Breaking News

ಅವಧಿಗೂ ಮುನ್ನ ಬಸ್ ಸಂಚಾರ; 2 ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ಜಟಾಪಟಿ

ಯಾದಗಿರಿ:ಬಸ್ ಸಂಚಾರ ಮಾಡುವ ವಿಚಾರದಲ್ಲಿ ಎರಡು ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ವಾಕ್ಸಮರ ನಡೆದಿದೆ. ಅವಧಿ ಮುನ್ನವೇ ಬಸ್ ನಿಲ್ದಾಣದಲ್ಲಿ ತೆಲಂಗಾಣ ಬಸ್ ತೆಗೆದುಕೊಂಡು ಬಂದ ವಿಚಾರವಾಗಿ ತೆಲಂಗಾಣ ಹಾಗೂ ರಾಜ್ಯದ ಸಾರಿಗೆ ನೌಕರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಂಟ್ರೋಲರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಕೇಂದ್ರ ಬಸ್ ನಿಲ್ದಾಣದಲ್ಲಿ ನಸುಕಿನ ಜಾವ ಘಟನೆ ಜರುಗಿದೆ. ಎರಡು ದಿನದ ಹಿಂದೆ ಘಟನೆ …

Read More »

ಬುಲಾವ ಮಾಡಿದ್ದು ಸಚಿವ ಸಂಪುಟ ವಿಸ್ತರಣೆ ಅಂತಾ ಆದ್ರೆ ಹೇಳಿದ್ದು ಕುರ್ಚಿ ಖಾಲಿ ಮಾಡಿ ಅಂತಾ

ನವದಹಲಿ – ಸಚಿವಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಕೊಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ನವದೆಹಲಿಗೆ ಕರೆಸಿಕೊಂಡಿದೆ ಎನ್ನುವ ನಿರೀಕ್ಷೆ ಬಹುತೇಕ ಹುಸಿಯಾಗಿದೆ. ಬದಲಾಗಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನೇ ಬದಲಾಯಿಸುವ ಪ್ರಸ್ತಾಪವನ್ನು ಅಮಿತ್ ಶಾ ಯಡಿಯೂರಪ್ಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಯಾರಾಗಲಿದ್ದಾರೆ 2021ಕ್ಕೆ ಕರ್ನಾಟಕದ ಸಿಎಂ? ಬೆಳಗ್ಗೆ ನವದೆಹಲಿಗೆ ಧಾವಿಸಿದ ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದ್ದಾರೆ. ಈ …

Read More »

ಎಲ್ಲರ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ ಯಾರನ್ನು ಬಿಜೆಪಿ ಪಕ್ಷದ ನಾಯಕರನ್ನಾಗಿ ಮಾಡಬೇಕೆಂದು ಕೇಂದ್ರ ನಾಯಕರಿಗೆ ಗೊತ್ತಿದೆ.: ಯತ್ನಾಳ

ವಿಜಯಪುರ (ಜ. 10); ಸಚಿವ ಸಂಪುಟ ವಿಸ್ತರಣೆಯಾಗುತ್ತೋ? ಪುನಾರಚನೆಯಾಗುತ್ತೋ? ಗೊತ್ತಿಲ್ಲ. ಆದರೆ, ಮಹತ್ವದ ನಿರ್ಣಯ ಕೈಗೊಳ್ಳಲು ಅಮಿತ್ ಶಾ ಸಿಎಂ ಯಡಿಯೂರಪ್ಪ  ಅವರನ್ನು ದೆಹಲಿಗೆ ಕರೆಯಿಸಿದ್ದಾರೆ ಅನಿಸುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ತೆರಳಿದ್ದಾರೆ. ಯಾರನ್ನು ಬಿಜೆಪಿ ಪಕ್ಷದ ನಾಯಕರನ್ನಾಗಿ ಮಾಡಬೇಕೆಂದು ಕೇಂದ್ರ ನಾಯಕರಿಗೆ ಗೊತ್ತಿದೆ. ಪ್ರಧಾನಿ, ಗೃಹ ಸಚಿವರಿಗೆ ಅವರದ್ದೆ …

Read More »

ಬೀದಿಗಳಲ್ಲಿ ಹೋರಾಟಗಳನ್ನು ಮಾಡಿದವರು ಬಿಜೆಪಿಯಲ್ಲಿ ನಾಯಕರಾದರೆ, ಕಾಂಗ್ರೆಸ್‌ನಲ್ಲಿ ಇಬ್ಬರು ಕೊಠಡಿ ಸೇರಿದರೆ ನಾಯಕ ಹುಟ್ಟುತ್ತಾನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ

ಹುಬ್ಬಳ್ಳಿ: ಬೀದಿಗಳಲ್ಲಿ ಹೋರಾಟಗಳನ್ನು ಮಾಡಿದವರು ಬಿಜೆಪಿಯಲ್ಲಿ ನಾಯಕರಾದರೆ, ಕಾಂಗ್ರೆಸ್‌ನಲ್ಲಿ ಇಬ್ಬರು ಕೊಠಡಿ ಸೇರಿದರೆ ನಾಯಕ ಹುಟ್ಟುತ್ತಾನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಪಡೆದ ಜಿಲ್ಲೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಪ್ರಿಯಾಂಕಾ ಗಾಂಧಿಗೆ ಮಗು ಜನಿಸಿದಾಗ ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿ ಕಾಂಗ್ರೆಸ್‌ ನಾಯಕರು ಸಿಹಿ ವಿತರಣೆ ಮಾಡುತ್ತಿದ್ದರು. ಯಾಕೆ ಸಿಹಿ ಹಂಚುತ್ತಿದ್ದೀರಿ ಎಂದು …

Read More »

‘ಆನ್‌ಲೈನ್ ಮಾರುಕಟ್ಟೆ ಬಳಸಿಕೊಂಡು ಮಾರಾಟಗಾರರು ಗ್ರಾಹಕರಿಗೆ ಮಾಡುವ ಮೋಸಕ್ಕೆ ಇ- ಕಾಮರ್ಸ್‌ ಸಂಸ್ಥೆಗಳು ಜವಾಬ್ದಾರಿ ಆಗುವುದಿಲ್ಲ’ ಎಂದಹೈಕೋರ್ಟ್

ಬೆಂಗಳೂರು: ‘ಆನ್‌ಲೈನ್ ಮಾರುಕಟ್ಟೆ ಬಳಸಿಕೊಂಡು ಮಾರಾಟಗಾರರು ಗ್ರಾಹಕರಿಗೆ ಮಾಡುವ ಮೋಸಕ್ಕೆ ಇ- ಕಾಮರ್ಸ್‌ ಸಂಸ್ಥೆಗಳು ಜವಾಬ್ದಾರಿ ಆಗುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸ್ನ್ಯಾಪ್‌ಡೀಲ್ ಸಂಸ್ಥೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದು ಪಡಿಸಿದ ನ್ಯಾಯಾಲಯ, ಈ ಅಭಿಪ್ರಾಯಪಟ್ಟಿದೆ. ವೆಬ್‌ಸೈಟ್‌ನಲ್ಲಿ ಜಾಹೀರಾತು ಪ್ರದರ್ಶಿಸಿರುವ ಉತ್ಪನ್ನವೊಂದು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಗೆ ವಿರುದ್ಧವಾಗಿದೆ ಸ್ನ್ಯಾಪ್‌ಡೀಲ್ ವಿರುದ್ಧ ಮೈಸೂರಿನ ಉಪ ಔಷಧ ನಿಯಂತ್ರಕರು ‌ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಸ್ನ್ಯಾಪ್‌ಡೀಲ್ ಪರವಾಗಿ ಹಾಜರಾದ ಹಿರಿಯ ವಕೀಲ …

Read More »

‘ಇನ್ನೂ ಸಮಯವಿದೆ, ಮೋದಿಜಿ, ಅನ್ನದಾತರನ್ನು ಬೆಂಬಲಿಸಿ’: ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಾಗುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಪಟ್ಟು ಸಡಿಲಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. ‘ಇನ್ನೂ ಸಮಯವಿದೆ, ಮೋದಿಜಿ, ಅನ್ನದಾತರನ್ನು ಬೆಂಬಲಿಸಿ, ಬಂಡವಾಳಶಾಹಿಗಳನ್ನು ತೊಳಗಿಸಿ’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.ಈ ಸಂಬಂಧ ಸಂಸತ್ತಿನಲ್ಲಿ 2015 ಎಪ್ರಿಲ್‌ನಲ್ಲಿ ಮಾಡಿರುವ ಭಾಷಣದ ವಿಡಿಯೊ ತುಣುಕನ್ನು ಬಿಡುಗಡೆ …

Read More »

ಬಿಜೆಪಿಯ ದರಿದ್ರ ಸರ್ಕಾರದ ಜನ ವಿರೋಧಿ ಕಾಯ್ದೆಗಳ ವಿರುದ್ಧ ಬೀದಿಗಿಳಿದು ಹೋರಾಟ; ಸಿದ್ದರಾಮಯ್ಯ ಕಿಡಿ

ಬೆಂಗಳೂರು (ಜ. 10): ಗೋಹತ್ಯೆ ನಿಷೇಧ ಮಾಡಬೇಕಾದರೆ ಇಡೀ ದೇಶದಲ್ಲಿ ಬ್ಯಾನ್ ಮಾಡಿ. ದೇಶದಲ್ಲಿ ಗೋ ಮಾಂಸ ರಫ್ತು, ಆಮದು ಮಾಡೋದನ್ನು ಮೊದಲು ನಿಲ್ಲಿಸಿ. ಬಿಜೆಪಿಯವರು ಸಗಣಿ ಎತ್ತಿಲ್ಲ, ಗಂಜಲ ಬಾಚಿಲ್ಲ. ಆದರೆ ಗೋಮಾತೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಬೆಂಬಲಿಗರೇ ದನದ ಮಾಂಸ ರಫ್ತು ಮಾಡುತ್ತಾರೆ. ಬಿಜೆಪಿಯದ್ದು ದರಿದ್ರ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ …

Read More »

ಅಕಾಲಿಕ ಮಳೆಯಿಂದ ಬೆಳೆ ನಾಶ; ಸಂಕಷ್ಟದ ಸುಳಿಯಲ್ಲಿ ಧಾರವಾಡದ ರೈತರು

ಧಾರವಾಡ (ಜ. 10): ಮುಂಗಾರು ಬೆಳೆಗಳು ಅತಿವೃಷ್ಟಿ-ನೆರೆ ಹಾವಳಿಗೆ ತುತ್ತಾದ ಕಾರಣ ನಷ್ಟದ ಸುಳಿಯಲ್ಲಿದ್ದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇದೀಗ ಮತ್ತೆ ವರುಣನ ಆರ್ಭಟಕ್ಕೆ ಹಿಂಗಾರು ಬೆಳೆಗಳು ಸಹ ಹಾನಿಯಾಗುತ್ತಿದೆ. ಮಳೆರಾಯನ ಚೆಲ್ಲಾಟದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೌದು, ಧಾರವಾಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಅಕಾಲಿಕ ಮಳೆಯಿಂದ ಹಿಂಗಾರಿನ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜಿಲ್ಲೆಯ ರೈತ ಸಮೂಹ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. …

Read More »

2 ತಿಂಗಳೊಳಗೆ ನೆಲಮಂಗಲ ನಗರಸಭೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

ನೆಲಮಂಗಲ (ಜ. 10): ಎರಡು ತಿಂಗಳಲ್ಲಿ ನೆಲಮಂಗಲ ನಗರಸಭೆ ಚುನಾವಣೆ ನಡೆಸುವಂತೆ ಹೈ ಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ದೇವದಾಸ್ ಅದೇಶ ನೀಡಿದ್ದಾರೆ. ನಗರಸಭೆ ಚುನಾವಣೆ ಕುರಿತಂತೆ ನೆಲಮಂಗಲ ನಗರಸಭೆಗೆ ನೂತನವಾಗಿ ಸೇರ್ಪಡೆಗೊಂಡಿರುವ ಅರಿಶಿನಕುಂಟೆ, ವಾಜರಹಳ್ಳಿ, ವಿಶ್ವೇಶ್ವರಪುರ, ಬಸವನಹಳ್ಳಿ ಗ್ರಾಮ ಪಂಚಾಯ್ತಿಗಳು 108 ಜನ ಮಾಜಿ ಸದಸ್ಯರ ಪರವಾಗಿ ಕಲ್ಪನಾ ಮಂಜುನಾಥ್ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ …

Read More »

ಬಿಎಸ್​ವೈ ಅವರನ್ನು ದೆಹಲಿಗೆ ಬರುವಂತೆ ಬುಲಾವ್​ ನೀಡಿದ್ದು, ರಾಜ್ಯ ಸಂಪುಟ ವಿಸ್ತರಣೆಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

ನವದೆಹಲಿ; ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದರು. ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದೂವರೆ ವರ್ಷದಿಂದ ಮುಂದೂಡಲ್ಪಡುತ್ತಲೇ ಇದೆ. ಒಂದೆಡೆ ಸಚಿವಾಕಾಂಕ್ಷಿಗಳ ಸಂಖ್ಯೆ ಏರುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಹೈಕಮಾಂಡ್​ ಈವರೆಗೆ ಸಂಪುಟವನ್ನು ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್.​ …

Read More »