ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಸಲಗ’ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ದುನಿಯಾ ವಿಜಯ್ ಅಭಿಮಾನಿಗಳು ಸಲಗ ಹೆಸರಿನ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಒಬ್ಬರು ಕೈ ಮೇಲೆ ಟ್ಯಾಟೂ ಹಾಕಿಸಿದರೆ ಇನ್ನೊಬ್ಬರು ಎದೆ ಮೇಲೆ ಹಾಕಿಸಿಕೊಂಡು ತಮ್ಮ ಅಭಿಮಾನ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಸೇರಿದಂತೆ ಡಾಲಿ ಧನಂಜಯ್ ಹಾಗೂ ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಕೆ.ಪಿ. ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ …
Read More »ಇಂದು ಐಪಿಎಲ್ ಮಿನಿ ಹರಾಜು; 61 ಸ್ಥಾನಕ್ಕೆ 292 ಕ್ರಿಕೆಟಿಗರ ರೇಸ್
ಚೆನ್ನೈ: ಬಹು ನಿರೀಕ್ಷೆಯ 14ನೇ ಐಪಿಎಲ್ ಪಂದ್ಯಾವಳಿಗಾಗಿ ಗುರುವಾರ ಚೆನ್ನೈಯಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇಲ್ಲಿನ “ಐಟಿಸಿ ಗ್ರ್ಯಾಂಡ್ ಚೋಳ ಹೊಟೇಲ್’ನಲ್ಲಿ ಅಪರಾಹ್ನ ಮೂರರಿಂದ ಹರಾಜು ಆರಂಭವಾಗಲಿದ್ದು, ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನಲ್ಲಿರಲಿದೆ. ಎಲ್ಲ ತಂಡಗಳು ತಮ್ಮ ಸೀಮಿತ ಮೊತ್ತದ ಚೌಕಟ್ಟಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಲು ಪೈಪೋಟಿಗೆ ಇಳಿಯಲಿವೆ. 8 ಫ್ರಾಂಚೈಸಿಗಳಿಗೆ ಒಟ್ಟು 61 ಆಟಗಾರರ ಅಗತ್ಯವಿದೆ. ರೇಸ್ನಲ್ಲಿರುವವರು 292 ಮಂದಿ. ಇದರಲ್ಲಿ ಭಾರತದ 164, …
Read More »ವರ್ಷಾಂತ್ಯಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಕೋವಿಡ್-19 ಲಸಿಕೆ ಲಭ್ಯ
ಕೋವಿಡ್-19 ಲಸಿಕೆ ಕಾರ್ಯಕ್ರಮ ಮೊದಲ ಹಂತ ಚಾಲ್ತಿಯಲ್ಲಿರುವಂತೆಯೇ ದೇಶಾದ್ಯಂತ ಈ ಲಸಿಕೆಯು ವ್ಯಾಪಕವಾಗಿ ಯಾವಾಗ ಲಭ್ಯವಾಗಲಿದೆ ಎಂಬ ಪ್ರಶ್ನೆಗಳು ಉದ್ಭವವಾಗತೊಡಗಿವೆ. ವರ್ಷಾಂತ್ಯ ಅಥವಾ ಅದಕ್ಕೂ ಮುನ್ನವೆ ಈ ಲಸಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ ಎಂದು ಏಮ್ಸಕ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. ಬುಧವಾರ ಕೋವಿಡ್-19ನ ಎರಡನೇ ಡೋಸ್ ಹಾಕಿಸಿಕೊಂಡ ಗುಲೇರಿಯಾ, “ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 50 ವರ್ಷ ದಾಟಿದ ಅಶಕ್ತ ಜನರಿಗೆ ಲಸಿಕೆ …
Read More »ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಸುಟ್ಟು ಕೊಂಡಿದ್ದ ಮೂವರ ಬಂಧನ
ಅಥಣಿ – ನೀರಿನ ಪಾಳಿಗಾಗಿ ಜಗಳವಾಡಿ, ಮನೆಗೆ ಬೆಂಕಿ ಹಚ್ಚಿ ಇಬ್ಬರನ್ನು ಸುಟ್ಟು ಕೊಂಡಿದ್ದ ಮೂವರನ್ನು ಬಂಧಿಸಲಾಗಿದೆ. ಶಂಕರ ಸದಾಶಿವ ಮಾದರ, ಸದಾಶಿವ ಸಿದ್ರಾಮ ಮಾದರ, ಸುನೀಲ ಸದಾಶಿವ ಮಾದರ (ಸಾ|| ಎಲ್ಲರೂ ಕೊಕಟನೂರ) ಬಂಧಿತರು. ಮಹಾದೇವ ಸಿದ್ರಾಮ ಮಾದರ (ವಯಾ 51 ವರ್ಷ ಸಾ|| ಕೊಕಟನೂರ) ಇವನು ಹಾಗೂ ಸದಾಶಿವ ಸಿದ್ರಾಮ ಮಾದರ (ಸಾ|| ಕೊಕಟನೂರ) ಇವರಿಬ್ಬರೂ ಖಾಸ ಅಣ್ಣತಮ್ಮಂದಿರು. ಇವರ ತಂದೆ ಸಿದ್ರಾಮ ರಾಮಪ್ಪ ಮಾದರ ಇವರ …
Read More »ವ್ಯಾಪಾರದಲ್ಲಿ ಬಂದ ಹಣವನ್ನೆಲ್ಲ ಪೆಟ್ಟಿಗೆಯಲ್ಲಿ ತುಂಬಿಟ್ಟ ಪರಿಣಾಮ ಲಕ್ಷಾಂತರ ರೂಪಾಯಿ ಗೆದ್ದಲು ಹಿಡಿದು ಹಾಳಾಗಿರುವ ಘಟನೆ
ಹೈದರಾಬಾದ್: ವ್ಯಾಪಾರದಲ್ಲಿ ಬಂದ ಹಣವನ್ನೆಲ್ಲ ಬ್ಯಾಂಕ್ ನಲ್ಲಿ ಠೇವಣಿಯಿಡದೇ ಪೆಟ್ಟಿಗೆಯಲ್ಲಿ ತುಂಬಿಟ್ಟ ಪರಿಣಾಮ ಲಕ್ಷಾಂತರ ರೂಪಾಯಿ ಗೆದ್ದಲು ಹಿಡಿದು ಹಾಳಾಗಿರುವ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಮೈಲಾವರಂ ನಿವಾಸಿ ಬಿಜ್ಲಿ ಚಾಮಲಯ್ಯ ಹಂದಿ ವ್ಯಾಪಾರಿಯಾಗಿದ್ದು, ತಾವು ದುಡಿದ ಹಣವನ್ನೆಲ್ಲ ಬ್ಯಾಂಕ್ ನಲ್ಲಿಡದೇ ಶೇಖರಿಸಿ ಪೆಟ್ಟಿಗೆಯಲ್ಲಿ ತುಂಬಿಟ್ಟಿದ್ದಾರೆ. ಹಣ ಸುರಕ್ಷಿತವಾಗಿದೆಯೇ ಎಂಬುದನ್ನೂ ನೋಡಿಲ್ಲ. ವರ್ಷದ ಬಳಿಕ ಪೆಟ್ಟಿಗೆ ತೆಗೆದು ನೋಡಿದಾಗ ಇದೀಗ ಹಣ ಗೆದ್ದಲು ತಿಂದು ನಾಶವಾಗಿದೆ. ಇದರಿಂದ ಬೇಜಾರಾದ …
Read More »ರಾಜ್ಯದ ಲೋಕಸಭೆಯ ಸದಸ್ಯರಿಗೆ ಕನ್ನಡ ಕ್ರಿಯಾ ಸಮಿತಿ ಪತ್ರ
ಇದೇ ರಾಜ್ಯದ ಲೋಕಸಭೆಯ ಸದಸ್ಯರಿಗೆ ಕನ್ನಡ ಕ್ರಿಯಾ ಸಮಿತಿ ಪತ್ರಇದೇ 13 ರಂದುಮಹಾರಾಷ್ಟ್ರದ ಶಿವಸೇನಾಸಂಸದಶೆವಾಳೆ ಅವರು ಲೋಕಸಭೆಯಲ್ಲಿ ಗಡಿವಿವಾದ ಪ್ರಸ್ತಾಪಿಸಿದಾಗ ಕರ್ನಾಟಕದ ಸಂಸದರು ಮೌನ ವಹಿಸಿದ್ದನ್ನು ಪ್ರತಿಭಟಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಸಮಿತಿಯು ಇಂದು ಎಲ್ಲ ಸದಸ್ಯರಿಗೆ ಪತ್ರವೊಂದನ್ನು ಇಮೇಲ್ ಮೂಲಕ ಕಳಿಸಿದೆ. MP 17-2-21 13 ರಂದುಮಹಾರಾಷ್ಟ್ರದ ಶಿವಸೇನಾ ಸಂಸದಶೆವಾಳೆ ಅವರುಲೋಕಸಭೆಯಲ್ಲಿ ಗಡಿವಿವಾದ ಪ್ರಸ್ತಾಪಿಸಿದಾಗ ಕರ್ನಾಟಕದ ಸಂಸದರು ಮೌನ ವಹಿಸಿದ್ದನ್ನು ಪ್ರತಿಭಟಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ …
Read More »ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ರೂಗಳ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಮೂಡಲಗಿ ತಾಲೂಕಿನ ಅರಭಾವಿ (ಹಟ್ಟಿಗುಡ್ಡ) ಪಟ್ಟಣದ ಕುತುಬಸಾಬ ಬಾಗವಾನ ಅವರ ವಾರಸುದಾರರಿಗೆ ಇಂಧನ ಇಲಾಖೆಯಿಂದ 5ಲಕ್ಷ ರೂಗಳ ಪರಿಹಾರಧನದ ಚೆಕ್ನ್ನು ನಗರದ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಕೆಎಮ್ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಧನ ಇಲಾಖೆಯಿಂದ ಮಂಜೂರಾದ ಪರಿಹಾರ ಧನವನ್ನು ಕುಟುಂಬದವರು ಸದ್ಭಳಕೆ ಮಾಡಿಕೊಳ್ಳಬೇಕು. ಈ ಹಣವನ್ನು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಬ್ಯಾಂಕ್ನಲ್ಲಿ ಠೇವಣಿಯಾಗಿಟ್ಟು …
Read More »ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಖಂಡಿತ ನಿಜ. ಕಾಂಗ್ರೆಸ್ ನ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ:
ವಿಜಯಪುರ : ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಖಂಡಿತ ನಿಜ. ಕಾಂಗ್ರೆಸ್ ನ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೊಸ ಬಾಂಬ್ ಹಾಕಿದ್ದಾರೆ. ಇಲ್ಲನ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಆದ್ರೆ ಸಧ್ಯ ನಮಗೆ ಅವಶ್ಯಕತೆ ಇಲ್ಲ ಎಂದು ನಾವೇ ಸುಮ್ಮನಾಗಿದ್ದೀವಿ, ಆದರೂ ಅವರೇ ನಮಗೆ ಕೇಳ್ತಿದ್ದಾರೆ ಎಂದರು. ಕಾಂಗ್ರೆಸ್ನಲ್ಲಿ ಅಸಮಧಾನವಿದ್ದಂತೆ ಕಾಣ್ತಿದೆ, ಮುಂದೆ ಚುನಾವಣೆಯಲ್ಲಿ ಅವರನ್ನ …
Read More »ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆ…?
ನವದೆಹಲಿ, ಫೆಬ್ರವರಿ 17: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಬುಧವಾರ(ಫೆ.17) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತವಾಗಿ ಒಂಭತ್ತನೇ ದಿನದಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಬುಧವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಲಾ 25 ಪೈಸೆ ಏರಿಕೆ ಕಂಡಿದೆ. ರಾಜಸ್ಥಾನದಲ್ಲಿ ಅತಿ …
Read More »ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಟೆಲಿಕಾಂ ವಲಯಕ್ಕೆ ಪಿಎಲ್ಐ ಯೋಜನೆ ವಿಸ್ತರಣೆ: ರವಿಶಂಕರ್ ಪ್ರಸಾದ್
ದೆಹಲಿ: ಕೇಂದ್ರ ಸಚಿವ ಸಂಪುಟವು ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಉತ್ತೇಜನಕ್ಕಾಗಿ ಟೆಲಿಕಾಂ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳಿಗೆ ₹12,195 ಕೋಟಿ ಮೌಲ್ಯದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ (production linked incentive – PLI) ನೀಡಲು ಅನುಮತಿ ನೀಡಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸೃತಿ ಇರಾನಿ ಮತ್ತು ರವಿಶಂಕರ್ ಪ್ರಸಾದ್ ಅವರು ಬುಧವಾರ ಸಚಿವ ಸಂಪುಟದ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ …
Read More »