Breaking News

ಶಿವಮೊಗ್ಗ ಹುಣಸೋಡು ಗ್ರಾಮದಲ್ಲಿ ಭಾರೀ ಅವಘಡ ಸಂಭವಿಸಿದ್ದು, ಸಾವು- ನೋವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಂತಾಪ ಸೂಚಿಸಿ, ಸರ್ಕಾರಕ್ಕೆ ಆಗ್ರಹವೊಂದನ್ನು ಮಾಡಿದ್ದಾರೆ.

ಬೆಂಗಳೂರು: ಶಿವಮೊಗ್ಗ ಹುಣಸೋಡು ಗ್ರಾಮದಲ್ಲಿ ಭಾರೀ ಅವಘಡ ಸಂಭವಿಸಿದ್ದು, ಸಾವು- ನೋವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಂತಾಪ ಸೂಚಿಸಿ, ಸರ್ಕಾರಕ್ಕೆ ಆಗ್ರಹವೊಂದನ್ನು ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಿಚ್ಚ, ಶಿವಮೊಗ್ಗದ ಹುಣಸೋಡಿನಲ್ಲಿ ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿಸಿಗಲಿ, ಪ್ರತಿ ಪ್ರಾಣವು ಅಮೂಲ್ಯ ಸರ್ಕಾರ ಅಗತ್ಯ ಕ್ರಮ ತಗೆದು ಕೊಳ್ಳಲಿ ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿ ಮೊದಲುಮಾನವನಾಗು ಎಂದು ಹೇಳಿ …

Read More »

ಮಾರ್ಚ್ ನಂತರ ಹಳೆಯ 100ರೂಪಾಯಿ ನೋಟು ಗಳು ಚಲಾವಣೆ ಯಲ್ಲಿರುವುದಿಲ್ಲ ನಿಮ್ಮ ಹತ್ತಿರ ಇದ್ರೆ ಮಾರ್ಚ್ ಒಳಗಡೆ ಬದಲಾಯಿಸಿ ಕೊಳ್ಳಿ: R.B.I

ಬೆಂಗಳೂರು : ಪ್ರಸ್ತುತ ಚಲಾವಣೆಯಲ್ಲಿರುವ ಹಳೆಯ 100 ರೂ. ನೋಟುಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಕಳೆದ 6 ವರ್ಷಗಳಿಂದ ಮುದ್ರಣವಾಗದ, ಆದರೆ ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಇದು ಪೂರ್ಣವಾಗಲಿದೆ. ಇನ್ಮುಂದೆ 100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. 00 ರೂ. ನಹಳೆಯ ನೋಟುಗಳನ್ನು ಗ್ರಾಹಕರು …

Read More »

ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ

ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ ಮುಂದಾಗಿದ್ದ ಕಳ್ಳನನ್ನ ಸದರ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆಶ್ರಯ ಕಾಲೋನಿಯ ನಿವಾಸಿ ಗೋವಿಂದ ಬಂಧಿತ ಆರೋಪಿ. ಹಣದ ಅವಶ್ಯಕತೆ ಕಾರಣಕ್ಕೆ ತನ್ನ ಮಾಲೀಕನ ಲಾರಿಯನ್ನೇ ಕದ್ದು ಸಿಕ್ಕಿಬಿದ್ದಿದ್ದಾನೆ.   ಆಟೋ ನಗರದ ಸೈಯದ್ ಹುಸೇನ್ ಎಂಬವರಿಗೆ ಸೇರಿದ ಲಾರಿಯನ್ನ ಗೋವಿಂದ ಕದ್ದು ಮಾರಾಟಕ್ಕೆ ಮುಂದಾಗಿದ್ದ. ರಾಯಚೂರು ತಾಲೂಕಿನ ಗಂಜಳ್ಳಿ ಬಳಿ ಲಾರಿಯೊಂದಿಗೆ ಆರೋಪಿ ಸೆರೆಸಿಕ್ಕಿದ್ದಾನೆ. …

Read More »

ಮಂಗಳೂರು ಪೊಲೀಸರ ರಕ್ತಪಾತಕ್ಕೆ ಗ್ಯಾಂಗ್ ಪ್ಲಾನ್

  ಮಂಗಳೂರು: ಕರಾವಳಿ ಪೊಲೀಸರ ರಕ್ತಪಾತಕ್ಕೆ ಹುಟ್ಟಿಕೊಂಡಿದ್ದ ‘ಮಾಯಾ ಗ್ಯಾಂಗ್’ ನ ಸ್ಕೆಚ್ ಏನಿತ್ತು ಎಂಬುದು ತಿಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರೆಂಟಿ. ಮಂಗಳೂರಿನಲ್ಲಿ ಸಿಎಎ, ಎನ್‍ಆರ್‍ಸಿ ಪ್ರತಿಭಟನೆ ವೇಳೆ ನಡೆದಿದ್ದ ಲಾಠಿ ಚಾರ್ಜ್, ಕಲ್ಲುತೂರಾಟ ಮತ್ತು ಗೋಲಿಬಾರ್ ಘಟನೆಗೆ ಕಳೆದ ಡಿಸೆಂಬರ್‍ಗೆ ಒಂದು ವರ್ಷ ತುಂಬಿತ್ತು. ಈ ಗಲಭೆಯಲ್ಲಿ ಆಗ ಗೋಲಿಬಾರ್‍ಗೆ ಇಬ್ಬರು ಬಲಿಯಾಗಿದ್ದರು. ಒಂದು ವರ್ಷದೊಳಗೆ ಇದರ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಒಂದು ನಟೋರಿಯಸ್ ತಂಡ ಮಂಗಳೂರಿನಲ್ಲಿ …

Read More »

ಹುಣಸೋಡು ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಸಿಎಂ ಘೋಷಣೆ

  ಬೆಂಗಳೂರು: ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೋಡು ಗ್ರಾಮದಲ್ಲಿ ನಡೆದ ದುರಂತದಲ್ಲಿ 5 ಜನ ಮೃತರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ಈಗಾಗಲೇ ಸಂಸದ ರಾಘವೇಂದ್ರ ಅವರು ಬೀಡು ಬಿಟ್ಟಿದ್ದಾರೆ. ಅಲ್ಲದೆ ನಮ್ಮ ಇಲಾಖೆಯ ಮುರುಗೇಶ್ ನಿರಾಣಿ ಕೂಡ ಸ್ಥಳದಲ್ಲಿದ್ದಾರೆ ಎಂದರು. ಘಟನಾ ಸ್ಥಳಕ್ಕೆ …

Read More »

ಶಾಸಕ ರೇಣಕಾಚಾರ್ಯ ಜೊತೆ ರಮೇಶ್ ಜಾರಕಿಹೊಳಿ ಎನ್ ಮಾತಾಡಿದ್ರು ಗೊತ್ತಾ..?

ಲೈವ್ ಪಿಕ್ಸ್ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರ ಸದಾಶಿವ ನಗರದ ಗೃಹಕಚೇರಿಯಲ್ಲಿ ಶಾಸಕರ ಸಭೆ. ಶಾಸಕರಾದ‌ ಡಾ ಶಿವರಾಜ್ ಪಾಟೀಲ್, ಮಹೇಶ್ ಕುಮಠಳ್ಳಿ, ರೇಣುಕಾಚಾರ್ಯ, ರಾಜುಗೌಡರ ಜೊತೆ ಮಾತುಕತೆ. ಹೊನ್ನಾಳಿಯ ಏತ ನೀರಾವರಿ ಯೋಜನೆಗೆ ಇಂದಿನ ಸಚಿವ ಸಂಪುಟದ ಸಭೆಯಲ್ಲಿ ಅನುದಾನ ಕೊಡಿಸಿರುವುದಕ್ಕೆ ಸಚಿವರನ್ನು ಅಭಿನಂದಿಸಿದ ರೇಣುಕಾಚಾರ್ಯ.

Read More »

ಆನ್‌ಲೈನ್ ಮೂಲಕ ವಿದ್ಯಾರ್ಥಿ ಬಸ್‌ಪಾಸ್

ಬೆಂಗಳೂರು,ಜನವರಿ 22: ಆನ್‌ಲೈನ್ ಮೂಲಕ ವಿದ್ಯಾರ್ಥಿ ಬಸ್‌ಪಾಸ್ ಪಡೆಯಿರಿ ಎಂದು ಬಿಎಂಟಿಸಿ ಹೇಳಿದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸಲು ಜನವರಿ 31 ಅಂತಿಮ ದಿನಾಂಕವಾಗಿದೆ. ಕೊರೊನಾ ಲಾಕ್‌ಡೌನ್ ಮುಗಿದು ಶಾಲೆ, ಕಾಲೇಜುಗಳ ಆರಂಭವಾದ ಕೆಲವು ದಿನಗಳು ಕಳೆದ ವರ್ಷದ ಬಿಎಂಟಿಸಿ ಬಸ್‌ ಪಾಸ್ ಅಥವಾ ಕಾಲೇಜಿನ ಶುಲ್ಕ ರಶೀದಿ ಅಥವಾ ಕಾಲೇಜು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಎಂದು ಹೇಳಿತ್ತು. ಇದೀಗ ಆನ್‌ಲೈನ್ ಮೂಲಕ ಬಸ್ ಪಾಸ್ …

Read More »

ಅನಾರೋಗ್ಯಕ್ಕೆ ಒಳಗಾದ ಶಶಿಕಲಾಗೆ ಕೋವಿಡ್ ಸೋಂಕು ಪತ್ತೆ

ಬೆಂಗಳೂರು, ಜನವರಿ 21: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ಮತ್ತು ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಶಶಿಕಲಾ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಗುರುವಾರ ರಾತ್ರಿ ಅವರ ಕೋವಿಡ್ ಪರೀಕ್ಷೆ ವರದಿ ಬಂದಿದ್ದು, ಅವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ …

Read More »

ಪುಣೆ ಸೆರಂ ಇನ್ ಸ್ಟಿಟ್ಯೂಟ್ ಬೆಂಕಿ ಅವಘಡ; ಐವರು ಕಾರ್ಮಿಕರ ದುರ್ಮರಣ

ಪುಣೆ, ಜನವರಿ 21: ಕೊರೊನಾ ವೈರಸ್ ಲಸಿಕೆ ಕೋವಿಶೀಲ್ಡ್ ಸೇರಿದಂತೆ ಅನೇಕ ಪ್ರಮುಖ ಲಸಿಕೆಗಳನ್ನು ಉತ್ಪಾದಿಸುತ್ತಿರುವ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಘಟಕದಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿ ಐವರು ಮೃತಪಟ್ಟ ಘಟನೆಯ ಬಳಿಕ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಗುರುವಾರ ಬೆಂಕಿ ಅವಘಡ ಉಂಟಾಗಿತ್ತು. ಘಟನೆಯಲ್ಲಿ ಐವರು ದಹನವಾಗಿದ್ದರೆ, ಉಳಿದ ಅನೇಕರನ್ನು ರಕ್ಷಿಸಲಾಗಿತ್ತು. ಈ ಘಟನೆಯು ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಗೆ ಯಾವುದೇ ತೊಡಕು ಉಂಟುಮಾಡುವುದಿಲ್ಲ …

Read More »

ವಾಟ್ಸ್‌ಆಯಪ್‌ ಹೊಸ ನೀತಿ: ಕಳವಳ ವ್ಯಕ್ತಪಡಿಸಿದ ಸಂಸದೀಯ ಸಮಿತಿ

ನವದೆಹಲಿ: ವಾಟ್ಸ್‌ ಆಯಪ್ ನೀತಿಯಲ್ಲಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಸ್ತಾಪಿಸಲಾಗಿರುವ ಬದಲಾವಣೆಗಳ ಕುರಿತು ಸಂಸದೀಯ ಸಮಿತಿಯ ಸದಸ್ಯರು ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಎದುರು ವಾಟ್ಸ್‌ಆಯಪ್‌ನ ಪ್ರತಿನಿಧಿ ಹಾಜರಾಗಿದ್ದು, ‘ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಪ್ರಸ್ತಾಪಿಸಲಾಗಿದೆ. ವಾಟ್ಸ್‌ಆಯಪ್‌ ಚಾಟ್‌ ಹಾಗೂ ಕರೆಗಳು ಆಗಲೂ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟೆಡ್‌ (ಬೇರೆಯವರು ಸಂದೇಶ ನೋಡಲು ಆಗುವುದಿಲ್ಲ) ಆಗಿರಲಿದೆ ಎಂದಿದ್ದಾರೆ. ಭಾರತೀಯ ಬಳಕೆದಾರರಿಗೆ ಅನುಕೂಲಕರವಲ್ಲದ ಬದಲಾವಣೆಗಳನ್ನು ಪ್ರಸ್ತಾಪಿಸಿರುವ ಬಗ್ಗೆ …

Read More »