಾತ್ ರೀತಿಯಾಗಿ ಮಾರ್ಪಡಿಸಲು ಹೊರಟಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ನಡೆದ ರ‍್ಯಾಲಿಯೊಂದರಲ್ಲಿ ಆರೋಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಸಮನ್ಸ್ ನೀಡುವ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ …
Read More »ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿ: ಸತೀಶ ಜಾರಕಿಹೊಳಿ
ರಾಯಬಾಗ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿ ಕಾಯ್ದೆಗಳ ಜಾರಿಗೆ ತರುವ ಮೂಲಕ ಜನ ಸಾಮಾನ್ಯರಿಗೆ ತೊಂದರೆಗೀಡು ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ತಾಲಕಿನ ಕುಡಚಿಯಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚಿಗೆ ಗೋ ಹತ್ಯೆ ನಿಷೇಧ ಜಾರಿಗೆ ತಂದಿದೆ. ಇದರಿಂದ ರೈತಾಪಿ ವರ್ಗಕ್ಕೆ ತುಂಬ ನಷ್ಟವಾಗಲಿದೆ ಅಂತಾ ಹೇಳಿದರು. ಕೃಷಿ …
Read More »ಹುಲಿ ಉಗುರುಗಳು ಮತ್ತು ಆನೆ ದಂತದಿಂದ ಮಾಡಿದ ಕಡಗಗಳನ್ನು ಮಾರುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ.
ಬೆಳಗಾವಿ: ಹುಲಿ ಉಗುರುಗಳು ಮತ್ತು ಆನೆ ದಂತದಿಂದ ಮಾಡಿದ ಕಡಗಗಳನ್ನು ಮಾರುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ. ನಗರದ ಶಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ (46) ಬಂಧಿತ. ಅವರಿಂದ 2 ಕಡಗ ಹಾಗೂ 5 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.ಆರೋಪಿ ವಿರುದ್ಧ …
Read More »ಗೋಕಾಕ್ ಶಹರ ಪೊಲೀಸ್ ಠಾಣೆಯಿಂದ ಭರ್ಜರಿ ಬೇಟೆ
ಗೋಕಾಕ ಶಹರ ನಗರದಲ್ಲಿ ಜರುಗುತ್ತಿದ್ದ ಬೈಕ್ ಕಳ್ಳತನಗಳ ಪ್ರಕರಣದ ತನಿಖೆಯನ್ನು ಬೆಳಗಾವಿ ಎಸ್,ಪಿ, ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್,ಪಿ, ಅಮರನಾಥ ರೆಡ್ಡಿ, ಗೋಕಾಕ ಡಿ,ಎಸ್,ಪಿ, ಜಾವೇದ ಇನಾಮದಾರ,ಸಿ,ಪಿ,ಆಯ್,ಗೋಪಾಲ ರಾಠೋಡ,ಇವರ ಮಾರ್ಗದರ್ಶನದಲ್ಲಿ ಪಿ,ಎಸ್,ಆಯ್,ಶ್ರೀ ಕೆ,ಬಿ,ವಾಲಿಕಾರ (ಕಾಸು) ,ಪಿ,ಎಸ್,ಆಯ್,ಶ್ರೀ ಅಮಿನಬಾಂವಿ,(ಸಿಬಿ)ಗೋಕಾಕ. ಶಹರ ಠಾಣೆಯ ಸಿಬ್ಬಂದಿಗಳಾದ ಬಿ,ಎಸ್,ಸಿದ್ನಾಳ, ಎಲ್,ಎಸ್ನಾಡಗೌಡರ,ಕೆ,ಬಿ,ಹಕ್ಯಾಗೋಳ,ಸಿ,ಎಸ್,ಬೀರಾದರ,ಆರ್,ಆರ್,ಮುರನಾಳ,ಎಸ್,ವಾಯ್,ಕುರಿ,ಎಂ,ಆರ್,ಅಂಬಿ,ಇವರು ಕಾರ್ಯಾಚರಣೆ ನಡೆಸಿ ಒರ್ವನನ್ನು ವಿಚಾರಣಗೆ ಒಳಪಡಿಸಿದಾಗ ಅವನಿಂದ ಕಳ್ಳತನ ಮಾಡಿದ 4 ಮೋಟಾರ್ ಬೈಕ್, 2 ಸೈಕಲ್ ಹಾಗೂ 4 ಮೊಬೈಲ್ಗಳನ್ನು …
Read More »ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಂಗಳವಾರದಂದು ಪಟ್ಟಣದ ಕರೆಮ್ಮಾದೇವಿ ವೃತ್ತದಲ್ಲಿ ಅರಭಾಂವಿ ಮಂಡಲ ಭಾರತೀಯ ಜನತಾ ಪಕ್ಷದ ನೂತನ ಕಾರ್ಯಲಯವನ್ನು ಉದ್ಘಾಟಿಸಿ ಮಾತನಾಡಿದ …
Read More »