Breaking News

ಉತ್ತಮ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿದ ಲಕ್ಷ್ಮಣ ಸವದಿ,

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಶಂಕುಸ್ಥಾಪನೆ ಹಾಗೂ ನೂತನ ಬಸ್ ನಿಲ್ದಾಣದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಸಂಸದರಾದ ಜಿ.ಎಮ್.ಸಿದ್ದೇಶ್ವರ ನೆರವೇರಿಸಿದರು. ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರು ನಿಗಮದ ಬಸ್ಸುಗಳ ಉತ್ತಮ ಚಾಲಕರಿಗೆ ಬೆಳ್ಳಿ ಪದಕ ವಿತರಣೆ …

Read More »

ಕೋವಿಡ್ ಲಸಿಕೆ ವಿತರಿಸಿದ ಕೆ.ಎಮ್.ಎಫ್ ಅಧ್ಯಕ್ಷ :ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕಳೆದೊಂದು ವರ್ಷದಿಂದ ವಿಶ್ವವ್ಯಾಪಿಯಾಗಿ ಕಾಡುತ್ತಿರುವ ಕೊರೋನಾ ಮಹಾಮಾರಿ ನಿರ್ಮೂಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತೀ ದೊಡ್ಡ ಲಸಿಕೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇಡೀ ವಿಶ್ವವೇ ನಮ್ಮ ವಿಜ್ಞಾನಿಗಳು ತಯಾರಿಸಿರುವ ಕೋವಿಡ್ ಲಸಿಕೆ ಬಗ್ಗೆ ಹೆಮ್ಮೆಪಡುತ್ತಿದೆ, ಕೋವಿಡ್-೧೯ನ್ನು ಯಶಸ್ವಿಯಾಗಿ ನಿಭಾಯಿಸಿರುವ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ …

Read More »

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ನಾವು ಸುಮ್ಮನೆ ಕೂರಲ್ಲ : ಮಹಾರಾಷ್ಟ್ರ ಸಚಿವ ಏಕ್ ನಾಥ್ ಶಿಂಧೆ ಉದ್ಧಟತನ

ಬೆಂಗಳೂರು : ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ ಬೆನ್ನಲ್ಲೇ ಸಚಿವ ಏಕನಾಥ್ ಶಿಂಧೆ ಮತ್ತೆ ಗಡಿ ವಿವಾದವನ್ನು ಕೆಣಕಿದ್ದಾರೆ. ಎಂಇಎಸ್ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಉದ್ಧಟತನ ಹೇಳಿಕೆ ನೀಡಿರುವ ಸಚಿವ ಶಿಂಧೆ, ಬೆಳಗಾವಿ ಗಡಿಭಾಗ ಮಹಾರಾಷ್ಟ್ರಕ್ಕೆ ಸೇರುವವರೆಗೂ ನಾವು ಸುಮ್ಮನೆ ಕೂರಲ್ಲ. ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಬೆಳಗಾವಿ ಸೇರಿ ಮರಾಠಿ ಭಾಷಿಕ ಗಡಿ ಪ್ರದೇಶವನ್ನು ಮಹಾರಾಷ್ಟ್ರ …

Read More »

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ನಡೆದರೆ ರಕ್ತಕ್ರಾಂತಿ ಆಗುತ್ತೆ : ವಾಟಾಳ್ ನಾಗರಾಜ್ ಎಚ್ಚರಿಕೆ

ಬೆಂಗಳೂರು : ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ನಡೆದರೆ ರಕ್ತಕ್ರಾಂತಿ ಆಗುತ್ತೆ. ಸಿಎಂ ಯಡಿಯೂರಪ್ಪಗೆ ಶಕ್ತಿ, ಪ್ರೀತಿ, ಬದ್ಧತೆ ಇಲ್ಲ. ಬೆಳಗಾವಿ, ಕಾರವಾರದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲ್ಲ. ಬೆಳಗಾವಿ ಮಹಾರಾಷ್ಟ್ರ ಗಡಿ ಬಂದ್ ಆಗಲೇಬೇಕು. ಎಂಇಎಸ್ , ಶಿವಸೇನೆಯನ್ನು …

Read More »

ಚಾಲನಾ ಪರವಾನಗಿಯನ್ನು ಆರ್ ಟಿಒ ಕಚೇರಿಗೆ ಹೋಗದೇ ಮನೆಯಲ್ಲೇ ನವೀಕರಿಸುವ ಸೌಲಭ್ಯ

ಬೆಂಗಳೂರು : ವಾಹನ ಸವಾರರಿಗೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಚಾಲನಾ ಪರವಾನಗಿಯನ್ನು ಆರ್ ಟಿಒ ಕಚೇರಿಗೆ ಹೋಗದೇ ಮನೆಯಲ್ಲೇ ನವೀಕರಿಸುವ ಸೌಲಭ್ಯವನ್ನು ನೀಡಿದೆ. ಹೌದು, ಸಾರಿಗೆ ಸಚಿವಾಲಯದ ಅಧಿಕೃತ ವೆಬ್ ಸೈಟ್ https://parivahan.gov.in/ ಗೆ ಭೇಟಿ ನೀಡಿ. ಚಾಲನಾ ಪರವಾನಗಿ ನವೀಕರಿಸಬಹುದು. ಇದಕ್ಕಾಗಿ ಚಾಲನಾ ಪರವಾನಗಿ, ಪಾಸ್ ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್ ಅಪ್ಲೋಡ್ ಮಾಡಬೇಕು. ಇದಾದ 30 ದಿನದೊಳಗೆ ನಿಮ್ಮ ಮನೆ …

Read More »

ಗಡಿ ವಿಚಾರದ ಬಗ್ಗೆ ಉದ್ಧವ್ ಠಾಕ್ರೆ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ : ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಉದ್ಧವ್ ಠಾಕ್ರೆ ಅವರು ಗಡಿ ವಿಚಾರದ ಬಗ್ಗೆ ಈ ಹಿಂದೆ ಕೂಡ ಮಾತನಾಡಿದ್ದರು. ಹೀಗಾಗಿ ಅವರ ಹೇಳಿಕೆ ಬಗ್ಗೆ ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಗಡಿ ವಿಚಾರ ಬಂದಾಗ ನಮ್ಮ ಪಕ್ಷದ ವತಿಯಿಂದ ಯಾವುದೇ …

Read More »

ಕೊರೋನಾ ಲಸಿಕೆ ಪಡೆದಿದ್ದ ಮೂವರು ನರ್ಸ್ ಗಳು ಆಸ್ಪತ್ರೆಗೆ ದಾಖಲು

ಭೂಪಾಲ್: ಶನಿವಾರ ಕೋವಿಡ್-19 ಲಸಿಕೆ ಪಡೆದಿದ್ದ ಮಧ್ಯಪ್ರದೇಶದ ಉಜೈನಿ ಜಿಲ್ಲೆಯ ಮೂವರು ನರ್ಸ್ ಗಳಿಗೆ ಜ್ವರ, ತಲೆನೋವು ,ಸುಸ್ತು ವಾಕರಿಕೆ ಸಮಸ್ಯೆ ಕಾಣಿಸಿಕೊಂಡು ಭಾನುವಾರ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. 25 ವರ್ಷದ ಮೂವರು ನರ್ಸ್ ಗಳು ಶನಿವಾರ ಕೋವಿಡ್ -19 ಲಸಿಕೆ ಪಡೆದುಕೊಂಡಿದ್ದರು ಎಂದು ಉಜೈನಿಯ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಮೂವರು ನರ್ಸ್ ಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ನಿಗಾವಣೆಯಲ್ಲಿ ಇಡಲಾಗಿತ್ತು.ಇದೀಗ ಎಲ್ಲರೂ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ …

Read More »

ರೈತರ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ: ನಾವು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದ ಸುಪ್ರೀಂ

ನವದೆಹಲಿ,ಜ.18- ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಬೇಕೆ, ಬೇಡವೇ ಎಂಬ ಕುರಿತಂತೆ ದೆಹಲಿ ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕು. ಇದರಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಪಂಜಾಬ್ ಹಾಗೂ ಹರಿಯಾಣ ರೈತರು ಕಳೆದ 53 ದಿನಗಳಿಂದ ದೆಹಲಿಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಜ.26ರಂದು ಗಣರಾಜ್ಯೋತ್ಸವದ …

Read More »

ಎಂಇಎಸ್‍ಗೆ ಸರಿಯಾದ ಪೆಟ್ಟು ಕೊಟ್ಟಿದ್ರೆ ಈ ಮಾತುಗಳ ಬರ್ತಿರಲಿಲ್ಲ

ಬೆಂಗಳೂರು: ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಒಂದು ಬಾರಿ ಇತಿಹಾಸವನ್ನ ಅವಲೋಕಿಸಿದ್ರೆ ಯಾರು ಯಾರ ಭಾಗವನ್ನ ಅತಿಕ್ರಮಿಸಿಕೊಂಡಿದ್ದಾರೆ ಅನ್ನೋದು ಅರಿವಾಗಲಿದೆ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ. ಒಮ್ಮೆ ಇತಿಹಾಸವನ್ನ ಅವಲೋಕಿಸಿ: ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ …

Read More »

ರಾಜ್ಯದಲ್ಲಿ ಕನ್ನಡದ ಬಗ್ಗೆ ಅಭಿಮಾನ ಇರುವಂತಹ ಸರ್ಕಾರ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಕನ್ನಡದ ಬಗ್ಗೆ ಅಭಿಮಾನ ಇರುವಂತಹ ಸರ್ಕಾರ ಇಲ್ಲ. ಈಗ ಏನಿದ್ದರೂ ಬಿಜೆಪಿ ಹಾಗೂ ಹಿಂದಿ ಪರ ಇರುವ ಸರ್ಕಾರ. ಯಡಿಯೂರಪ್ಪನವರಿಗೆ ಪ್ರಾಮಾಣಿಕತೆ ಇಲ್ಲ. ಬದ್ಧತೆ ಇದ್ದಿದ್ದರೆ ನಿನ್ನೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಜೊತೆ ನೇರವಾಗಿ ಮಾತನಾಡಬೇಕಿತ್ತು, ಯಾವುದೂ ಮಾತಾಡಿಲ್ಲ. ಅಲ್ಲಿ ಬಿಜೆಪಿಯವರಿಗೆ ಮರಾಠಿಗರ ವೇಷ-ಭೂಷಣಗಳನ್ನು ಹಾಕಿ ಸಭೆಯೆಲ್ಲ ಸಂಪೂರ್ಣ ಮರಾಠಿ ಸಭೆಯಂತಿತ್ತು. ಅಲ್ಲದೆ ಬಿಎಸ್‍ವೈ ಅವರು ಮಾತನಾಡುವಾಗ ಉದ್ಧವ್ ಠಾಕ್ರೆ ಬಗ್ಗೆ ಒಂದು ಅಕ್ಷರ …

Read More »