ಲಕ್ನೋ: ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ. ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಇಟಾವಾ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಬೇಕೆಂದು ಎಲ್ಲ ಮದ್ಯದಂಗಡಿಗಳಿಗೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಬಾರ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ …
Read More »ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ.: ಆರ್.ವಿ.ದೇಶಪಾಂಡೆ
ಕಾರವಾರ : ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಡೀ ಜಗತ್ತಲ್ಲೂ ಸಾಂಕ್ರಾಮಿಕ ಕಡಿಮೆ ಆಗಬೇಕಿದೆ ಎಂದು ನಾನೂ ಪ್ರಾರ್ಥಿಸುತ್ತೇನೆ. ಆದರೆ ತಪಾಸಣೆ ಕಡಿಮೆ ಮಾಡಿದರೆ ಪಾಸಿಟಿವಿಟಿ ದರ ಕಡಿಮೆಯಾಗದೇ ಇರುತ್ತದಾ? ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನಿಸಿದ್ದಾರೆ. ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಅಲೆಯಲ್ಲಿ ವಸತಿನಿಲಯಗಳನ್ನೆಲ್ಲ ಬಳಸಿಕೊಂಡಿದ್ದರು. …
Read More »ಸಿ.ಎಂ. ರಕ್ಷಣೆಗೆ ಮಠಾಧೀಶರ ಮೇಲೆ ಪುತ್ರನ ಒತ್ತಡ : ಯತ್ನಾಳ
ವಿಜಯಪುರ : ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಉಳಿಸಲು ಅವರ ಮಗ ವಿಜಯೇಂದ್ರ ವೀರಶೈವ ಮಠಾಧೀಶರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಒಬ್ಬ ಮಠಾಧೀಶರೂ ಸಮಾಜ ಕಳಂಕಿತರ ಪರವಾಗಿ, ವಿಶ್ವಗುರು ಬಸವಣ್ಣನವರ ತತ್ವಕ್ಕೆ ವಿರುದ್ಧವಾದ ನಿಲುವು ತಳೆಯುವದಿಲ್ಲ ಎಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಮುಖ್ಯಮಂತ್ರಿ ವಿರುದ್ಧದ ತಮ್ಮ ಬಂಡಾಯ ಮುಂದುವರೆಸಿದ್ದಾರೆ. ಭಾನುವಾರ ಸಂಜೆ ತಮ್ಮ ಫೇಸ್‍ಬುಕ್‍ನಲ್ಲಿ ಈ …
Read More »ನಂದಿನಿ ಹಾಲು ಗ್ರಾಹಕರಿಗೆ ಬಂಪರ್ ಕೊಡುಗೆ: ಅದೇ ಬೆಲೆಗೆ ಹೆಚ್ಚುವರಿ ಹಾಲು
ಬೆಂಗಳೂರು: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆಎಂಎಫ್ ನಂದಿನಿ ಹಾಲು ಗ್ರಾಹಕರಿಗೆ ಒಂದು ತಿಂಗಳು ಹೆಚ್ಚುವರಿ ಹಾಲು ನೀಡಲಾಗುತ್ತದೆ. ಒಂದು ಲೀಟರ್ಗೆ 40 ಮಿ.ಲೀ. ಮತ್ತು ಅರ್ಧ ಲೀಟರಿಗೆ 20 ಎಂ.ಲೀ. ಹಾಲನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಎಲ್ಲ ಶ್ರೇಣಿಯ ನಂದಿನಿ ಹಾಲಿನ ಗ್ರಾಹಕರಿಗೆ ಹೆಚ್ಚುವರಿ ಹಾಲು ಒಂದು ತಿಂಗಳ ಕಾಲ ಪೂರೈಕೆಯಾಗಲಿದೆ. ಕೊರೋನಾ ಲಾಕ್ ಡೌನ್ ಕಾರಣದಿಂದ ಹೆಚ್ಚುವರಿ ಹಾಲು ಸಂಗ್ರಹವಾಗುತ್ತಿದೆ. ಇದರಿಂದಾಗಿ ಕೆಎಂಎಫ್ ವ್ಯಾಪ್ತಿಯ 14 ಹಾಲು ಒಕ್ಕೂಟ …
Read More »ದೇಹದಲ್ಲಿ ಕಡಿಮೆ ಆಮ್ಲಜನಕದ ಮಟ್ಟದ ಲಕ್ಷಣಗಳು ಯಾವುವು? ಇಲ್ಲಿದೆ ಮಾಹಿತಿ
COVID-19 ಸಾಂಕ್ರಾಮಿಕದ ಮಧ್ಯೆ, ಕಡಿಮೆ ಆಮ್ಲಜನಕದ ಮಟ್ಟದ ರೋಗಲಕ್ಷಣಗಳ ಬಗ್ಗೆ ಎಚ್ಚರವಾಗಿರಲು ಸರ್ಕಾರ ಜನರನ್ನು ಕೇಳಿದ್ದು, ಅದಕ್ಕೆ ಕುರಿತಾದಂತಹ ಮಾಹಿತಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಉಸಿರಾಟದ ತೊಂದರೆ, ಗೊಂದಲ, ಎಚ್ಚರಗೊಳ್ಳಲು ತೊಂದರೆ ಮತ್ತು ತುಟಿಗಳು ಅಥವಾ ಮುಖವನ್ನು ನೀಲಿ ಬಣ್ಣ ಮಾಡುವುದು ಮುಖ್ಯಲಕ್ಷಣಗಳಾಗಿವೆ. “ವಯಸ್ಕರಿಗೆ ಎದೆ ನೋವು ಕಾಣಿಸಿಕೊಳ್ಳಬಹುದು” ಎಂದು ಅದರಲ್ಲಿ ಹೇಳಲಾಗಿದೆ. ಹಾಗೆಯೇ, ಮಕ್ಕಳು ಮೂಗಿನ ಹೊಳ್ಳೆಗಳಲ್ಲಿ ಉಸಿರಾಡುವಾಗ ಕಷ್ಟಪಡುವುದು, ಅಥವಾ ಕುಡಿಯಲು ಅಥವಾ ತಿನ್ನಲು ಅಸಮರ್ಥತೆಯನ್ನು …
Read More »ಗೆಳತಿ ಮಲೈಕಾ ಮನೆ ಸಮೀಪದಲ್ಲೇ ವಿಲ್ಲಾ ಖರೀದಿಸಿದ ಅರ್ಜುನ್ ಕಪೂರ್; ಬೆಲೆ ಎಷ್ಟು?
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇತ್ತೀಚಿಗಷ್ಟೆ ಐಷಾರಾಮಿ ಮನೆ ಖರೀಸಿದ ಬೆನ್ನಲ್ಲೇ ಮತ್ತೋರ್ವ ನಟ ಅರ್ಜುನ್ ಕಪೂರ್ ಮನೆ ಖರೀದಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅರ್ಜುನ್ ಮುಂಬೈನಲ್ಲಿ ವಿಲ್ಲಾ ಕೊಂಡುಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂಬೈನ ಹೃದಯ ಭಾಗದಲ್ಲಿ ಅರ್ಜುನ್ ಕಪೂರ್ ಸ್ಕೈ ವಿಲ್ಲಾ ಖರೀದಿ ಮಾಡಿದ್ದಾರಂತೆ. ಈ ವಿಲ್ಲಾ ಮುಂಬೈನ ಬಾಂದ್ರಾದಲ್ಲಿರುವ ಗೆಳತಿ ಮಲೈಕಾ ಅರೋರ ಅವರ ಮನೆಯ ಸಮೀಪವೇ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅರ್ಜುನ್ …
Read More »ಅಭಿಮಾನಿ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ವಿರಾಟ್!
ಮುಂಬಯಿ : ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿ ಸುದ್ದಿಯಾಗಿದ್ದಾರೆ. ಇದು ಕನ್ನಡಿಗರಿಗೆ ಬಹಳ ಖುಷಿ ತಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಅಭಿಮಾನಿ, “ನಿಮಗೆ ಕನ್ನಡ ಮಾತ ನಾಡಲು ಮತ್ತು ಅರ್ಥಮಾಡಿ ಕೊಳ್ಳಲು ಬರುತ್ತದೆಯೇ?’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, “ಸ್ವಲ್ಪ ಸ್ವಲ್ಪ ಸರ್, ಬಟ್ ಡೋಂಟ್ ಅಂಡರ್‌ಸ್ಟಾಂಡ್‌ಎಟ್ ಆಲ್’ ಎಂದು ಉತ್ತರಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಅದರಲ್ಲೂ ಕೊಹ್ಲಿಯ ಈ …
Read More »ಕ್ರೇಜಿ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾದ ಕನ್ನಡಿಗ ಚಿತ್ರದ ಟೀಸರ್
ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಇಂದು ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅದರ ಪ್ರಯುಕ್ತ ಅವರ ಹೊಸ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ‘ ಕನ್ನಡಿಗ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಯುಟ್ಯೂಬ್ ನಲ್ಲಿ ಗುಣಭದ್ರ ಎಂಬ ವಿದ್ವಾಂಸನ ಪಾತ್ರದ ಟೀಸರ್ ಬಿಡುಗಡೆಯಾಗಿದೆ . ಅದು , ತಲೆಮಾರುಗಳಿಂದ ಕನ್ನಡ ಭಾಷೆ , ಪರಂಪರೆಯ ಉಳಿವಿಗಾಗಿ ಹೋರಾಡಿದ ಕುಟುಂಬದ ಸದಸ್ಯನ ಪಾತ್ರವಾಗಿದೆ. ಅಲ್ಲದೆ ಈ ಚಿತ್ರದ ಮೂಲಕ ಟಾಮ್ ಆಲ್ಟರ್ …
Read More »ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ; ಬಾಲಿವುಡ್ ಛಾಯಾಗ್ರಹಕನ ಮೇಲೆ ಪ್ರಕರಣ ದಾಖಲು
ಮುಂಬೈ : ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಾಲಿವುಡ್‌ನ ಪ್ರಸಿದ್ಧ ಛಾಯಾಗ್ರಾಹಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇ 26 ರಂದು, 28 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರಸಿದ್ಧ ಬಾಲಿವುಡ್ ಛಾಯಾಗ್ರಾಹಕ ಸೇರಿ 8 ಜನರ ವಿರುದ್ಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಮಾಡೆಲ್ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಐಪಿಸಿಯ 376 …
Read More »ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು
ಹುಬ್ಬಳ್ಳಿ: ಮದುವೆಯಾಗಿ ಎರಡು ಮಕ್ಕಳಿದ್ದರೂ ಪತ್ನಿ ತನ್ನ ಜೊತೆಗೆ ಇಲ್ಲದೇ ಬೇರೆಯವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ. ನಗರದ ಅಂಚಟಗೇರಿಯ ನಿವಾಸಿ ಬೂದಪ್ಪ ಕೋರಿಗೆ 23 ವರ್ಷಗಳ ಹಿಂದೆಯೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ತನ್ನ ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಮೃತ ಬೂದಪ್ಪ …
Read More »