ಬೆಂಗಳೂರು: 2021ನೇ ಜೂನ್ ಮಾಹೆಯಲ್ಲಿ ನಡೆಯುವ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ,ಅನುದಾನ ರಹಿತ ಶಾಲಾ/ ಕಾಲೇಜುಗಳಿಂದ ಹಾಜರಾಗುವ ಅರ್ಹ ಶಾಲ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್ಲೈನ್ ಮುಖಾಂತರ ನೋಂದಾಯಿಸಲು ಹಾಗೂ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಣೆ ಮಾಡಲು ಹೊಸ ಅಧಿಸೂಚನೆಯನ್ನು ಹೊರಡಿಸಲಾಗಿದೆ.
Read More »ಕುರಿ ಕಾಯಲು ತೋಳ ಬಿಟ್ಟಂತೆ: ಎಚ್ಡಿಕೆ ವಾಗ್ದಾಳಿ
ಬೆಂಗಳೂರು: ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಜಮೀನು ಹಂಚಿಕೆಯಲ್ಲಿ ₹ 500 ಕೋಟಿ ಮೊತ್ತದ ಅವ್ಯಹಾರ ನಡೆದಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳುತ್ತಿರುವುದು ಕುರಿ ಕಾಯಲು ತೋಳ ಬಿಟ್ಟಂತೆ ಇದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ವಿಶ್ವನಾಥ್ ಈಗ ಬಿಡಿಎ …
Read More »‘ಅನ್ನಭಾಗ್ಯ’ಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್
ಬೆಂಗಳೂರು: ‘ಅನ್ನಭಾಗ್ಯ’ಕ್ಕೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಅನ್ನು ಜಾರಿಗೆ ತರಲು ಮುಂದಾಗಿದ್ದು, ಈ ನಡುವೆ ರಾಜ್ಯ ಸರ್ಕಾರ ಹಾಗೂ ನಾಗರೀಕ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ವಿರುದ್ದ ಖುದ್ದು ಬಿಜೆಪಿ ನಾಯಕರುಗಳೇ ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಫ್ರಿಡ್ಜ್ ಹಾಗೂ ವಾಹನಗಳು ಇದ್ದೇ ಇರುತ್ತವೆ, ಸರ್ಕಾರ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಟಿವಿ ಸಹಕಾರಿಯಾಗಲಿದೆ ಅವೇ ಇರಬಾರದು …
Read More »ಮಾರುಕಟ್ಟೆಯಲ್ಲಿ ಓಡಾಡ್ತಿವೆ 50, 200ರೂ. ಮುಖಬೆಲೆಯ ʼನಕಲಿ ನೋಟುʼಗಳು, ಈ ರೀತಿ ಚೆಕ್ ಮಾಡಿ ತಗೊಳ್ಳಿ..!
ನವದೆಹಲಿ: 50 ಮತ್ತು 200 ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳು ಚಲಾವಣೆ ಆಗ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಗ್ಗೆ ಮಾಹಿತಿ ನೀಡಿದೆ. ಇನ್ನು ನಕಲಿ ನೋಟುಗಳನ್ನ ಹೇಗೆ ಗುರುತಿಸಬೇಕು ಎನ್ನುವುದ್ರ ಬಗ್ಗೆಯೂ ಸ್ಪಷ್ಟವಾಗಿ ತಿಳಿಸಿದೆ. ಆರ್ ಬಿಐ ಆರ್ಥಿಕ ಜಾಗೃತಿ ಸಪ್ತಾಹ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕ ಲಕ್ಷ್ಮೀಕಾಂತ್ ರಾವ್ ಮಹತ್ವದ ಮಾಹಿತಿ ನೀಡಿದ್ದಾರೆ. ನಕಲಿ ನೋಟು ಪತ್ತೆ ಮಾಡುವುದು …
Read More »ಉಮೇಶ ಕತ್ತಿಗೆ ಕ್ಲಾಸ್ ತೆಗೆದುಕೊಂಡ ಸಿಎಂ B.S.Y….!!!
ಬೆಂಗಳೂರು : ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿಕೆಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಲಾಸ್ ತೆಗೆದುಕೊಂಡಿದ್ದು ಇದರಿಂದ ಕತ್ತಿ ಗರಂ ಆಗಿದ್ದಾರೆ. ಟಿವಿ , ಪ್ರೀಡ್ಜ್, ಬೈಕ್ ಇದ್ದರೆ ಬಿಪಿಎಲ್ ಪಡಿತರ ಕಾರ್ಡ್ ರದ್ದುಗೊಳಿಸಲಾಗುತ್ತದೆ ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ವಿಪಕ್ಷ ಹಾಗೂ ಸ್ವಪಕ್ಷಿಯದಲ್ಲಿ ಮತ್ತು ರಾಜ್ಯದ ಜನರು ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದ ಸಚಿವರ ನಿರ್ಧಾರದಿಂದ ಸರ್ಕಾರಕ್ಕೆ ಕಪ್ಪು …
Read More »ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿದ ಸಿಎಂ ಯಡಿಯೂರಪ್ಪ
ವಿಜಯಪುರ: ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದಿಂದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದ್ದಾರೆ. ತಾಲೂಕಿನ ಬುರಣಾಪುರ ಮದಭಾವಿ ಗ್ರಾಮಗಳ ಬಳಿ 727 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿದೆ. 220 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದಲ್ಲಿ ಕಾಮಾಗಾರಿ ನಡೆಯುತ್ತದೆ. ಮೊದಲ ಹಂತದಲ್ಲಿ 95 ಕೋಟಿ ರೂ. ವೆಚ್ಚದಲ್ಲಿ ಇಂದಿನಿಂದ (ಫೆಬ್ರವರಿ 15) ಕಾಮಗಾರಿ ಆರಂಭವಾಗುತ್ತದೆ. 2010ರಂದು ಬಿ.ಎಸ್. ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ …
Read More »ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೆ ನಗದು ಪಾವತಿ ವ್ಯವಸ್ಥೆಗೆ ಆಗ್ರಹ
ಬೆಂಗಳೂರು,ಫೆಬ್ರವರಿ 15:ಕೊರೊನಾ ಲಾಕ್ಡೌನ್ನಿಂದಾಗಿ ನಮ್ಮ ಮೆಟ್ರೋ ಸಂಚಾರವನ್ನು ಹಲವು ತಿಂಗಳುಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಸೇವೆ ಪುನಾರಂಭಗೊಂಡಿದ್ದು, ಪ್ರತಿಯೊಬ್ಬರಿಗೂ ಕಾರ್ಡ್ ಪಡೆದು ಪ್ರಯಾಣಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಟೋಕನ್ ಹಾಗೂ ನಗದು ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಮೆಟ್ರೋ ರೈಲು ಸೇವೆ ಪಡೆಯಬೇಕಾದರೆ 50 ರೂ. ನೀಡಿ ಮೆಟ್ರೋ ಕಾರ್ಡ್ ಖರೀದಿಸಿದ ಬಳಿಕವಷ್ಟೇ ಸೇವೆ ಲಭ್ಯವಾಗಲಿದೆ.ಕಾರ್ಡ್ ಖರೀದಿ ವೇಳೆಯೂ ನಗದು ಸ್ವೀಕರಿಸುತ್ತಿಲ್ಲ, ಬದಲಾಗಿ ಕ್ರೆಡಿಟ್ ಮತ್ತು ಡೆಬಿಟ್ …
Read More »ವಾಯುಸೇನೆಗೂ ಕಾಲಿಟ್ಟ ಮುಧೋಳ ನಾಯಿಗಳು..!
ಬಾಗಲಕೋಟೆ: ರಾಜ್ಯದ ಪ್ರಸಿದ್ಧ ಮುಧೋಳ ನಾಯಿಗಳು ಈಗ ಭಾರತೀಯ ವಾಯುಸೇನೆಗೂ ಸೇರ್ಪಡೆಯಾಗಿದ್ದು ಈ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಳ ಮಾಡಿದೆ. ಭಾನುವಾರ ಎರಡು ಹೆಣ್ಣು ಸೇರಿದಂತೆ ನಾಲ್ಕು ಮುಧೋಳ ನಾಯಿಮರಿಗಳನ್ನು ಆಗ್ರಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಇವುಗಳನ್ನು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಕೆನಡಿ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ (ಸಿಆರ್ ಐಸಿ) ಪರವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಶುಕ್ರವಾರ ಐಎಎಫ್ ಗೆ ಹಸ್ತಾಂತರಿಸಿದರು. ಮುಧೋಳ ದಮನಕಾರಿ ನಾಯಿಗಳು …
Read More »ವಾಟ್ಸಾಪ್, ಫೇಸ್ಬುಕ್ಗೆ ಸುಪ್ರೀಂ ಕೋರ್ಟ್ನಿಂದ ನೋಟಿಸ್ ಜಾರಿ
ನವದೆಹಲಿ: ತನ್ನ ಹೊಸ ಖಾಸಗಿತನ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ವಾಟ್ಸಾಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್ ಬುಕ್ ಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ನಾಲ್ಕು ವಾರಗಳಲ್ಲಿ ಟೆಕ್ ದೈತ್ಯರಿಂದ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ. ಭಾರತದಲ್ಲಿ ವಾಟ್ಸಾಪ್ ತನ್ನ ಹೊಸ ಗೌಪ್ಯತಾ ನೀತಿಯನ್ನು ಜಾರಿಗೆ ತರದಂತೆ ನಿರ್ಬಂಧ ಹೇರಬೇಕು ಮತ್ತು ಐರೋಪ್ಯ ಒಕ್ಕೂಟ ಪ್ರದೇಶದಲ್ಲಿ ಬಳಕೆದಾರರಿಗೆ ಅನ್ವಯವಾಗುವ ಗೌಪ್ಯತಾ ನೀತಿಯನ್ನು …
Read More »ಅನುದಾನಕ್ಕಾಗಿ ಆಗ್ರಹಿಸಿ ಕಲ್ಯಾಣ ಕರ್ನಾಟಕದ 1500 ಶಾಲೆಗಳು ಬಂದ್..!
ಬೆಳಗಾವಿ, ಫೆ.15- ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ 1500 ಶಾಲೆಗಳು ಇಂದು ಬಂದ್ ಮಾಡಿ ಪ್ರತಿಭಟನೆ ನಡೆಸಿವೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ ಸೇರಿದಂತೆ ಆರು ಜಿಲ್ಲೆಗಳ 1500 ಶಾಲೆಗಳು ಅನುದಾನಕ್ಕೆ ಆಗ್ರಹಿಸಿ ಇಂದು ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದೆ. 2013-14ರಲ್ಲಿ …
Read More »