Breaking News

ತಮಿಳುನಾಡು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟ

ಬೆಂಗಳೂರು, ಫೆ.26- ಕಾವೇರಿ ನದಿ ಜೋಡಣೆ ಸಂಬಂಧ ಏಕಾಏಕಿ 115ಕಿಮೀ ಉದ್ದದ ಕಾಲುವೆ ತೋಡಲು ಹೊರಟಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಕನ್ನಡ ಒಕ್ಕೂಟ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ತಮಿಳುನಾಡಿನಲ್ಲಿ ಬಿಜೆಪಿ ಚುನಾವಣೆ ಗೆಲ್ಲಲು ಕೇಂದ್ರ ಸರ್ಕಾರ ರಾಜ್ಯದ ಕಾವೇರಿ ನದಿಯನ್ನು ಬಲಿ ಕೊಡುತ್ತಿದೆ ಎಂದು ಆರೋಪಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಕ್ರಮದಿಂದ ಹಿಂದೆ …

Read More »

ಲೋಕಸಭಾ ಕ್ಷೇತ್ರಕ್ಕೆ ಇಂದೇ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ರಾಜ್ಯದ ಮೂರು ವಿಧಾನಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಇಂದೇ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿದ್ದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೆರಿ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.ಇನ್ನು ರಾಜ್ಯದ 3 ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಚುನಾವಣೆಗೂ ಮುಹೂರ್ತ ಫಿಕ್ಸ್ …

Read More »

6 ವರ್ಷದ ಬಾಲಕಿಯ ಮೇಲೆ 60 ವರ್ಷದ ವ್ಯಕ್ತಿಯಿಂದ ಅತ್ಯಾಚಾರ ಯತ್ನ :

ಕೋಲಾರ : ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ 60 ವರ್ಷಯ ವೃದ್ಧರೊಬ್ಬರು ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.   ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ನಡೆದಲ್ಲಿ 6 ವರ್ಷದ ಬಾಲಕಿಗೆ ಚಾಕಲೇಟ್ ಕೊಡಿಸುವ ನೆಪದಲ್ಲಿ ನಿನ್ನೆ 60 ವರ್ಷದ ತಿಮ್ಮಪ್ಪ ಎಂಬುವರು ಅತ್ಯಾಚಾರ ಎಸಗಲು ಯತ್ನಿಸಿದ್ದಾಗಿ ತಿಳಿದು ಬಂದಿದೆ.   ಆರೋಪಿ ತಿಮ್ಮಪ್ಪ ಅವರ ಪುತ್ರ ಕುಮಾರ್ …

Read More »

ಸೈಬರ್‌ ಲೋಕದಲ್ಲಿ ‘ಬೆತ್ತಲೆ’ ಬ್ಲ್ಯಾಕ್‌ಮೇಲ್

ಬೆಂಗಳೂರು: ಅವರೊಬ್ಬ ಗ್ರಾನೈಟ್ ಉದ್ಯಮಿ. ಯುವತಿ ಹೆಸರಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ, ಆಕೆಯ ಗುಂಗಿನಲ್ಲೇ ದಿನ ಕಳೆಯಲಾರಂಭಿಸಿದ್ದವರು. ಅಂದು ರಾತ್ರಿ ಏಕಾಏಕಿ ವಿಡಿಯೊ ಕರೆ ಮಾಡಿ ಸಲುಗೆಯಿಂದ ಮಾತನಾಡಿದ್ದ ಯುವತಿ, ‘ನಿಮ್ಮ ದೇಹ ನೋಡಬೇಕು’ ಎಂದು ಹೇಳಿ ಉದ್ಯಮಿ ಬಟ್ಟೆ ಬಿಚ್ಚಿಸಿ ಬೆತ್ತಲಾಗಿಸಿದ್ದಳು. ಬೆತ್ತಲೆ ದೃಶ್ಯವನ್ನು ಸದ್ದಿಲ್ಲದೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಮರುದಿನದಿಂದಲೇ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದಳು. ಇದು ಗ್ರಾನೈಟ್ ಉದ್ಯಮಿಯೊಬ್ಬರ ಕಥೆಯಲ್ಲ. ಕೆಲ ಗಣ್ಯರು, ಕೆಲ ಉದ್ಯಮಿಗಳು, ಕೆಲ …

Read More »

ಭಾನುವಾರದಿಂದಲೇ ಶೋ ಶುರು -ಸ್ಪರ್ಧಿಗಳ್ಯಾರು ಗೊತ್ತಾ..?

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ಫೆಬ್ರವರಿ 28 ರಿಂದ ಆರಂಭವಾಗಲಿದೆ. ಅಂದು ಸಂಜೆ 6 ಗಂಟೆಗೆ ಶುರುವಾಗಲಿದ್ದು, ಪ್ರತಿದಿನ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ ಎಂದು ಕಲರ್ಸ್ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ. ಈ ಬಾರಿಯೂ ಕಿಚ್ಚ ಸುದೀಪ್ ‘ಬಿಗ್ ಬಾಸ್’ ಹೋಸ್ಟ್ ಮಾಡಲಿದ್ದಾರೆ. ಕೊರೋನಾ ಕಾರಣದಿಂದಾಗಿ ಈ ಬಾರಿ ‘ಬಿಗ್ ಬಾಸ್’ ವಿಳಂಬವಾಗಿ ಆರಂಭವಾಗುತ್ತಿದೆ. 17 ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದು, ಸಂಪೂರ್ಣವಾಗಿ …

Read More »

ತೈಲ ಬೆಲೆ ಏರಿಕೆ ಖಂಡಿಸಿ ಇಂದು `ಭಾರತ್ ಬಂದ್’ : ಏನಿರುತ್ತೆ, ಏನಿರಲ್ಲ?

ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆಗಳು, ಸರಕು ಮತ್ತು ಸೇವಾ ತೆರಿಗೆ, ಇ-ಬಿಲ್ ಇತ್ಯಾದಿಗಳನ್ನು ವಿರೋಧಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಶುಕ್ರವಾರ ಅಂದ್ರೆ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ನಡುವೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ (ಎಐಟಿಡಬ್ಲ್ಯೂಎ) ಭಾರತ್ ಕರೆಗೆ ಬೆಂಬಲ ನೀಡಿದ್ದು ಇಂದು ಚಕ್ಕಾ ಜಾಮ್ ನಡೆಸಲಿದ್ದಾರೆ. 8 ಕೋಟಿ ವರ್ತಕರನ್ನು ಪ್ರತಿನಿಧಿಸುವ 40 ಸಾವಿರ ವರ್ತಕರ ಸಂಘಟನೆಗಳು ಬಂದ್ ಬೆಂಬಲಿಸಿರುವ ಹಿನ್ನಲೆಯಲ್ಲಿ …

Read More »

ಕುತೂಹಲಕ್ಕೆ ಕಾರಣವಾಯ್ತು ಶಾಸಕ ಜಮೀರ್‌ ಮನೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಭೇಟಿ

ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಇತ್ತೀಚೆಗೆ ನವರಸ ನಾಯಕ ಜಗ್ಗೇಶ್‌ ಕೊಟ್ಟಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಈಗ ಅಂತ್ಯಗೊಂಡಿದೆ. ಪ್ರಸ್ತುತ ದರ್ಶನ್‌ ತಮ್ಮ ಮುಂಬರುವ ಚಿತ್ರ ‘ರಾಬರ್ಟ್’ ಪ್ರಮೋಟ್ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಶಾಸಕ ಜಮೀರ್‌ ಅಹ್ಮದ್‌ ಮನೆಗೆ ನಟ ದರ್ಶನ್‌ ಭೇಟಿ ನೀಡಿದ್ದಾರೆ. ಯಾವ ಕಾರಣಕ್ಕೆ ಜಮೀರ್‌ ಅಹ್ಮದ್‌ ಮನೆಗೆ ಚಾಲೆಂಜಿಂಗ್‌ ಸ್ಟಾರ್‌ ಭೇಟಿ ನೀಡಿದ್ದರು …

Read More »

ಎಂ.ಎಸ್.ಧೋನಿ ಟೆಸ್ಟ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ನವದೆಹಲಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ, ವಿರಾಟ್ ಕೊಹ್ಲಿ ಎಂ.ಎಸ್.ಧೋನಿ ಅವರನ್ನು ಹಿಂದಿಕ್ಕಿ ತವರು ನೆಲದಲ್ಲಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿ ಭಾರತದ ನಾಯಕರಾದರು. ನಾಯಕನಾಗಿ 29 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಈಗ 22 ಜಯಗಳಿಸಿದ್ದಾರೆ.   ಸ್ವದೇಶದಲ್ಲಿ 30 ಟೆಸ್ಟ್ ಪಂದ್ಯಗಳಲ್ಲಿ 21 ಜಯಗಳಿಸಿ ಧೋನಿ ತಮ್ಮ ವೃತ್ತಿಜೀವನವನ್ನು ಮುಗಿಸಿದರು. ಅಹಮದಾಬಾದ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ 2 ನೇ ದಿನದಂದು ಭಾರತ 10 ವಿಕೆಟ್‌ಗಳಿಂದ …

Read More »

ಮೀನುಗಾರರ ಹೋರಾಟಕ್ಕೆ ಬೆಲೆ ಇಲ್ವಾ?

ಕಾರವಾರ: ಇತ್ತೀಚಿಗೆ ಕೇಂದ್ರ ಸರಕಾರದ ಖಾಸಗೀಕರಣ ನೀತಿ ವಿರುದ್ದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೆ ಎಲ್ಲವೂ ಗೊತ್ತು ಗೊತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೀನುಗಾರಿಕೆಗೆ ತೊಂದರೆ ಆಗುವ ಹಾಗೆ ಖಾಸಗಿ ಕಂಪನಿಯವರು ಪೋರ್ಟ್ ನಿರ್ಮಾಣ ಮಾಡಲು ಹೊರಟಿದ್ದು ಮೀನುಗಾರರ ಆಕ್ರೋಶದ ಕಟ್ಟೆ ಒಡೆದಿದ್ದು ಮೀನುಗಾರರ ಸಮಸ್ಯೆ ಕೇಳುವವರು ಯಾರು ಇಲ್ಲದಂತಾಗಿದೆ. ಹೊನ್ನಾವರದ ಕಾಸರಕೋಡಿನಲ್ಲಿ ಎಚ್.ಪಿ.ಪಿ.ಎಲ್ ಖಾಸಗಿ ಕಂಪನಿಯವರು ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿದ್ದಾರೆ. ಈಗಾಗಲೇ ಕೇಂದ್ರ ಸರಕಾರದ …

Read More »

ರಾಜ್ಯಾದ್ಯಂತ ಲಾರಿ ಮುಷ್ಕರ; ಡಿಸೇಲ್​ ಸೆಸ್ ದ​ರ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಆಗ್ರಹ

ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ,  ಒಂದು ಕಿಲೋಮೀಟರ್ ಗೆ ಲಾರಿ ಓಡಿಸಲು ಮಾಲೀಕರಿಗೆ 36 ರೂ. ವೆಚ್ಚವಾಗುತ್ತಿದೆ. ರಾಜ್ಯದಿಂದ 40 ಸಾವಿರ ಲಾರಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಹೊರ ರಾಜ್ಯದಲ್ಲಿ ಡಿಸೇಲ್ ಕಡಿಮೆ ಇದೆ. ಕಡಿಮೆ ಇರುವ ರಾಜ್ಯಗಳಿಂದ ಮಾಲೀಕರು ಡಿಸೇಲ್ ಹಾಕಿಸಿಕೊಂಡು ಬರುತ್ತಿದ್ದಾರೆ. …

Read More »