Breaking News

ಹುಬ್ಬಳ್ಳಿ ಮತ್ತು ವಾರಾಣಸಿ ನಿಲ್ದಾಣಗಳ ನಡುವೆ ಮೂರು ಟ್ರಿಪ್ ವಿಶೇಷ ರೈಲು ಸಂಚಾರ ಮಾಡಲಿದ್ದು, ಅದರ ಮಾಹಿತಿ ಇಲ್ಲಿದೆ.

ಹುಬ್ಬಳ್ಳಿ: ಕುಂಭಮೇಳದ ವೇಳೆ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ (ಎಸ್‌ಎಸ್‌ಎಸ್) ಮತ್ತು ಉತ್ತರ ಪ್ರದೇಶದ ವಾರಾಣಸಿ ನಿಲ್ದಾಣಗಳ ನಡುವೆ 3 ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ವಿವರಗಳು ಈ ಕೆಳಗಿನಂತಿವೆ: ಹುಬ್ಬಳ್ಳಿ – ವಾರಾಣಸಿ ನಿಲ್ದಾಣಗಳ ನಡುವೆ 3 ಟ್ರಿಪ್ ವಿಶೇಷ ರೈಲು (07383/84) ಸಂಚಾರ ರೈಲು ಸಂಖ್ಯೆ 07383 ಎಸ್‌ಎಸ್‌ಎಸ್ ಹುಬ್ಬಳ್ಳಿ – ವಾರಾಣಸಿ ವಿಶೇಷ …

Read More »

ಮಹಾ ಕುಂಭಮೇಳಕ್ಕೆ ತೆರಳಿದ್ದ ಕೊಪ್ಪಳದ ಯುವಕ ಸಾವು

ಕೊಪ್ಪಳ: ಮಹಾ ಕುಂಭಮೇಳಕ್ಕೆ ತೆರಳಿದ್ದ ಯುವಕನೋರ್ವ ವಿದ್ಯುತ್ ತಗುಲಿ ಗೋರಖ್​​ಪುರ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಜರುಗಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪುರ ನಿವಾಸಿ ಪ್ರವೀಣ್ ಹೊಸಮನಿ(27) ಮೃತರು. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವೀಣ್ ಕಳೆದ 15 ದಿನದ ಹಿಂದೆಯೇ ಮಹಾ ಕುಂಭಮೇಳಕ್ಕೆ ತೆರಳಿದ್ದರು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನೂ ಮಾಡಿದ್ದರು. ಬಳಿಕ ರಾಮನ …

Read More »

ಸರ್ವರ್ ಡೌನ್ : ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಗುತ್ತಿಲ್ಲ ಕೆಲಸ

 : ಕಳೆದ 10 ದಿನಗಳಿಂದ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವುದೇ ಕೆಲಸ ಆಗದೇ ಜನರು ಪರದಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಸರ್ವರ್ ಡೌನ್ ಆಗುತ್ತಿರುವುದರಿಂದ ಯಾವ ನೋಂದಣಿ ಕಾರ್ಯವೂ ಆಗದೇ ಜನರು ನಿತ್ಯ ಅಲೆದಾಡುತ್ತಿದ್ದಾರೆ. ಯಾವುದೇ ನೋಂದಣಿ ಆಗಲಿ, ಇಸಿಯಾಗಲಿ ಸಾಧ್ಯವಾಗದೆ ಜನರು ಪರದಾಡಿದ್ದು, ಕಳೆದ 10 ದಿನಗಳಿಂದಲೂ ಈ ಸಮಸ್ಯೆ ಮುಂದುವರೆದಿದೆ. ರಾಜ್ಯಾದ್ಯಂತ ಸರ್ವರ್ ಸಮಸ್ಯೆ ತಲೆದೂರಿದ ಪರಿಣಾಮ ಈ …

Read More »

ಸಿದ್ದರಾಮಯ್ಯ ನವೆಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು: ಅಶೋಕ್

ಸಿದ್ದರಾಮಯ್ಯ ನವೆಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು: ಅಶೋಕ್ ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸೂತಕದ ಛಾಯೆ ಆವರಿಸಿದೆ. ಮೈಕ್ರೋಫೈನಾನ್ಸ್ ಹಾವಳಿಯಿಂದ ಜನರು ಸಾಲದ ಸುಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಹಾಸನದ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋಫೈನಾನ್ಸ್​ ಸಂಸ್ಥೆಗಳಿಂದ ಸುಮಾರು 25ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸರಿಸುಮಾರು 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. …

Read More »

ವಿಜೃಂಭಣೆಯಿಂದ ನಡೆದ ಪಂಪಾ ವಿರೂಪಾಕ್ಷೇಶ್ವರ ರಥೋತ್ಸವ

ಗಂಗಾವತಿ: ಹಿರೇಜಂತಕಲ್‌ನ ಐತಿಹಾಸಿಕ ಪಂಪಾ ವಿರೂಪಾಕ್ಷೇಶ್ವರನಿಗೆ ರಥಸಪ್ತಮಿ ಜಾತ್ರೆಯ ಅಂಗವಾಗಿ ಇಂದು ಸಂಜೆ ಗೋಧೂಳಿ ಸಮಯದಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ದೇಗುಲದ ಆವರಣದಲ್ಲಿ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕಾಯಿ ಒಡೆದು ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಟ್ಟರು. ಸ್ಥಳೀಯ ಪ್ರಮುಖರು ರಥೋತ್ಸವಕ್ಕೆ ಚಾಲನೆ ನೀಡಿದರು. ದೇಗುಲದ ಆವರಣದಿಂದ ಹೊರಟ ರಥ, ಆಂಜನೇಯನ ಪಾದಗಟ್ಟೆ ತಲುಪಿ ವಾಪಸ್ ದೇಗುಲಕ್ಕೆ ಆಗಮಿಸಿತು. ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ, ಹರ್ಷೋದ್ಘಾರದ ಮಧ್ಯೆ …

Read More »

ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ರಸ್ತೆ ಸಾರಿಗೆ ನೌಕರರಿಗೆ ಉಚಿತ ಓರಲ್‌ ಹಾಗೂ ಸ್ತನಕ್ಯಾನ್ಸರ್‌ ತಪಾಸಣೆ

ಬೆಂಗಳೂರು: ವಿಶ್ವ ಕ್ಯಾನ್ಸರ್‌ ದಿನಾಚರಣೆ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹಾಗೂ ಎಚ್‌ಸಿಜಿ ಕಾನ್ಸರ್‌ ಕೇಂದ್ರದ ಸಹಯೋಗದೊಂದಿಗೆ ಒಂದು ಸಾವಿರಕ್ಕೂ ಅಧಿಕ ರಸ್ತೆ ಸಾರಿಗೆ ನೌಕರರಿಗೆ ಉಚಿತ ಓರಲ್‌ ಹಾಗೂ ಸ್ತನಕ್ತಾನ್ಸರ್‌ ತಪಾಸಣಾ ನಡೆಸಲಾಯಿತು. ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಹಾಗೂ ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್ ಆರೋಗ್ಯ ತಪಾಸಣಾ ಮೇಳಕ್ಕೆ ಚಾಲನೆ ನೀಡಿದರು. ಈ ಕುರಿತು ಮಾತನಾಡಿದ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್, “ಎಚ್‌ಸಿಜಿ …

Read More »

ನಿಂತುಹೋಗಿದ್ದ ಪ್ರಶಸ್ತಿಗಳಿಗೆ ಮರುಜೀವ

  “ಈ ಹಿಂದಿನ ಸರ್ಕಾರ ಪ್ರತಿಷ್ಠಿತ ಟಿಎಸ್ಆರ್ ಪ್ರಶಸ್ತಿ, ಮೊಹರೆ ಹನುಮಂತರಾಯ ಪ್ರಶಸ್ತಿ, ಪರಿಸರ ಪತ್ರಿಕಾ ಪರಿಷತ್ ನೀಡುವ ಪ್ರಶಸ್ತಿಯನ್ನು ಅನೇಕ ವರ್ಷಗಳಿಂದ ನೀಡಿಲ್ಲ. ಅವರನ್ನು ಟೀಕಿಸಿ ಯಾವುದೇ ಪ್ರಯೋಜನವಿಲ್ಲ. ನಮ್ಮ ಸರ್ಕಾರ ಮತ್ತೇ ಇದಕ್ಕೆ ಜೀವ ನೀಡಿದೆ. ರಘುರಾಮ್ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂಬ ಬೇಡಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ” ಎಂದು ಹೇಳಿದರು. …

Read More »

ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಬೆಂಗಳೂರು : “ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚುವ ಕಾರ್ಯಕ್ರಮ ರೂಪಿಸಲಾಗುವುದು. ಈ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ 2023 ಮತ್ತು 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. “ನಮ್ಮ ಸರ್ಕಾರ ಪತ್ರಕರ್ತರಿಗೆ ನೀಡಿರುವ ಯೋಜನೆಗಳ ಬಗ್ಗೆ ಈಗಾಗಲೇ ಪ್ರಸ್ತಾಪ ಮಾಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ …

Read More »

ಜಮಖಂಡಿ ತಾಲೂಕ ಆಸ್ಪತ್ರೆ ಹಾಗೂ ಆವರಣದಲ್ಲಿ ಕಣ್ಮರೆಯಾಗಿರುವ ಸ್ವಚ್ಛತೆ ಜಮಖಂಡಿ ತಾಲೂಕ ಆಸ್ಪತ್ರೆಯಲ್ಲಿ ಅಶುಚಿತ್ವ

ಜಮಖಂಡಿ ತಾಲೂಕ ಆಸ್ಪತ್ರೆ ಹಾಗೂ ಆವರಣದಲ್ಲಿ ಕಣ್ಮರೆಯಾಗಿರುವ ಸ್ವಚ್ಛತೆ ಜಮಖಂಡಿ ತಾಲೂಕ ಆಸ್ಪತ್ರೆಯಲ್ಲಿ ಅಶುಚಿತ್ವ ಸ್ವಚ್ಛತೆ ಕಾಣದ ಶೌಚಾಲಯಗಳು ಸ್ವಚ್ಛತೆ ಕಾಪಾಡದ ಆಸ್ಪತ್ರೆ ಸಿಬ್ಬಂದಿಗಳು ಸಿಬ್ಬಂದಿಗಳಿಗೆ ರೋಗಿಗಳು ಹಾಗೂ ಸಾರ್ವಜನಿಕರಿಂದ ಹಿಡಿ ಶಾಪ ಜಮಖಂಡಿ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯವಾಗಿದ್ದು ರೋಗಿಗಳು ಪರದಾಡುವಂತಾಗಿದೆ. ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ   ಜಮಖಂಡಿ ತಾಲೂಕ ಆಸ್ಪತ್ರೆಯಲ್ಲಿ ಸ್ವಚ್ಛ ತೆ ದೂರಾ ದೂರ. ಮೂಗು ಕಣ್ಣು ಮುಚ್ಚಿಕೊಂಡೇ ತಿರುಗಾಡುವ ಪರಿಸ್ಥಿತಿ ಶೌಚಾಲಯಗಳಂತೂ …

Read More »

ಗಾಂಧೀಜಿ ಕಲ್ಪನೆಯ ಸ್ವದೇಶಿ, ಗ್ರಾಮ ಸ್ವರಾಜ್ ಬಲಪಡಿಸಲು ಖಾದಿ ಖರೀದಿಸಿ: ಚನ್ನರಾಜ ಹಟ್ಟಿಹೊಳಿ

ಬೈಲಹೊಂಗಲ: ಕರ್ನಾಟಕ ಖಾದಿ ಗ್ರಾಮದ್ಯೋಗ ಸಂಯುಕ್ತ ಸಂಘದ ಸಹಯೋಗದಲ್ಲಿ ಬೈಲಹೊಂಗಲ ನಗರದಲ್ಲಿ ಆರಂಭಿಸಲಾಗಿರುವ ‘ಖಾದಿಲೂಮ್’ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ಕೈಯಿಂದ ನೇಯ್ದ ಖಾದಿ ಹಾಗೂ ರೇಷ್ಮೆ ಬಟ್ಟೆಗಳು ಮಳಿಗೆಯಲ್ಲಿ ಲಭ್ಯವಿವೆ. ಖಾದಿ ಬಟ್ಟೆಗಳಿಗೆ ಪ್ರಾಮುಖ್ಯತೆ ನೀಡಲು ಈ ಮಳಿಗೆ ಆರಂಭಿಸಲಾಗಿದ್ದು, ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಸ್ವದೇಶಿ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಖಾದಿ ಖರೀದಿಸೋಣ. ತನ್ಮೂಲಕ ನೇಕಾರರ ಆರ್ಥಿಕ …

Read More »