ಮಣಿಪಾಲ: “ಅಲೆ ಬುಡಿಯೆರ್ ಯೇ. ಬಲಾ ಬೊಲ್ಲ.. ಬಲಾ ಕಾಟಿ..” ವರ್ಷಗಳ ನಂತರ ತುಳುನಾಡಿನಲ್ಲಿ ಕಂಬಳದ ಕರೆ ರಂಗು ರಂಗಾಗಿ ಸಜ್ಜಾಗಿದೆ. ಕೋವಿಡ್ ಕಾರಣದಿಂದ ಈ ಬಾರಿ ಕಂಬಳ ನಡೆಯುವುದೇ ಇಲ್ಲವೇನು ಎಂದು ಬೇಸರಿಸಿದ್ದ ಕಂಬಳ ಪ್ರೇಮಿಗಳು ಮತ್ತೆ ಮೈಕೊಡವಿ ನಿಂತಿದ್ದಾರೆ. ಅನೇಕ ವರ್ಷಗಳ ಕಾಲ ಕರೆಯಲ್ಲಿ ತಮ್ಮ ಶರವೇಗದ ಓಟದಿಂದ ಗಮನ ಸೆಳೆದಿದ್ದ ಬೊಲ್ಲ, ಕುಟ್ಟಿ, ದೂಜ, ಧೋನಿ, ಪಾಂಚಾ, ಬೊಟ್ಟಿಮಾರ್, ತಾಟೆ ಮುಂತಾದ ಕೋಣಗಳು ಮತ್ತೆ ತಮ್ಮ …
Read More »ಗೋಕಾಕದಲ್ಲಿ ಸರಕಾರಿ ವೈದ್ಯರಿಂದ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ
ಗೋಕಾಕದಲ್ಲಿ ಗೋಕಾಕ ತಾಲೂಕಾ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗೋಕಾಕ ನಗರಸಭೆಯ ಆಯುಕ್ತರಾದ ಶಿವಾನಂದ ಹೀರೆಮಠ ಇವರು ರಿಬ್ಬನ್ ಕಟ್ ಮಾಡಿ ನಗರಸಭೆಯ ಉಪಾದಕ್ಷ ಬಸವರಾಜ ಆರೆನ್ನವರ ಇವರು ಬ್ಯಾಂಡ ಬಾರಿಸುವ ಮೂಲಕ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ನಾಳೆ ದಿನ ಜನೆವರಿ 31 ರವಿವಾರದಂದು ಸ್ಥಳಿಯ ಪ್ರಾಥಮಿಕ …
Read More »ರಾಮಮಂದಿರದ ತಾಂತ್ರಿಕ ಉಸ್ತುವಾರಿಯಾಗಿ ಕನ್ನಡಿಗ ಎಂಜಿನಿಯರ್
ಬೆಂಗಳೂರು – ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮಚಂದ್ರನ ದೇವಾಲಯದ ತಾಂತ್ರಿಕ ಉಸ್ತುವಾರಿಯಾಗಿ ದೇಶದ ಹಿರಿಯ ಜಿಯೋ ಟೆಕ್ನಿಕಲ್ ಎಂಜಿನಿಯರ್, ಕನ್ನಡಿಗ ಪ್ರೊ. ಟಿ.ಜಿ. ಸೀತಾರಾಮ್ ನೇಮಕವಾಗಿದ್ದಾರೆ. ಗುವಾಹಟಿ ಐಐಟಿ ನಿರ್ದೇಶಕರಾಗಿರುವ ಚಿತ್ರದುರ್ಗ ಮೂಲದ ಪ್ರೊ. ಟಿ.ಜಿ. ಸೀತಾರಾಮ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ನಲ್ಲಿ ನುರಿತ ತಜ್ಞರಾಗಿದ್ದು, ಇವರ ತಂಡದ ಸಲಹೆಯಂತೆಯೇ ಶ್ರೀ ರಾಮ ಮಂದಿರದ ತಳಪಾಯದ ಕೆಲಸ ನಡೆಯುತ್ತದೆ. ಇವರ ಮಾರ್ಗದರ್ಶನದಲ್ಲಿ ಭವ್ಯವಾದ, ಯಾವುದೇ ಕಂಪನಗಳಿಗೆ ಅಲುಗಾಡದ ಹಾಗೆ …
Read More »ಬಸವರಾಜ ಬೊಮ್ಮಾಯಿ ಗಡಿ ಉಸ್ತುವಾರಿ ಸಚಿವರಾಗಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪತ್ರೆ
ಬೆಳಗಾವಿ – ಗಡಿ ಉಸ್ತುವಾರಿ ಸಚಿವರನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನು ನೇಮಕ ಮಾಡಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಜೊತೆಗೆ, ಮಹಾರಾಷ್ಟ್ರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ. ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಪತ್ರ ಬರೆದಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದ ಪ್ರಕರಣವನ್ನು ಮಹಾರಾಷ್ಟ್ರ ಸರಕಾರ ಪದೇ ಪದೇ ಕೆಣಕುತ್ತಿದೆ. ಅಲ್ಲಿಯ ಮುಖ್ಯಮಂತ್ರಿಗಳು ಸಾಧ್ಯವಿರುವ ಎಲ್ಲ …
Read More »ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಹೋರಾಟ ಅಗತ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಮಂಡ್ಯ: ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪುತ್ತಿದ್ದು, ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರತಿಯೊಬ್ಬರು ಹೋರಾಟ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಶುಕ್ರವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡವನ್ನು ಪ್ರತಿಯೊಬ್ಬರು ನಿರಂತರವಾಗಿ ಪ್ರೀತಿಸಿ, ಪ್ರೋತ್ಸಾಹಿಸಬೇಕು. ರಾಜ್ಯ, ಹೊರ ರಾಜ್ಯಗಳಲ್ಲಿಯೂ ಕನ್ನಡ ಕ್ರಾಂತಿಯಾಗಬೇಕು. ನಾಡು, ನುಡಿ ವಿಷಯಕ್ಕೆ ಬಂದಾಗ ಪಕ್ಷಾತೀತ ಹೋರಾಟ …
Read More »ಬಾಯಿ ಚಪ್ಪರಿಸಿಕೊಂಡು ಫಾಸ್ಟ್ ಫುಡ್’ ತಿನ್ನೋ ಮುನ್ನಾ ಈ ಸುದ್ದಿ ತಪ್ಪದೇ ಓದಿ.!
ಬೆಂಗಳೂರು : ಬಹುತೇಕರು ಸಂಜೆ ಆದ್ರೆ ಸಾಕು, ಫಾಸ್ಟ್ ಫುಡ್ ತಿನಿಸುಗಳ ಮೊರೆ ಹೋಗುತ್ತಾರೆ. ಬಾಯಿ ಚಪ್ಪರಿಸಿಕೊಂಡು ಗೋಭಿ, ನೂಡಲ್ಸ್ ಸೇರಿದಂತೆ ಫ್ರೈಡ್ ಪುಡ್ ತಿನ್ನುತ್ತಾರೆ. ಆದ್ರೇ.. ಇದೀಗ ಇವೇ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ, ಶ್ವಾಸಕೋಶದ ಕ್ಯಾನ್ಸರ್ ಗೂ ಕಾರಣವಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಈ ಕುರಿತಂತೆ ಕಿದ್ವಾಯಿ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಜನರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. …
Read More »ಕೆಎಲ್ಇ ಸಂಸ್ಥೆಯ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ
ಮಾಂಜರಿ – ಶಿಕ್ಷಣದ ಜೊತೆಗೆ ಸಾಮಾನ್ಯ ಜನರ ಆರೋಗ್ಯ ಕಾಪಾಡಲು ಕೆಎಲ್ಇ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಆರೋಗ್ಯ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಜೊತೆಗೆ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರ ಆರೋಗ್ಯ ಕಾಪಾಡಲು ಉಚಿತ ಆರೋಗ್ಯ ತಪಾಸಣೆ ಮತ್ತು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಮಾಡಲಾಗುವುದು ಎಂದು ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ …
Read More »65 ಸಾವಿರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ ಇಬ್ಬರು ಸೆಕ್ಷನ್ ಅಧಿಕಾರಿಗಳು ಎಸಿಬಿ ಬಲೆಗೆ
ಬೆಳಗಾವಿ: ಜಮೀನಿನಲ್ಲಿದ್ದ ಟಿ.ಸಿ ಬದಲಿಸಿ ಹೊಸ ಟಿ.ಸಿ ಮಂಜೂರು ಮಾಡಿಕೊಡಲು 65,000 ರೂಪಾಯಿ ಲಂಚ ಪಡೆಯುತ್ತಿದ್ದ ಹೆಸ್ಕಾಂನ ಇಬ್ಬರು ಸೆಕ್ಷನ್ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೆಸ್ಕಾಂ ಲೋಳುಸರ ಸೆಕ್ಷನ್ ಆಫೀಸರ್ ಪ್ರಕಾಶ್ ವಿರೂಪಾಕ್ಷ ಪರೀಟ್ ಮತ್ತು ಮೇಲ್ವಿಚಾರಕ ಮಲ್ಲಯ್ಯ ಕುಮಾರಸ್ವಾಮಿ ಹಿರೇಮಠ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕು ಅರಂಭಾವಿ ಗ್ರಾಮದ ನಿವಾಸಿ ಆನಂದ ಉದ್ದಪ್ಪ ತಮ್ಮ ಜಮೀನಿನಲ್ಲಿರುವ …
Read More »ಲಾರಿ- ಆಟೋ ನಡುವೆ ಭೀಕರ ಅಪಘಾತ ; ಮದುವೆಗೆ ಬಟ್ಟೆ ತರಲು ಹೊರಟ್ಟಿದ್ದ ಆರು ಜನರು ಸಾವು !
ತೆಲಂಗಾಣ : ಲಾರಿ- ಆಟೋ ನಡುವೆ ಭೀಕರ ರಸ್ತೆ ಅಪಘಾತ ಸಂಭಿಸಿದ್ದು, ಸ್ಥಳದಲ್ಲೇ ಆರು ಜನರು ಮೃತಪಟ್ಟಿರುವ ಘಟನೆ ಮೆಹಬೂಬಾಬಾದ್ ಜಿಲ್ಲೆಯ ಗುಡೂರ್ ವಲಯದ ಮರ್ರಿಮಿಟ್ಟದಲ್ಲಿ ಇಂದು ನಡೆದಿದೆ. ಮೃತರು ಒಂದೇ ಕುಟುಂಬದವರಾಗಿದ್ದು, ಮದುವೆಗೆ ಬಟ್ಟೆ ತರಲು ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ವದು ಸೇರಿ ಆಟೋದಲ್ಲಿ ಆರು ಮಂದಿ ಇದ್ದರು ಎನ್ನಲಾಗಿದೆ. ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಥಳಕ್ಕೆ ಪೊಲೀಸರು …
Read More »ಬೆಳಗಾವಿ TAPMS ನಿರ್ದೇಶಕ ಚುನಾವಣೆ: ಆಶಿಫ್ ಮುಲ್ಲಾಗೆ ಭರ್ಜರಿ ಜಯ
ಬೆಳಗಾವಿ: ತಾಲೂಕಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಮಿತಿ(ಟಿಎಪಿಎಂಎಸ್) ದಿಂದ ಎಂಪಿಎಂಸಿಯ ನಿರ್ದೇಶಕ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾರಿಹಾಳದ ಆಶಿಫ್ ಮುಲ್ಲಾ 9 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಪ್ರತಿ ಸ್ಪರ್ಧಿ ಶಿವನಗೌಡ ಪಾಟೀಲ್ 6 ಮತಗಳ ಪಡೆದು ಪರಾಭವಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಎಂ.ಎಸ್. ಗೌಡಪ್ಪಗೋಳ ಅವರು ಕಾರ್ಯನಿರ್ವಹಿಸಿದರು. ಚುನಾವಣೆ ಗೆಲುವಿಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಟಿಎಪಿಎಂಎಸ್ …
Read More »