ಬೆಂಗಳೂರು,ಡಿ.17-ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಗೆ ಮುಹೂರ್ತ ನಿಗದಿಯಾಗಿದೆ. ರಾಜ್ಯಸಭಾ ಸದಸ್ಯರೂ ಆದ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಧ್ಯಕ್ಷತೆಯಲ್ಲಿ ಇದೇ 19ರಂದು ಕೋರಮಂಗಲದ ಕಲಾದ್ವಾರಕಾ ಸಭಾಂಗಣದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 10.30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕಾರಿಣಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತೀಚೆಗೆ ಜಾರಿಗೊಳಿಸಿದ ರೈತಪರ ಕೃಷಿ ಸುಧಾರಣಾ ಮಸೂದೆಗಳನ್ನು ಬೆಂಬಲಿಸಿ ಅಭಿನಂದಿಸುವ …
Read More »ರಾಜ್ಯದಲ್ಲಿ ಈವರೆಗೆ ಮೂವರು ಡಿವೈಎಸ್‍ಪಿಗಳ ಆತ್ಮಹತ್ಯೆ
ಬೆಂಗಳೂರು, ಡಿ.17- ಕಳೆದ ರಾತ್ರಿ ಸಿಐಡಿ ಡಿವೈಎಸ್‍ಪಿ ವಿ.ಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೂ ಸೇರಿದಂತೆ ರಾಜ್ಯದಲ್ಲಿ ಈವರೆಗೂ ಮೂರು ಮಂದಿ ಡಿವೈಎಸ್‍ಪಿಗಳು ಆತ್ಮಹತ್ಯೆ ಮೂಲಕ ಜೀವ ಕಳೆದುಕೊಂಡಂತಾಗಿದೆ. ಲಕ್ಷ್ಮೀ ಅವರಿಗೂ ಮೊದಲು ಇಬ್ಬರು ಡಿವೈಎಸ್‍ಪಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಎರಡು ಪ್ರಕರಣಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು. 2016 ಜುಲೈ 5ರಂದು ಚಿಕ್ಕಮಗಳೂರು ಗ್ರಾಮಾಂತರ ಉಪವಿಭಾಗದಲ್ಲಿ ಡಿವೈಎಸ್‍ಪಿ ಆಗಿದ್ದ ಕಲ್ಲಪ್ಪ ಹಂಡಿಬಾಗ್ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುರ್‍ಗೋಡು ಗ್ರಾಮದಲ್ಲಿರುವ …
Read More »ಹುಬ್ಬಳ್ಳಿಯಿಂದ ರಾಜಹಂಸ, ಸ್ಲೀಪರ್, ವೋಲ್ವೋ ಬಸ್‌ಗಳ ಪುನರಾರಂಭ
ಹುಬ್ಬಳ್ಳಿ (ಡಿ. 17): ಕೊರೋನಾ ಲಾಕ್ ಡೌನ್ ನಂತರ ದಿನ ಕಳೆದಂತೆ ದೂರ ಮಾರ್ಗದ ಬಸ್ಸುಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು ಸ್ಲೀಪರ್, ವೋಲ್ವೊ ಮತ್ತು ರಾಜಹಂಸ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. ಈ ಬಸ್ಗಳು ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. …
Read More »ಯಮಕನಮರಡಿ ಫೈರಿಂಗ ಕೊಡಲೇ ತಪಿತಸ್ಥ ಆರೋಪಿಗಳನ್ನು ಬಂಧಿಸಬೇಕ: ಸತೀಶ್ ಜಾರಕಿಹೊಳಿ
ಬೆಳಗಾವಿ: ಹುಕ್ಕೆರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆದಿರುವ ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರು ಕೊಡಲೇ ತಪಿತಸ್ಥ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜು ತಳವಾರಗೆ ರಾಜಕೀಯ ರಕ್ಷಣೆ ಇದೆ. ಅಂಕಲಗಿ ಗ್ರಾಮದಲ್ಲಿ ಮತ್ತೆ ಗುಂಡಾಗಿರಿ ನಡೆದಿದೆ. ಕಳೆದ 6 ತಿಂಗಳಲ್ಲಿ ಮೂರು ಸಲ ಇಂತಹ ಘಟನೆ …
Read More »ನಾಳೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸಣ್ಣ ಗುತ್ತಿಗೆದಾರ ಪ್ರತಿಭಟನೆ
ಬೆಳಗಾವಿ : ಮಹಾನಗರ ಪಾಲಿಕೆ ಬೇರೆಬೇರೆ ಕೆಲಸಗಳನ್ನು ಸೇರಿಸಿ ಕೋಟಿ ಲೆಕ್ಕದಲ್ಲಿ ಟೆಂಡರ್ ಕರೆಯುತ್ತಿರುವುದರಂದ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ನಾಳೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕಾರ್ಪೋರೇಷನ್ ಗುತ್ತಿಗೆದಾರ ಸಂಘಟನೆ ಅಧ್ಯಕ್ಷರಾದ ರಾಜು ಪದ್ಮನ್ನವರ್ ತಿಳಿದಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ರಾಜು ಪದ್ಮನ್ನವರ್. ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಣ್ಣ ಗುತ್ತಿಗೆದಾರರಿಗೆ ಸರ್ಕಾರ ತಂದಿರುವ ಹೊಸ ನಿಯಮದಿಂದ ಅನ್ಯಾಯವಾಗುತ್ತಿದೆ. ಸಣ್ಣ ಮೊತ್ತದ ಕೆಲಸದ ಟೆಂಡರ್ ಗಳನ್ನು ಒಟ್ಟುಗೂಡಿಸಿ …
Read More »ವಿಧಾನ ಪರಿಷತ್ ಸಭಾಪತಿ ಕಾಂಗ್ರೆಸ್ ನಿಯಂತ್ರಣದಲ್ಲಿದ್ದಾರೆ
ಉಡುಪಿ: ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಗದ್ದಲವನ್ನು ಕುರಿತು ಮಾತನಾಡಿರುವ ಉಡುಪಿ ಶಾಸಕ ಕೋಟ ಶ್ರಿನಿವಾಸ್ ಪೂಜಾರಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಕಾಂಗ್ರೆಸ್ ನಿಯಂತ್ರಣ ಮಾಡುವುದು ಬಿಟ್ಟಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಗದ್ದಲದ ಕುರಿತು ಪ್ರತಿಕ್ರಿಯಿಸಿರುವ ಸಚಿವರು ಕಾಂಗ್ರೆಸ್ ನಾಯಕರು ಸಭಾಪತಿ ತಾನು ಹೇಳಿದಂತೆ ಕೇಳಬೇಕು ಎಂದು ಸಿದ್ದರಾಮಯ್ಯ ಸಹಿತ ಎಲ್ಲರೂ ಕಾಂಗ್ರೆಸ್ಸೀಕರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸೀಕರಣ ಮಾಡಿದ್ದರ ಫಲವೇ ವಿಧಾನಪರಿಷತ್ ಗದ್ದಲಕ್ಕೆ …
Read More »ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 49,960 ರೂ. ಇದ್ದ ಬೆಲೆ ಇಂದು 50,410ಕ್ಕೆ ಏರಿಕೆ
ಕಳೆದ ವಾರ ಭಾರತದಲ್ಲಿ 10 ಗ್ರಾಂಗೆ 49,250 ರೂ. ಇದ್ದ ಚಿನ್ನದ ಬೆಲೆ ಇಂದು 49,320 ರೂ. ಆಗಿದೆ. ಅಲ್ಪ ಏರಿಳಿತಗಳನ್ನು ಬಿಟ್ಟರೆ 10 ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದು ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಇಂದು 50,410 ರೂ. ಆಗಿದೆ. 22 ಕ್ಯಾರೆಟ್ನ 10 …
Read More »-ಆರ್ಥಿಕ ಸಂಕಷ್ಟದ ಮಧ್ಯೆ 2021-22ನೇ ಸಾಲಿನ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ.
ಬೆಂಗಳೂರು,ಡಿ.17 -ಆರ್ಥಿಕ ಸಂಕಷ್ಟದ ಮಧ್ಯೆ 2021-22ನೇ ಸಾಲಿನ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ. ಸೊರಗಿದ ಸಂಪನ್ಮೂಲ ಕ್ರೋಢೀಕರಣದಿಂದ ಮುಂಬರುವ ಬಜೆಟ್ ಗಾತ್ರವೂ ಕುಗ್ಗಲಿದೆ ಎಂಬ ಮಾತು ಕೇಳಿ ಬರುತ್ತಿವೆ. ರಾಜ್ಯ ಹಿಂದೆಂದೂ ಕಾಣದ ಆರ್ಥಿಕ ಸಂಕಷ್ಟವನ್ನು ಈ ಬಾರಿ ಎದುರಿಸುತ್ತಿದೆ. ಲಾಕ್‍ಡೌನ್‍ನಿಂದ ಆರ್ಥಿಕತೆ ಬುಡಮೇಲಾಗಿದೆ. ಬೊಕ್ಕಸ ತುಂಬಿಸುವ ಆದಾಯ ಮೂಲಗಳೆಲ್ಲವೂ ಸೊರಗಿ ಹೋಗಿದ್ದು, ತೆರಿಗೆ ಸಂಗ್ರಹದಲ್ಲೂ ನಿರೀಕ್ಷಿತ ಚೇತರಿಕೆ ಕಾಣುತ್ತಿಲ್ಲ. ವ್ಯಾಪಾರ-ವಹಿವಾಟು ಕ್ಷೀಣಿಸಿರುವುದರಿಂದ ಸಂಪನ್ಮೂಲ ಸಂಗ್ರಹಕ್ಕೆ ಭಾರೀ ಹೊಡೆತ ಬಿದ್ದಿದೆ. …
Read More »ಗ್ರಾಮ ಪಂಚಾಯಿತಿ ಚುನಾವಣೆ ಗುಂಡು ಹಾಗೂ ತುಂಡುಗಳ ಪಾರ್ಟಿಗಳನ್ನು ಜೋರ: ಮದ್ಯ ಮಾರಾಟದಲ್ಲಿ ಶೇ.125ರಷ್ಟು ಏರಿಕೆ..!
ಬೆಂಗಳೂರು,ಡಿ.17- ಗ್ರಾಮ ಪಂಚಾಯಿತಿ ಚುನಾವಣೆ ದಿನಕಳೆದಂತೆ ರಂಗೇರುತ್ತಿದ್ದು, ಮತದಾರರ ಮನಗೆಲ್ಲಲು ಸಾಕಷ್ಟು ಕಣದಲ್ಲಿರುವ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಕಾರ್ಯಕರ್ತರು, ಬೆಂಬಲಿಗರಿಗಾಗಿ ಪ್ರತಿನಿತ್ಯ ಅಭ್ಯರ್ಥಿಗಳು ತಮ್ಮ ತಮ್ಮ ಫಾರ್ಮ್‍ಹೌಸ್‍ಗಳಲ್ಲಿ ಗುಂಡು ಹಾಗೂ ತುಂಡುಗಳ ಪಾರ್ಟಿಗಳನ್ನು ಜೋರಾಗಿ ನಡೆಸುತ್ತಿದ್ದಾರೆ. ಈ ನಡುವೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮದ್ಯದ ಅಭಾವ ಎದುರಾಗುವ ಸಾಧ್ಯತೆಗಳಿದ್ದು, ಹೀಗಾಗಿ ಜನರು ಮುಂಚಿತವಾಗಿಯೇ ಮದ್ಯ ಖರೀದಿ ಮಾಡಲು ಆರಂಭಿಸಿದ್ದು, ಕಳೆದ 15 ದಿನಗಳಿಂದ ಮದ್ಯ ಮಾರಾಟ ಶೇ.125ರಷ್ಟು …
Read More »ಅಸಮಾಧಾನಗೊಂಡಿರುವ ಶಾಸಕರಿಗೆ ಯಡಿಯೂರಪ್ಪ ಅವರು ಬಂಪರ್ ಗಿಫ್ಟ್
ಬೆಂಗಳೂರು,ಡಿ.17- ಕಳೆದೊಂದು ವರ್ಷದಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಲೇ ಇದ್ದರೂ ಅದು ಸಾಧ್ಯವಾಗುತ್ತಿಲ್ಲ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸಿಗದ ಕಾರಣ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಸಲು ಆಗುತ್ತಿಲ್ಲ. ಹೀಗಾಗಿ ಅಸಮಾಧಾನಗೊಂಡಿರುವ ಶಾಸಕರಿಗೆ ಯಡಿಯೂರಪ್ಪ ಅವರು ಬಂಪರ್ ಗಿಫ್ಟ್ ನೀಡಿದ್ದಾರೆ. 13 ಮಂದಿ ಬಿಜೆಪಿ ಶಾಸಕರಿಗೆ ಸಂಪುಟ ದರ್ಜೆಯ ನಿಗಮ ಮಂಡಳಿ ಸ್ಥಾನ ಹಾಗೂ ನಾಲ್ವರಿಗೆ ರಾಜ್ಯ ದರ್ಜೆಯ ಸ್ಥಾನಮಾನ ನೀಡುವಂತೆ …
Read More »