Breaking News

12 ಬಾರಿ ಕೊಚ್ಚಿ ಕೊಂದವನ ಸುಳಿವು ನೀಡಿದ ಚಪ್ಪಲಿ!

ಪಾರ್ಕ್ ನಲ್ಲಿ ಮಲಗುವ ವಿಷಯದಲ್ಲಿ ಉಂಟಾದ ಮನಸ್ತಾಪದಿಂದ ಚಿಂದಿ ಆಯುವ ವ್ಯಕ್ತಿಯನ್ನು 12 ಬಾರಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ವ್ಯಕ್ತಿಯನ್ನು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಬಾಬುಸಪಾಳ್ಯ ಬಿಡಿಎ ಪಾರ್ಕ್ ನಲ್ಲಿ ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ (43) ಹತ್ಯೆಯಾಗಿದ್ದು, ಮಾಲೂರು ಮೂಲದ ಸತೀಶ್ (30) ಬಂಧಿತ ಆರೋಪಿ. ಅಶೋಕ್ ಮತ್ತು ಸತೀಶ್ ಇಬ್ಬರೂ ಚಿಂದಿ ಆಯುವವರಾಗಿದ್ದು, ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ ಮೊದಲಿನಿಂದಲೂ ಬಾಬುಸಪಾಳ್ಯದ ಪಾರ್ಕ್ ನಲ್ಲಿ ಮಲಗುತ್ತಿದ್ದ. …

Read More »

ಬೆಳಗಾವಿ ಜಿಲ್ಲೆಯ ಯುವಕನಿಂದಾಗಿ ಮೋಸ ಹೋದ ದಾವಣಗೆರೆ ಯುವತಿ ಆತ್ಮ ಹತ್ಯೆ…..ಆತನಿಗೆ ಗಲ್ಲು ಶಿಕ್ಷೆ ಕೊಡಿಸಿ.. ನೊಂದ ಪ್ರಿಯತಮೆಯ ಕೊನೇ ಮನವಿ.!

ದಾವಣಗೆರೆ: ಪ್ರಿಯಕರನ ವಂಚನೆಯಿಂದ ಬೇಸತ್ತ ಪ್ರೇಮಿ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಭಾನುವಾರ ದಾವಣಗೆರೆಯ ಭಾರತ್ ಕಾಲೋನಿಯಲ್ಲಿ ನಡೆದಿದೆ. ಭಾರತ್ ಕಾಲೋನಿಯ ಆಶಾ(22) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಶಾ ಕೆ.ಬಿ. ಈರಣ್ಣ ಎಂಬಾತತನ್ನು ಪ್ರೀತಿಸುತ್ತಿದ್ದರು. ಈಚೆಗೆ ಆತನಿಂದ ವಂಚನೆಗೊಳಗಾಗಿದ್ದರು ಎನ್ನಲಾಗುತ್ತಿದೆ. ಕೆ.ಬಿ. ಈರಣ್ಣ ಮೂಲತಃ ಬೆಳಗಾವಿ ಜಿಲ್ಲೆಯವ. ದಾವಣಗೆರೆಯಲ್ಲಿ ಬೆಸ್ಕಾಂನಲ್ಲಿ ಬಿಲ್ ಕಲೆಕ್ಟರ್ ಆಗಿ ಮಾಡುತ್ತಿದ್ದು, ಬಂಬೂಬಜಾರ್‌ನಲ್ಲಿ ವಾಸವಾಗಿದ್ದನು. ಬಿಲ್ ಕಲೆಕ್ಟಿಂಗ್‌ಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಆಶಾ ಮತ್ತು ಆತನ ನಡುವೆ …

Read More »

ನಾಸಾ ಚಂದ್ರಯಾನಕ್ಕೆ ಭಾರತೀಯ ಮೂಲದ ಎಂಜಿನಿಯರ್‌ ಸುಭಾಷಿಣಿ ಅಯ್ಯರ್‌ ಬಲ

ಮೆಲ್ಬರ್ನ್: ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ನಾಸಾದ ಮಹತ್ವಾಕಾಂಕ್ಷಿ ಯೋಜನೆಯ ಬೆನ್ನೆಲುಬಾಗಿ ನಿಂತಿರುವವರು ಬೇರ್ಯಾರೂ ಅಲ್ಲ, ಭಾರತೀಯ ಮೂಲದ ಎಂಜಿನಿಯರ್‌ ಸುಭಾಷಿಣಿ ಅಯ್ಯರ್‌. ಒರಿಯನ್‌ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್‌ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್‌ನ ಕೋರ್‌ ಸ್ಟೇಜ್‌ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ …

Read More »

ಬೆಂಗಳೂರು ನಗರಕ್ಕೆ ಲಾಕ್ ಡೌನ್ ವಿನಾಯ್ತಿ?

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಈ ವಾರದ ಲಾಕ್ ಡೌನ್ ನಿಂದ ವಿನಾಯ್ತಿ ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಸಂಪೂರ್ಣ ಲಾಕ್ ಡೌನ್ ಬದಲಾಗಿ ಕೆಲವೊಂದಕ್ಕೆ ವಿನಾಯ್ತಿ ಅಥವಾ ಓಡಾಡುವ ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ನಗರದಲ್ಲಿ ಸದ್ಯಕ್ಕೆ ಶೇ.6 ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿದೆ. ಪಾಸಿಟಿವಿಟಿ ದರ ಶೇ.5 ಕ್ಕೆ ಇಳಿದರೆ ಅನ್ ಲಾಕ್ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಅದರಂತೆ ಬಿಎಂಟಿಸಿ, ಓಲಾ, ಉಬರ್ …

Read More »

ರಾಜ್ಯಾದ್ಯಂತ ಡಿಸ್ಟ್ರಿಕ್ಟ್ ರಜಿಸ್ಟ್ರಾರ್ ಹಾಗೂ ಸಬ್ ರಜಿಸ್ಟ್ರಾರ್ ಕಚೇರಿ ಆರಂಭ

ಬೆಂಗಳೂರು – ಕೊರೋನಾ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಸಡಿಲ ಮಾಡಲಾಗುತ್ತಿದೆ. ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡಿಸ್ಟ್ರಿಕ್ಟ್ ರಜಿಸ್ಟ್ರಾರ್ ಹಾಗೂ ಸಬ್ ರಜಿಸ್ಟ್ರಾರ್ ಕಚೇರಿ ಆರಂಭಿಸಲು ಸರಕಾರ ಅನುಮತಿ ನೀಡಿದೆ.                     ಕೋವಿಡ್ ಮಾರ್ಗದರ್ಶಿ ನಿಯಮಗಳನ್ನು ಪಾಲಿಸಿ ನೋಂದಣಾಧಿಕಾರಿ ಕಚೇರಿ ಕಾರ್ಯಾರಂಭ ಮಾಡಬೇಕು ಎಂದು ಕಂದಾಯ ಇಲಾಖೆ ಪ್ರಧಾನ …

Read More »

27 ಲಕ್ಷ ಮಂದಿ ರೈಲ್ವೆ ಟಿಕೆಟ್‌ ಇಲ್ಲದೆ ಪ್ರಯಾಣ : 143.87 ಕೋಟಿ ರೂ. ದಂಡ ಸಂಗ್ರಹ

ನವದೆಹಲಿ: ಸೋಂಕಿನ ಹಿನ್ನೆಲೆಯಲ್ಲಿ ಹಲವು ನಿಯಮಗಳು ಜಾರಿ ಇದ್ದರೂ ರೈಲುಗಳಲ್ಲಿ ಟಿಕೆಟ್‌ ಇಲ್ಲದೆ 27 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿದ ಸಚಿವಾಲಯ 2020 ಏಪ್ರಿಲ್‌ನಿಂದ ಪ್ರಸಕ್ತ ವರ್ಷ ಮಾರ್ಚ್‌ ವರೆಗೆ 27.57 ಲಕ್ಷ ಮಂದಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 25ಕ್ಕೂ ಕಡಿಮೆ ಪ್ರಕರಣಗಳು ಎಂದಿದೆ. ಅಷ್ಟೂ ಮಂದಿಯಿಂದ 143.87 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. …

Read More »

ಲಸಿಕೆಗೆ ಕೊರತೆ ಇರುವಾಗ ಟ್ವಿಟರ್ ಬ್ಲೂ ಟಿಕ್ ಬಗ್ಗೆ ಚರ್ಚೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

ದೆಹಲಿ: ಕೊರೊನಾ ಸೋಂಕು ವಿರುದ್ಧದ ಲಸಿಕೆಗೆ ಕೊರತೆ ಇರುವಾಗ, ಟ್ವಿಟರ್​ನಲ್ಲಿ ಬ್ಲೂ ಟಿಕ್ ವಿಚಾರವಾಗಿ ಚರ್ಚೆಯಲ್ಲಿ ತೊಡಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಲಸಿಕೆ ಹಾಗೂ ಟ್ವಿಟರ್ ಬ್ಲೂ ಟಿಕ್ ಬಗ್ಗೆ ವ್ಯಂಗ್ಯವಾಗಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಯಾರಿಗಾದರೂ ಕೊವಿಡ್ ಲಸಿಕೆ ಬೇಕಾದರೆ ಅವರು ಆತ್ಮನಿರ್ಭರರಾಗಿ ಇರಬೇಕಷ್ಟೆ. ಸ್ವಾವಲಂಬಿಯಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್​ನಲ್ಲಿ ಬ್ಲೂ ಟಿಕ್​ಗಾಗಿ …

Read More »

ದರ್ಶನ್​ ಕೊಟ್ಟ ಆ ಒಂದು ಕರೆಗೆ ಅಭಿಮಾನಿಗಳಿಂದ ಬಂತು ಅಭೂತಪೂರ್ವ ಪ್ರತಿಕ್ರಿಯೆ; ಸಾಕ್ಷಿ ತೋರಿಸಿದ ಡಿ ಬಾಸ್

ನಟ ದರ್ಶನ್​ ಹೇಳಿದ್ದನ್ನು ಅಭಿಮಾನಿಗಳು ಚಾಚೂತಪ್ಪದೆ ಪಾಲಿಸುತ್ತಾರೆ. ಈ ಮೊದಲು ಕರ್ನಾಟಕದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ‘ನನ್ನ ಬರ್ತ್​ಡೇ ಆಚರಣೆ ಬೇಡ. ಬದಲಿಗೆ ದಿನಸಿ ತಂದುಕೊಡಿ. ಅದನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ತಲುಪಿಸುತ್ತೇವೆ’ ಎಂದು ದರ್ಶನ್​ ಹೇಳಿದ್ದರು. ಇದನ್ನು ಅಭಿಮಾನಿಗಳು ಮಾಡಿದ್ದರು. ಈಗ ಕೊವಿಡ್​ ಸಂದರ್ಭದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್​ ಮನವಿ ಮಾಡಿದ್ದು, ಅವರ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಾಣಿಗಳ ಮೇಲಿನ ನಿಮ್ಮ ಪ್ರೀತಿಗೆ 🙏ಹೃದಯಪೂರ್ವಕ ಧನ್ಯವಾದಗಳು …

Read More »

ಸುಸಜ್ಜಿತ ಸಂಚಾರಿ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ ಲಕ್ಷ್ಮಣ ಸವದಿ

ಚಿಕ್ಕೋಡಿ: ಕೊರೊನಾ ನಿಯಂತ್ರಣಕ್ಕಾಗಿ ವಿಶೇಷವಾಗಿ ನಿರ್ಮಿಸಿರುವ ಸುಸಜ್ಜಿತ ಪ್ರಥಮ ಚಿಕಿತ್ಸೆ ಸಂಚಾರಿ ಆಸ್ಪತ್ರೆಯನ್ನು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪರಿವರ್ತನೆಗೊಳಿಸಿ ಕೊಡಲಾದ ಈ ಬಸ್ಸಿನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸಿದ ನಾಲ್ಕು ಬೆಡ್, ಒಂದು ವೆಂಟಿಲೇಟರ್ ಬೆಡ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಈ ಬಸ್ಸಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಬಸ್ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, …

Read More »

7 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ಭೀಕರ ದಾಳಿ.. ಪರಿಹಾರಕ್ಕಾಗಿ ಒತ್ತಾಯ

ದಾವಣಗೆರೆ: 7 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ನಡೆಸಿರೋ ಶಾಕಿಂಗ್ ಘಟನೆ ದಾವಣಗೆರೆಯ ಆಜಾದ್ ನಗರದಲ್ಲಿ ನಡೆದಿದೆ. ಸಲಾಮ್ ಹಾಗೂ ತಬಸುಬ ಬಾನು ಎಂಬವರ ಮಗಳು ಕನೋಸ್ ಫಾತಿಮಾ ದಾಳಿಗೊಳಗಾದ ಬಾಲಕಿ. ಮಧ್ಯ ರಾತ್ರಿ ಮೂರು ಗಂಟೆ ಸುಮಾರಿಗೆ ಫಾತಿಮಾ ಮೇಲೆ ನಾಯಿಗಳು ದಾಳಿ ನಡೆಸಿವೆ. ಇದರಿಂದ ಬಾಲಕಿಯ ಕಾಲು, ತಲೆ ಸೇರಿದಂತೆ ಮೈತುಂಬಾ ಗಂಭೀರ ಗಾಯಗಳಾಗಿವೆ. ಫಾತಿಮಾಳನ್ನ ಸದ್ಯ ಬಾಪುಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ …

Read More »