Breaking News

ಬಿಜೆಪಿ-ಜೆಡಿಎಸ್ ವಿಲೀನ..? ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣ..!

ಬೆಂಗಳೂರು,ಡಿ.22- ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣದ ಮಾತುಗಳು ಕೇಳಿ ಬರುತ್ತಿದೆ. ರಾಜ್ಯದ ಏಕೈಕ ಪ್ರಭಾವಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎನ್ನುವ ಚರ್ಚೆ ಆರಂಭಗೊಂಡಿದೆ. ಸ್ವತಃ ಉಭಯ ಪಕ್ಷಗಳ ಪ್ರಮುಖ ನಾಯಕರೇ ನೇರವಾಗಿ ಸ್ಪಷ್ಟೀಕರಣ ನೀಡುತ್ತಿರುವುದು ಎರಡೂ ಪಕ್ಷಗಳ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿದೆ. ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದನಂತರ ಹಳೇ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ …

Read More »

ಶಾಲೆಗಳು ಓಪನ್ ಆಗೋದು ಡೌಟ್..!ಡಾ.ಸುಧಾಕರ್

ಬೆಂಗಳೂರು, ಡಿ.22- ರಾಜ್ಯದಲ್ಲಿ ಜನವರಿ ಒಂದರಿಂದ ಶಾಲೆ ಪ್ರಾರಂಭಿಸಬೇಕೆ, ಬೇಡವೆ ಎಂಬ ವಿಚಾರ ಕುರಿತು ತಾಂತ್ರಿಕ ಸಲಹಾ ಸಮಿತಿ ವರದಿಯನ್ನು ಕೇಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಾಣು ಹೊಸ ರೂಪಾಂತರ ಪಡೆದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ವರದಿ ಕೇಳಿದ್ದು, ವರದಿ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. …

Read More »

117 ತಾಲ್ಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಸಮರ, ಎಲ್ಲೆಡೆ ಭರ್ಜರಿ ಮತದಾನ

ಬೆಂಗಳೂರು,ಡಿ.22- ಕೋವಿಡ್ ಆತಂಕದ ನಡುವೆ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬಿರುಸಾಗಿತ್ತು.  ಅಲ್ಲಲ್ಲಿ ಮಾತಿನ ಚಕಮಕಿ, ಅಭ್ಯರ್ಥಿಗಳ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ, ತಳ್ಳಾಟ-ನೂಕಾಟ, ಮತಪತ್ರಗಳ ದೋಷದಿಂದ ಹಲವೆಡೆ ಮತದಾನ ಸ್ಥಗಿತ, ಗುಂಪು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರದಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ 30 ಜಿಲ್ಲೆಗಳ 117 ತಾಲ್ಲೂಕುಗಳ 3,019 ಗ್ರಾಪಂಚಾಯ್ತಿಗಳಿಗೆ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಗ್ರಾಮಪಂಚಾಯ್ತಿಗಳ 43,238 ಸ್ಥಾನಗಳಿಗೆ ಸ್ಪರ್ಧಿಸಿದ್ದ …

Read More »

ಭಾಗ್ಯ ಲಕ್ಷ್ಮಿ ಯೋಜನೆ ಕುರಿತು ಚರ್ಚಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗ್ಯ ಲಕ್ಷ್ಮಿ ಯೋಜನೆಯಡಿ ಎಲ್ ಐ ಸಿ ಯವರು ನೀಡಬಹುದಾದ ಅತ್ಯುತ್ತಮ ಕೊಡುಗೆಯ ಕುರಿತು ಪರಿಶೀಲಿಸಿ, ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ತಮ್ಮನ್ನು ಭೇಟಿಯಾದ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಎಲ್ ಐ ಸಿ ವಲಯ ವ್ಯವಸ್ಥಾಪಕಿ ಮಿನಿ ಇಪೆ ಅವರ ನೇತೃತ್ವದ ಎಲ್ ಐಸಿ ಅಧಿಕಾರಿಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಭಾಗ್ಯ ಲಕ್ಷ್ಮಿ ಯೋಜನೆಯನ್ನು ಎಲ್ ಐ ಸಿ ಮೂಲಕವೇ …

Read More »

ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರದ್ದು ದಪ್ಪ ಚರ್ಮ.:ಶ್ರೀನಿವಾಸ್ ಪ್ರಸಾದ್

ಮೈಸೂರು (ಡಿ. 22): ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರದ್ದು ದಪ್ಪ ಚರ್ಮ. ನನ್ನನ್ನು ಮಂತ್ರಿಸ್ಥಾನದಿಂದ ಕೆಳಗಿಳಿಸಿ, ಬರೆ ಹಾಕಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಆ ಮಹದೇವಪ್ಪ ಸಿದ್ದರಾಮಯ್ಯನ ಚೇಲ. ಸಿದ್ದರಾಮಯ್ಯನ ದುರಹಂಕಾರದಿಂದಲೇ ಜನರು ಅವರನ್ನು ಸೋಲಿಸಿದರು. ಅವರು ಸರಿಯಾಗಿದ್ದರೆ ಅವರ ಪಕ್ಷದವರೇ ಅವರ ವಿರುದ್ಧ ಯಾಕೆ ಹೈಕಮಾಂಡ್​ಗೆ ದೂರು ಕೊಡುತ್ತಿದ್ದರು? ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ದಪ್ಪ ಚರ್ಮದ ಮನುಷ್ಯ. ಆತನಿಗೆ ನಾಗರಿಕತೆ, ಸಂಸ್ಕೃತಿಯೇ ಇಲ್ಲ. …

Read More »

ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್​ ನಕಾರ; ಸಿಎಂ ಬಿಎಸ್​ವೈಗೆ ಸಂಕಷ್ಟ

ಬೆಂಗಳೂರು (ಡಿ. 22):  ಬೆಳ್ಳಂದೂರು ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪಗೆ  ಸಂಕಷ್ಟ ಎದುರಾಗಿದೆ. ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈ ಕೋರ್ಟ್​ ನಿರಾಕರಿಸಿದೆ. ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾ. ಜಾನ್ ಮೈಕೆಲ್ ಕುನ್ಹಾ ನೇತೃತ್ವದ  ಪೀಠ ಅರ್ಜಿ ವಜಾಗೊಳಿಸಿದೆ. ಅರ್ಜಿಯೊಂದಿಗೆ ಸಲ್ಲಿಸಿದ್ದ ಪೂರಕ ದಾಖಲೆಗಳು ಸೂಕ್ತವಾಗಿಲ್ಲ ಎಂದು ತಿಳಿಸಿ ಹೈಕೋರ್ಟ್​​ ಏಕ ಸದಸ್ಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ‌. ಇದರಿಂದ ಮುಖ್ಯಮಂತ್ರಿಗಳು ಮತ್ತೊಮ್ಮೆ ತೊಂದರೆಗೆ ಸಿಲುಕಿದ್ದಾರೆ.  ಬೆಳ್ಳಂದೂರು …

Read More »

ಡೀಸೆಲ್ ಟ್ಯಾಂಕರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ

: ಡೀಸೆಲ್ ಟ್ಯಾಂಕರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದ ಐವರು ಸಜೀವ ದಹನಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ಲಖನೌದಿಂದ ಆಗ್ರಾಗೆ ತೆರಳುತ್ತಿದ್ದ ಕಾರು, ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಏಕಾಏಕಿ ರಾಂಗ್ ಟರ್ನ್ ತೆಗೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಡೋರ್ ಲಾಕ್ ಆಗಿದ್ದ ಕಾರಣ ಹೊರಬರಲಾಗದೇ ಕಾರಿನಲ್ಲಿದ್ದ …

Read More »

ಗ್ರಾ. ಪಂ. ಮೊದಲ ಹಂತದ ಚುನಾವಣೆ,ಲಘುಲಾಠಿ ಪ್ರಹಾರ, ಪಿಸ್ತೂಲ್ ಇಟ್ಟುಕೊಂಡ ಅಧಿಕಾರಿ,07 ನೆ ವಯಸ್ಸಿನಲ್ಲಿ ಮತದಾನ ಮಾಡಿದ ಅಜ್ಜಮ್

ಬೆಳಗಾವಿ – ರಾಜ್ಯದ ವಿವಿಧೆಡೆ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದೆ. ಎಲ್ಲೆಡೆ ಪೊಲೀಸ್ ಬಂಧೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಶಾಂತ ಮತ್ತು ಸುರಕ್ಷಿತ ಮತದಾನ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಮತ್ತು ಕಂಗ್ರಾಳಿ ಕೆಎಚ್ ಗ್ರಾಮದಲ್ಲಿ ಜನ ಗುಂಪುಗೂಡಲು ಪ್ರಯತ್ನಿಸಿದ್ದರಿಂದ ಲಘುಲಾಠಿ ಪ್ರಹಾರ ನಡೆಸಲಾಗಿದೆ. ದೇಸೂರು ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಕರ್ತವ್ಯಕ್ಕೆ ಬಂದಿದ್ದ ಸಿಬ್ಬಂದಿ ಪಿಸ್ತೂಲ್ ಇಟ್ಟುಕೊಂಡು ಬಂದಿದ್ದರಿಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಯನ್ನು ಬದಲಿಸಲಾಗಿದೆ. …

Read More »

ದುಬೈನಲ್ಲಿ ಭಾರತೀಯನಿಗೆ ಹೊಡೀತು 7 ಕೋಟಿ ರೂ. ಜಾಕ್‍ಪಾಟ್..!

ದುಬೈ, ಡಿ. 22- ಕೊರೊನಾ ಲಾಕ್‍ಡೌನ್‍ನಿಂದಾಗಿ ಹಲವರ ಬದುಕು ದುಸ್ತರವಾಗಿದ್ದು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಇದೇ ರೀತಿ ಕೇರಳದ ವ್ಯಕ್ತಿಯೊಬ್ಬರು ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಕೆಲಸಕ್ಕಾಗಿ ಕಂಪೆನಿಗಳಿಗೆ ಅಲೆಯುತ್ತಿರುವಾಗಲೇ 7 ಕೋಟಿ ಜಾಕ್‍ಪಾಟ್ ಹೊಡೆಯುವ ಮೂಲಕ ಅವನ ಅದೃಷ್ಟವನ್ನೇ ಬದಲಿಸಿದೆ. ಕೇರಳ ಮೂಲದ ನವನೀತ್ ಸಂಜೀವನ್ ಎಂಬುವವರು ದುಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉತ್ತಮ ಕೆಲಸದಲ್ಲಿದ್ದು ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದರೂ ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಅವರು ಕೆಲಸ ಕಳೆದುಕೊಂಡಿದ್ದರು. ಆಗ …

Read More »

ಕ್ರಿಕೆಟಿಗ ಸುರೇಶ್ ರೈನಾ, ಬಾಲಿವುಡ್ ಸೆಲೆಬ್ರಿಟಿ ಸುಸ್ಸಾನ್ ಖಾನ್ ಸೇರಿದಂತೆ ಹಲವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕ್ರಿಕೆಟಿಗ ಸುರೇಶ್ ರೈನಾ, ಬಾಲಿವುಡ್ ಸೆಲೆಬ್ರಿಟಿ ಸುಸ್ಸಾನ್ ಖಾನ್ ಸೇರಿದಂತೆ ಹಲವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಬಳಿಯಿರುವ ಡ್ರಾಗನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಕೋವಿಡ್ ಮಾರ್ಗ ಸೂಚಿ ಪಾಲಿಸದ ಕಾರಣಕ್ಕೆ ಸುರೇಶ್ ರೈನಾ, ಸುಸ್ಸಾನ್ ಖಾನ್, ಸಿಂಗರ್ ಗುರು ರಾಂಧವ ಹಾಗೂ ಕ್ಲಬ್ ನ ಇಬ್ಬರು ಸ್ಟಾಫ್ ಸೇರಿದಂತೆ ಒಟ್ಟು 34 ಜನರನ್ನು ಬಂಧಿಸಿದ್ದಾರೆ. …

Read More »