ಭುವನೇಶ್ವರ್ : ಪ್ರಮುಖ ನಿರ್ಧಾರವೊಂದರಲ್ಲಿ, ಒಡಿಶಾ ಸರ್ಕಾರ ತೃತೀಯ ಲಿಂಗಿಗಳನ್ನು ಪೊಲೀಸ್ ಸೇವೆಗಳಲ್ಲಿ ನೇಮಕ ಮಾಡಲು ನಿರ್ಧರಿಸಿದೆ . 477 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಮತ್ತು ಒಡಿಶಾ ಪೊಲೀಸರ 244 ಕಾನ್‌ಸ್ಟೆಬಲ್‌ಗಳನ್ನು (ಸಂವಹನ) ನೇಮಕ ಮಾಡಿಕೊಳ್ಳಿ ಒಪ್ಪಂದದ ಆಧಾರದ ಮೇಲೆ ಸಿಗ್ನಲ್ ಸೇವೆಗೆ ನೇಮಕಮಾಡಿಕೊಳ್ಳಲು ಒಡಿಶಾ ಪೊಲೀಸ್ ನೇಮಕಾತಿ ಮಂಡಳಿ ನಿರ್ಧರಿಸಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅಭಯ್ ತಿಳಿಸಿದ್ದಾರೆ. ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳು ಎರಡೂ ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಡಿಜಿಪಿ …
Read More »ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ
ಬಳ್ಳಾರಿ: ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ. ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿ ಇದ್ದ ಹಾವನ್ನು ನೋಡಿದ್ದಾನೆ. ಕೂಡಲೇ ಆ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ …
Read More »ಶಿಕ್ಷಣ ಸಚಿವರ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು; ಎಸ್.ಎಸ್.ಎಲ್.ಸಿ. ಪರೀಕ್ಷೆ ರದ್ದುಗೊಳಿಸಿ; ಸರ್ಕಾರಕ್ಕೆ ಪೋಷಕರ ಡೆಡ್ ಲೈನ್
ಬೆಂಗಳೂರು: ಪರೀಕ್ಷೆ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ ಖಾತೆ ಬದಲಾವಣೆ ಮಾಡಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಿಂದಾಗಿ ಸರಿಯಾಗಿ ತರಗತಿಗಳೇ ನಡೆದಿಲ್ಲ. ಪಾಠವನ್ನೂ ಮಾಡಲಾಗಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸುವುದಾದರೂ ಹೇಗೆ? ಎಲ್ಲಿಯೂ ನಡೆಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಸಚಿವರು ತಮ್ಮ ಸ್ವಪ್ರತಿಷ್ಠೆಗಾಗಿ ನಮ್ಮಲ್ಲಿ ನಡೆಸುತ್ತಿರುವುದಾದರೂ ಯಾಕೆ ಎಂದು ಪೋಷಕರು …
Read More »ಮೊಬೈಲ್ ನಲ್ಲಿ ಕಾಲ ಕಳೆಯಬೇಡ ಅಂತ ಬುದ್ದಿ ಹೇಳಿದ್ದಕ್ಕೆ ಪತಿ ಹತ್ಯೆಗೆ ಸುಪಾರಿ ಕೊಟ್ಟ ಪತ್ನಿ!
ಕಾರವಾರ : ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು 30 ಸಾವಿರ ಸುಪಾರಿ ನೀಡಿ ಹತ್ಯೆ ಪ್ರಯತ್ನದ ವೇಳೆ ಪತ್ನಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಸರಸ್ವತಿ ಸುತಾರ ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ …
Read More »ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ.
ಬೆಳಗಾವಿ : ಇಲ್ಲಿನ ಖಂಜರ ಗಲ್ಲಿಯಲ್ಲಿ ನಿನ್ನೆ ರಾತ್ರಿ ಜೂಜು ಅಡ್ಡೆ ಮೇಲೆ ದಾಳಿ ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ. ಜುಬೆರ ಶಕಿಲ ಸುಬೆದಾರ, ಆರೀಪ ಜಿಲಾನಿ ಖೊತ್ವಾಲ್ , ಅಯಾಜ್ ಬಾಬು ಖತಿಬ್ , ಅಬ್ದುಲ್ ಸಲಾಮ್ ಮೈಬುಸಾಬ ಬಾಳೆಕುಂದ್ರೀ, ಸೊಹೆಲ್ ಅಕ್ತರ ಮುಲ್ಲಾ, ಷರಿಪ್ ದಸ್ಥಗಿರಸಾಬ ಮುಲ್ಲಾ, ಅಬುತಾಲಿಪ್ ಗೌಸ್ ಶೆಕ್, ಆಸಿಪ್ ಯುಸುಪಖಾನ್ ಸಯ್ಯದ, ಆಯೂಬಖಾನ್ ಕರಿಂಖಾನ ಪಠಾಣ , ವಾಸಿಂ ಆಯೂಬ್ ಸೌದಾಗರ್ …
Read More »ಅಥಣಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಗ್ರಾಪಂ. ಸದಸ್ಯ ಸಾವು
ಅಥಣಿ : ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿದ ಪರಿಣಾಮ ಗ್ರಾಪಂ. ಸದಸ್ಯ ಸಾವನ್ನಪ್ಪಿದ ಘಟನೆ ನಡೆದಿದೆ. ಶಿರಗುಪ್ಪಿ ಗ್ರಾಮದ ಸೋಮೇಶ್ ಶಿವಾನಂದ ಪಾಟೀಲ ( 32 ) ಮೃತ ಗ್ರಾಪಂ ಸದಸ್ಯ . ಹಳೆ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಮನೆಯಲ್ಲಿ ಇದ್ದರು . ಇವರು ಮಾತ್ರ ಮನೆಯ ಚಾವಣಿಯ ಮೇಲೆ ಮಲಗಿದ್ದರು . ಏಕಾಏಕಿ …
Read More »ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಗೆ ದೊರೆತ ಪುಲಿಟ್ಜರ್ ಪ್ರಶಸ್ತಿ
ನ್ಯೂಯಾರ್ಕ್: ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಈ ಬಾರಿಯ ಪ್ರತಿಷ್ಠಿತ ‘ಪುಲಿಟ್ಜರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಆಕೆ ಮುಸ್ಲಿಮರನ್ನು ಸೆರೆಯಲ್ಲಿಡಲು ಷಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಬೃಹತ್ ಜೈಲುಗಳನ್ನು ನಿರ್ಮಿಸಿರುವ ಕುರಿತು ತನಿಖಾ ವರದಿ ಪ್ರಕಟಿಸುವ ಮೂಲಕ ಚೀನಾದ ಕ್ರಮವನ್ನು ಜಗತ್ತಿಗೆ ತಿಳಿಸಿದ್ದು, ತನ್ನ ವಿನೂತನ ತನಿಖಾ ವರದಿಗಳ ಮೂಲಕ ಮೌಲ್ಯಯುತ ಸುದ್ದಿಗಳನ್ನು ಪ್ರಸ್ತುಪಡಿಸಿದ ಕಾರಣಕ್ಕಾಗಿ ಮೇಘಾ ರಾಜಗೋಪಾಲನ್ ಸೇರಿ ಮೂವರು ಪತ್ರಕರ್ತರನ್ನು ಪತ್ರಿಕೋದ್ಯಮ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. …
Read More »ಮುಂದಿನ ಜೂನ್ ಅಂತ್ಯದ ಒಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಮುಖ್ಯಮಂತ್ರಿ
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಜೂನ್ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ತಿಳಿಸಿದರು. ಅವರು ಶನಿವಾರ ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬೆಂಗಳೂರು ವಿಮಾನ ನಿಲ್ದಾಣದ ಬಳಿಕ ಶಿವಮೊಗ್ಗದಲ್ಲಿಯೇ ಅಂತಹ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಹಣಕಾಸಿನ ಅಡಚಣೆ ನಡುವೆಯೂ ಅನುದಾನ ಬಿಡುಗಡೆಗೊಳಿಸಿ ತ್ವರಿತಗತಿಯಲ್ಲಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. …
Read More »ವೈದ್ಯಕೀಯ ವಸ್ತುಗಳ ಮೇಲಿನ ತೆರಿಗೆ ಕಡಿತ: ನಿರ್ಮಲಾ ಸೀತಾರಾಮನ್
ನವದೆಹಲಿ: ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯು ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು ಹಾಗೂ ವೈದ್ಯಕೀಯ ಆಮ್ಲಜನಕದ ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿತಗೊಳಿಸುವ ಕುರಿತು ಚರ್ಚಿಸಲಾಗಿದೆ. Tocilizumab ಹಾಗೂ Amphotericin B ಔಷಧಿಗಳ ಮೇಲೆ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ನಿಗದಿಪಡಿಸಿದರೆ ರೆಮ್‌ಡೆಸಿವಿರ್ ಮತ್ತು ಹೆಪಾರಿನ್‌ನಂತಹ ಆಂಟಿ ಕೋಗುಲಂಟ್‌ಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ. ಈ ಕುರಿತು ಮಾತನಾಡಿದ …
Read More »ಮಾನಸಿಕ ಅಸ್ವಸ್ಥನ ಲಾಕಪ್ ಡೆತ್- ಎಂಟು ಪೊಲೀಸರು ಅಮಾನತು
ಮಡಿಕೇರಿ: ವಿರಾಜಪೇಟೆಯಲ್ಲಿ ನಡೆದಿದ್ದ ರಾಯ್ ಡಿಸೋಜ ಅವರ ಸಾವಿನ ಪ್ರಕರಣ ಸಂಬಂಧ ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದು, ಮೇಲ್ನೋಟಕ್ಕೆ ತಪ್ಪಿತಸ್ಥ ಹೆಡ್ ಕಾನ್‍ಸ್ಟೇಬಲ್ ಸೇರಿ ಎಂಟು ಪೊಲೀಸರನ್ನು ಸ್ಥಳದಲ್ಲೇ ಅಮಾನತುಗೊಳಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ಪ್ರವೀಣ್ ಪವಾರ್ ತಿಳಿಸಿದ್ದಾರೆ. ಶನಿವಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭ ಘಟನೆ ನಡೆದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮದವರಿಗೆ ಮಾಹಿತಿ …
Read More »