Breaking News

ಒನ್ ನೇಷನ್, ಒನ್ ರೇಷನ್ ‘ ಯೋಜನೆ : ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು : ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಒಂದು ರಾಷ್ಟ್ರ, ಒಂದು ಪಡಿತರ ಯೋಜನೆಯಡಿ ರಾಜ್ಯದಲ್ಲಿ ಉದ್ಯೋಗ ಮತ್ತು ಇತರೆ ಜೀವನೋಪಾಯಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಬಂದಿರುವವರು ರಾಜ್ಯದ ಯಾವುದೇ ಸ್ಥಳದಲ್ಲಿ ಪಡಿತರ ಪಡೆಯಬಹುದು ಎಂದು ಆಹಾರ ಇಲಾಖೆ ತಿಳಿಸಿದೆ.   ಈ ಕುರಿತು ಮಾಹಿತಿ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಶಮ್ಲಾ ಇಕ್ಬಾಲ್, ಅಂತ್ಯೋದಯ ಅಥವಾ ಪಡಿತರ ಚೀಟಿ ಹೊಂದಿರುವವರು …

Read More »

ಸಿಎಂ ಯಡಿಯೂರಪ್ಪಗೆ ಪ್ರಧಾನಿ ಮೋದಿಯಿಂದ ಕಿರುಕುಳ! ಕೈ ಶಾಸಕ ಅಮರೇಗೌಡ ಗಂಭೀರ ಆರೋಪ

ಕೊಪ್ಪಳ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ರಾಜ್ಯದ 25 ಸಂಸದರನ್ನು ಕೂಡಾ ಪ್ರಧಾನಿ ಮೋದಿ ತನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಪ್ರಧಾನಿಗೆ ಕರ್ನಾಟಕ ಎಂದರೆ ಅಲರ್ಜಿ ಆಗಿದೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ತಾವಾಗಿಯೇ ಸಿಎಂ ಖುರ್ಚಿ ಖಾಲಿ ಮಾಡಲಿ ಎನ್ನುವ …

Read More »

ಅಂದಾಜು 2.5 ಕೋಟಿಯ ಚಿನ್ನದ ಕಹಾನಿಗೆ ಬೀಗ್ ಟ್ವಿಸ್ಟ್ : ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಕುಡಾ ಹಠಾತ್ ವರ್ಗಾವಣೆ

ಬೆಳಗಾವಿ: ಅಂದಾಜು 2.5 ಕೋಟಿಯ ಚಿನ್ನದ ಕಹಾನಿಗೆ ಬೀಗ್ ಟ್ವಿಸ್ಟ್ : ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಕುಡಾ ಹಠಾತ್ ವರ್ಗಾವಣೆ     ನಿನ್ನೆಯಷ್ಠೇ ರಾಜ್ಯವನ್ನು ಬೆಚ್ಚಿಬಿಳಿಸಿದ್ದ ಚಿನ್ನ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿಯೇ ಸರಕಾರ ಮೂವರು ಪೊಲೀಸ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಕಾರಿನಲ್ಲಿದ್ದ ಚಿನ್ನದ ಕದ್ದ ಕಿರಣ ಎಂಬಾತನು ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ಅವರ ಆಪ್ತ ಎಂಬ ಮಾತುಗಳು …

Read More »

ಗೋವಾದಲ್ಲಿ ಕೊರೋನಾ ಇಳಿಮುಖ: ಲಾಕ್ ಡೌನ್ ವಿಸ್ತರಣೆ

ಪಣಜಿ: ಗೋವಾ ರಾಜ್ಯದಲ್ಲಿ ಕರ್ಫ್ಯೂ ಲಾಕ್‍ಡೌನ್ ಮೇ 31 ರವೆಗೆ ವಿಸ್ತರಣೆ  ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಶುಕ್ರವಾರ ಮಂತ್ರಿಮಂಡಳ ಬೈಠಕ್‍ನನಂತರ ಲಾಕ್‍ಡೌನ್ ನಿರ್ಣಯವನ್ನು ಘೋಷಿಸಿದರು. ಗೋವಾ ರಾಜ್ಯಾದ್ಯಂತ ಜೀವನಾವಶ್ಯಕ ವಸ್ತುಗಳ ಮಾರಾಟದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾನ್ಹ 1 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ ವಿವಿಧ ಉದ್ಯೋಗ, ಕಛೇರಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಮೀನು ಮಾರುಕಟ್ಟೆಯನ್ನು ಬಂದ್ …

Read More »

ರಘುನಾಥ್ ಮೊಹಪಾತ್ರ ಸಾವಿನ ಬೆನ್ನಲ್ಲೇ ಮಕ್ಕಳೂ ಕೊರೊನಾಗೆ ಬಲಿ

ಭುವನೇಶ್ವರ: ರಾಜ್ಯಸಭೆಯ ಮಾಜಿ ಸದಸ್ಯ, ಖ್ಯಾತ ಶಿಲ್ಪಿ ರಘುನಾಥ್ ಮೊಹಪಾತ್ರ ಕೋವಿಡ್ ಗೆ ಬಲಿಯಾದ ಬೆನ್ನಲ್ಲೇ ಅವರ ಇಬ್ಬರು ಮಕ್ಕಳು ಕೂಡ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. ಮೇ 9ರಂದು ರಘುನಾಥ್ ಮೊಹಪಾತ್ರ ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದರು. ಇದೇ ಆಸ್ಪತ್ರೆಯಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಕಿರಿಯ ಮಗ ಒಡಿಶಾ ಕ್ರಿಕೆಟ್ ತಂಡದ ನಾಯಕ ಪ್ರಶಾಂತ್ ಮೊಹಪಾತ್ರ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಇದೇ ವೇಳೆ …

Read More »

ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಶುಕ್ರವಾರ ಆಟೋ ಚಾಲಕರಿಗೆ ರೇಷನ್ ಕಿಟ್ ಗಳನ್ನು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಬೆಳಗಾವಿ –  ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಶುಕ್ರವಾರ ಆಟೋ ಚಾಲಕರಿಗೆ ರೇಷನ್ ಕಿಟ್ ಗಳನ್ನು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಕೊರೋನಾ ಸಂದರ್ಭದಲ್ಲಿ ಯಾವುದೇ ದುಡಿಮೆಯಿಲ್ಲದೆ ಜನ ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕಿಂಚಿತ್ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಲಕ್ಷ್ಮಿ ತಾಯಿ ಫೌಂಡೇಶನ್  ಈ ನೆರವು ನೀಡುತ್ತಿದೆ. ಆಸ್ಪತ್ರೆಯಲ್ಲಿರುವ ಎಷ್ಟೋ ರೋಗಿಗಳಿಗೆ, ಅವರ ಸಹಾಯಕರಿಗೆ ಆಹಾರ, ನೀರು ಸಿಗುತ್ತಿಲ್ಲ. ಹಾಗಾಗಿ ಅವರಿಗೆ ಆಹಾರದ ಕಿಟ್ , ನೀರಿನ ಬಾಟಲ್, ಮಾತ್ರೆಯ ಕಿಟ್ …

Read More »

ರಾಜ್ಯದಲ್ಲಿ ಜೂನ್ 7ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ.: B.S.Y.

ಬೆಂಗಳೂರು – ರಾಜ್ಯದಲ್ಲಿ ಜೂನ್ 7ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿರಿಯ ಸಚಿವರ ಸಭೆಯ ನಂತರ ಈ ವಿಷಯ ತಿಳಿಸಿದ್ದಾರೆ. ಹಳ್ಳಿಗಳಿಗೆ ಹರಡಿರುವುದರಿಂದ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಠಿಣ ನಿರ್ಧಾರ ಇನಿವಾರ್ಯ ಎಂದು ಅವರು ತಿಳಿಸಿದ್ದಾರೆ. ಮೇ 14ರಿಂದ ಇನ್ನೂ 14 ದಿನ ಲಾಕ್ ಡೌನ್ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಈಗಿನ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೇ ಮುಂದುವರಿಯಲಿದೆ.

Read More »

ಪಾಸಿಟಿವ್ ಆಗಿದ್ದರೂ ಊರಲ್ಲಿ ಸುತ್ತಾಟ – ವ್ಯಕ್ತಿಯ ವಿರುದ್ಧ ಕೇಸ್ ದಾಖಲು

ಮಡಿಕೇರಿ: ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯೋರ್ವ ಗ್ರಾಮ ಮತ್ತು ನಗರಪ್ರದೇಶದಲ್ಲಿ ಸುತ್ತಾಡುತ್ತಿರುವುದರ ಬಗ್ಗೆ ಕೇಳಿ ಬಂದ ದೂರಿನ ಮೇರೆಗೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ನಿವಾಸಿ ಗಣೇಶ್ ಎಂಬುವವರಿಗೆ ಕಳೆದ ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತು. ಬಳಿಕ ಅವರನ್ನು ಮಡಿಕೇರಿ ಸಮೀಪ ಇರುವ ನವೋದಯ ಶಾಲೆ ಕೋವಿಡ್ …

Read More »

ಆರೋಗ್ಯ ಸಚಿವರ ಜೊತೆಯಲ್ಲಿ ಹೋಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಬ್ಲಾಕ್‍ಮೇಲ್

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ನೆಪದಲ್ಲಿ ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿವೆ ಎಂಬ ಆರೋಪಗಳ ಮಧ್ಯೆ ಹಿರಿಯ ಆರೋಗ್ಯಾಧಿಕಾರಿ ಹಣ ಹಾಗೂ ರೆಮ್ಡಿಸಿವಿರ್ ಔಷಧಿಗಳಿಗೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.   ಮೇ 13 ಹಾಗೂ ಮೇ 14 ರಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರ ಚಿಕ್ಕಬಳ್ಳಾಪುರ ಜಿಲ್ಲೆಯ ಭೇಟಿಯ ಸಮಯದಲ್ಲಿ ಜೊತೆಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು …

Read More »

ಹಳ್ಳಿಗಳಲ್ಲಿ ಕೊರೋನಾ 2ನೇ ಅಲೆ ಹರಡಲು ಸರ್ಕಾರದ ವೈಫಲ್ಯವೇ ಕಾರಣ : ಸಿದ್ದು

ಬೆಂಗಳೂರು, ಮೇ 21- ಕೊರೋನಾ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಮೊದಲನೆ ಅಲೆ ನಗರ ಪ್ರದೇಶದಲ್ಲಿ ಇತ್ತು. ಎರಡನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಸರ್ಕಾರದ ವೈಪಲ್ಯವೇ ಇದಕ್ಕೆ ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ರಾಜೀವ್ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಲೂ ಸರ್ಕಾರ ಎಚ್ಚೆತ್ತುಕೊಂಡು ಪರೀಕ್ಷೆಗಳನ್ನು ಸರಿಯಾಗಿ ಮಾಡುತ್ತಿಲ್ಲ, ವೈದ್ಯಕೀಯ ವ್ಯವಸ್ಥೆ ಸರಿ ಮಾಡಿಲ್ಲ. ಸುಳ್ಳು ಹೇಳುವುದೇ …

Read More »